ಲಕ್ನೋ: ಪ್ರತಿನಿತ್ಯ ಕುಡಿದು (Alcohol) ಬಂದು ಕುಟುಂಬಸ್ಥರಿಗೆ (Family) ಕಿರುಕುಳ ನೀಡುತ್ತಿದ್ದ ಪತಿಗೆ (Husband) ಪತ್ನಿಯೊಬ್ಬಳು (Wife) ನಡು ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಕೋಲಿನಿಂದ (Stick) ಥಳಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಹರ್ದೋಯ್ನಲ್ಲಿ ನಡೆದಿದೆ. ಅಲ್ಲದೇ ವ್ಯಕ್ತಿಯ ತಾಯಿ (Mother) ಮತ್ತು ಸಹೋದರಿ (Sister) ಕೂಡ ಆತನಿಗೆ ಥಳಿಸುತ್ತಿದ್ದ ವೇಳೆ ಮಹಿಳೆಗೆ ಸಪೋರ್ಟ್ ಮಾಡಿದ್ದಾರೆ. ಸುಮಾರು 30 ಸೆಕೆಂಡಿನಲ್ಲಿ ವ್ಯಕ್ತಿಗೆ ಮೂವರು ಸೇರಿಕೊಂಡು 15 ಬಾರಿ ಕೋಲಿನಿಂದ ಹಿಗ್ಗಾಮುಗ್ಗ ಥಳಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ವಿಡಿಯೋ (Video Viral) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದ್ದಂತೆ ಪೊಲೀಸರು (Police) ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.
ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಪತಿ
ಕಚುನಾ ಪೊಲೀಸ್ ಠಾಣಾ ವ್ಯಾಪ್ತಿಯ ಭಾನ್ಪುರದ ನಿವಾಸಿಯಾಗಿರುವ ಅಮಿತ್ ಅವಸ್ತಿ, ಬಲಮೌದ ರೈಲ್ವೇ ಗಂಜ್ನಲ್ಲಿರುವ ಖಾಸಗಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆತನ ಕುಡಿತದ ಚಟದಿಂದ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದೆ. ಹೀಗಿದ್ದರೂ ಅಂಗಡಿಯಿಂದ ಬರುವ ಹಣದಲ್ಲಿ ದಿನವೂ ಮದ್ಯ ಸೇವಿಸಿ ಹಾಳು ಮಾಡುತ್ತಿದ್ದನು.
ಪತಿ ವರ್ತನೆಗೆ ಬೇಸತ್ತು ದೊಣ್ಣೆಯಿಂದ ಥಳಿಸಿದ ಪತ್ನಿ
ಶುಕ್ರವಾರವೂ ಅಮಿತ್ ಕುಡಿದು ಮನೆಗೆ ಬಂದು ಗಲಾಟೆ ಮಾಡಲು ಆರಂಭಿಸಿದ್ದ. ಪತಿಯ ವರ್ತನೆಯಿಂದ ನೊಂದ ಪತ್ನಿ ಶಿಖಾ, ಅತ್ತೆ ಹಾಗೂ ನಂದೇ ಜತೆಗೂಡಿ ಅಮಿತ್ಗೆ ದೊಣ್ಣೆಗಳಿಂದ ತೀವ್ರವಾಗಿ ಥಳಿಸಿದ್ದಾರೆ.
ಅಷ್ಟರಲ್ಲಿ ದಾರಿಹೋಕರು ಹಾಗೂ ಅಂಗಡಿಯವರು ನೋಡಿ ಪ್ರತಿದಿನ ವ್ಯಕ್ತಿಗೆ ಪತ್ನಿ ಹೊಡೆಯುತ್ತಿದ್ದಳು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಹಿಳೆಗೆ ಅತ್ತೆ, ನಾದಿನಿ ಕೂಡ ಸಪೋರ್ಟ್
ಈ ಕುರಿತಂತೆ ಪ್ರತಿಕ್ರಿಯಿಸಿದ ಮ್ಯಾಜಿಸ್ಟ್ರೇಟ್ ಬಗೌಲಿ ವಿಕಾಸ್ ಕುಮಾರ್ ಜೈಸ್ವಾಲ್ ಅವರು, ವ್ಯಕ್ತಿಗೆ ಥಳಿಸಿರುವ ವಿಡಿಯೋ ವೀಕ್ಷಿಸಿದೆ. ಇದರಲ್ಲಿ ಮೂವರು ಮಹಿಳೆಯರು ವ್ಯಕ್ತಿಗೆ ದೊಣ್ಣೆಯಿಂದ ಥಳಿಸಿದ್ದಾರೆ. ಹಲ್ಲೆ ನಡೆಸಿದ ಮಹಿಳೆಯರು ಆತನ ಪತ್ನಿ, ತಾಯಿ ಮತ್ತು ಸಹೋದರಿ ಎಂದು ತಿಳಿದುಬಂದಿದೆ. ಕುಡಿದ ಅಮಲಿನಲ್ಲಿದ್ದರಿಂದ ಕುಟುಂಬಸ್ಥರು ಆತನಿಗೆ ಥಳಿಸಿದ್ದಾರೆ. ಹೀಗಾಗಿ ಪ್ರಕರಣ ಸಂಬಂಧ ತನಿಖೆ ನಡೆಸಲಾತ್ತಿದೆ ಎಂದು ತಿಳಿಸಿದ್ದಾರೆ.
ಈ ಮುನ್ನ ಪತ್ನಿಯಿಂದ ಕಿರುಕುಳಕ್ಕೊಳಗಾಗಿದ್ದ ಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್
ಈ ಹಿಂದೆ ಬೆಂಗಳೂರಿನ ಯದುನಂದನ್ ಆಚಾರ್ಯ ಎಂಬವವರು ಸೋಶಿಯಲ್ ಮೀಡಿಯಾದಲ್ಲಿ ತಮಗೆ ಆಗುತ್ತಿದ್ದ ಕಿರುಕುಳ ಬೆದರಿಕೆ ಕುರಿತು ಹಂಚಿಕೊಂಡಿದ್ದರು. ಈ ಕುರಿತು ಟ್ವಿಟ್ ಮಾಡಿದ್ದ ಅವರು, ಪ್ರಧಾನಿ ಕಾರ್ಯಾಲಯ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಕೇಂದ್ರ ಕಾನೂನು ಸಚಿವ ಮತ್ತು ನ್ಯಾಯಮೂರ್ತಿ ಕಿರಣ್ ರಿಜಿಜು ಅವರಿಗೆ ಟ್ಯಾಗ್ ಮಾಡಿದ್ದರು.
ಇದನ್ನೂ ಓದಿ: Crime News: ನನ್ನ ಸಾವಿಗೆ ಪತ್ನಿಯೇ ಕಾರಣ, ನಂಗೆ ನ್ಯಾಯ ಕೊಡಿಸಿ; ಗೋಡೆ ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡ ಪತಿ!
ನನ್ನ ಮೇಲೆ ಪತ್ನಿ ಹಲ್ಲೆ ಮಾಡಿದಾಗ ಯಾರು ನನ್ನ ಸಹಾಯಕ್ಕೆ ಬರಲಿಲ್ಲ
ಪತ್ನಿಯಿಂದ ಕಿರುಕುಳ, ದೈಹಿಕ ಹಲ್ಲೆಯಾದಾಗ ಯಾರೊಬ್ಬರು ನನ್ನ ಸಹಾಯಕ್ಕೆ ಬರಲಿಲ್ಲ. ನಾನು ಪುರಷನಾಗಿದ್ದರಿಂದ ಯಾರು ನನ್ನ ಸಹಾಯಕ್ಕೆ ಧಾವಿಸಿಲ್ಲ ಎಂದು ಬರೆದುಕೊಂಡಿದ್ದರು. ಇಂತಹ ಕೆಲಸಗಳಿಂದ ನಾರಿಶಕ್ತಿ ಹೆಚ್ಚುತ್ತದೆಯೇ ಎಂದು ಅವರು ಪ್ರಶ್ನಿಸಿದ್ದರು. ಇತ್ತೀಚೆಗೆ ಚಾಕುವಿನಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಳು. ಅದರಿಂದ ನನ್ನ ಕೈ ಗಾಯವಾಗಿದ್ದು, ರಕ್ತಸ್ರಾವವಾಗಿತ್ತು. ತಮಗೆ ಪತ್ನಿಯಿಂದ ಜೀವ ಬೆದರಿಕೆಯು ಇದೆ ಎಂದು ಫೋಟೊ ಪೋಸ್ಟ್ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ