• ಹೋಂ
  • »
  • ನ್ಯೂಸ್
  • »
  • Crime
  • »
  • Tumakuru: ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!

Tumakuru: ಗಂಡನ ಕೊಲೆಗೆ ಪತ್ನಿಯಿಂದಲೇ ಸುಪಾರಿ; ಹುಟ್ಟುಹಬ್ಬದಂದೇ ಕೊಲೆಗೈದು ಕೆರೆಗೆ ಎಸೆದ್ರು!

ಮೃತ ಪತಿ ಮಂಜುನಾಥ್/ ಆರೋಪಿ ಪತ್ನಿ ಹರ್ಷಿತಾ

ಮೃತ ಪತಿ ಮಂಜುನಾಥ್/ ಆರೋಪಿ ಪತ್ನಿ ಹರ್ಷಿತಾ

ಕೊಲೆಯಾಗಿರುವ ಮಂಜುನಾಥ್ ಮಧ್ಯರಾತ್ರಿ 12ರ ಸುಮಾರಿಗೆ ಯಾವುದೋ ಫೋನ್​ ಬಂತು ಅಂತ ಮನೆಯಿಂದ ಹೊರ ಹೋಗಿದ್ದರಂತೆ. ಆದರೆ ಮರುದಿನ ಬೆಳಗ್ಗೆ ಆತನ ಮೃತದೇಹ ಕಿತ್ನಾಮಂಗಲ ಕೆರೆಯಲ್ಲಿ ಪತ್ತೆಯಾಗಿತ್ತು.

  • News18 Kannada
  • 5-MIN READ
  • Last Updated :
  • Tumkur, India
  • Share this:

ತುಮಕೂರು: ನೂರು ವರ್ಷ ಒಬ್ಬರಿಗೊಬ್ಬರು ಜೊತೆಯಾಗಿ ಇರ್ತೀವಿ ಅಂತ ಹಿರಿಯರ ಸಮ್ಮುಖದಲ್ಲಿ ಗಂಡನ (Husband) ಕೈ ಹಿಡಿದಿದ್ದ ಮಹಿಳೆಯೇ (Women) ಗಂಡನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದ ಘಟನೆ ತುಮಕೂರು (Tumakuru) ಜಿಲ್ಲೆಯ ಕುಣಿಗಲ್ (Kunigal)​​ನಲ್ಲಿ ಬೆಳಕಿಗೆ ಬಂದಿದೆ. ಹೆಂಡತಿಯೇ ಗಂಡನ (Wife) ಕೊಲೆಗೆ ಸುಪಾರಿ ಕೊಟ್ಟು ಆತನನ್ನು ಪರಲೋಕಕ್ಕೆ ಕಳುಹಿಸಿದ್ದಾಳೆ. ಇದರೊಂದಿಗೆ ಹುಟ್ಟುಹಬ್ಬದ ದಿನವೇ ಅನುಮಾನಸ್ಪದಾಗಿ ಸಾವನ್ನಪ್ಪಿದ್ದ ವ್ಯಕ್ತಿಯ ಪ್ರಕರಣವನ್ನು ಕುಣಿಗಲ್​​ ಪೊಲೀಸರು (Police) ಬೇಧಿಸಿದ್ದು, ಪ್ರಕರಣದಲ್ಲಿ ಕೊಲೆಯದ ವ್ಯಕ್ತಿಯ ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧನ ಮಾಡಿದ್ದಾರೆ.


ಏನಿದು ಪ್ರಕರಣ?


ಫೆಬ್ರವರಿ 03 ರಂದು ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಅನುಮಾನಸ್ಪದಾಗಿ ಸಾವನ್ನಪ್ಪಿದ್ದರು. ಮಂಜುನಾಥ್​ ಮೃತದೇಹ ಗ್ರಾಮದ ಕಿತ್ನಾಮಂಗಲ ಕೆರೆಯ ಬಳಿ ಪತ್ತೆಯಾಗಿತ್ತು. ಅಂದು ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ಬಂದಿದ್ದ ಮಂಜುನಾಥ್, ಮಧ್ಯರಾತ್ರಿ 12 ಸುಮಾರಿಗೆ ಯಾವುದೋ ಫೋನ್​ ಬಂತು ಅಂತ ಮನೆಯಿಂದ ಹೊರ ಹೋಗಿದ್ದರಂತೆ.


ಆ ಬಳಿ ಎಷ್ಟೇ ಸಮಯವಾದರೂ ಆತನ ಮನೆಗೆ ವಾಪಸ್​ ಆಗಿರಲಿಲ್ಲವಂತೆ. ಆದರೆ ಮರುದಿನ ಬೆಳಗ್ಗೆ ಆತನ ಮೃತದೇಹ ಗ್ರಾಮದಿಂದ ಒಂದು ಕಿಲೋಮೀಟರ್​ ದೂರದ ಇರುವ ಕಿತ್ನಾಮಂಗಲ ಕೆರೆಯಲ್ಲಿ ಪತ್ತೆಯಾಗಿತ್ತು.




ಇದನ್ನೂ ಓದಿ: Husband-Wife: ಹೊಡಿತಾಳೆ, ಬೈತಾಳೆ ನನ್ನ ಹೆಂಡ್ತಿ; ಪತ್ನಿ ವಿರುದ್ಧ ದೂರು ದಾಖಲಿಸಿದ ಪತಿ


ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಕುಣಿಗಲ್​ ಪೊಲೀಸರು ತನಿಖೆ ಶುರು ಮಾಡಿದ್ದರು. ತನಿಖೆ ವೇಳೆ ಮೃತ ಮಂಜುನಾಥ್​ ಪತ್ನಿ ಹರ್ಷಿತಾಳ ವರ್ತನೆ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು ಎನ್ನಲಾಗಿದೆ. ಈ ಅನ್ವಯ ತನಿಖೆ ನಡೆಸಿದ್ದ ಪೊಲೀಸರಿಗೆ ಹರ್ಷಿತಾಳ ಸುಪಾರಿ ಆಟದ ಕುರಿತು ಮಾಹಿತಿ ಲಭ್ಯವಾಗಿದೆ. ಹರ್ಷಿತಾಳೇ ತನ್ನ ದೊಡ್ಡಮ್ಮನ ಮಗ ರಘು, ರವಿಕಿರಣ್ ಎಂಬವರಿಗೆ ಸುಪಾರಿ ನೀಡಿದ್ದಳು ಎನ್ನಲಾಗಿದೆ.


ತನ್ನ ಆನೈತಿಕ ಸಂಬಂಧ ಗಂಡ ಮಂಜುನಾಥ್​ ಅಡ್ಡಿಯಾಗುತ್ತಿದ್ದ ಎನ್ನುವ ಕಾರಣಕ್ಕೆ ಹರ್ಷಿತಾ ತನ್ನ ಗಂಡನ ಕೊಲೆ ಸುಪಾರಿ ನೀಡಿದ್ದಳು ಎಂಬ ಶಂಕೆ ವ್ಯಕ್ತವಾಗಿದೆ. ಸುಪಾರಿ ಪಡೆದ ಆರೋಪಿಗಳು ಮಂಜುನಾಥ್ ಹುಟ್ಟುಹಬ್ಬದಂದೇ ಆತನನ್ನು ಕೊಲೆಗೈದು ಕೆರೆ ಬೀಸಾಕಿದ್ದರು ಎನ್ನಲಾಗಿದೆ. ಪ್ರಕರಣದಲ್ಲಿ ಕುಣಿಗಲ್ ಪೊಲೀಸರು ಹರ್ಷಿತಾ, ರಘು, ರವಿಕಿರಣ್ ಎಂಬ ಆರೋಪಿಗಳನ್ನು ಬಂಧನ ಮಾಡಿದ್ದಾರೆ.


ಬಂಧಿತ ಆರೋಪಿಗಳು


ಎರಡು ಗುಂಪುಗಳ ನಡುವೆ ಮಾರಾಮಾರಿ


ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದ ಜೋಗಿಹಳ್ಳಿ ಬಳಿ ನಡೆದಿದೆ. ಬೈಕ್​​ನಲ್ಲಿ ಹೋಗುತ್ತಿದ್ದ ಭರತ್ ಎಂಬಾತನನ್ನು ತಡೆದು ನಿಲ್ಲಿಸಿದ್ದ ಗಿರೀಶ್ ಮತ್ತು ತಂಡ ಯಾಕೆ ಗುರಾಯಿಸುತ್ತೀಯಾ ಅಂತ ಪ್ರಶ್ನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಇದನ್ನೂ ಓದಿ: Sudha Murthy: ಮೊನ್ನೆ ಅಪ್ಪು ಫೋಟೋ, ಇಂದು ಸುಧಾ ಮೂರ್ತಿ; ಕನಕಪುರಕ್ಕೆ ಆಸ್ಪತ್ರೆ ಕೊಟ್ಟ ಇನ್ಫೋಸಿಸ್​​​ ಬಿಟ್ಟು ಕಾರ್ಯಕ್ರಮ


ಮೃತದೇಹ ಪತ್ತೆಯಾದ ಸ್ಥಳ


ಈ ಘಟನೆ ಬಳಿಕ ಮತ್ತೆ ಎರಡು ಗುಂಪುಗಳ ನಡುವೆ ಇದೇ ವಿಚಾರಕ್ಕೆ ಮತ್ತೊಮ್ಮೆ ಮಾರಾಮಾರಿ ನಡೆದಿದೆ. ಈ ವೇಳೆ ಜಗಳ ಬಿಡಿಸಲು ಹೋದ ಐವರಿಗೆ ಗಂಭೀರ ಗಾಯವಾಗಿದೆ. ಮಾರಾಮಾರಿಯಲ್ಲಿ ಗಾಯಗೊಂಡಿರುವ ಭರತ್, ಹರೀಶ್ ಇಬ್ಬರಿಗೈ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಗಲಾಟೆ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಚಿಕ್ಕನಾಯಕನಹಳ್ಳಿ ಪೊಲೀಸರು ಗಲಾಟೆ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಅಲ್ಲದೆ, ಎರಡು ಗುಂಪುಗಳ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Published by:Sumanth SN
First published: