• ಹೋಂ
  • »
  • ನ್ಯೂಸ್
  • »
  • Crime
  • »
  • Hit And Drags: ಸ್ಕೂಟರ್​ಗೆ ಡಿಕ್ಕಿ ಹೊಡೆದ ಟ್ರಕ್, 6 ವರ್ಷದ ಮಗುವನ್ನು 2 ಕಿಮೀ ದೂರ ಎಳೆದೊಯ್ದ ಚಾಲಕ!

Hit And Drags: ಸ್ಕೂಟರ್​ಗೆ ಡಿಕ್ಕಿ ಹೊಡೆದ ಟ್ರಕ್, 6 ವರ್ಷದ ಮಗುವನ್ನು 2 ಕಿಮೀ ದೂರ ಎಳೆದೊಯ್ದ ಚಾಲಕ!

6 ವರ್ಷದ ಮಗುವನ್ನು 2 ಕಿಮೀ ಎಳೆದೊಯ್ದ ಟ್ರಕ್

6 ವರ್ಷದ ಮಗುವನ್ನು 2 ಕಿಮೀ ಎಳೆದೊಯ್ದ ಟ್ರಕ್

ಉತ್ತರ ಪ್ರದೇಶದಲ್ಲಿ ಮತ್ತೊಂದು ಹಿಟ್​ ಅಂಡ್​ ಡ್ರ್ಯಾಗ್ (Hit and Drag) ಪ್ರಕರಣದ ನಡೆದಿದ್ದು, ಆರು ವರ್ಷದ ಮಗು ​ ಹಾಗೂ ಆತನ ಅಜ್ಜ ಇಬ್ಬರು ಸಾವನ್ನಪ್ಪಿದ್ದಾರೆ. ಉದಿತ್ ನಾರಾಯಣ ಚಾನ್ಸೋರಿಯಾ (67) ಮತ್ತು ಅವರ ಮೊಮ್ಮಗ ಸಾತ್ವಿಕ್ ಅವರು ಮಾರುಕಟ್ಟೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್​ ಸ್ಕೂಟರ್ ಡಿಕ್ಕಿ ಹೊಡೆದಿದೆ. ಅಪಘಾದಲ್ಲಿ ಉದಿತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಸಾತ್ವಿಕ್ ಮತ್ತು ದ್ವಿಚಕ್ರ ವಾಹನವನ್ನು ಟ್ರಕ್​ ಚಾಲಕ ಎರಡು ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದೆ ಓದಿ ...
  • Share this:

ಲಕ್ನೋ: ಉತ್ತರಪ್ರದೇಶದ (Uttar Pradesh) ಮಹೋಬಾದಲ್ಲಿ ಭಯಾನಕ ಅಪಘಾತ (Accident) ನಡೆದಿದ್ದು, ಟ್ರಕ್ (Truck) ಅಡಿಯಲ್ಲಿ ಸಿಲುಕಿದ್ದ 6 ವರ್ಷದ ಮಗುವನ್ನು 2 ಕಿಮೀ ದೂರ ಎಳೆದುಕೊಂಡು ಹೋಗಲಾಗಿದೆ. ಈ ಹಿಟ್​ ಅಂಡ್​ ಡ್ರ್ಯಾಗ್ (Hit and Drag) ಪ್ರಕರಣದಲ್ಲಿ, ಆರು ವರ್ಷದ ಮಗು ಸಾತ್ವಿಕ್​ ಹಾಗೂ ಆತನ ಅಜ್ಜ ಇಬ್ಬರು ಸಾವನ್ನಪ್ಪಿದ್ದಾರೆ. ಉದಿತ್ ನಾರಾಯಣ ಚಾನ್ಸೋರಿಯಾ (67) ಮತ್ತು ಅವರ ಮೊಮ್ಮಗ ಸಾತ್ವಿಕ್ ಅವರು ಮಾರುಕಟ್ಟೆಗೆ ಹೋಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್​ ಸ್ಕೂಟರ್ ಡಿಕ್ಕಿ ಹೊಡೆದಿದೆ. ಅಪಘಾದಲ್ಲಿ ಉದಿತ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಸಾತ್ವಿಕ್ ಮತ್ತು ದ್ವಿಚಕ್ರ ವಾಹನವನ್ನು ಟ್ರಕ್​ ಚಾಲಕ ಎರಡು ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆದುಕೊಂಡು ಹೋಗಿದ್ದಾನೆ ಎಂದು ತಿಳಿದುಬಂದಿದೆ.


ಕಾನ್ಪುರ-ಸಾಗರ್ ಹೆದ್ದಾರಿ NH86ನಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಟ್ರಕ್ ಬಳಿ ಹಲವಾರು ಬೈಕ್‌ಗಳು ಚಾಲಕನನ್ನು ಎಚ್ಚರಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೂ ಟ್ರಕ್​ ಡ್ರೈವರ್​ ನಿಲ್ಲಿಸದಿದ್ದಾಗ ಕೆಲವು ಜನರು ರಸ್ತೆಗೆ ಕಲ್ಲು, ಬಂಡೆಗಳನ್ನು ಹಾಕಿದ್ದಾರೆ. ಆಗ ಡೈವರ್​ ಟ್ರಕ್​ ನಿಲ್ಲಿಸಿದ್ದಾನೆ ಎಂದು ತಿಳಿದುಬಂದಿದೆ.


ಚಾಲಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು


ಅಪಘಾತ ಮಾಡಿ ಇಬ್ಬರ ಸಾವಿಗೆ ಕಾರಣನಾದ ಟ್ರಕ್​ ಚಾಲಕ, ಟ್ರಕ್​ ನಿಲ್ಲಿಸದೇ 6 ವರ್ಷದ ಮಗುವನ್ನು 2 ಕಿಮೀ ದೂರ ಎಳೆದುಕೊಂಡು ಹೋಗಿದ್ದಕ್ಕೆ ಕೋಪಗೊಂಡ ಸ್ಥಳೀಯರು ಚಾಲಕನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಟ್ರಕ್​ ಜಪ್ತಿ ಮಾಡಿದ್ದು, ಚಾಲನಕನ್ನು ಬಂಧಿಸಿದ್ದಾರೆ.


ಇದನ್ನೂ ಓದಿದ್ದು:  Pakistan: ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ; ಬಾಂಬ್ ಸ್ಫೋಟಗೊಂಡು 4 ಬಲಿ, 14 ಮಂದಿಗೆ ಗಾಯ


ಅಪಘಾತ ಮಾಡಿ ವ್ಯಕ್ತಿಯನ್ನು 10 ಕಿಮೀ ಎಳೆದೊಯ್ದ ಕಾರು


ಇದೇ ತಿಂಗಳ ಮೊದಲ ವಾರದಲ್ಲಿ ಇಂತಹದ್ದೇ ಘಟನೆ ಉತ್ತರ ಪ್ರದೇಶದ ಮಥುರಾ ಬಳಿಯ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ನಡೆದಿತ್ತು. ಬೆಳಗಿನ ಜಾವ ಭೀಕರ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕಾರೊಂದು ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದಿತ್ತು. ಆದರೆ ಚಾಲಕ ಕಾರನ್ನು ನಿಲ್ಲಿಸದೇ ದೇಹವನ್ನು ಸುಮಾರು 10 ಕಿ.ಮೀ.ಗೂ ಹೆಚ್ಚು ದೂರ ಎಳೆದೊಯ್ದಿದ್ದರು.
ಮಂಜು ಕವಿದಿದ್ದರಿಂದ ಅಪಘಾತ


ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಪುರುಷ ಮತ್ತು ಮಹಿಳೆಯನ್ನು ಬಂಧಿಸಲಾಗಿತ್ತು. ದೇವೇಂದ್ರ ಸಿಂಗ್ ಎಂಬುವವರೇ ಅಪಘಾತ ಸಂಭವಿಸಿದ ವೇಳೆ ಸ್ವಿಫ್ಟ್ ಡಿಜೈರ್ ಕಾರನ್ನು ಚಾಲನೆ ಮಾಡುತ್ತಿದ್ದರು ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಮಥುರಾ ಪೊಲೀಸ್ ತಿಳಿಸಿದ್ದರು.


ಅಪಘಾತಕ್ಕೆ ಒಳಗಾದ ವ್ಯಕ್ತಿ ತನ್ನ ಕಾರಿಗೆ ಅಡ್ಡ ಬಂದರು. ದಟ್ಟವಾದ ಮಂಜು ಮತ್ತು ಕಳಪೆ ಗೋಚರತೆಯಿಂದ ವ್ಯಕ್ತಿ ಕಾರಿಗೆ ಸಿಲುಕಿರುವುದನ್ನು ಗುರುತಿಸಲು ಆಗಲಿಲ್ಲ ಎಂದು ಆರೋಪಿ ತಿಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಟ್ರಿಗುನ್ ಬಿಸೆನ್ ಅವರು ತಿಳಿಸಿದ್ದಾರೆ.


ಬೈಕ್ಅನ್ನು​ 3 ಕಿಮೀ ಎಳೆದೊಯ್ದ ಕಾರು ಚಾಲಕ


ರಸ್ತೆ ಬದಿ ನಿಲ್ಲಿಸಿದ್ದ ಬೈಕ್​ಗೆ ವೇಗವಾಗಿ ಡಿಕ್ಕಿ ಹೊಡಿದಿದ್ದ ಕಾರು ಮೂರು ಕಿ.ಮೀಗೂ ಹೆಚ್ಚು ದೂರ ಎಳೆದೊಯ್ದಿರುವ ಘಟನೆ ಹರಿಯಾಣದಲ್ಲಿ ಗುರುಗ್ರಾಮದಲ್ಲಿ ಫೆಬ್ರವರಿ 3ರಂದು ನಡೆದಿತ್ತು. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರುಚಾಲಕನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.


ವಿಡಿಯೋ ವೈರಲ್


ಕಾರು ಬೈಕ್​ಅನ್ನು ಎಳೆದುಕೊಂಡು ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿತ್ತು. ಕಾರಿನ ಹಿಂದೆ ಬರುವ ಬೈಕ್​ ಸವಾರರು ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಬೈಕ್​ ಚಾಲಕ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಕಾರು ಚಾಲಕನ ವಿರುದ್ಧ ಸೆಕ್ಷನ್​ 279, 337 ಹಾಗೂ 427 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


ಕಾರು ಡಿಕ್ಕಿ ಹೊಡೆಯುತ್ತಿದ್ದಂತೆಯೇ ನಾನು ರಸ್ತೆಯ ಮೇಲೆ ಬಿದ್ದೆ. ಘಟನೆಯಲ್ಲಿ ನನಗೆ ಯಾವುದೇ ಗಾಯಗಳಾಗಿಲ್ಲ. ಆದರ, ನನ್ನ ಬೈಕು ಕಾರಿನ ಎಡ ಬಂಪರ್ ಕೆಳಗೆ ಸಿಲುಕಿಕೊಂಡಿತ್ತು. ಆದರೂ ಕಾರು ಚಾಲಕ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಿದ್ದ ವ್ಯಕ್ತಿ ಕಾರು ನಿಲ್ಲಿಸದೆ ನನ್ನ ಬೈಕನ್ನು ಎಳೆದುಕೊಂಡು ಹೋಗಿ ಪರಾರಿಯಾದ ಎಂದು ಬೈಕ್ ಮಾಲೀಕ ಮೋನು ದೂರಿನಲ್ಲಿ ತಿಳಿಸಿದ್ದಾರೆ.

Published by:Rajesha M B
First published: