• ಹೋಂ
  • »
  • ನ್ಯೂಸ್
  • »
  • Crime
  • »
  • Koppal: ಅರ್ಧ ಸುಟ್ಟ ಸ್ಥಿತಿಯಲ್ಲಿ ಬಾಣಂತಿ ಶವ ಪತ್ತೆ; ನಿಧಿಗಾಗಿ ಅಮಾವಾಸ್ಯೆಯಂದು ಬಲಿ ಶಂಕೆ?

Koppal: ಅರ್ಧ ಸುಟ್ಟ ಸ್ಥಿತಿಯಲ್ಲಿ ಬಾಣಂತಿ ಶವ ಪತ್ತೆ; ನಿಧಿಗಾಗಿ ಅಮಾವಾಸ್ಯೆಯಂದು ಬಲಿ ಶಂಕೆ?

ಮೃತ ಮಹಿಳೆ ನೇತ್ರಾವತಿ

ಮೃತ ಮಹಿಳೆ ನೇತ್ರಾವತಿ

ನಿನ್ನೆ ತಡರಾತ್ರಿ ಮನೆಯಿಂದ ಹೊರ ಬಂದಿದ್ದ ಬಾಣಂತಿಯ ಮೃತದೇಹ ಮನೆಯ ಸಮೀಪದ ಬಯಲು ಪ್ರದೇಶದಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಎಸ್​ಪಿ ಯಶೋಧ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • News18 Kannada
  • 2-MIN READ
  • Last Updated :
  • Davanagere (Davangere), India
  • Share this:

ಕೊಪ್ಪಳ: ಬಾಣಂತಿಯ (Bananti) ಮೃತದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಗಬ್ಬೂರು ಗ್ರಾಮದಲ್ಲಿ ನಡೆದಿದ್ದು, ನಿಧಿ ಆಸೆಗೆ ಬಾಣಂತಿಯನ್ನು ಸಜೀವ ದಹನ ಮಾಡಿರುವ ಅನುಮಾನ ಮೂಡಿದೆ. ಯುಗಾದಿ (Ugadi) ಅಮಾವಾಸ್ಯೆಯಂದು (Amavasya) ಕೃತ್ಯ ನಡೆದಿದ್ದು, ಸುತ್ತಲಿನ ಗ್ರಾಮದ (Village) ಜನರಲ್ಲಿ ಆತಂಕ ಮೂಡಿಸಿದೆ. ಮೃತ ಮಹಿಳೆಯನ್ನು (Woman) 25 ವರ್ಷದ ನೇತ್ರಾವತಿ ಕುರಿ ಎಂದು ಗುರುತಿಸಲಾಗಿದೆ. ನಿನ್ನೆ ತಡರಾತ್ರಿ ಮನೆಯಿಂದ ಹೊರ ಬಂದಿದ್ದ ಬಾಣಂತಿಯ ಮೃತದೇಹ ಮನೆಯ ಸಮೀಪದ ಬಯಲು ಪ್ರದೇಶದಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಎಸ್​ಪಿ ಯಶೋಧ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಚರಂಡಿ ಸ್ವಚ್ಚಗೊಳಿಸುವ ವೇಳೆ ವಿಷಕಾರಿ‌ ಗಾಳಿ ಸೇವಿಸಿ ಪೌರಕಾರ್ಮಿಕರು ಸಾವು


ಚರಂಡಿ ಸ್ವಚ್ಚಗೊಳಿಸುವ ಸಂದರ್ಭದಲ್ಲಿ ವಿಷಕಾರಿ ಗಾಳಿ ಸೇವಿಸಿ ಇಬ್ಬರು ಪೌರ ಕಾರ್ಮಿಕರು (Pourakarmikas) ಸಾವನ್ನಪ್ಪಿರುವ ಘಟನೆ ದಾವಣಗೆರೆ (Davanagere) ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ನಡೆದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಎರಡು ಜೀವ ಬಲಿಯಾಗಿದ್ದು, ಮೃತ ಪೌರ ಕಾರ್ಮಿಕರನ್ನು ಸತ್ಯಪ್ಪ ತಂದೆ ದುಂಡಪ್ಪ (45) ಹಾಗೂ ಮೈಲಪ್ಪ ತಂದೆ ನಾಗಪ್ಪ (42) ಎಂದು ಗುರುತಿಸಲಾಗಿದೆ.




ಇದನ್ನೂ ಓದಿ: Baburao Chinchansoor: ಬಿಜೆಪಿ 'ಶಾಕ್​' ಕೊಟ್ಟಿದ್ದ ಚಿಂಚನಸೂರ್ ​ಕಾಂಗ್ರೆಸ್ ಸೇರ್ಪಡೆಗೆ ಅಮಾವಾಸ್ಯೆ ಅಡ್ಡಿ!


ಯುಗಾದಿ ಹಬ್ಬದ (Ugadi Festival) ಹಿನ್ನೆಲೆ ಬಹುದಿನಗಳಿಂದ ತುಂಬಿದ್ದ ಚರಂಡಿ ಸ್ವಚ್ಚತೆಗೆ ಬಸವನಕೋಟೆ ಗ್ರಾಪಂ ಪಿಡಿಓ ಶಶಿಧರ ಪಾಟೀಲ್ ಆದೇಶ ಮಾಡಿದ್ದರು. ಪಿಡಿಓ ಅದೇಶದ ಹಿನ್ನೆಲೆ ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಸತ್ಯಪ್ಪ ಮತ್ತು ಮೈಲಪ್ಪ ಚರಂಡಿ ಸ್ವಚ್ಚತೆಗೆ ಮುಂದಾಗಿದ್ದರು ಎನ್ನಲಾಗಿದೆ. ಹೀಗೆ ಚರಂಡಿ ಸ್ವಚ್ಚಗೊಳೊಸುವಾಗ ವಿಷ ಗಾಳಿ ಸೇವಿಸಿ ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.


ಮೃತ ಪೌರ ಕಾರ್ಮಿಕ ದುಂಡಪ್ಪ (45) ಹಾಗೂ ನಾಗಪ್ಪ (42)

top videos


    ತೀವ್ರವಾಗಿ ಅಸ್ವಸ್ಥಗೊಂಡ ಕಾರ್ಮಿಕರನ್ನ ಹತ್ತಿರದ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಬ್ಬರು‌ ಪೌರಕಾರ್ಮಿಕರು ಸಾವನ್ನಪ್ಪಿದ್ದು, ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಗಳನ್ನು ಕಳೆದುಕೊಂಡು ಎರಡು ಕುಟುಂಬಗಳು ಅನಾಥವಾಗಿದೆ. ಘಟನೆ ಸಂಬಂಧ ಬೀಳಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    First published: