• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಪಕ್ಕದ ಮನೆ ಬ್ಯಾಗ್‌ನಲ್ಲಿ ಸಿಕ್ತು ಕಾಣೆಯಾಗಿದ್ದ ಮಗುವಿನ ಶವ! 2 ವರ್ಷದ ಕಂದನ ಕೊಂದು ಊರು ಬಿಟ್ಟ ಪಾಪಿ!

Crime News: ಪಕ್ಕದ ಮನೆ ಬ್ಯಾಗ್‌ನಲ್ಲಿ ಸಿಕ್ತು ಕಾಣೆಯಾಗಿದ್ದ ಮಗುವಿನ ಶವ! 2 ವರ್ಷದ ಕಂದನ ಕೊಂದು ಊರು ಬಿಟ್ಟ ಪಾಪಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೊಲೀಸರ ಮಾಹಿತಿಯ ಪ್ರಕಾರ ನೆರೆಮನೆಯ ವ್ಯಕ್ತಿ, ಮಗುವನ್ನು ಉಸಿರುಗಟ್ಟಿಸಿ (Smothered)ಕೊಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತೆ ಕುಟುಂಬ ಅದೇ ಕಟ್ಟಡದಲ್ಲಿ ಒಂದು ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು.

  • Share this:

ನೋಯ್ಡಾ: ಕಾಣೆಯಾಗಿದ್ದ 2 ವರ್ಷದ ಬಾಲಕಿಯ (Girl)ಶವ ಪಕ್ಕದ ಮನೆಯಲ್ಲಿ (Door) ನೇತು ಹಾಕಿದ್ದ ಬ್ಯಾಗ್‌ನಲ್ಲಿ ( Bag) ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ (Greater Noida) ನಡೆದಿದೆ. ಪೊಲೀಸರ ಮಾಹಿತಿಯ ಪ್ರಕಾರ ನೆರೆಮನೆಯ ವ್ಯಕ್ತಿ, ಮಗುವನ್ನು ಉಸಿರುಗಟ್ಟಿಸಿ (Smothered)ಕೊಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತೆ ಕುಟುಂಬ ಅದೇ ಕಟ್ಟಡದಲ್ಲಿ ಒಂದು ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು.


ಸೂರಜ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ದೇವ್ಲಾ ಗ್ರಾಮದ ಬಾಡಿಗೆ ಮನೆಯಿಂದ ಹುಡುಗಿ ನಾಪತ್ತೆಯಾಗಿದ್ದು, ಎರಡು ದಿನಗಳ ನಂತರ ಶವ ಪತ್ತೆಯಾಗಿದ್ದಳು. ಆಕೆ ಸಹೋದರ ಹಾಗೂ ತಂದೆ, ತಾಯಿಯೊಂದಿಗೆ ದೇವ್ಲಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. ಆಕೆಯ ಪೋಷಕರು ಹತ್ತಿರದ ಕಾರ್ಖಾನೆಯಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Crime News: ಮದುವೆಗೆ ನಿರಾಕರಿಸಿದ ಯುವತಿಯನ್ನು ಗುಂಡಿಕ್ಕಿ ಹತ್ಯೆಗೈದ ಬಳಿಕ ವಿಷ ಸೇವಿಸಿದ ಕಿರಾತಕ!


ಪೋಷಕರು ಹೊರ ಹೋಗಿದ್ದಾಗ ಬಾಲಕಿ ನಾಪತ್ತೆ


ಏಪ್ರಿಲ್ 7ರಂದು ಮಧ್ಯಾಹ್ನ ಬಾಲಕಿಯ ತಂದೆ ಶಿವಕುಮಾರ್ ಕೆಲಸಕ್ಕೆ ಹೋಗಿದ್ದರು. 2 ಗಂಟೆಯ ಸಂದರ್ಭದಲ್ಲಿ ತಾಯಿ ಮಂಜು ಸಹಾ ಮಾರುಕಟ್ಟೆಗೆ ಹೋಗಿದ್ದರು. ಮನೆಗೆ ಹಿಂತಿರುಗಿದಾಗ ಮಾನ್ಸಿ ಕಾಣಿಯಾಗಿದ್ದಳು. 2 ದಿನಗಳ ಕಾಲ ಎಷ್ಟೇ ಹುಡುಕಿದರೂ ಕಾಣೆಯಾಗದ ಹಿನ್ನೆಲೆಯ ಏಪ್ರಿಲ್​ 8ರಂದು ಮಗುವಿನ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿಸಿದ್ದರು.




ದುರ್ವಾಸನೆಯಿಂದ ಮಗು ಸತ್ತಿರುವುದು ಬಹಿರಂಗ


ಐಪಿಸಿ ಸೆಕ್ಸನ್​ 363 ಅಡಿಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ಮಗುವಿನ ಹುಡುಕಾಟಕ್ಕೆ ಮೂರು ತಂಡವನ್ನು ರಚಿಸಲಾಗಿತ್ತು. ಆದರೆ ಭಾನುವಾರ ಪಕ್ಕದ ಮನೆಯಲ್ಲಿ ದುರ್ವಾಸನೆ ಬರುತ್ತಿರುವ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್​ ಮತ್ತು ಫಾರೆನ್ಸಿಕ್​ ತಂಡ ಸ್ಥಳಕ್ಕೆ ದಾವಿಸಿ ಪರಿಶೀಲಿಸಿದಾಗ ಬ್ಯಾಗ್​ವೊಂದರಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಡಿಸಿಪಿ ದೀಕ್ಷಿತ್​ ತಿಳಿಸಿದ್ದಾರೆ.


ಕಳೆದ 2 ದಿನಗಳ ನಂತರ ತನ್ನ ನೆರೆ ಮನೆಯಲ್ಲಿದ್ದ ರಾಘವೇಂದ್ರ ಮನೆಯಿಂದ ದುರ್ವಾಸನೆ ಬರುತ್ತಿದೆ. ಆದರೆ ಮನೆಗೆ ಬೀಗ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ನೆರವಿನಿಂದ ಶಿವಕುಮಾರ್ ಮನೆ ಪ್ರವೇಶಿಸಿದ್ದಾನೆ. ಈ ವೇಳೆ ಮನೆಯ ಬಾಗಿಲಿಗೆ ನೇತು ಹಾಕಿದ್ದ ಚೀಲದಲ್ಲಿ ಮಾನ್ಸಿಯ ಶವ ಪತ್ತೆಯಾಗಿದೆ.


ಆರೋಪಿ ಪರಾರಿ


ಮಗು ಕಾಣೆಯಾದಾಗ ನೆರೆಮನೆಯ ವ್ಯಕ್ತಿ ಮಗುವನ್ನು ಹುಡುಕಾಡಲು ಮನೆಯವರಿಗೆ ಸಹಾಯ ಮಾಡುವಂತೆ ನಟಿಸಿದ್ದನಂತೆ. ಆದರೆ ಮೃತದೇಹ ಆತನ ಮನೆಯಲ್ಲಿ ವಾಸನೆ ಬರಲು ಪ್ರಾರಂಭಿಸಿದ ಬೆನ್ನಲ್ಲೇ ಆತ ಮನೆಯಿಂದ ನಾಪತ್ತೆಯಾಗಿದ್ದಾರೆ ಎಂದು ಮಾನ್ಸಿ ಪೋಷಕರು ಆರೋಪಿಸಿದ್ದಾರೆ. ಆರೋಪಿ ಉತ್ತರ ಪ್ರದೇಶದ ಬಿಲ್ಲಿಯಾ ಜಿಲ್ಲೆಯವನು. ಆತ ಮತ್ತು ಬಾಲಕಿಯ ತಂದೆ ಇಬ್ಬರೂ ಒಂದೇ ಜಾಗದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Crime: ವಿಶ್ವದ ಅತೀ ದೊಡ್ಡ ಸೈಬರ್ ಕ್ರೈಮ್ ಜಾಲಕ್ಕೆ ಪೊಲೀಸರಿಂದ ಬ್ರೇಕ್! 'ಆಪರೇಷನ್ ಕುಕಿ ಮಾನ್‌ಸ್ಟರ್' ಸಕ್ಸಸ್!


ಉಸಿರುಕಟ್ಟಿಸಿ ಕೊಲೆ


ಮಾನ್ಸಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಮಗುವನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ಮೊದಲಿಗೆ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಶಂಕೆ ವ್ಯಕ್ತವಾಗಿತ್ತಾದರೂ, ಮರಣೋತ್ತರ ಪರೀಕ್ಷೆ ವರದಿಯಲ್ಲಿ ಅತ್ಯಾಚಾರ ದೃಢಪಟ್ಟಿಲ್ಲ. ಸದ್ಯ ಆರೋಪಿ ಪರಾರಿಯಾಗಿದ್ದಾನೆ.   ಆತನನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

top videos
    First published: