ಚಿಕ್ಕಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ಮಹಿಳೆಯ (Woman) ಮೃತದೇಹ (Dead Body) ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು (Gauribidanur ) ನಗರದ ಹೊರವಲಯದಲ್ಲಿ ನಡೆದಿದ್ದು, ಘಟನೆ ಸಂಬಂಧ ಮೃತ ಮಹಿಳೆಯ ಪುತ್ರಿ ಪೊಲೀಸರಿಗೆ (Police) ತಂದೆಯ (Father) ವಿರುದ್ಧವೇ ದೂರು ನೀಡಿದ್ದಾರೆ. ಇತ್ತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ತಾಯಿಯನ್ನು (Mother) ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಮಹಿಳೆಯನ್ನು ಲಕ್ಷ್ಮಿದೇವಮ್ಮ (43) ಎಂದು ಗುರುತಿಸಲಾಗಿದೆ. ಮೃತ ಮಹಿಳೆ ಪತಿ ಕೃಷ್ಣಪ್ಪ ಘಟನೆ ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಕೃಷ್ಣಪ್ಪ, ಗೌರಿಬಿದನೂರು ತಾಲೂಕಿನ ರಾಮಚಂದ್ರಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಕಳೆದ ಮೂರು ದಿನಗಳಿಂದ ಅವರು ನಾಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೃತ ಲಕ್ಷ್ಮಿದೇವಮ್ಮ ಹಾಗೂ ಕೃಷ್ಣಪ್ಪ ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಮಗಳಿಗೆ ಮದುವೆಯಾಗಿದ್ದು, ಎರಡನೇ ಮಗಳು ಬೆಂಗಳೂರಿನಲ್ಲಿ ಓದುತ್ತಿದ್ದಾರೆ. ದಂಪತಿಗಳ ನಡುವೆ ಕೆಲ ಸಮಯದಿಂದ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಸದ್ಯ ಲಕ್ಷ್ಮಿದೇವಮ್ಮ ಅವರ ಕೊಲೆ ಬೆನ್ನಲ್ಲೇ ಪತಿ ನಾಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿಎಲ್ ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಪತ್ತೆ ಆಗಿರುವ ಆರೋಪಿಯ ಪತ್ತೆಗೆ ಸರ್ಕಲ್ ಇನ್ಸ್ಪೆಕ್ಟರ್ ಕೆಪಿ ಸತ್ಯನಾರಾಯಣ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಾಗಿದೆ.
ಘಟನೆ ಕುರಿತಂತೆ ನ್ಯೂಸ್9 ಪ್ರಕ್ರಿಯೆ ನೀಡಿರುವ ಲಕ್ಷ್ಮಿದೇವಮ್ಮ ಎರಡನೇ ಪುತ್ರಿ, ಸೋಮವಾರ ಬೆಳಗ್ಗೆಯಿಂದಲೂ ಅಮ್ಮನಿಗೆ ಫೋನ್ ಮಾಡುತ್ತಿದೆ. ಆದರೆ ಕಾಲ್ ರೀಚ್ ಆಗಿರಲಿಲ್ಲ. ಅವತ್ತು ಸಂಘ ಇದ್ದ ಕಾರಣ ಪಕ್ಕದ ಮನೆಯವರಿಗೆ ಕರೆ ಮಾಡಿ ಅಮ್ಮನ ಬಗ್ಗೆ ಕೇಳಿದ್ದೆ. ಅವರು ಒಂದು ಗಂಟೆ ಬಳಿಕ ಮನೆ ಬಳಿ ಬಂದು ನೋಡಿದಾಗ ಮನೆಯಿಂದ ದುರ್ವಾಸನೆ ಬರುವುದು ಕಂಡಿದೆ. ಕೂಡಲೇ ಅವರು ನನಗೆ ಕರೆ ಮಾಡಿ ಮನೆಯಿಂದ ಈ ರೀತಿ ವಾಸನೆ ಬರ್ತಿದೆ ಅಂತ ಹೇಳಿದರು. ನಾನು ಬೆಂಗಳೂರಿನಿಂದ ಬರುವ ವೇಳೆಗೆ ಪೊಲೀಸರು ಬಂದು ಮನೆ ಡೋರ್ ಓಪನ್ ಮಾಡಿದ್ದರು ಎಂದು ತಿಳಿಸಿದ್ದಾರೆ.
ಅಮ್ಮನ ಮೃತದೇಹ ನೋಡಿದ ತಕ್ಷಣ ನನಗೆ ಶಾಕ್ ಆಯ್ತು. ಅವರೇ ನನ್ನ ಅಮ್ಮ ಅಂತ ಗುರುತು ಹಿಡಿಯಲು ಆಗಲಿಲ್ಲ. ಅಮ್ಮನನ್ನು ಹಿಂದಿನಿಂದ ಹೊಡೆದು ಏನೋ ಮಾಡಿದ್ದಾರೆ. ಇತ್ತೀಚೆಗೆ ಅಮ್ಮ ಅವರ ಮನೆಯವರನ್ನು ಹೆಚ್ಚು ಮಾತನಾಡುತ್ತಿದ್ದರು ಅಷ್ಟೇ. ಅಪ್ಪನ ಬಗ್ಗೆ ಮಾತನಾಡಿದರೂ ನಿನ್ನ ಮದುವೆ ಆದ ಮೇಲೆ ಚೆನ್ನಾಗಿ ಇರ್ತಿಯಾ. ಮನೆಯಲ್ಲಿ ಯಾರು ಇದ್ದಾರೆ ಅಂತ ನಾನು ಈಗ ಮನೆಗೆ ಬರಬೇಕು ಎಂದು ಕಣ್ಣೀರಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ