ಕೊಪ್ಪಳ: ಬಾಣಂತಿಯ (Bananti) ಮೃತದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಮೃತ ಮಹಿಳೆಯ (Woman) ತಾಯಿ (Mother) ಹಾಗೂ ತಮ್ಮನನ್ನೇ (Brother) ಪೊಲೀಸರು ಬಂಧನ ಮಾಡಿದ್ದಾರೆ. ಇದರೊಂದಿಗೆ ಗ್ರಾಮಸ್ಥರಿಗೆ ಶಾಕ್ ಆಗಿದ್ದು, ಬಾಣಂತಿ ಅಂತಲೂ ನೋಡದೆ ಹೆತ್ತ ತಾಯಿಯೇ ಮಗಳನ್ನು ಕೊಲೆಗೈದು ಸುಟ್ಟು ಹಾಕಲು ಕಾರಣವೇನು ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೊಲೀಸರು (Police) ನೀಡಿರುವ ಮಾಹಿತಿಯ ಅನ್ವಯ ಮೃತ ಮಹಿಳೆ ನೇತ್ರಾವತಿ ಹಾಗೂ ಆರೋಪಿಗಳ ಇಬ್ಬರ ನಡುವೆ ಹಣ ಹಾಗೂ ಬಂಗಾರದ ವಿಚಾರದಲ್ಲಿ ಆರಂಭವಾದ ಜಗಳವೇ ಕೊಲೆಗೆ ಕಾರಣವಾಗಿದೆ.
ಏನಿದು ಪ್ರಕರಣ?
ಮಾರ್ಚ್ 21ರಂದು ಕೊಪ್ಪಳ (Koppal) ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಬಾಣಂತಿಯನ್ನು ಕೊಲೆಗೈದು ಸುಟ್ಟು ಹಾಕಿದ್ದರು. ಯುಗಾದಿ (Ugadi) ಅಮಾವಾಸ್ಯೆಯಂದೆ (Amavasya) ಕೃತ್ಯ ನಡೆದಿದ್ದ ಕಾರಣ ನಿಧಿಗಾಗಿಯೇ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು.
ಇದನ್ನೂ ಓದಿ: Crime News: ದಾರಿಯಲ್ಲಿ ಹಿಂಬಾಲಿಸಿ ಬಂದ ಸರಗಳ್ಳರು, ಪ್ರತಿರೋಧ ತೋರಿದ್ದಕ್ಕೆ ಮಹಿಳೆಯ ಕೈ ಕಟ್!
ಆದರೆ ಆ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ 25 ವರ್ಷದ ಮೃತ ನೇತ್ರಾವತಿ ಕುರಿ ಕೊಲೆ ಬಗ್ಗೆ ಹಲವು ಅನುಮಾನಗಳು ಎದುರಾಗಿತ್ತು. ಏಕೆಂದರೆ ಬಾಣಂತಿಯಾಗಿದ್ದ ಮಹಿಳೆಯ ಮೃತದೇಹ ಮನೆಯ ಸಮೀಪವಿರುವ ಹೊಲದಲ್ಲೇ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಎಸ್ಪಿ ಯಶೋಧ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪ್ರಕರಣ ಜಾಡು ಹಿಡಿದು ಹೊರಟ ಮುನಿರಾಬಾದ್ ಪೊಲೀಸರಿಗೆ ಸ್ಥಳದಲ್ಲಿ ಸಿಕ್ಕ ಕೆಲವು ಸುಳಿವು ಹಾಗೂ ಮೃತ ಬಾಣಂತಿಯ ಕುಟುಂಬಸ್ಥರ ವರ್ತನೆ ಅಚ್ಚರಿ ಮೂಡಿಸಿತ್ತು. ಕೂಡಲೇ ಅರ್ಧ ಸುಟ್ಟಿದ್ದ ಬಾಣಂತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ತನಿಖೆ ಆರಂಭಿಸಿದ್ದರು.
ಈ ವೇಳೆ ಮೃತ ಮಹಿಳೆಯ ತಾಯಿ ಕನಕಮ್ಮ ಹಾಗೂ ತಮ್ಮ ಮಾರುತಿಯೇ ಕೊಲೆಗಾರರು ಎಂದು ತಿಳಿದು ಬಂದಿತ್ತು. ಈ ವೇಳೆ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಆಸ್ಪತ್ರೆಯ ಹೆರಿಗೆ ಖರ್ಚು, ಬಂಗಾರ ಕೊಡಿಸುವ ವಿಷಯದಲ್ಲಿ ಜಗಳ ನಡೆದಿತ್ತು. ಈ ಜಗಳವೇ ಅತಿರೇಕಕ್ಕೆ ತಿರುಗಿ ನೇತ್ರಾವತಿಯನ್ನು ಕೊಲೆ ಮಾಡಿದ್ದಾರೆ ತಿಳಿದು ಬಂದಿದೆ.
ಸದ್ಯ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ನಾಯ್ಯಾಲಯದ ಎದುರು ಹಾಜರು ಪಡಿಸಿ, ಕೋರ್ಟ್ ಸೂಚನೆ ಮೇರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ನೇಣಿಗೆ ಶರಣಾದ ಮಹಿಳಾ ವಿಲೇಜ್ ಅಕೌಂಟೆಂಟ್
ಬೆಂಗಳೂರು ಹೊರವಲಯದ ಸರ್ಜಾಪುರದ ನಾಡ ಕಚೇರಿಯಲ್ಲಿ ಗ್ರಾಮ ಲೆಕ್ಕಿಗರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಆನೇಕಲ್ ಪೊಲೀಸ್ ಠಾಣೆ ಸಮೀಪದ ಮುನಿವೀರಪ್ಪ ಗಲ್ಲಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅಲಿಯಾ ಅಂಜುಂ ಅಣ್ಣಿಗೇರಿ (22) ಎಂದು ಗುರುತಿಸಲಾಗಿದೆ.
ಮೃತ ಮಹಿಳೆ ಆರ್ ರೆಡ್ಡಿ ಎಂಬುವವರ ಬಿಲ್ಡಿಂಗ್ನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇನ್ನು ಮೃತರ ಅಣ್ಣ ಹಾಗೂ ತಂಗಿ ಆನೇಕಲ್ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಅಣ್ಣ ಬಳ್ಳಾರಿಯ ಅಣ್ಣಿಗೆರೆಗೆ ಹೋಗಿದ್ದ ವೇಳೆ ಅಲಿಯಾ ಅಂಜುಂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ