• Home
  • »
  • News
  • »
  • crime
  • »
  • Crime News: ನನ್ನ ಹೆಂಡ್ತಿ ಮಾಡಿರೋ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಅಂತಿಯಾ? ತಾಯಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಮಗ!

Crime News: ನನ್ನ ಹೆಂಡ್ತಿ ಮಾಡಿರೋ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಅಂತಿಯಾ? ತಾಯಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಮಗ!

ಟೊಮ್ಯಾಟೋ ಕರಿ

ಟೊಮ್ಯಾಟೋ ಕರಿ

ಹೆಂಡತಿ ಮಾತು ಕೇಳಿಕೊಂಡು ವ್ಯಕ್ತಿಯೋರ್ವ ಜನ್ಮ ಕೊಟ್ಟ ತಾಯಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ.  ಪುತ್ರರತ್ನಂ ಹಲ್ಲೆಗೊಳಗಾದ ತಾಯಿ.  ಸೊಸೆ ಮಾಡಿದ್ದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದಿದ್ದಕ್ಕೆ ತಾಯಿ ಮೇಲೆ ಮಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಮಹಿಳೆಯ ತಲೆಗೆ ತೀವ್ರ ಪೆಟ್ಟಾಗಿದೆ. ಮಹಬೂಬಾದ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Telangana, India
  • Share this:

ಹೈದರಾಬಾದ್​​: ಪ್ರತಿಯೊಂದು ಮನೆಯಲ್ಲೂ ಅತ್ತೆ-ಮಾವಂದಿರ (Mother in Law - Father in Law) ಜೊತೆಗೆ ಸೊಸೆ ಅಥವಾ ಅಳಿಯಂದಿರು ಜಗಳವಾಡುವುದು ಸರ್ವೆ ಸಾಮಾನ್ಯ. ಜಗಳವಾಡದೇ (Clash) ಇರುವ ಅತ್ತೆ-ಮಾವಂದಿರು ಸಿಗುವುದು ನಮಗೆ ಬಹಳ ಅಪರೂಪ. ಅದರಲ್ಲಿಯೂ ಗಂಡ (Husband) ಆದವನು ಒಂದು ಕಡೆ ಹೆಂಡತಿ (Wife) ಮತ್ತೊಂದು ಕಡೆ ತಾಯಿ (Mother) ಇಬ್ಬರನ್ನು ಸಮಾಧಾನಗೊಳಿಸಲು ಪ್ರಯತ್ನಿಸುತ್ತಲೇ ಇರುತ್ತಾನೆ. ತಾಯಿಯೊಂದಿಗೆ ಮಾತನಾಡಿದರೆ ಹೆಂಡತಿಗೆ ಕೋಪ, ಹೆಂಡತಿಯೊಂದಿಗೆ ಮಾತನಾಡಿದರೆ ತಾಯಿ ಕೋಪಗೊಳ್ಳುತ್ತಾಳೆ. ಇಬ್ಬರನ್ನೂ ನಿಭಾಯಿಸಲು ಸಾಧ್ಯವಾಗದ ಪುರುಷರ ಪಾಡು ಕೇಳ ತೀರದ್ದು. ಆದರೆ ಕೆಲವರು ಮಾತ್ರ ಹೆಂಡತಿಯ ಮಾತು ಕೇಳಿ ತಾಯಿಗೆ ಹಲವು ರೀತಿಯಲ್ಲಿ ತೊಂದರೆ ನೀಡುತ್ತಾರೆ.  ಜಗಳದ ವೇಳೆ ಹೆಂಡತಿ ತಪ್ಪಾಗಿ ಕೇಳಿದರೆ ಹಿಂದೆ, ಮುಂದೆ ಯೋಚಿಸದೇ ತಾಯಿಗೆ ನಿಂದಿಸುತ್ತಾರೆ.


ಸೊಸೆ ಮಾಡಿದ್ದ ಟೊಮೆಟೊ ಕರಿ ಚೆನ್ನಾಗಿಲ್ಲ ಅಂದ ಅತ್ತೆ


ಇತ್ತೀಚೆಗಷ್ಟೇ ಹೆಂಡತಿ ಮಾತು ಕೇಳಿಕೊಂಡು ವ್ಯಕ್ತಿಯೋರ್ವ ಜನ್ಮ ಕೊಟ್ಟ ತಾಯಿಯ ಮೇಲೆಯೇ ಹಲ್ಲೆ ನಡೆಸಿದ್ದಾನೆ.  ಪುತ್ರರತ್ನಂ ಹಲ್ಲೆಗೊಳಗಾದ ತಾಯಿ.  ಸೊಸೆ ಮಾಡಿದ್ದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದಿದ್ದಕ್ಕೆ ತಾಯಿ ಮೇಲೆ ಮಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಮಹಿಳೆಯ ತಲೆಗೆ ತೀವ್ರ ಪೆಟ್ಟಾಗಿದೆ. ಮಹಬೂಬಾದ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ.


ಗಾಯಗೊಂಡ ಮಹಿಳೆ


ಆಗಾಗಾ ಸಣ್ಣಪುಟ್ಟ ವಿಚಾರಕ್ಕೆ ಅತ್ತೆ-ಸೊಸೆ ಮಧ್ಯೆ ಜಗಳ


ಸ್ಥಳೀಯರ ಪ್ರಕಾರ, ಮಹಬೂಬಾಬಾದ್ ಜಿಲ್ಲೆಯ ವೆನ್ನೂರು ಗ್ರಾಮದಲ್ಲಿ ಮಹೇಂದರ್ ಮತ್ತು ನಂದಿನಿ ಎಂಬ ದಂಪತಿ ವಾಸವಾಗಿದ್ದಾರೆ. ಅವರೊಂದಿಗೆ ಮಹೇಂದರ್ ತಾಯಿ ಕೂಡ ಇರುತ್ತಾರೆ. ನಂದಿನಿ ಮತ್ತು ಆಕೆಯ ಅತ್ತೆಯ ನಡುವೆ ಆಗಾಗ ಸಣ್ಣಪುಟ್ಟ ಜಗಳವಾಗುತ್ತಿತ್ತು. ಹೀಗೆ ಅತ್ತೆ ಮತ್ತು ಸೊಸೆಯ ನಡುವಿನ ಸಣ್ಣ ಜಗಳ ಕೊನೆಗೆ ಒಂದು ಪ್ರಾಣವನ್ನೇ ತೆಗೆಯುವ ಹಂತಕ್ಕೆ ತಲುಪಿದೆ.


Nearly 31,000 complaints of crimes committed against women were received by the NCW in 2022
ಸಾಂದರ್ಭಿಕ ಚಿತ್ರ


 ಟೊಮೆಟೊ ಕರಿ ಚೆನ್ನಾಗಿಲ್ಲದ್ದಕ್ಕೆ ಸೊಸೆಗೆ ಛೀಮಾರಿ ಹಾಕಿದ್ದ ಅತ್ತೆ


ನಂದಿನಿ ಮಾಡಿದ್ದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದು ಆಕೆಯ ಅತ್ತೆ ಹೇಳಿದ್ದಾಳೆ. ಇಷ್ಟೇ ಅಲ್ಲದೇ ಕರಿ ಚೆನ್ನಾಗಿಲ್ಲ ಎಂದು ನಂದಿನಿಗೆ ಛೀಮಾರಿ ಹಾಕಿದ್ದಾರೆ. ಇದರಿಂದ ಮನನೊಂದು ಕಣ್ಣೀರು ಹಾಕಿದ ಸೊಸೆ, ಸಂಜೆ ಮನೆಗೆ ಬಂದ ಪತಿ ಮಹೇಂದರ್ ಬಳಿ ನಡೆದ ಘಟನೆಯನ್ನು ಹೇಳಿದ್ದಾಳೆ. ನಂತರ ಕೋಪಗೊಂಡ ಮಗ ನನ್ನ ಹೆಂಡತಿ ಮಾಡಿದ ಟೊಮ್ಯಾಟೋ ಕರಿ ಚೆನ್ನಾಗಿಲ್ಲ ಎಂದು ಹೇಳುತ್ತೀಯಾ ಎಂದು ತನ್ನ ತಾಯಿಯ ಮೇಲೆ ಮಹೇಂದರ್ ಆಕ್ರೋಶ  ವ್ಯಕ್ತಪಡಿಸಿದ್ದಾನೆ.


ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಸ್ಥಳೀಯರು


ಇಷ್ಟಕ್ಕೆ ಸುಮ್ಮನಿರದೇ ಮನೆಯಲ್ಲಿದ್ದ ಮಟನ್ ಚಾಕುವಿನಿಂದ ತಾಯಿ ಮೇಲೆ ಹಲ್ಲೆ ನಡೆಸಿದ್ದಾನೆ. ಮಹೇಂದರ್ ತಾಯಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಮಹಿಳೆಯ ತಲೆಗೆ ಗಂಭೀರವಾಗಿ ಗಾಯವಾಗಿದೆ. ನಂತರ ಸ್ಥಳೀಯರು ಆಕೆಯನ್ನು ಮಹಬೂಬಾಬಾದ್ ಏರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಮಹಿಳೆಯ ಸಂಬಂಧಿಕರು ಮಹೇಂದರ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




ಇದನ್ನೂ ಓದಿ: Dry Tomato: ತಾಜಾ ಟೊಮ್ಯಾಟೋ ಒಂದೇ ಅಲ್ಲ, ಬಿಸಿಲಲ್ಲಿ ಒಣಗಿಸಿದ ಟೊಮ್ಯಾಟೋ ಕೂಡ ಆರೋಗ್ಯಕ್ಕೆ ಒಳ್ಳೆಯದಂತೆ!


ಈ ಹಿಂದೆ ಡ್ರಗ್ಸ್​ ಖರೀದಿಸಲು ಹಣ ನೀಡದ ತಾಯಿ ಮೇಲೆ ಮಗನಿಂದ ಹಲ್ಲೆ


ಕೆಲ ತಿಂಗಳ ಹಿಂದೆ ಬಾಲಕನೊಬ್ಬ ಡ್ರಗ್ಸ್ ಖರೀದಿಸಲು ಹಣ ಕೊಡದ ತಾಯಿಯ ಮೇಲೆಯೇ ಹಲ್ಲೆ ನಡೆಸಿದ್ದನು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಡತನದಲ್ಲಿ ಜೀವನ ಸಾಗಿಸುತ್ತಿರುವ ಮಹಿಳೆಯ ಮಗ ದುಶ್ಚಟಕ್ಕೆ ಸಿಲುಕಿದ್ದನು. ತನ್ನ ದುಶ್ಚಟದ ದಾಹ ತೀರಿಸಿಕೊಳ್ಳಲು ಮಗ ತನ್ನ ತಾಯಿಯ ಬಳಿಯೇ ಹಣಕ್ಕಾಗಿ ಪೀಡಿಸುದ್ದನು. ಹಣ ನೀಡಲು ನಿರಾಕರಿಸಿದ ತಾಯಿಗೆ ಹೊಡೆದು, ಕಾಲಿನಿಂದ ಒದ್ದಿದ್ದನು.

Published by:Monika N
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು