ಬೆಂಗಳೂರು: ಮನೆಯಲ್ಲಿ ಮಗು (Baby) ಮಲಗಿರೋದನ್ನು ಗಮನಿಸದ ಪೋಷಕರು (Parents) ಕಿಡ್ನ್ಯಾಪ್ ಪ್ರಕರಣ ದಾಖಲಿಸಿರುವ ಘಟನೆ ಬೆಂಗಳೂರಿನ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆ.ಆರ್.ಪುರಂ (KR Puram) ಬಳಿಯ ಜನತಾ ಕಾಲೋನಿಯ ನಿವಾಸಿಗಳಾದ ಮೀನಾ ದಂಪತಿ ರಾತ್ರಿ 7.30ಕ್ಕೆ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಆರು ವರ್ಷದ ಮಗಳ ಅಪಹರಣ (Baby Kidnap) ಆಗಿದೆ ಎಂದು ದೂರು ದಾಖಲಿಸಿದ್ದರು. ಮನೆ ಮುಂದೆ ಆಟವಾಡುತ್ತಿದ್ದ ಮಗಳು ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ಮೀನಾ ದಂಪತಿ ಉಲ್ಲೇಖಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಪ್ರವೃತ್ತರಾದ ಪೊಲೀಸರು ಮಗುವಿನ ಹುಡುಕಾಟಕ್ಕೆ ಮುಂದಾಗಿದ್ದರು.
ಮನೆಯ ಸುತ್ತಮುತ್ತ ಹುಡುಕಾಡಿದ್ರೂ ಮಗು ಪತ್ತೆಯಾಗಿಲ್ಲ. ಹಾಗಾಗಿ ಕಂಪ್ಲೇಂಟ್ ಕೊಡಲು ಬಂದಿದ್ದೇವೆ. ದಯವಿಟ್ಟು ನಮ್ಮ ಮಗುವನ್ನು ಹುಡುಕಿಕೊಡಿ ಎಂದು ಪೋಷಕರು ಮನವಿ ಮಾಡಿಕೊಂಡಿದ್ದರು.
ಮನೆಗೆ ತೆರಳಿದ ಪೊಲೀಸರಿಗೆ ಶಾಕ್
ಸಬ್ ಇನ್ಸ್ಪೆಕ್ಟರ್ ರಮ್ಯಾ ಹಾಗೂ ಸಿಬ್ಬಂದಿ ಮಗುವಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಮಗು ಕಾಣೆಯಾಗಿದೆ ಎನ್ನಲಾದ ಸ್ಥಳಕ್ಕೆ ಅಂದ್ರೆ ಮೀನಾ ದಂಪತಿ ನಿವಾಸಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದಾಗ ಮನೆಯಲ್ಲಿಯೇ ಮಗು ಪತ್ತೆಯಾಗಿದೆ.
ಮಗು ಮನೆಯಲ್ಲಿ ಸಿಕ್ಕಿದ್ದು ಹೇಗೆ?
ಸಂಜೆ ಹೊರಗೆ ಆಟವಾಡುತ್ತಿದ್ದ ಮಗು ಮನೆಯೊಳಗೆ ಬಂದು ಮಲಗಿದೆ. ತಾಯಿ ಒಣಗಿದ ಬಟ್ಟೆಗಳನ್ನು ತಂದು ಮಗುವಿನ ಮೇಲೆಯೇ ಹಾಕಿದ್ದಾರೆ. ಗಾಢ ನಿದ್ದೆಯಲ್ಲಿದ್ದರಿಂದ ಬಟ್ಟೆ ಹಾಕಿದರೂ ಮಗುವಿಗೆ ಎಚ್ಚರವಾಗಿಲ್ಲ. ತಾಯಿ ಸಹ ಬಟ್ಟೆ ಹಾಕುವಾಗ ಮಗು ಮಲಗಿರೋದನ್ನು ಗಮನಿಸಿಲ್ಲ.
ಇದನ್ನೂ ಓದಿ: BMTC Income: ಒಂದೇ ದಿನದಲ್ಲಿ ಭರ್ಜರಿ ಆದಾಯ ಗಳಿಸಿದ ಬಿಎಂಟಿಸಿ
ತುಂಬಾ ಸಮಯದವರೆಗೆ ಮಗು ಕಾಣದಿದ್ದಾಗ ಮೀನಾ ದಂಪತಿ ಕಂದಮ್ಮನಿಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಪೊಲೀಸ್ ಠಾಣೆಗೆ ತೆರಳಿ ಮಗು ಕಾಣೆಯಾಗಿದೆ ಎಂದು ದೂರು ದಾಖಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ