ಬೆಂಗಳೂರು: ಆಗ ತಾನೇ ಹುಟ್ಟಿದ ನವಜಾತ ಶಿಶುವೊಂದನ್ನು ದೇವಸ್ಥಾನದ ಬಳಿ ಇಟ್ಟು ಹೋದ ಅಮಾನವೀಯ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಯಶವಂತಪುರ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಮಗು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಯಶವಂತಪುರ ಠಾಣೆಯ ಪೊಲೀಸರು ನವಜಾತ ಶಿಶುವನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು.
ಘಟನಾ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಸಿಬ್ಬಂದಿ ಅಮರೇಶ್ ಹಾಗೂ ಕೆಂಪರಾಜು ನವಜಾತ ಶಿಶುವನ್ನು ಕಂಡ ತಕ್ಷಣವೇ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆಂಬುಲೆನ್ಸ್ ಬರಲು 30 ನಿಮಿಷಗಳಾಗುತ್ತೆ ಎಂದಾಗ ತಾವೇ ಹೊಯ್ಸಳ ವಾಹನ ಮೂಲಕ ನವಜಾತ ಶಿಶುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಐಪಿಸಿ 317 ಅಡಿಯಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು, ಮಗುವನ್ನು ಅಲ್ಲಿ ಬಿಟ್ಟು ಹೋಗಿದ್ದು ಯಾರು ಅನ್ನೋದರ ಬಗ್ಗೆ ಪಕ್ಕದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ನಿರ್ಧಾರ ಮಾಡಲಿದ್ದಾರೆ. ಈಗಾಗಲೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: Couple: ಬೆಳಗ್ಗೆ ಬೇಗ ಏಳಲ್ಲ, ಅಡುಗೆ ಮಾಡಲ್ಲ; ಪತ್ನಿ ವಿರುದ್ಧ ದೂರು ದಾಖಲಿಸಿದ ಪತಿ
ಮಾತು ಕೇಳದ ಮಗನನ್ನು ಕೊಂದ ರಾಕ್ಷಸ ತಂದೆ!
ಕೋಲಾರ: ತನ್ನ ಮಾತಿಗೆ ಒಪ್ಪದ ಮಗನನ್ನೇ ಪಾಪಿ ತಂದೆಯೊಬ್ಬ ಕೊಂದಿರುವ ಆಘಾತಕಾರಿ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದಲ್ಲಿ ನಡೆದಿದೆ.
8 ವರ್ಷ ಮಗುವನ್ನು ಕಿರತಾಕ ತಂದೆ ಕೊಲೆ ಮಾಡಿದ್ದು, ಸುಬ್ರಮಣಿ ಎಂಬಾತ ತನ್ನ ಮಗನನ್ನು ತನ್ನ ಜೊತೆ ಬೆಂಗಳೂರಿಗೆ ಬಾ ಎಂದು ಪೀಡಿಸಿದ್ದ. ಆದರೆ ನಾನು ನಿನ್ನ ಜೊತೆಗೆ ಬರೋದಿಲ್ಲ. ಅಜ್ಜಿ ಜೊತೆಗೆ ಇರ್ತೀನಿ ಬರೋದಿಲ್ಲ ಎಂದಿದ್ದಕ್ಕೆ ಚಾಕುವಿನಲ್ಲಿ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ. ಪುಟ್ಟ ಮಗುವಿನ ದೇಹಕ್ಕೆ ಚಾಕು ಗಂಭೀರವಾಗಿ ಇರಿದಿದ್ದರಿಂದ ಮಗು ಭುವನ್ ತೇಜ್ ಸ್ಥಳದಲ್ಲೇ ಅಸು ನೀಗಿದ್ದಾನೆ. ಬಾಲಕನಿಗೆ ಚಾಕು ಇರಿತ ನಂತರ ನಂಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ತನ್ನ ತಾಯಿ ಇತ್ತೀಚೆಗೆ ಸಾವನ್ನಪ್ಪಿದ್ರು. ಆ ನಂತರ ಬಾಲಕ ಬೆಂಗಳೂರಿಂದ ಬಂದು ನಂಗಲಿ ಗ್ರಾಮದ ಎಸ್.ಬಿ.ಐ ಬ್ಯಾಂಕ್ ಹಿಂಭಾಗದ ತನ್ನ ಅಜ್ಜಿ ಜೊತೆ ವಾಸವಾಗಿದ್ದ. ಇತ್ತೀಚೆಗೆ ಅಲ್ಲಿಗೆ ಬಂದಿದ್ದ ಆರೋಪಿಯು ಆ ಬಾಲಕನನ್ನು ತನ್ನ ಜೊತೆ ಬೆಂಗಳೂರಿಗೆ ಬರುವಂತೆ ಪೀಡಿಸಿದ್ದಾನೆ. ಆದರೆ ತಾನು ಬರೋದಿಲ್ಲ ಅಜ್ಜಿಯ ಜೊತೆ ಇರೋದಾಗಿ ಹೇಳಿದ್ದಕ್ಕೆ ಆತನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸದ್ಯ ಕೊಲೆಗಾರ ತಂದೆ ಸುಬ್ರಮಣಿಯನ್ನು ನಂಗಲಿ ಪೋಲಿಸರ ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ನಂಗಲಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Madikeri: ಫೋನ್ನಲ್ಲಿ ಮಾತಾಡ್ತಿದ್ದ ವಿವಾಹಿತೆಯನ್ನು ತೋಟಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ; ಓರ್ವ ಅರೆಸ್ಟ್
ಅಪ್ರಾಪ್ತ ಬಾಲಕಿಯ ರೇಪ್ ಆಂಡ್ ಮರ್ಡರ್!
17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದಿರುವ ನಾಚಿಕೆಗೇಡಿನ ಕೃತ್ಯ ಬೆಂಗಳೂರು ಹೊರವಲಯದ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ರಾಕ್ಷಸನನ್ನು ವೆಂಕಟೇಶ್ ಎಂದು ಗುರುತಿಸಲಾಗಿದ್ದು, ಅತ್ಯಾಚಾರದ ಬಳಿಕ ಸಂತ್ರಸ್ತೆ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸೋ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಸದ್ಯ ಮೃತದೇಹವನ್ನು ಆರ್ ಆರ್ ನಗರ ಮೆಡಿಕಲ್ ಕಾಲೇಜು ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಪ್ರಕರಣ ಸಂಬಂಧ ಕಗ್ಗಲೀಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿದ ಕಗ್ಗಲೀಪುರ ಠಾಣಾ ಪೊಲೀಸರು ಪ್ರಕರಣದ ಆರೋಪಿ ವೆಂಕಟೇಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ