• ಹೋಂ
 • »
 • ನ್ಯೂಸ್
 • »
 • Crime
 • »
 • Husband-Wife: ಲಿಪ್‌ಸ್ಟಿಕ್‌ ಹಚ್ಚಿ, ಮಹಿಳೆಯರಂತೆ ಬಟ್ಟೆ ತೊಡುತ್ತಿದ್ದ ಗಂಡ, ವರದಕ್ಷಿಣೆ ದೂರು ಕೊಟ್ಟ ಪತ್ನಿ!

Husband-Wife: ಲಿಪ್‌ಸ್ಟಿಕ್‌ ಹಚ್ಚಿ, ಮಹಿಳೆಯರಂತೆ ಬಟ್ಟೆ ತೊಡುತ್ತಿದ್ದ ಗಂಡ, ವರದಕ್ಷಿಣೆ ದೂರು ಕೊಟ್ಟ ಪತ್ನಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮನೆಯ ಹೊರಗೆ ಗಂಡಿನ ರೀತಿ ಇದ್ದರೆ, ಹೆಂಡತಿ ಇದ್ದಾಗ ಕೋಣೆಯೊಳಗೆ ಆತ ಇರುತ್ತಿದ್ದುದೇ ಬೇರೆ ರೀತಿ! ಹೆಂಗಸರು ಹೆಚ್ಚಾಗಿ ಇಷ್ಟಪಡುವ ಲಿಪ್ ಸ್ಟಿಕ್ ತಾನೂ ತುಟಿಗೆ ಹಚ್ಚುತ್ತಿದ್ದ. ಹೆಂಗಸರಂತೆ ಡ್ರೆಸ್ ಹಾಕಿಕೊಂಡು ವಯ್ಯಾರ ಮಾಡುತ್ತಿದ್ದ!

 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಅವರಿಬ್ಬರೂ ಗಂಡ ಹೆಂಡತಿಯರು (husband and wife). ಅವರಿಬ್ಬರದ್ದು ಸುಖ ಸಂಸಾರ. ಆದರೆ ಇತ್ತೀಚಿಗೆ ಆತ ಯಾಕೋ ವಿಚಿತ್ರವಾಗಿ ಆಡುತ್ತಿದ್ದ. ಮನೆಯ ಹೊರಗೆ ಗಂಡಿನ ರೀತಿ ಇದ್ದರೆ, ಹೆಂಡತಿ ಇದ್ದಾಗ ಕೋಣೆಯೊಳಗೆ (Room) ಆತ ಇರುತ್ತಿದ್ದುದೇ ಬೇರೆ ರೀತಿ! ಹೆಂಗಸರು ಹೆಚ್ಚಾಗಿ ಇಷ್ಟಪಡುವ ಲಿಪ್‌ ಸ್ಟಿಕ್ (lipstick) ತಾನೂ ತುಟಿಗೆ ಹಚ್ಚುತ್ತಿದ್ದ. ಹೆಂಗಸರಂತೆ ಡ್ರೆಸ್ ಹಾಕಿಕೊಂಡು ವಯ್ಯಾರ ಮಾಡುತ್ತಿದ್ದ! ಅಷ್ಟು ಸಾಲದು ಎಂಬಂತೆ ನನಗೆ ಮಹಿಳೆಯರಿಗಿಂತ ಪುರುಷರೇ ಜಾಸ್ತಿ ಇಷ್ಟವಾಗುತ್ತಾರೆ ಅಂತ ಹೇಳುತ್ತಿದ್ದನಂತೆ! ಇದೀಗ ಪತಿಯ ವರ್ತನೆಯಿಂದ ನೊಂದ ಪತ್ನಿ ಆತನ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು (dowry harassment complaint) ನೀಡಿದ್ದಾಳೆ.


ಮ್ಯಾಟ್ರಿಮೋನಿಯಲ್ಲಿ ಪರಿಚಯ, 2020ರಲ್ಲಿ ವಿವಾಹ


ಈ ದಂಪತಿ 2020ರಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್‌ ಒಂದರಲ್ಲಿ ಪರಸ್ಪರ ಪರಿಚಯವಾಗಿದ್ರಂತೆ. ಬಳಿಕ ಪ್ರಪೋಸಲ್ ಒಪ್ಪಿಗೆ ಆಗಿ, ಇಬ್ಬರೂ ಭೇಟಿಯಾಗಿ, ಮದುವೆ ಬಗ್ಗೆ ಯೋಚಿಸಿದ್ದಾರೆ. ಅದರಂತೆ ಇಬ್ಬರ ವಿವಾಹವೂ ನಡೆದಿದೆ.


ಮದುವೆ ವೇಳೆ ಭರ್ಜರಿ ವರದಕ್ಷಿಣೆ


ಈತ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರತಿಷ್ಠಿತ ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದನಂತೆ. ಹೀಗಾಗಿ ಮದುವೆಯ ವೇಳೆ ಸಂತ್ರಸ್ತೆ ಮನೆಯವರು ಆತನಿಗೆ ಭರ್ಜರಿ ವರದಕ್ಷಿಣೆ ನೀಡಿದ್ದಾರೆ. 800 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಮತ್ತು 5 ಲಕ್ಷ ರೂಪಾಯಿ ಹಣವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದಾರಂತೆ.


ಇದನ್ನೂ ಓದಿ: Crime News: ಹಗಲಲ್ಲಿ ಮಕ್ಕಳ ಕಳ್ಳಿ, ಸಂಜೆಯಲ್ಲಿ ಚಾಕು ಹಿಡಿದು ದರೋಡೆ; ಪೊಲೀಸರ ಮುಂದೆ ಬಯಲಾಯ್ತು ಐನಾತಿ ಕಳ್ಳಾಟ!


ಲಾಕ್ ಡೌನ್ ಟೈಮ್‌ನಲ್ಲಿ ಗಂಡ-ಹೆಂಡತಿ ನಡುವೆ ಜಗಳ


2020 ಲಾಕ್‌ಡೌನ್ ಸಮಯದಲ್ಲಿ ಗಂಡ ಹೆಂಡತಿ ಮಧ್ಯೆ ಜಗಳ ಶುರುವಾಗಿದ್ಯಂತೆ. ಆಕೆಯ ಅತ್ತೆ ಒಮ್ಮೆ ತನ್ನ ಮೇಲೆ ಜಿರಳೆ ಔಷಧಿ ಸಿಂಪಡಿಸಿ, ತೊಂದರೆ ಕೊಟ್ಟಿದ್ದರು ಅಂತ ಮಹಿಳೆ ದೂರಿನಲ್ಲಿ ಹೇಳಿದ್ದಾಳೆ.


ಸಲಿಂಗಕಾಮಿಯಾಗಿದ್ದನಾ ಪತಿ?


ಇನ್ನು ಸಂತ್ರಸ್ತ ಮಹಿಳೆಯ ಅತ್ತೆ 10 ಲಕ್ಷ ರೂಪಾಯಿಯನ್ನು ತವರಿನಿಂದ ತರುವಂತೆ ಪೀಡಿಸಿದ್ದಾಳಂತೆ. ಕಾರಣ ಕೇಳಿದರೆ ನನ್ನ ಮಗ ಸಲಿಂಗಕಾಮಿಯಾಗಿದ್ದು, ಆತನ ಚಿಕಿತ್ಸೆಗೆ 10 ಲಕ್ಷ ಬೇಕು ಅಂತ ಹೇಳಿದ್ದಾಳಂತೆ. ಇದರಿಂದ ಮಹಿಳೆ ಶಾಕ್‌ಗೆ ಒಳಗಾದಿದ್ದಳಂತೆ.


ಮೊದಲ ರಾತ್ರಿಯಿಂದಲೂ ವಿಚಿತ್ರ ವರ್ತನೆ


ಮೊದಲ ರಾತ್ರಿಯಿಂದಲೂ ಆಕೆಯ ಪತಿ ವಿಚಿತ್ರವಾಗಿ ವರ್ತಿಸುತ್ತಿದ್ದನಂತೆ. ಆತ ಹೆಣ್ಣು ಮಕ್ಕಳಂತೆ ತುಟಿಗೆ ಲಿಪ್‌ಸ್ಟಿಕ್ ಹಚ್ಚಿ, ಮಹಿಳೆಯರಂತೆ ಬಟ್ಟೆ ಧರಿಸುತ್ತಿದ್ದನಂತೆ. ಅಲ್ಲದೇ ನನಗೆ ಮಹಿಳೆಯರಿಗಿಂತ ಪುರುಷರೇ ಇಷ್ಟ ಆಗ್ತಾರೆ ಅಂತ ಹೇಳುತ್ತಿದ್ದನಂತೆ.


ಮನೆ ಬಿಟ್ಟು ಹೋಗಿದ್ದ ಪತ್ನಿ


ಒಂದೆಡೆ ಗಂಡನ ವಿಚಿತ್ರ ವರ್ತನೆ, ಮತ್ತೊಂದೆಡೆ ಅತ್ತೆಯ ವರದಕ್ಷಿಣೆ ಕಿರುಕುಳ.. ಹೀಗೆ ನೊಂದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಳಂತೆ. ಹೀಗಾಗಿ ಮನೆ ಬಿಟ್ಟು ಸೋದರ ಮಾವನ ಮನೆಗೆ ತೆರಳಿದ್ದಳಂತೆ.


ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ


ಇದೀಗ ಸಂತ್ರಸ್ತ ಮಹಿಳೆ ಗಂಡ ಹಾಗೂ ಅತ್ತೆ ಮನೆಯವರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಮಹಿಳೆ ದೂರು ನೀಡಿದ್ದಾಳೆ. ಮಹಿಳೆ ಹಾಗೂ ಆಕೆ ಕುಟುಂಬಸ್ಥರು ನೀಡಿದ ದೂರಿನನ್ವಯ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.


ಇದನ್ನೂ ಓದಿ: Crime News: ಆಂಜನೇಯ ದೇಗುಲದಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋದ ಪಾಪಿಗಳು! ಮುಂದೇನಾಯ್ತು?


ಸ್ನೇಹಿತನನ್ನೇ ಬರ್ಬರವಾಗಿ ಕೊಂದು ದುಷ್ಕರ್ಮಿಗಳು ಎಸ್ಕೇಪ್​


ಮತ್ತೊಂದು ಪ್ರಕರಣದಲ್ಲಿ ಪಶ್ಚಿಮ ಬಂಗಾಳದಿಂದ (West Bengal) ಬೆಂಗಳೂರಿಗೆ (Bengaluru) ಕೆಲಸಕ್ಕೆ ಬಂದಿದ್ದವರಿಗೆ ಉಡುಪಿ (Udupi) ಮೂಲದ ಸ್ನೇಹಿತ ಕೂಡಾ ಜೊತೆಯಾಗಿದ್ದ. ಹೀಗೆ ಬೆಂಗಳೂರಲ್ಲಿ ಬದುಕು ಕಟ್ಟಿಕೊಂಡು, ಮೂವರು ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ ಒಟ್ಟಿಗೆ ಇದ್ದ ಮೂವರ ಮಧ್ಯೆ ಬೈಕ್ ಪಾರ್ಕಿಂಗ್ (Bike Parking ) ವಿಚಾರಕ್ಕೆ ದೊಡ್ಡ ಗಲಾಟೆಯಾಗಿ ಕೊಲೆಯೇ ನಡೆದು ಹೋಗಿದೆ. ಜಗಳದಲ್ಲಿ ಉಡುಪಿ ಮೂಲಕದ 29 ವರ್ಷದ ಜನಾರ್ದನ ಭಟ್ ಎಂಬಾತನ ಕೊಲೆಯಾಗಿದೆ.

First published: