• Home
  • »
  • News
  • »
  • crime
  • »
  • Crime News: ಆಟ ಆಡೋ ವಯಸ್ಸಲ್ಲೇ ಅಮ್ಮನಾದ ಬಾಲಕಿ! ಹಾಸ್ಟೆಲ್​ನಲ್ಲೇ ಗಂಡು ಮಗುವಿಗೆ ಜನ್ಮಕೊಟ್ಟ 9ನೇ ತರಗತಿ ವಿದ್ಯಾರ್ಥಿನಿ!

Crime News: ಆಟ ಆಡೋ ವಯಸ್ಸಲ್ಲೇ ಅಮ್ಮನಾದ ಬಾಲಕಿ! ಹಾಸ್ಟೆಲ್​ನಲ್ಲೇ ಗಂಡು ಮಗುವಿಗೆ ಜನ್ಮಕೊಟ್ಟ 9ನೇ ತರಗತಿ ವಿದ್ಯಾರ್ಥಿನಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೋಷಕರಿಂದ ದೂರವಾಗಿ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ಕ್ಷೇತ್ರದ ವರದಯ್ಯಪಾಲೆಂನ 14 ವರ್ಷದ ಬಾಲಕಿ ವಾಲ್ಮೀಕಿಪುರಂನಲ್ಲಿರುವ ಜಿಎಂಸಿ ಬಾಲಯೋಗಿ ಗುರುಕುಲ ಶಾಲೆಯಲ್ಲಿ ಆರನೇ ತರಗತಿಯಿಂದ ಓದುತ್ತಿದ್ದಳು. ಹಾಸ್ಟೆಲ್‌ನಲ್ಲಿ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದ್ದರಿಂದ ವಾಲ್ಮೀಕಿಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಆಂಧ್ರಪ್ರದೇಶ/ಹೈದರಾಬಾದ್: ಒಂಬತ್ತನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿ (Girl) ಸರ್ಕಾರಿ ಗುರುಕುಲ ಹಾಸ್ಟೆಲ್ನಲ್ಲಿ (Government GuruKula Hostel) ಗಂಡು ಮಗುವಿಗೆ (Boy Baby) ಜನ್ಮ ನೀಡಿರುವ ಘಟನೆ ಆಂಧ್ರಪ್ರದೇಶದ (Andra Pradesh) ಅನ್ನಮಯ್ಯ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಈ ಸುದ್ದಿ ರಾಜ್ಯದಲ್ಲಿಯೇ ಸಂಚಲನ ಮೂಡಿಸಿದೆ. ಜಿಲ್ಲೆಯ ವಾಲ್ಮೀಕಿಪುರಂನಲ್ಲಿರುವ ಜಿಎಂಸಿ ಬಾಲಯೋಗಿ ಗುರುಕುಲ ಶಾಲೆಯಲ್ಲಿ ಅಪ್ರಾಪ್ತ ಬಾಲಕಿಗೆ ಹೆರಿಗೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಒ ವೆಂಕಟರಾವ್ ಅವರು, ಬೇಸಿಗೆ ರಜೆಯಲ್ಲಿ (Summer Holiday) ಬಾಲಕಿ ಮನೆಗೆ ಹೋದಾಗ ನಡೆದ ಪ್ರಮಾದವೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.


ಬಾಲಕಿ ಮುಟ್ಟು ಆಗದೇ ಇರುವುದರ ಬಗ್ಗೆ ಪೋಷಕರಿಗೆ ಮಾಹಿತಿ


ಬಾಲಕಿ ಮುಟ್ಟು ಆಗದೇ ಇರುವುದನ್ನು ಗಮನಿಸಿದ ಅಧಿಕಾರಿಗಳು ಪಾಲಕರಿಗೆ ವಿಷಯ ತಿಳಿಸಿದ್ದಾರೆ. ಹೀಗಿದ್ದರೂ ಪೋಷಕರು ಬಾಲಕಿಯನ್ನು ವೈದ್ಯರ ಬಳಿ ಚಿಕಿತ್ಸೆಗೆ ಕರೆದುಕೊಂಡು ಹೋಗದೇ ಇರುವುದರಿಂದ ಈ ಹಂತಕ್ಕೆ ತಲುಪಲು ಕಾರಣವಾಗಿದೆ ಎಂದು ಕಿಡಿಕಾರಿದ್ದಾರೆ.


How does jaundice in pregnant women affect the baby Learn about precautions here stg asp
ಸಾಂಕೇತಿಕ ಚಿತ್ರ


ಹಾಸ್ಟೆಲ್​ನಲ್ಲಿಯೇ ಗಂಡು ಮಗುವಿನ ಜನ್ಮ ನೀಡಿದ ಬಾಲಕಿ


ಪೋಷಕರಿಂದ ದೂರವಾಗಿ ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ಕ್ಷೇತ್ರದ ವರದಯ್ಯಪಾಲೆಂನ 14 ವರ್ಷದ ಬಾಲಕಿ ವಾಲ್ಮೀಕಿಪುರಂನಲ್ಲಿರುವ ಜಿಎಂಸಿ ಬಾಲಯೋಗಿ ಗುರುಕುಲ ಶಾಲೆಯಲ್ಲಿ ಆರನೇ ತರಗತಿಯಿಂದ ಓದುತ್ತಿದ್ದಳು. ಹಾಸ್ಟೆಲ್‌ನಲ್ಲಿ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಳೆ ಎಂದು ತಿಳಿಸಿದ್ದರಿಂದ ವಾಲ್ಮೀಕಿಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಹೆಚ್ಚಿನ ಚಿಕಿತ್ಸೆಗೆ ಬಾಲಕಿಯನ್ನು ತಿರುಪತಿ ಆಸ್ಪತ್ರೆಗೆ ರವಾನೆ


ಈ ವೇಳೆ ವೈದ್ಯರು ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದಳು. ಅಲ್ಲದೇ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿಸಿದ್ದಾರೆ. ಇದೀಗ ಐಸಿಡಿಸಿ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದು ವಿದ್ಯಾರ್ಥಿಯನ್ನು ತಿರುಪತಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಈ ಬಗ್ಗೆ ವಸತಿ ನಿಲಯ ಸಿಬ್ಬಂದಿ, ಅಧಿಕಾರಿಗಳು, ಪೋಷಕರಿಗೆ ಮಾಹಿತಿ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಈ ಸಂಬಂಧ ಜಿಲ್ಲಾಧಿಕಾರಿ ಅವರು  ಹಾಸ್ಟೆಲ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ.


ಸಾಂದರ್ಭಿಕ ಚಿತ್ರ


6ನೇ ತರಗತಿಯಿಂದ ಹಾಸ್ಟೆಲ್​ನಲ್ಲಿ ಓದುತ್ತಿದ್ದ ಬಾಲಕಿ


ಬಾಲಕಿಯ ಪೋಷಕರು ಜೀವನೋಪಾಯಕ್ಕಾಗಿ ತಿರುಪತಿಗೆ ಬಂದು ಶ್ರೀ ನಗರದಲ್ಲಿ ನೆಲೆಸಿದ್ದಾರೆ. ಆಕೆಯ ತಂದೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ವರದಯ್ಯಪಾಲೆಂನಲ್ಲಿ ನೆಲೆಸಿದ್ದಾರೆ. ಅಪ್ರಾಪ್ತ ಬಾಲಕಿ ಸೋಮದಲ್ಲಿ ತನ್ನ ಅಜ್ಜಿಯರ ಜೊತೆ ಇದ್ದು ಗುರುಕುಲ ಶಾಲೆಯಲ್ಲಿ ಓದುತ್ತಿದ್ದಳು ಎಂದು ಡಿಸಿಒ ತಿಳಿಸಿದ್ದಾರೆ. ಬಾಲಕಿಯನ್ನು ಆರನೇ ತರಗತಿಯಲ್ಲಿ ಹಾಸ್ಟೆಲ್‌ಗೆ ಸೇರಿಸಲಾಗಿತ್ತು. ಇದೀಗ 9ನೇ ತರಗತಿ ಓದುತ್ತಿದ್ದಳು.


ಗರ್ಭಿಣಿಯಾದ್ದನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ


ಅಲ್ಲದೇ ಬಾಲಕಿಗೆ ಪ್ರತಿ ತಿಂಗಳು ಮುಟ್ಟು ಆಗುತ್ತಿಲ್ಲ. ನ್ಯಾಪ್ಕಿನ್ ಪಟ್ಟಿಯಲ್ಲಿ ಅಪ್ರಾಪ್ತ ಬಾಲಕಿಯ ಹೆಸರಿಲ್ಲ ಎಂದು ಹಾಸ್ಟೆಲ್ ಸಿಬ್ಬಂದಿ ಪೋಷಕರಿಗೆ ಹಲವು ಬಾರಿ ತಿಳಿಸಿದ್ದರು ಎಂದು ಡಿಸಿಒ ತಿಳಿಸಿದ್ದಾರೆ. ಆಕೆಗೆ ಪಿರಿಯಡ್ಸ್ ಆಗದ್ದಕ್ಕೆ ಚಿಕಿತ್ಸೆ ಕೂಡ ನೀಡಿದ್ದರು. ಆದರೆ ಬೇರೆ ಯಾವುದೇ ಪರೀಕ್ಷೆಗಳನ್ನು ಮಾಡದ ಕಾರಣ, ಗರ್ಭಿಣಿಯಾಗಿದ್ದ ಆಕೆ ಇದೀಗ ಮಗುವಿಗೆ ಜನ್ಮ ನೀಡಿದ್ದಾಳೆ. ಇಷ್ಟೇ ಅಲ್ಲದೇ ಗರ್ಭಿಣಿಯಾದಾಗ ಆಕೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.




ಇದನ್ನೂ ಓದಿ: Delivery in Bus: ಚಲಿಸುತ್ತಿದ್ದ ಬಸ್​ನಲ್ಲಿಯೇ ಹೆರಿಗೆ; ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ!


ಬಾಲಕಿ ಗರ್ಭಿಣಿಯಾಗಲು ಕಾರಣ ಯಾರೆಂಬ ಬಗ್ಗೆ ತನಿಖೆ


ಸುದ್ದಿ ತಿಳಿದ ಬಳಿಕ ಪೊಲೀಸರಿಗೆ ದೂರು ನೀಡಿ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಬಾಲಕಿಯನ್ನು ಚಿಕಿತ್ಸೆಗಾಗಿ ತಿರುಪತಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಲು ಕಾರಣ ಯಾರು ಎಂದು ಮಾತ್ರ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Published by:Monika N
First published: