• ಹೋಂ
 • »
 • ನ್ಯೂಸ್
 • »
 • Crime
 • »
 • Husband-Wife: ಕುಡುಕ ಗಂಡನನ್ನು ದೋಸೆ ಕಾವಲಿಯಲ್ಲಿ ಹೊಡೆದು ಕೊಂದ ಪತ್ನಿ! ತಪ್ಪಿಸಿಕೊಳ್ಳಲು ಮಾಡಿದ್ದು ಮಾಸ್ಟರ್ ಪ್ಲಾನ್

Husband-Wife: ಕುಡುಕ ಗಂಡನನ್ನು ದೋಸೆ ಕಾವಲಿಯಲ್ಲಿ ಹೊಡೆದು ಕೊಂದ ಪತ್ನಿ! ತಪ್ಪಿಸಿಕೊಳ್ಳಲು ಮಾಡಿದ್ದು ಮಾಸ್ಟರ್ ಪ್ಲಾನ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

42 ವರ್ಷದ ರವಿಕುಮಾರ್​ ಎಂಬಾತನನ್ನು ಆತನ ಪತ್ನಿ ಜ್ಯೋತಿಮಣಿ ಹೃದಾಯಘಾತವಾಗಿದೆ ಎಂದು ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಮರಣೋತ್ತರ ಪರೀಕ್ಷೆ ಬಂದ ನಂತರ ಇದು ಕೊಲೆ ಎಂಬುದು ಬೆಳಕಿಗೆ ಬಂದಿದೆ.

 • Share this:

ಚೆನ್ನೈ: ಗಂಡ ಹೆಂಡತಿ (Husband-Wife) ಜಗಳ ಉಂಡು ಮಲಗೋ ತನಕ ಅಂತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ಜಗಳ ಕೊಲೆಯಾಗೋ ತನಕ ಅನ್ನುವಂತಾಗಿದೆ. ಕುಳಿತು ಮಾತನಾಡಿ ಸಮಸ್ಯೆಗಳನ್ನು (Problem) ಪರಿಹಾರ ಮಾಡಿಕೊಳ್ಳುವ ಬದಲಿಗೆ ಕೊಲೆ ಮಾಡುವ ಹಂತಕ್ಕೆ ಹೋಗುತ್ತಿದ್ದಾರೆ. ಎರಡು ದಿನಗಳ ಹಿಂದೆ ತಮಿಳುನಾಡಿನಲ್ಲಿ (Tamil Nadu) ಗಂಡನನ್ನು ಕೊಂದು ಪೀಸ್​ ಪೀಸ್ (Chops)​ ಮಾಡಿ ವಿವಿಧ ಭಾಗಗಳಲ್ಲಿ ಎಸೆದ ಘಟನೆ ಬೆಳಕಿಗೆ ಬಂದಿತ್ತು. ಇದೀಗ ತಮಿಳಿನಾಡಿನ ತಿರುಪುರ್​ನಲ್ಲಿ ಗಂಡನನ್ನು ದೋಸೆ ಕಾವಲಿಯಲ್ಲಿ ಹೊಡೆದು ಕೊಂದಿರುವ ಘಟನೆ ನಡೆದಿದೆ.


42 ವರ್ಷದ ರವಿಕುಮಾರ್​ ಎಂಬಾತನನ್ನು ಆತನ ಪತ್ನಿ ಜ್ಯೋತಿ ಮಣಿ ದೋಸೆ ಕಾವಲಿಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಗಂಡನಿಗೆ ಕಾವಲಿಯಿಂದ ಹೊಡೆದಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆ ಬಂದ ನಂತರ ಇದು ಕೊಲೆ ಎಂಬುದು ಬೆಳಕಿಗೆ ಬಂದಿದೆ.


ಕುಡಿದು ಬಂದು ಜಗಳ


ರವಿಕುಮಾರ್ ಕುಡಿತದ ಚಟ ಹೊಂದಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕುಡಿದು ಬಂದು ಆತ ಹೊಡೆಯಿತ್ತಿದ್ದ. ಮಾರ್ಚ್ 22 ರಂದು ರವಿಕುಮಾರ್ ಕುಡಿದ ಅಮಲಿನಲ್ಲಿ ಮನೆಗೆ ಬಂದು ಜ್ಯೋತಿಮಣಿ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯನ್ನು ತಡೆದುಕೊಳ್ಳಲಾಗದ ಜ್ಯೋತಿ ಲಕ್ಷ್ಮಿ ಕೋಪಗೊಂಡ ರವಿಕುಮಾರ್‌ಗೆ ದೋಸೆ ಪಾನ್‌ನಿಂದ ಹೊಡೆಯಲು ಶುರು ಮಾಡಿದ್ದಾಳೆ. ರವಿಕುಮಾರ್ ಪ್ರಜ್ಞೆ ತಪ್ಪಿದ್ದು, ಕೆಲ ಸಮಯದಲ್ಲೇ ಮೃತಪಟ್ಟಿದ್ದಾರೆ. ಜ್ಯೋತಿಮಣಿ ತಕ್ಷಣ ಆತನನ್ನು ಆ್ಯಂಬುಲೆನ್ಸ್​ನಲ್ಲಿ ಈರೋಡೆ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಹೃದಯಾಘಾತವಾಗಿದೆ ಎಂದು ತಿಳಿಸಿದ್ದಾಳೆ.


ಇದನ್ನೂ ಓದಿ:  Compensation: ದುಬೈ ಬಸ್ ಅಪಘಾತದಲ್ಲಿ ಗಾಯಗೊಂಡ ಭಾರತೀಯನಿಗೆ 11 ಕೋಟಿ ಪರಿಹಾರ! ವಿಮಾ ಕಂಪನಿಗೆ ಕೋರ್ಟ್ ಆದೇಶ


ತಂದೆಯಿಂದ ದೂರು


ಮಾರ್ಚ್ 23 ರಂದು ಮೃತನ ಸಂಬಂಧಿಕರು ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನಡೆಸಲು ಯೋಜಿಸುತ್ತಿದ್ದಾಗ, ಸಂತ್ರಸ್ತೆಯ ತಂದೆ ದುಷ್ಕೃತ್ಯದ ಬಗ್ಗೆ ಶಂಕಿಸಿ ತಿರುಮುರುಗನಪೂಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.


ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ದೇಹದ ಮೇಲೇ ಗಟ್ಟಿಯಾದ ವಸ್ತುವಿನ ಹೊಡೆದಿರುವುದರಿಂದ ಉಂಟಾಗುವ ಗಾಯಗಳು ಕಂಡುಬಂದಿವೆ. ವರದಿ ಪಡೆದ ಪೊಲೀಸರು ಜ್ಯೋತಿಮಣಿಯನ್ನು ವಿಚಾರಣೆಗೆ ಒಳಪಡಿಸಿದಾಗ ರವಿಕುಮಾರ್‌ನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಬುಧವಾರ ಬಂಧಿಸಿ ಕೊಯಮತ್ತೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ತೆಲಂಗಾಣದಲ್ಲೂ ಇಂತಹದ್ದೇ ಘಟನೆ


ಜನವರಿಯಲ್ಲಿ ತೆಲಂಗಾಣದಲ್ಲಿ ಇಂತಹದ್ದೇ ಘಟನೆ ಬೆಳಕಿಗೆ ಬಂದಿತ್ತು. ಗಂಡನ ಸರ್ಕಾರಿ ನೌಕರಿಗಾಗಿ ಹೆಂಡತಿಯೊಬ್ಬಳು ಗಂಡನನ್ನೇ ಕೊಂದಿದ್ದಳು. ನಂತರ ಪತಿ ಆಕಸ್ಮಿಕವಾಗಿ ಸತ್ತರು ಎಂದು ಕಥೆ ಸೃಷ್ಠಿಸಿದ್ದಳು. ಪತಿ ತೀರಿಕೊಂಡರೆ ಅನುಕಂಪದ ನೌಕರಿ ಸಿಗುತ್ತದೆ ಎಂಬ ಆಸೆಯಿಂದ ಈಕೆ ಈ ಕೆಲಸ ಮಾಡಿರುವುದು ಪೊಲೀಸರ ತನಿಖೆಯ ವೇಳೆ ಅನುಮಾನಿಸಲಾಗಿತ್ತು. ಆದರೆ ತನ್ನ ಪತಿ ನಿತ್ಯ ಕುಡಿದು ತನಗೆ ಕಿರುಕುಳ ನೀಡುತ್ತಿದ್ದ ಅದಕ್ಕಾಗಿಯೇ ಆತನನ್ನು ಕೊಂದಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ಆರೋಪಿ ಪತ್ನಿ ಒಪ್ಪಿಕೊಂಡಿದ್ದಳು. ಈ ಘಟನೆ ಭದ್ರಾದ್ರಿ ಕೊತ್ತಗೂಡಂ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.


ಇದನ್ನೂ ಓದಿ: Crime News: ಮದುವೆಗೆ ನಿರಾಕರಿಸಿದ ಯುವತಿಯನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ವಿಷ ಸೇವಿಸಿದ ಕಿರಾತಕ!


ಕಾಲು ಜಾರಿ ಬಿದ್ದನೆಂದು ಕಥೆ ಕಟ್ಟಿದ್ದ ಪತ್ನಿ


ಕೊಮ್ಮಾರ ಬೋಯಿನ ಶ್ರೀನಿವಾಸ್ (50) ಅವರು ಪತ್ನಿ ಸೀತಾ ಮಹಾಲಕ್ಷ್ಮಿ (43) ಅವರೊಂದಿಗೆ ಭದ್ರಾದ್ರಿ ಕೊತ್ತಗೂಡಂನ ಗಾಂಧಿ ಕಾಲೋನಿಯಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಡಿ.30 ರಂದು ಬೆಳಗ್ಗೆ ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ್​ನನ್ನು ಸೀತಾ ಮಹಾಲಕ್ಷ್ಮಿ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಡಿಸೆಂಬರ್ 29 ರಂದು ತಡರಾತ್ರಿ ಶ್ರೀನಿವಾಸ್ ಅವರು ಸ್ನಾನಗೃಹದಲ್ಲಿ ಕಾಲು ಜಾರಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದೆ ಎಂದು ಕಥೆ ಕಟ್ಟಿದ್ದಳು, ಶ್ರೀನಿವಾಸ್ ಅದೇ ದಿನ ಮೃತಪಟ್ಟಿದ್ದರು.


ಆದರೆ ತಂದೆಯ ಸಾವಿನ ಬಗ್ಗೆ ಸಾಯಿಕುಮಾರ್ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪತಿ ಆಸ್ಪತ್ರೆಗೆ ದಾಖಲಾದ ಬಳಿಕ ಪತ್ನಿ ಸೀತಾಮಹಾಲಕ್ಷ್ಮಿ ನಾಪತ್ತೆಯಾಗಿದ್ದರು. ಅನುಮಾನದ ಮೇರೆಗೆ ಆಕೆಯ ಮೇಲೆ ನಿಗಾ ಇಡಲಾಗಿತ್ತು. ಮರುದಿನ ರಾತ್ರಿ ಹೈದರಾಬಾದ್‌ಗೆ ಹೋಗಲು ರೈಲು ನಿಲ್ದಾಣದಲ್ಲಿ ಇದ್ದ ವೇಳೆ ಅಲ್ಲಿಗೆ ಬಂದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು.

top videos


  ವಿಚಾರಣೆ ವೇಳೆ ಗಂಡ ಸತ್ತ ದಿನ ನನ್ನ ಗಂಡ ತುಂಬಾ ಕುಡಿದು ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದ. ಕೋಪದಲ್ಲಿ ಅವರು ನಿದ್ದೆ ಮಾಡುತ್ತಿದ್ದ ಕೋಲಿನಿಂದ ತಲೆಗೆ ಹೊಡೆದೆ. ಆ ನಂತರ ನಾನು ಅವರನ್ನು ಅಡಿಗೆ ಮನೆಗೆ ಕರೆದುಕೊಂಡು ಹೋಗಿ ಮಲಗಿಸಿ, ಕಾಲುಜಾರಿ ಬಿದ್ದರೆಂದು ಎಲ್ಲರಿಗೂ ಹೇಳಿದೆ ಎಂದು ತಿಳಿಸಿದ್ದಾಳೆ.

  First published: