ಮಹಾರಾಷ್ಟ್ರ/ ಮುಂಬೈ: ಶಾಲೆಯಲ್ಲಿ ಪಾಠ ಹೇಳುವ ಶಿಕ್ಷಕ , ಶಿಕ್ಷಕಿಯರು ದೇವರ ಸಮಾನ ಅಂತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ, ಪಾಠ ಸರಿಯಾಗಿ ಕಲಿಯದೇ ಇದ್ದಾಗ ಶಿಕ್ಷಕರು ಬೈಯ್ಯುವುದು, ಹೊಡೆಯುವುದು ಕಾಮನ್ ಆದರೆ ಶಿಕ್ಷಕರೇ ವಿದ್ಯಾರ್ಥಿಗಳೊಂದಿಗೆ ಗೂಂಡಾಗಳಂತೆ ವರ್ತಿಸುವುದು ಎಷ್ಟು ಸರಿ? ಇದಕ್ಕೆ ಸಾಕ್ಷಿ ಎಂಬಂತೆ ಶಿಕ್ಷಕರ (Teacher Group) ಗುಂಪೊಂದು ವಿದ್ಯಾರ್ಥಿಯೊಬ್ಬನಿಗೆ (Student) ಹಿಗ್ಗಾಮುಗ್ಗ ಥಳಿಸಿರುವ ಘಟನೆ ಪುಣೆ (Pune) ಜಿಲ್ಲೆಯ ಜುನ್ನಾರ್ (Junnar) ತಾಲೂಕಿನ ಅಲೆಫಾಟಾದಲ್ಲಿ ನಡೆದಿದೆ. ಅಲ್ಲದೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. 11ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗೆ (Student) ಅಮಾನುಷವಾಗಿ ಥಳಿಸಿರುವ ಶಿಕ್ಷಕರ ವಿರುದ್ಧ ಇದೀಗ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನವರಿ 21 ರಂದು ಅಲೆಯ ಜ್ಞಾನಮಂದಿರ ಜೂನಿಯರ್ ಕಾಲೇಜಿನಲ್ಲಿ ಈ ಘಟನೆ ಜರುಗಿದೆ.
जुन्नर: विद्यार्थ्याचे केस पकडून शिक्षकांची लाथाबुक्क्यांनी मारहाण, मुलांकडून व्हिडीओ रेकॉर्ड pic.twitter.com/11Gyvgc6Ae
— News18Lokmat (@News18lokmat) January 21, 2023
ತನ್ನನ್ನು ನಿಂದಿಸಿದ್ದಾನೆ ಎಂದು ತಪ್ಪಾಗಿ ಭಾವಿಸಿದ ಶಿಕ್ಷಕ
ವಿದ್ಯಾರ್ಥಿಯೊಬ್ಬ ಶಿಕ್ಷಕರನ್ನು ನಿಂದಿಸಿದ್ದಾನೆ ಎಂದು ತಪ್ಪಾಗಿ ಭಾವಿಸಿ ಕೆಲ ಶಿಕ್ಷಕರು ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾರೆ. ಶನಿವಾರ ಬೆಳಗ್ಗೆ ಕೆಲ ವಿದ್ಯಾರ್ಥಿಗಳ ಗುಂಪು ಶಿಕ್ಷಕರು ಹುಡುಗನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ.
ವಿದ್ಯಾರ್ಥಿ ಕೂದಲು ಎಳೆದಾಡಿ ಕಾಲಿನಿಂದ ಒದ್ದ ಶಿಕ್ಷಕರು
ಶಿಕ್ಷಕನನ್ನು ನೋಡಿ ತಮಾಷೆ ಮಾಡಿದ ಎಂಬ ಕಾರಣಕ್ಕೆ ಹಿಂದೆ, ಮುಂದೆ ವಿಚಾರಿಸದೇ ಶಾಲೆಯ ಶಿಕ್ಷಕರ ಗುಂಪು ವಿದ್ಯಾರ್ಥಿಯ ತಲೆ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದಿದ್ದಾರೆ. ಈ ವೇಳೆ ವಿದ್ಯಾರ್ಥಿ ತನ್ನ ತಪ್ಪಿಲ್ಲ ಬಿಟ್ಟು ಬಿಡಿ ಎಂದು ಮನವಿ ಮಾಡಿದರೂ ಬಿಡದೇ ಶಿಕ್ಷಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ವಿಡಿಯೋ ವೈರಲ್ ಬೆನ್ನೆಲೆ ಶಿಕ್ಷಕನ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ
ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಹಿನ್ನೆಲೆ ನೆಟ್ಟಿಗರು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಶಾಲಾ ಆಡಳಿತ ಮಂಡಳಿ ಘಟನೆಯ ಬಗ್ಗೆ ತನಿಖೆ ನಡೆಸಲು ತಕ್ಷಣ ಸಭೆ ಕರೆದಿದೆ. ಅಲ್ಲದೇ ಘಟನೆ ಬಗ್ಗೆ ವಿದ್ಯಾರ್ಥಿಯ ಪೋಷಕರು ಕೂಡ ಶಾಲೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕನಿಗೆ ಥಳಿಸಿದ್ದ ವಿದ್ಯಾರ್ಥಿಗಳ ಗುಂಪು
ಇದಕ್ಕೆ ತದ್ವಿರುದ್ಧ ಎಂಬಂತೆ ಕೆಲ ತಿಂಗಳ ಹಿಂದೆ ಜಾರ್ಖಂಡ್ನ ದುಮ್ಕಾದ ಹಳ್ಳಿಯೊಂದರ ಶಾಲಾ ವಿದ್ಯಾರ್ಥಿಗಳು ಶಿಕ್ಷಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ತಮಗೆ ಶಿಕ್ಷಕರು ಕಡಿಮೆ ಅಂಕಗಳನ್ನು ನೀಡಿದರು ಎಂದು ಎಲ್ಲ ಶಿಕ್ಷಕರನ್ನು ಕರೆದು ಬಳಿಕ ಅವರನ್ನು ಮರಕ್ಕೆ ಕಟ್ಟಿಹಾಕಿ ಈ ನೀಚ ಕೃತ್ಯವೆಸಗಿದ್ದರು.
ಇದನ್ನೂ ಓದಿ: Shocking News: ಎಂಥಾ ಕಾಲ ಬಂತಪ್ಪ, ಕಡಿಮೆ ಮಾರ್ಕ್ಸ್ ಕೊಟ್ಟಿದ್ದಕ್ಕೆ ಶಿಕ್ಷಕರನ್ನೇ ಹೊಡೆದ ವಿದ್ಯಾರ್ಥಿಗಳು!
ಸಭೆ ನಡೆಸೋ ನೆಪದಲ್ಲಿ ಮರಕ್ಕೆ ಕಟ್ಟಿ ಶಿಕ್ಷಕನಿಗೆ ಥಳಿತ
ಈ ಬಗ್ಗೆ ಪ್ರತಿಕ್ರಿಯಿಸಿ ಹಲ್ಲೆಗೊಳಗಾದ ಶಿಕ್ಷಕ ಕುಮಾರ್ ಸುಮನ್, ವಿದ್ಯಾರ್ಥಿಗಳು ಸಭೆ ನಡೆಸುವ ನೆಪದಲ್ಲಿ ನಮಗೆ ಕರೆ ಮಾಡಿದರು. ಬಳಿಕ ಜಮಾಯಿಸಿದ್ದ ಎಲ್ಲ ಮಕ್ಕಳು ಪರೀಕ್ಷೆಯಲ್ಲಿ ನಪಾಸಾಗಿದ್ದೇವೆ. ಪ್ರಾಯೋಗಿಕ ಅಂಕಗಳನ್ನು ಕಡಿಮೆ ನೀಡಿದ್ದೇ ಇದಕ್ಕೆ ಕಾರಣ ಎಂದು ದೂರಿದರು. ಈ ಅಂಕಗಳನ್ನು ಶಾಲೆಯ ಮುಖ್ಯೋಪಾಧ್ಯಾಯರು ನೀಡಬೇಕಿತ್ತು. ಅವರು ಮಾರ್ಕ್ಸ್ ಅನ್ನು ಕೊಡದ ಕಾರಣ ಈ ರೀತಿ ಆಗಿದೆ. ಆದರೆ, ವಿದ್ಯಾರ್ಥಿಗಳು ನಮ್ಮನ್ನು ಥಳಿಸಿದರು ಎಂದು ಅಳಲು ತೋಡಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ