ಬೆಂಗಳೂರು: ರೈಲ್ವೆ ಪೊಲೀಸರು (Railway Police ) ಪ್ಲಾಸ್ಟಿಕ್ ಡ್ರಮ್ (Plastic Drum) ನೋಡಿದರೆ ಶಾಕ್ ಆಗುತ್ತಿದ್ದಾರೆ. ಏಕೆಂದರೆ ಬೆಂಗಳೂರಲ್ಲಿ (Bengaluru) ಎರಡು ತಿಂಗಳ ಅಂತರದಲ್ಲಿ ಎರಡು ಮಹಿಳೆಯರ (Women) ಶವಗಳು ಪ್ಲಾಸ್ಟಿಕ್ ಡ್ರಮ್ನಲ್ಲಿ ಪತ್ತೆಯಾಗಿದೆ. ಕೊಲೆಪಾತಕರು ಶವಗಳನ್ನು ಡ್ರಮ್ನಲ್ಲಿ ತುಂಬಿಸಿ ರೈಲ್ವೆ ಸ್ಟೇಷನ್ನಲ್ಲಿ (Railway Station) ತಂದಿಡುತ್ತಿದ್ದಾರೆ. ಬೆಂಗಳೂರಿನ ರೈಲ್ವೆ ಸ್ಟೇಷನ್ಗಳಲ್ಲಿ ಪ್ಲಾಸ್ಟಿಕ್ ಡ್ರಮ್ಗಳು ಸಿಗುತ್ತಲೇ ಇವೆ. ಡ್ರಮ್ನಲ್ಲಿ ಮಹಿಳೆಯರ ಶವಗಳನ್ನು ಇಟ್ಟು ರೈಲ್ವೇ ಪೊಲೀಸರಿಗೆ ತಲೆನೋವು ತರಿಸಿದ್ದಾರೆ. ಒಂದೇ ರೀತಿಯ ಕೊಲೆ ಹಿಂದೆ ಸೀರಿಯಲ್ ಕಿಲ್ಲರ್ (Serial Killer) ಆ್ಯಕ್ಟೀವ್ ಆಗಿದ್ದಾನಾ ಅನ್ನೋ ಅನುಮಾನ ಕಾಡುವಂತಾಗಿದೆ. ಜನವರಿ 4 ರಂದು ಯಶವಂತಪುರ (Yeshwanthpur) ರೈಲ್ವೆ ಸ್ಟೇಷನ್ನಲ್ಲಿ ಡ್ರನ್ನಲ್ಲಿ ಒಂದು ಶವ ಪತ್ತೆಯಾದ್ರೆ, ಮೊನ್ನೆ ಮೊನ್ನೆಯಷ್ಟೇ ಬೈಯಪ್ಪನಹಳ್ಳಿ (Baiyappanahalli) ರೈಲ್ವೆ ಸ್ಟೇಷನ್ನಲ್ಲಿ ಮತ್ತೊಂದು ಡ್ರಮ್ನಲ್ಲಿ ಶವ ಪತ್ತೆಯಾಗಿದೆ.
30 ರಿಂದ 35 ವರ್ಷದ ಮಹಿಳೆಯರೇ ಟಾರ್ಗೆಟ್
ಕರ್ನಾಟಕದಲ್ಲಿ ಮಾತ್ರವಲ್ಲ ಕಳೆದ ವರ್ಷ ಪಕ್ಕದ ಆಂಧ್ರದ ಮಚಲಿಪಟ್ಟಣಂ ಹಾಗೂ ರಾಯಲಸೀಮ ರೈಲ್ವೇ ಸ್ಟೇಷನ್ಗಳಲ್ಲೂ ಡ್ರಮ್ನಲ್ಲಿ ಮಹಿಳೆಯರ ಶವ ಪತ್ತೆಯಾಗಿತ್ತು ಅನ್ನೋದು ಅನುಮಾನ ಹೆಚ್ಚಾಗುವಂತೆ ಮಾಡಿದೆ. 30 ರಿಂದ 35 ವರ್ಷದ ಮಹಿಳೆಯರನ್ನೇ ಟಾರ್ಗೆಟ್ ಕೊಲೆ ಮಾಡ್ತಿರೋದು ಆತಂಕಕ್ಕೂ ಕಾರಣವಾಗಿದೆ.
ಇದನ್ನೂ ಓದಿ: Crime News: ಪ್ರೀತಿಸಿದವನ ಬಿಟ್ಟು ಬೇರೆ ನಿಶ್ಚಿತಾರ್ಥ; ಪ್ರೇಯಸಿ ಮೇಲೆಯೇ ಅತ್ಯಾಚಾರ ಎಸಗಿ ಕೊಂದ ಪಾಗಲ್ ಪ್ರೇಮಿ
ಆಂಧ್ರದಲ್ಲಿ ವರ್ಷ ಕಳೆದರೂ ಆರೋಪಿಗಳು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಕರ್ನಾಟಕ ಹಾಗು ಆಂಧ್ರದಲ್ಲಿ ನಡೆದಿರುವ ಮಹಿಳೆಯರ ಕೊಲೆ ಒಂದೇ ರೀತಿಯಿದ್ದು, ಕೊಲೆಗಾರ ಒಬ್ಬನೇ ಇರಬಹುದು ಅನ್ನೋ ಶಂಕೆ ಹುಟ್ಟಿಸಿದೆ. ಆರೋಪಿಗಳು ಸಿಕ್ಕಿಲ್ಲ ಅನ್ನೋದನ್ನು ಜೊತೆಗೆ ಸಾವನ್ನಪ್ಪಿದ ಮಹಿಳೆಯರ ಗುರುತು ಕೂಡ ಪತ್ತೆಯಾಗಿಲ್ಲ ಅನ್ನೋದು ಗಮನಿಸಬೇಕಾದರ ಸಂಗತಿ.
ಆಂಧ್ರ ಟೀಮ್ ಬೆಂಗಳೂರಿನಲ್ಲಿ ಆಕ್ಟೀವ್ ಆಗಿದ್ಯಾ?
ಸ್ಟೇಷನ್ನಲ್ಲಿದ್ದ ಸಿಸಿಟಿವಿ ಜೊತೆಗೆ ಜನನಿಬಿಡ ರೈಲ್ವೆ ಸ್ಟೇಷನ್ನಲ್ಲಿ ಹಂತಕರು ಹೆಣಗಳನ್ನು ಇಟ್ಟು ಹೋಗುತ್ತಿದ್ದಾರೆ. ಆಂಧ್ರದಲ್ಲಿ ಕೊಲೆ ಮಾಡುತ್ತಿದ್ದ ಟೀಂ ಈಗ ಬೆಂಗಳೂರಿನಲ್ಲಿ ಆಕ್ಟೀವ್ ಆಗಿದ್ಯಾ? ಸೀರಿಯಲ್ ಕಿಲ್ಲಿಂಗ್ ಮಾಡುತ್ತಿರುವ ಕಿಡಿಗೇಡಿ ಉದ್ದೇಶ ಏನು? ಅನ್ನೋ ಬಗ್ಗೆ ತನಿಖೆ ಮಾಡಲಾಗುತ್ತಿದೆ.
ಕಾಂಗ್ರೆಸ್ ಮಹಿಳಾ ಕಾರ್ಯಕರ್ತರಿಂದ ಡಿಜಿಗೆ ದೂರು
ನಗರದಲ್ಲಿ ಸೀರಿಯಲ್ ಲೇಡಿಸ್ ಮರ್ಡರ್ ಆಗುತ್ತಾ ಇದ್ದು ಆತಂಕ ಹೆಚ್ಚಿಸಿದೆ. ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಡಿಜಿಗೆ ದೂರು ನೀಡಿದ್ದಾರೆ. ನಗರದಲ್ಲಿ ಮಹಿಳೆಯರ ಶವಗಳ ಪತ್ತೆ ಆಗುತ್ತಿದ್ದು, ಆದಷ್ಟು ಬೇಗ ಆರೋಪಿಗಳು ಯಾರೂ ಅನ್ನೋದನ್ನ ಪತ್ತೆ ಮಾಡಬೇಕು, ಕಾರಣ ಗೊತ್ತಾಗಬೇಕು ಎಂದು ಮನವಿ ಮಾಡಿದ್ದಾರೆ.
ಸಿಟಿ ರೈಲ್ವೆ ಪೊಲೀಸರಿಂದ ಏಳು ಸ್ಪೆಷಲ್ ಟೀಂ ರಚನೆ
ಸದ್ಯ ಡ್ರಮ್ನಲ್ಲಿ ಲೇಡಿಸ್ ಬಾಡಿ ಪ್ರಕರಣ ಬೆನ್ನತ್ತಿರೋ ಸಿಟಿ ರೈಲ್ವೆ ಪೊಲೀಸರು ಏಳು ಸ್ಪೆಷಲ್ ಟೀಂ ರಚನೆ ಮಾಡಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಆಂಧ್ರದಲ್ಲಿ ನಡೆದ ಕೇಸ್ಗಳ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: Crime News: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಅನುಮಾನಾಸ್ಪದ ರೀತಿಯಲ್ಲಿ ನವವಧು ಸಾವು; ದಲಿತ ಯುವತಿ ಎಂದು ಕೊಲೆ ಆರೋಪ
ತನಿಖಾ ತಂಡ ಹಂತಕರ ಬೆನ್ನಟ್ಟಿದೆ. ಆಟೋದಲ್ಲಿ ಮೂವರು ಬಂದು ಡ್ರಮ್ ಇಟ್ಟು ಹೋಗಿರುವ ಸುಳಿವು ಈಗಾಗಲೇ ಸಿಕ್ಕಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಸದ್ಯ ಸೀರಿಯಲ್ ಕಿಲ್ಲರ್ ಆ್ಯಕ್ಟೀವ್ ಶಂಕೆ ಪೊಲೀಸರ ತಲೆ ಕೆಡಿಸಿದ್ದು, ಆರೋಪಿಗಳು ಸಿಕ್ಕ ಬಳಿಕ ಈ ಕೇಸ್ಗಳ ಅಸಲಿ ಸತ್ಯ ಗೊತ್ತಾಗಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ