ಡೆಹ್ರಾಡೂನ್: ಪೊಲೀಸ್ ಶ್ವಾನವೊಂದು ಕೊಲೆ ಪ್ರಕರಣವನ್ನು ಕೇವಲ 30 ಸೆಕೆಂಡ್ಗಳಲ್ಲಿ ಭೇದಿಸಿ ಅಪರಾಧಿಯನ್ನು ಪತ್ತೆಹಚ್ಚಿದ ಬಗ್ಗೆ ಉತ್ತರಾಖಂಡದಲ್ಲಿ (Uttarakhand) ವರದಿಯಾಗಿದೆ. ಅಪರಾಧ ಪ್ರಕರಣವನ್ನು ಪತ್ತೆ ಹಚ್ಚಿದಕ್ಕಾಗಿ ಶ್ವಾನ ಇಲಾಖೆಯ ರಾಜ್ಯಮಟ್ಟದ ತಿಂಗಳ ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಉತ್ತರಾಖಂಡದ ಉಧಮ್ ಸಿಂಗ್ ನಗರ (Udham Singh Nagar) ಜಿಲ್ಲೆಯ ಪೊಲೀಸರು ತಮ್ಮ ಶ್ವಾನದಳದ ಶ್ವಾನ ಕ್ಯಾಟಿಯನ್ನು (Canine Kattie) ಬೆಸ್ಟ್ ಕಾಪ್ ಅವಾರ್ಡ್‌ಗೆ (Best Cop Award) ಆಯ್ಕೆ ಮಾಡಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಶಂಕಿತ ಆರೋಪಿಯನ್ನು ಕ್ಯಾಟಿ ಕೇವಲ 30 ಸೆಕೆಂಡ್‌ನಲ್ಲಿ ಪತ್ತೆ ಮಾಡಿದ್ದಕ್ಕೆ ಈ ಗೌರವ ನೀಡಲಾಗಿದೆ. ಕೊಲೆ ಪ್ರಕರಣದ ತನಿಖೆಗಿಳಿದ ಪೊಲೀಸ್ ತಂಡದ ಭಾಗವಾಗಿದ್ದ ಈ ಶ್ವಾನ ಪೊಲೀಸರಿಗೆ ಕೊಲೆ ಪ್ರಕರಣ ಭೇದಿಸಲು ನೆರವಾಗಿತ್ತು.
ಈ ವರ್ಷದ ಮಾರ್ಚ್ 6 ರಂದು ದಾಖಲಾದ ಕೊಲೆ ಪ್ರಕರಣದಲ್ಲಿ ಜರ್ಮನ್ ಶೆಫರ್ಡ್ ಕ್ಯಾಟಿ ಎಂಬ ಶ್ವಾನ ಆರೋಪಿಯನ್ನು ಕೇವಲ 30 ಸೆಕೆಂಡ್ಗಳಲ್ಲಿ ಪತ್ತೆ ಹಚ್ಚಿತ್ತು, 21 ವರ್ಷದ ಶಕೀಬ್ ಅಹ್ಮದ್ ಎಂಬ ಯುವಕನ ಕೊಲೆಯಾಗಿತ್ತು. ಉದ್ಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ಬರುವ ಜಸ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಲವೊಂದರಲ್ಲಿ ಶಕೀಬ್‌ನ ಮೃತದೇಹ ಪತ್ತೆಯಾಗಿತ್ತು. ಮೃತದೇಹದ ಮೇಲೆ ಗಾಯದ ಗುರುತುಗಳೊಂದಿಗೆ ಪತ್ತೆಯಾಗಿದ್ದವು.
30 ಸೆಕೆಂಡ್ಗಳಲ್ಲಿ ಆರೋಪಿ ಪತ್ತೆ
ಶಕೀಬ್‌ನ ಶವ ಪತ್ತೆಯಾಗಿದ್ದ ಕೆಲವು ಮೀಟರ್‌ಗಳಷ್ಟು ದೂರದಲ್ಲಿ ರಕ್ತದ ಕಲೆಯುಳ್ಳ ಬಟ್ಟೆ ಪತ್ತೆಯಾಗಿತ್ತು. ಇದರ ವಾಸನೆ ತೆಗೆದುಕೊಳ್ಳಲು ಕ್ಯಾಟಿಗೆ ಸೂಚಿಸಲಾಯಿತು. ನಂತರ ಪೊಲೀಸರು ಶಕೀಬ್ ಅವರ ಕುಟುಂಬ ಸದಸ್ಯರು ಸೇರಿದಂತೆ ಶಂಕಿತರನ್ನು ಶ್ವಾನದ ಮುಂದೆ ಸಾಲಾಗಿ ನಿಲ್ಲಿಸಿಲಾಯಿತು. ಬಟ್ಟೆಯ ವಾಸನೆಯನ್ನು ಸ್ನಿಪ್ ಮಾಡಿದ 30 ಸೆಕೆಂಡ್ಗಳಲ್ಲಿ ಕ್ಯಾಟಿ ಆರೋಪಿಯನ್ನು ಪತ್ತೆ ಹಚ್ಚಿತು.
ಇದನ್ನೂ ಓದಿ: Rewards for Police Informer: ಕ್ರೈಮ್ ಬಗ್ಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿ, 5 ಲಕ್ಷ ರೂಪಾಯಿ ಬಹುಮಾನ ಪಡೆಯಿರಿ!
ಸೋದರ ಸಂಬಂಧಿಯೇ ಅಪರಾಧಿ
ಬಟ್ಟೆಯನ್ನು ವಾಸನೆ ತೆಗೆದುಕೊಂಡ ಕ್ಯಾಟಿ ಕೇವಲ 30 ಸೆಕೆಂಡುಗಳಲ್ಲಿ ಶಕೀಬ್‌ನ ಸೋದರಸಂಬಂಧಿ ಖಾಸಿಮ್ ನೋಡಿ ಬೊಗಳಲು ಶುರು ಮಾಡಿತು. ಆತ ಶಂಕಿತರ ಸಾಲಿನಲ್ಲಿ ಎರಡನೆಯವನಾಗಿ ನಿಂತಿದ್ದ. ಶ್ವಾನ ಗುರುತಿಸಿದ ಆಧಾರದ ಮೇಲೆ ನಾವು ಖಾಸಿಂನನ್ನು ವಿಚಾರಣೆಗೆ ಒಳಪಡಿಸಿದೆವು. ತೀವ್ರ ವಿಚಾರಣೆಯ ನಂತರ ಖಾಸಿಂ ತಾನೇ ಶಕೀಬ್‌ನನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ರಾಜ್ಯಮಟ್ಟದ ತಿಂಗಳ ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ
ಕೆಲವೇ ಸೆಕೆಂಡ್ಗಳಲ್ಲಿ ಕೊಲೆ ಪ್ರಕರಣವನ್ನು ಭೇದಿಸಿದ ಕ್ಯಾಟಿಗೆ ತಿಂಗಳ ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ ನೀಡುವುದರ ಜೊತೆಗೆ ಪೊಲೀಸ್ ಇಲಾಖೆ ಮಾರ್ಚ್ 7 ರಂದು 2500 ರೂಪಾಯಿಗಳ ನಗದು ಬಹುಮಾನವನ್ನು ಕೂಡ ಘೋಷಿಸಿದೆ. ರಾಜ್ಯ ಮಟ್ಟದ ಪ್ರಶಸ್ತಿಗೆ ಶ್ವಾನವೊಂದನ್ನು ಆಯ್ಕೆ ಮಾಡಿರುವುದು ಇದೇ ಮೊದಲು ಎಂದು ಎಸ್‌ಎಸ್‌ಪಿ ಮಂಜುನಾಥ್ ಹೇಳಿದರು. ಕ್ಯಾಟಿಗೆ ಸ್ಮರಣಿಕೆ ಹಾಗೂ ಪದಕ ನೀಡಲಾಗುವುದು. ಅದನ್ನು ಕ್ಯಾಟಿಯನ್ನು ನಿರ್ವಹಿಸುವವರು ಪಡೆದುಕೊಳ್ಳುತ್ತಾರೆ. ಕ್ಯಾಟಿಯ ಸಹಾಯವಿಲ್ಲದಿದ್ದರೆ ಈ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಾಕಷ್ಟು ಸಮಯ ಹಿಡಿಯುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದೇ ಮೊದಲ ಪ್ರಕರಣವಲ್ಲ
ಪೊಲೀಸ್ ಅಧಿಕಾರಿಗಳಾದರೆ ಅಪರಾಧ ಪ್ರಕರಣದಲ್ಲಿ ತನಿಖೆ ಮಾಡುವಾಗಿ ಸಾಮಾನ್ಯವಾಗಿ ಸಿಸಿಟಿವಿ ಚೆಕ್ ಮಾಡುವುದು. ಫೋನ್ ಕರೆ ವಿವಿರಗಳನ್ನು ಪರಿಶೀಲಿಸುವುದು. ಸ್ಥಳೀಯರನ್ನು ವಿಚಾರಿಸುವುದು ನಡೆಯುತ್ತದೆ. ಆದರೆ ಈ ಕ್ಯಾಟಿ ಸಂಶೋಧನೆಯಲ್ಲಿ ಸ್ವಲ್ಪ ಅನುಮಾನವಿತ್ತು. ಏಕೆಂದರೆ ಮೃತನ ಬಟ್ಟೆಯನ್ನು ಖಾಸಿಂ ಹೊರತಾಗಿ ಬೇರೆ ಯಾರೂ ಕೂಡ ಮುಟ್ಟಿರಲಿಲ್ಲ. ಮದ್ಯಪಾನ ಸೇವಿಸಿದ್ದ ಇಬ್ಬರ ನಡುವೆ ಜಗಳವಾಗಿದ್ದು, ಆರೋಪಿ ಮದ್ಯದ ಅಮಲಿನಲ್ಲಿ ಮಾರ್ಚ್ 5 ರಂದು ರಾತ್ರಿ ಶಕೀಬ್‌ನನ್ನು ಹತ್ಯೆ ಮಾಡಿದ್ದ ಎಂದು ಎಸ್ಎಚ್ಒ ಪಿಎಸ್ ಧನು ತಿಳಿಸಿದ್ದಾರೆ.
ಕ್ಯಾಟಿಯ ಹ್ಯಾಂಡ್ಲರ್ ಯೋಗೇಂದ್ರ ರಾಘವ್ ಮಾತನಾಡಿ, ಅಪರಾಧಿಗಳನ್ನು ಪತ್ತೆ ಹಚ್ಚುವುದರಲ್ಲಿ ಕ್ಯಾಟಿ ಈ ರೀತಿ ಪೊಲೀಸರಿಗೆ ಸಹಾಯ ಮಾಡಿದ್ದು, ಇದೇ ಮೊದಲೇನಲ್ಲ ಎಂದು ಬಹಿರಂಗ ಪಡಿಸಿದ್ದಾರೆ. 2016ರಲ್ಲಿ ಸೇವೆಗೆ ಸೇರಿದಾಗಿನಿಂದ ಒಟ್ಟು ಕೊಲೆ, ಲೂಟಿ, ಅತ್ಯಾಚಾರ ಮತ್ತಿತರ ಗಂಭೀರ ಅಪರಾಧ ಪ್ರಕರಣಗಳನ್ನು ಭೇದಿಸಿದ್ದಾಳೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ