ಬೆಂಗಳೂರು: ಹುಳಿಮಾವು ಪೊಲೀಸರು ಒಂದು ಕ್ಷಣ ಬೆಕ್ಕಸ ಬೆರಗಾಗಿ ಹೋಗಿದ್ದರು. ಸುಮಾರು ಆರು ತಿಂಗಳ ಹಿಂದೆ ಸಾವನ್ನಪ್ಪಿದ್ದ ದೇಹದ ಅಸ್ಥಿಪಂಜರ ಮರದಲ್ಲಿ ನೇತಾಡಿತ್ತು. ಮಲಯಾಳಂನಲ್ಲಿ ಕೋಲ್ಡ್ ಕೇಸ್ ಅನ್ನೋ ಪತ್ತೆದಾರಿ ಸಿನಿಮಾ ಸ್ಟೋರಿ ಬೆಂಗಳೂರಿನಲ್ಲಿ ನಡೆದಿದೆ. ಪೊಲೀಸರು ಅಸ್ಥಿಪಂಜರದ ಅಸಲಿಯತ್ತನ್ನು ಒಂದೇ ದಿನದಲ್ಲಿ ಪತ್ತೆ ಮಾಡಿದ್ದಾರೆ. ಅಲ್ಲದೆ, ಮೃತ ಮಹಿಳೆ ಯಾರು ಎಂಬುವುದನ್ನು ಅಸ್ತಿಪಂಜರ ಬಳಿ ಸಿಕ್ಕ ವಸ್ತುಗಳನ್ನು ಆಧರಿಸಿ ಪತ್ತೆ ಮಾಡಿದ್ದಾರೆ. ಆದರೆ ಮಹಿಳೆಯ ಸಾವು ಹೇಗಾಯ್ತು? ಕೊಲೆಯೋ ಅಥವಾ ಆತ್ಮಹತ್ಯೆಯೋ? ಎಂಬ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಲ್ಲಿ ಉತ್ತರ ಸಿಗಬೇಕಿದೆ.
ರಾಜಧಾನಿಯಲ್ಲಿ 6 ತಿಂಗಳ ಬಳಿಕ ಅಸ್ಥಿಪಂಜರ ಪತ್ತೆ!
ಹೌದು, ಬೆಂಗಳೂರಿನ ಬೆನ್ನೇರುಘಟ್ಟ ರಸ್ತೆಯಲ್ಲಿರುವ ಹುಳಿಮಾವು ಬಳಿಕ ಅಕ್ಷಯ್ ನಗರದ ಆಸುಪಾಸಿನಲ್ಲಿ ಗಿಡಗಂಟಿಗಳು ಬೆಳೆದು ನಿಂತಿರುವ ನಿರ್ಜನ ಪ್ರದೇಶದಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದೆ. ನಿನ್ನೆ ಹುಳಿಮಾವು ಪೊಲೀಸರು ಬೀಟ್ ಮಾಡುವಾಗ ಮೂತ್ರ ವಿಸರ್ಜನೆಗೆ ಅಂತ ಗಿಡದ ಮರೆಗೆ ಹೋಗಿದ್ದರು. ಆಗ ಗಿಡಗಳ ನಡುವೆ ಮರೆಯಲ್ಲಿ ಮರಕ್ಕೆ ನೇತುಹಾಕಿದ್ದ ಸ್ಕೆಲಿಟನ್ ಕಾಣಿಸಿತ್ತು. ಹತ್ತಿರ ಹೋಗಿ ನೋಡಿದರೆ ಕತ್ತಲ್ಲಿ ನೆಕ್ಲಸ್, ಪಕ್ಕದಲ್ಲಿ ಚಪ್ಪಲಿ ಸೇರಿದಂತೆ ಮಹಿಳೆಗೆ ಸೇರಿದ ವಸ್ತುಗಳು ಸಿಕ್ಕಿದ್ದವು. ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ಹುಡುಕುವ ಪ್ರಯತ್ನ ಶುರು ಮಾಡಿದ್ದರು.
ಇದನ್ನೂ ಓದಿ: Bengaluru: ಗೋಮಾತೆಗೆ ಮೂತ್ರಪಾನ ಮಾಡಿಸಿದ ಆರೋಪ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಟೆಕ್ಕಿ ನಿಜ ಬಣ್ಣ ಬಯಲು, ಅಸಲಿಗೆ ಆಗಿದ್ದೇನು?
ಅಸ್ಥಿಪಂಜರದ ಕುತ್ತಿಗೆಯಲ್ಲಿತ್ತು ಸಾಕ್ಷ್ಯ ನೀಡುವ ಸರ!
ಅಸ್ತಿ ಪಂಜರದ ಸುತ್ತಮುತ್ತ ಸಿಕ್ಕ ವಸ್ತುಗಳನ್ನು ನೋಡಿದಾಗ ಇದೊಂದು ಮಹಿಳೆಯ ಅಸ್ಥಿಪಂಜರ ಅನ್ನೋದು ಗೊತ್ತಾಗಿತ್ತು. ನಗರದಲ್ಲಿ ಕಳೆದೊಂದು ವರ್ಷದಲ್ಲಿ ನಾಪತ್ತೆಯಾದ ಕೇಸ್ಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಜುಲೈನಲ್ಲಿ ನಾಪತ್ತೆ ಆಗಿದ್ದ ಪುಷ್ಪಾದಾಮಿ ಅನ್ನೋ ಮಹಿಳೆಯ ದೇಹ ಅನ್ನೋದು ಪತ್ತೆಯಾಗಿತ್ತು.
ನೇಪಾಳ ಮೂಲದ ದಂಪತಿ 2 ವರ್ಷದ ಹಿಂದೆ ಮದುವೆ ಆಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಒಂದು ಸಣ್ಣ ಮಗು ಕೂಡ ಇತ್ತು. ಆದರೆ ದಾಂಪತ್ಯ ಕಲಹ ನಡೆದು ಮನೆ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಗಂಡ ಮಿಸ್ಸಿಂಗ್ ಕಂಪ್ಲೆಂಟ್ ಕೂಡ ಕೊಟ್ಟಿದ್ದರು. ಆದರೆ ಪೊಲೀಸರು ಮಹಿಳೆಯನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದ್ದರು.
ಮಹಿಳೆಯದ್ದೇ ಮೃತ ದೇಹ ಅಂತ ಖಚಿತಪಡಿಸಿಕೊಳ್ಳಲು ಡಿಎನ್ಎ ಟೆಸ್ಟ್ ನೆರವು
ಇನ್ನು ಘಟನೆ ಕುರಿತಂತೆ ಮಾಹಿತಿ ನೀಡಿರುವ ಅಗ್ನೇಯ ವಿಭಾಗ ಡಿಸಿಪಿ ಸಿ.ಕೆ ಬಾಬಾ, ನಿನ್ನೆ ಬೆಳಗ್ಗೆ ನಮಗೆ ಮಾನವನ ಅಸ್ತಿಪಂಜರ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮಹಿಳೆಯ ಚಪ್ಪಲಿ, ಅಲ್ಲದೆ ಕುತ್ತಿಗೆಗೆ ಬಳಸುವ ನೆಕ್ಲೆಸ್ ಎಲ್ಲವೂ ಪತ್ತೆಯಾಗಿತ್ತು. ಹೀಗಾಗಿ ನಾವು ಮಿಸ್ಸಿಂಗ್ ಕೇಸ್ ಗಳನ್ನ ಹುಡುಕಲು ಶುರು ಮಾಡಿದ್ದೇವು. ನಾವು ಕಳೆದ ವರ್ಷ ಜುಲೈ ನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ ನಾಪತ್ತೆ ಕೇಸ್ ದಾಖಲಾಗಿತ್ತು. ಈಗ ಅಲ್ಲಿ ಸಿಕ್ಕಿರುವ ವಸ್ತುಗಳು ಎಲ್ಲಾ ಮ್ಯಾಚ್ ಮಾಡಲಾಗಿದ್ದು, ನಾಪತ್ತೆಯಾಗಿದ್ದ ಮಹಿಳೆಯದ್ದೇ ಶವ ಎಂಬುದು ಗೊತ್ತಾಗಿದೆ. ಆದರೂ ನಾವು ಅಸ್ಥಿಪಂಜರದ ಡಿಎನ್ಎ, ಸತ್ತ ಅವಧಿಯ ಬಗ್ಗೆ ಮಾಹಿತಿ ಎಲ್ಲವನ್ನು ಪಡೆದುಕೊಳ್ಳಲಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Hassan: ಹದಿಹರೆಯದ ಪ್ರೇಮಕ್ಕೆ ಅಪ್ರಾಪ್ತೆ ಬಲಿ; ವಿಷ ಸೇವಿಸಿ ಸಾವಿಗೆ ಶರಣಾದ ಬಾಲಕಿ, ಯುವಕ ಅರೆಸ್ಟ್
ಉದ್ದನೆಯ ಕೂದಲು, ಮಹಿಳೆಯ ಚಪ್ಪಲಿ, ಕುತ್ತಿಗೆಯಲ್ಲಿ ಸರ ಎಲ್ಲವೂ ಪುಷ್ಪಾದಾಮಿಯದ್ದೇ ಅನ್ನೋದು ಗೊತ್ತಾಗಿದೆ. ಆದರೆ ವೈಜ್ಞಾನಿಕವಾಗಿ ಪತ್ತೆ ಹಚ್ಚಲು ಮಗು ಜೊತೆಗೆ ಡಿಎನ್ಎ ಟೆಸ್ಟ್ ಮಾಡಿ ಕಚಿತ ಮಾಡಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಕೊಲೆ ಮಾಡಿ ನೇತು ಹಾಕಿದ್ದ? ಅಥವಾ ತಾನೇ ಆತ್ಮಹತ್ಯೆ ಶರಣಾಗಿದ್ದಾಳಾ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ