ಬೆಂಗಳೂರು: ಪೋಷಕರೇ (Parents) ನಿಮ್ಮ ಮಕ್ಕಳನ್ನು (Children) ಹುಷಾರಾಗಿ ನೋಡಿಕೊಳ್ಳಿ ಇಲ್ಲ ಎಂದರೆ ಕ್ಷಣ ಮಾತ್ರದಲ್ಲಿ ನಿಮಗೆ ಚುಕ್ಕಿ ತೋರಿಸಿ ನಿಮ್ಮ ಮಕ್ಕಳನ್ನ ಎತ್ಕೊಂಡು ಎಸ್ಕೇಪ್ ಆಗುತ್ತಾರೆ. ಹೌದು, ಈ ಸ್ಟೋರಿನ ನೋಡಿದರೆ ನೀವೂ ಬೆಚ್ಚಿಬೀಳುತ್ತೀರಿ. ಹೌದು, ಈ ಫೋಟೋದಲ್ಲಿ (Photo) ಮಳ್ಳಿಯಂತೆ ಕಾಣುತ್ತಿರುವವಳು ಮಕ್ಕಳ ಕಳ್ಳಿ (Child Theft). ಸ್ವಂತ ಮನೆಗೆ ಮನೆಯವರು ಬಂದಂತೆ ಬಂದು ಕಣ್ಣು ಮಿಟುಕಿಸುವಷ್ಟರಲ್ಲಿ ಮನೆಯಲ್ಲಿರುವ ಕಂದಮ್ಮನನ್ನು ಹೊತ್ತೊಯ್ಯುತ್ತಾಳೆ ಖತರ್ನಾಕ್ ಮಹಿಳೆ.
ಸಾರ್ವಜನಿಕರೇ ಪೊಲೀಸರಿಗೆ ಒಪ್ಪಿಸಿದ್ದರು
ಆರೋಪಿ ಹೆಸರು ನಂದಿನಿ ಅಲಿಯಾಸ್ ಅಯೇಷಾ. ಕೆಲ ದಿನಗಳ ಹಿಂದೆ ಕಲಾಸಿಪಾಳ್ಯದಲ್ಲಿ ನವಜಾತ ಶಿಶುವನ್ನು ಕದ್ದೊಯ್ದು, ಮಗುನ ಎತ್ಕೊಂಡು ಅನುಮಾನಾಸ್ಪದವಾಗಿ ಓಡಾಡಿ ಸಾರ್ವಜನಿಕರ ಕೈಗೆ ಸಿಕ್ಕಾಕಿಕೊಂಡಿದ್ದಳು. ಇವಳನ್ನು ಬಂಧಿಸಿದ ಪೊಲೀಸರು ಈಕೆಯನ್ನ ವಿಚಾರಣೆಗೊಳಿಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಆರೋಪಿಯ ಕಳ್ಳಾಟವೆಲ್ಲಾ ಬಯಲಿಗೆ ಬಂದಿದೆ.
ಇದನ್ನೂ ಓದಿ: Crime News: ಮಗು ಕಳ್ಳಿಯ ಸುಳಿವು ಕೊಟ್ಟ ಉಪ್ಪಿಟ್ಟು! ಚಾಲಾಕಿ ಮಹಿಳೆ ಸಿಕ್ಕಿ ಬಿದ್ದಿದ್ದೇ ರೋಚಕ ಸ್ಟೋರಿ
ಎನ್ಜಿಒ ಹೆಸರಿನಲ್ಲಿ ಹಣಕ್ಕಾಗಿ ಮನೆ ಮನೆಗೆ ಸುತ್ತಾಟ
ಎನ್ಜಿಒ ಅನ್ಕೊಂಡು ಯಾವುದೋ ಒಂದು ಸಂಸ್ಥೆಯ ಕರಪತ್ರ ಹಿಡಿದುಕೊಂಡು ಡೊನೇಷನ್ ಕೇಳುವ ನೆಪದಲ್ಲಿ ಮನೆಗೆ ಎಂಟ್ರಿ ಕೊಡುತ್ತಾಳಂತೆ. ಮನೆಯಲ್ಲಿರುವವರ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳಂತೆ. ಅವರು ಮನ ಕರಗಿ ಹಣ ತರಲು ಒಳಗಡೆ ಹೋದರೆ ಸಾಕು ಕೈಗೆ ಸಿಗುವ ವಸ್ತುಗಳನ್ನೆಲ್ಲಾ ಎತ್ಕೊಂಡು ಸ್ಥಳದಿಂದ ಎಸ್ಕೇಪ್ ಆಗುತ್ತಿದ್ದಳಂತೆ.
ರಾತ್ರಿಯಾಗುತ್ತಿದ್ದಂತೆ ರಾಬರಿಗೆ ಇಳಿಯುತ್ತಿದ್ದ ಮಹಿಳೆ
ಇದು ಹಗಲಲ್ಲಿ ಕಳ್ಳಿ ಮೇಡಂ ಮಾಡುತ್ತಿದ್ದ ಡ್ಯೂಟಿ ಎನ್ನಲಾಗಿದೆ. ಇನ್ನು ನೈಟ್ ಟೈಂ ಐನಾತಿ ಮಹಿಳೆ ಚಾಕು, ಚೂರಿ ಹಿಡಿದು ರಾಬರಿ ಕೂಡಾ ಮಾಡುತ್ತಿದ್ದಳಂತೆ. ಸದ್ಯ ಇವೆಲ್ಲಾ ಕಥೆ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನು ಮಕ್ಕಳನ್ನು ಕದ್ದು ಯಾರಿಗೆ ಕೊಡುತ್ತಿದ್ದಳು ಅನ್ನೋ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ದೇವಸ್ಥಾನದಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋದರು
ಇತ್ತ ನಗರದ ಯಶವಂತಪುರದಲ್ಲಿ ಆಗ ತಾನೇ ಹುಟ್ಟಿದ ಹಸುಗೂಸನ್ನು ರಾತ್ರಿ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಯಾರೋ ಬಿಟ್ಟು ಹೋಗಿದ್ದಾರೆ. ನವಜಾತ ಹೆಣ್ಣುಮಗುವನ್ನ ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕಂದಮ್ಮನನ್ನು ದಾಖಲಿಸಿದ್ದಾರೆ. ಸದ್ಯ ನವಜಾತ ಶಿಶು ಆರೋಗ್ಯವಾಗಿದ್ದು, ಯಶವಂತಪುರ ಠಾಣೆಯಲ್ಲಿ ಐಪಿಸಿ 317 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ