• ಹೋಂ
 • »
 • ನ್ಯೂಸ್
 • »
 • Crime
 • »
 • Crime News: ಸ್ನೇಹಿತನನ್ನು ಮನೆಗೆ ಕರೆದರೆ ಹೆಂಡತಿಯನ್ನೇ ಕರೆದೊಯ್ದ, ಪತ್ನಿ ಕೋಪ ಮಾಡಿಕೊಂಡಳೆಂದು ಮಗನನ್ನೇ ಕೊಂದ!

Crime News: ಸ್ನೇಹಿತನನ್ನು ಮನೆಗೆ ಕರೆದರೆ ಹೆಂಡತಿಯನ್ನೇ ಕರೆದೊಯ್ದ, ಪತ್ನಿ ಕೋಪ ಮಾಡಿಕೊಂಡಳೆಂದು ಮಗನನ್ನೇ ಕೊಂದ!

ಸ್ನೇಹಿತ ಅಂತಾ ಮನೆಗೆ ಕರೆತಂದ ಹೆಂಡತಿಯೇ ಹೋದ್ಲು!

ಸ್ನೇಹಿತ ಅಂತಾ ಮನೆಗೆ ಕರೆತಂದ ಹೆಂಡತಿಯೇ ಹೋದ್ಲು!

ಪುಷ್ಪಾ ಮೇಲಿನ ಸಿಟ್ಟಿಗೆ ಬಾಲಕ ಚೇತನ್​ನನ್ನು ಕೆರೆಗೆ ತಳ್ಳಿದ್ದಾಗಿ ಸಂಪತ್ ಸದ್ಯ ಬಾಯಿ ಬಿಟ್ಟಿದ್ದಾನೆ. ಬಾಗಲೂರು ಪೊಲೀಸರು ಕೆರೆಯಲ್ಲಿ ಹುಡುಕಾಟ ನಡೆಸಿದಾಗ 9 ದಿನಗಳ ನಂತರ ಬಾಲಕ ಚೇತನ್ ಮೃತ ದೇಹ ಪತ್ತೆಯಾಗಿದೆ.

 • News18 Kannada
 • 3-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಇಬ್ಬರು ಟಿಪ್ಪರ್ ಲಾರಿ ಡ್ರೈವರ್ಸ್ (Drivers). ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಇಬ್ಬರ ನಡುವೆ ಆತ್ಮೀಯತೆ, ಸ್ನೇಹ (Friendship) ಬೆಳೆದಿತ್ತು. ಹೀಗಿರುವಾಗ ಸ್ನೇಹಿತ ಅಂತ ಮನೆಗೆ ಕರೆದುಕೊಂಡು ಬಂದಿದ್ದಾಗ ಹೆಂಡತಿಯನ್ನೇ (Wife) ಸ್ನೇಹಿತ ಪಟಾಯಿಸಿ ಬಿಟ್ಟಿದ್ದ. ಆದರೆ ಈ ಸ್ಟೋರಿಯಲ್ಲಿ ಕೊನೆಗೆ ಆಗಿದ್ದು ಮಾತ್ರ ದುರಂತ. ಹೌದು, ಇಲ್ಲಿ ಕಾಣಿಸುತ್ತಿರುವ ಇವರ ಹೆಸರು ಪ್ರವೀಣ್ ಮತ್ತು ಸಂಪತ್. ಇವರಿಬ್ಬರು ಒಂದೇ ಕಡೆ ಟಿಪ್ಪರ್ ಲಾರಿ (Tipper) ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಒಂದೇ ಕಡೆ ಕೆಲಸ ಮಾಡುತ್ತಿದ್ದ ಪ್ರವೀಣ್​ ಹಾಗೂ ಸಂಪತ್​ ನಡುವೆ ಸ್ನೇಹ, ವಿಶ್ವಾಸ ಬೆಳೆದಿತ್ತು. ಸ್ನೇಹಿತ ಅನ್ನುವ ಕಾರಣಕ್ಕೆ ಮನೆಗೆ ಕರೆಸಿದರೆ ಪ್ರವೀಣ್ ಹೆಂಡತಿ ಪುಷ್ಪಾವತಿ ಮೇಲೆ ಸಂಪತ್ ಕಣ್ಣು ಹಾಕಿದ್ದನಂತೆ.


ಗಂಡನ ಬಿಟ್ಟು ಬಂದವಳು ಬದುಕು ಮೂರಾಬಟ್ಟೆ!


ಈಗಾಗಲೇ ಪ್ರವೀಣ್​ನನ್ನು ಮದುವೆ ಆಗಿದ್ದ ಪುಷ್ಪಾವತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಪ್ರವೀಣ್ ಡ್ಯೂಟಿಗೆ ಹೋದಾಗ ಆಗಾಗ ಮನೆಗೆ ಬಂದು ಸಂಪತ್ ಲವ್ವಿ ಡವ್ವಿ ಸ್ಟಾರ್ಟ್ ಮಾಡಿದ್ದನಂತೆ. ಈ ವಿಚಾರ ಪ್ರವೀಣ್​ಗೆ ಗೊತ್ತಾಗಿ ಸಂಸಾರದಲ್ಲಿ ವೈಮನಸ್ಸು ಮೂಡಿತ್ತಂತೆ. ಆ ಬಳಿಕ ಪತ್ನಿಗೆ ಡಿವೋರ್ಸ್ ಕೊಟ್ಟ ಪ್ರವೀಣ್​​, ಒಬ್ಬ ಮಗನನ್ನು ತನ್ನ ಜೊತೆಯಲ್ಲಿಟ್ಟುಕೊಂಡಿದ್ದ. ಮಗಳನ್ನು ಜೊತೆಗೆ ಕರೆದುಕೊಂಡು ಹೊರಟ ಪುಷ್ಪಾವತಿ, ಸಂಪತ್​ ಜೊತೆಗೆ ಸಂಸಾರ ಶುರು ಮಾಡಿದ್ದಳು.


ಸಂಪತ್/ಪ್ರವೀಣ್


ಇದನ್ನೂ ಓದಿ: Crime News: ಅತ್ತೆಯ ಮೂಗನ್ನು ಕಚ್ಚಿ ಕತ್ತರಿಸಿದ ಅಳಿಯ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ


ಪುಷ್ಪಾವತಿಯನ್ನ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸಂಪತ್​ ಕೆಜಿಎಫ್​ನಲ್ಲಿ ವಾಸವಿದ್ದ. ಪುಷ್ಪಾ ಯಾರ ಜೊತೆ ಮಾತಾಡಿದರೂ ಅನುಮಾನ ಪಡುತ್ತಿದ್ದ ಅನ್ನೋ ಕಾರಣಕ್ಕೆ ಪುಷ್ಪಾ  ಆತನಿಂದಲೂ ದೂರವಾಗಲು ಯತ್ನಿಸಿದ್ದಳಂತೆ. ಎರಡನೇ ಗಂಡನ ಕಿರುಕುಳ ಹೆಚ್ಚಾದಾಗ ಮೊಬೈಲ್ ನಂಬರ್ ಕೂಡಾ ಬ್ಲಾಕ್ ಲಿಸ್ಟ್ ಹಾಕಿದ್ದ ಪುಷ್ಪಾ, ಕೆಜಿಎಫ್​ನ ಬೇರೆ ಕಡೆ ಮನೆ ಮಾಡಿಕೊಂಡು ವಾಸ ಮಾಡಲು ಆರಂಭಿಸಿದ್ದಳಂತೆ.


ಆದರೆ ಪುಷ್ಪಾವತಿಗೆ ಬ್ಲಾಕ್ ಮೇಲ್ ಮಾಡಲು, ಮನೆ ಬಳಿ ತೆರಳಿ ಮಗಳನ್ನು ಕಿಡ್ನಾಪ್ ಮಾಡಲು ಸಂಪತ್​ ಮುಂದಾಗಿದ್ದನಂತೆ. ಆದರೆ ಅದು ಸಾಧ್ಯವಾಗದೆ ಇದ್ದಾಗ ಮಗನನ್ನು ಬಾಗಲೂರಿನ ವಿಲೇಜ್ ಚಿಲ್ಡ್ರನ್ ಕೇಂದ್ರದಿಂದ ಕಿಡ್ನ್ಯಾಪ್​ ಮಾಡಿದ್ದ.
11 ವರ್ಷದ ಮಗ ಚೇತನ್ ರೆಡ್ಡಿಯನ್ನು ಸಾಕಲಾರದ ತಂದೆ ಪ್ರವೀಣ್​, ಬಾಗಲೂರಿನ ವಿಲೇಜ್ ಚಿಲ್ಡ್ರನ್ ಕೇಂದ್ರದಲ್ಲಿ ಬಿಟ್ಟಿದ್ದ. ಪುಷ್ಪಾ ಜೊತೆಗೆ ಇಲ್ಲಿಗೆ ಭೇಟಿ ಕೊಡುತ್ತಿದ್ದ ಸಂಪತ್​, ಮಗ ಇಲ್ಲಿ ಇರುವುದನ್ನು ಚೆನ್ನಾಗಿ ತಿಳಿದಿದ್ದ. ಅಲ್ಲಿಗೆ ಬಂದು ಬೈಕ್​ನಲ್ಲಿ ಬಾಲಕನನ್ನು ಕರೆಕೊಂಡು ಹೋಗಿ ಕೆಜಿಎಫ್ ಬಳಿ ಬಿರಿಯಾನಿ ಹಾಗೂ ಚಾಕೊಲೇಟ್ ಕೊಡಿಸಿ ಪುಷ್ಪಾಗೆ ಕಾಲ್ ಮಾಡಿದ್ದನಂತೆ.


ನಂಬರ್ ಬ್ಲಾಕ್ ಮಾಡಿದ್ದರಿಂದ ಪುಷ್ಪಾ ಕಾಲ್ ರಿಸೀವ್ ಮಾಡಿರಲಿಲ್ಲವಂತೆ. ಇದರಿಂದ ಸಿಟ್ಟಿಗೆದ್ದ ಸಂಪತ್​ ಹೆಂಡತಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಅಂತ ಹೇಳಿ ಪಕ್ಕದಲ್ಲಿದ್ದ ಕೆರೆಗೆ ಚೇತನ್​​ನನ್ನು ತಳ್ಳಿ ಕೊಲೆ ಮಾಡಿದ್ದ. ಬಾಲಕನನ್ನು ಕರೆಕೊಂಡು ಹೋದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲೂ ಸೆರೆಯಾಗಿದೆ.


ಇದನ್ನೂ ಓದಿ: Crime News: ನೇಪಾಳಿ ಗ್ಯಾಂಗ್ ಕೆಲಸಕ್ಕೆ ಸೇರಿಸಿಕೊಳ್ಳೋ ಮುನ್ನ ಹುಷಾರ್; ನಿದ್ದೆ ಮಾತ್ರ ಹಾಕಿ, ₹70 ಲಕ್ಷ!, 1100 ಗ್ರಾಂ ಚಿನ್ನಾಭರಣ ದೋಚಿ ಎಸ್ಕೇಪ್!‌


ಕೊಲೆಯಾದ ಬಾಲಕ ಚೇತನ್


ಪುಷ್ಪಾ ಮೇಲಿನ ಸಿಟ್ಟಿಗೆ ಬಾಲಕ ಚೇತನ್​ನನ್ನು ಕೆರೆಗೆ ತಳ್ಳಿದ್ದಾಗಿ ಸಂಪತ್ ಸದ್ಯ ಬಾಯಿ ಬಿಟ್ಟಿದ್ದಾನೆ. ಬಾಗಲೂರು ಪೊಲೀಸರು ಕೆರೆಯಲ್ಲಿ ಹುಡುಕಾಟ ನಡೆಸಿದಾಗ 9 ದಿನಗಳ ನಂತರ ಬಾಲಕ ಚೇತನ್ ಮೃತ ದೇಹ ಪತ್ತೆಯಾಗಿದೆ. ಮಗನನ್ನು ಕೊಲೆ ಮಾಡಿ ವಿಷ ಸೇವಿಸಿದ್ದ ಆರೋಪಿ ಸಂಪತ್ ಸದ್ಯ ಚೇತರಿಸಿಕೊಂಡಿದ್ದು, ಬಾಗಲೂರು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Published by:Sumanth SN
First published: