ಬೆಂಗಳೂರು: ಆತ ಪಿಯುಸಿಯಲ್ಲಿ (PUC) ಫೇಲ್, ಆದರೆ ಟೆಕ್ನಾಲಜಿಯಲ್ಲಿ ಫುಲ್ ಫಾಸ್ಟ್. ಯಾವ ಸಾಫ್ಟ್‌ವೇರ್ ಇಂಜಿನಿಯರ್ಗಿಂತಲೂ (Software Engineer ) ಆತ ಕಮ್ಮಿ ಇಲ್ಲ. ಯಾವುದೇ ಮೊಬೈಲ್ (Mobile), ಲ್ಯಾಪ್ ಟ್ಯಾಪ್ (Laptop) ಕೊಟ್ರು ಕ್ಷಣ ಮಾತ್ರದಲ್ಲಿ ರಿಪೇರಿ ಮಾಡುತ್ತಿದ್ದ. ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದ, ಆದರೆ ಆತ ಬಂದಿದ್ದೆಲ್ಲಿಂದ. ಆತನ ಕ್ರಿಮಿನಲ್ ಬ್ಯಾಕ್ಗ್ರೌಂಡ್ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೆ. ಹೌದು ಹೆಂಡತಿಯನ್ನು (Wife) ಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ (Bengaluru) ಕರೆತಂದಿದ್ದು, ಆತನ ವಿಚಾರಣೆ ವೇಳೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.
ಬಾಂಗ್ಲಾದಿಂದ ನುಸುಳಿ ಬಂದ, ಎಂಜಿನಿಯರ್ ಆದ!
ಆರೋಪಿ ನಾಸಿರ್ ಹುಸೇನ್ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈತ ಕೋರಮಂಗಲದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜನಿಯರ್ ಆಗಿದ್ದ. ತಿಂಗಳಿಗೆ 1 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದ. ಆದರೆ ಈತ 2014 ರಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದು ಬೆಂಗಳೂರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಧಾರ್, ಪಾನ್ ಹಾಗೂ ವೋಟರ್ ಐಡಿ ಕೂಡ ಮಾಡಿಕೊಂಡಿದ್ದ. ಇದೇ ಜನವರಿ 16ರಂದು ತನ್ನ ಹೆಂಡತಿಯನ್ನು ಕೊಂದು ಎಸ್ಕೇಫ್ ಆಗಿದ್ದ ನಾಸಿರ್ ಹುಸೇನ್ ಈಗ ಖಾಕಿ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: Bengaluru: ಕಿಲ್ಲರ್ ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ; ಚಾಲಕನ ನಿಯಂತ್ರಣ ತಪ್ಪಿ ಸರಣಿ ಅಪಘಾತ, ಮೂವರಿಗೆ ಗಾಯ
ಅಕ್ರಮ ಬಾಂಗ್ಲಾ ಪ್ರಜೆಯ ಬಗ್ಗೆ ಹಲವು ಅನುಮಾನ!
ಆರೋಪಿಯನ್ನು ಬಂಧಿಸಿದ ವೇಳೆ ಆತನ ಅಕೌಂಟ್ ನಲ್ಲಿ 25 ಲಕ್ಷ ರೂಪಾಯಿ ಇರೋದು ಪತ್ತೆಯಾಗಿದೆ. ಇದರ ಜೊತೆಗೆ ಹಲವು ರಾಜ್ಯಗಳ ಅಡ್ರಸ್ ಇರುವ ದಾಖಲೆಗಳೂ ಸಿಕ್ಕಿದೆ. ಈತನ ಸಂಪರ್ಕದಲ್ಲಿ ಯಾರೆಲ್ಲಾ ಇದ್ದರೂ ಅನ್ನೋ ಬಗ್ಗೆಯೂ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ನೇತೃತ್ವದ ಟೀಂ ವಿಚಾರಣೆ ಮಾಡ್ತಿದ್ದಾರೆ.
ಈ ಕುರಿತಂತೆ ಮಾಹಿತಿ ನೀಡಿರುವ ಅಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ, ಈತ ಓರ್ವ ಬಾಂಗ್ಲಾದೇಶದ ಪ್ರಜೆ. ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಿ ಬೆಂಗಳೂರಿನಲ್ಲಿ ಕೆಲಸ ಶುರು ಮಾಡಿದ್ದ. ಕೊನೆಗೆ ಹೆಂಡತಿಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಈತ ಬಾಂಗ್ಲಾ ದೇಶದ ಗಡಿಯಲ್ಲಿ ಬರುವ ಸಂದರ್ಭದಲ್ಲಿ ಆರೋಪಿಯನ್ನು ಬಂಧನ ಮಾಡಿದ್ದೇವೆ. ಇದಕ್ಕೆ ಪಶ್ಚಿಮ ಬಂಗಾಳದ ಐದು ಜಿಲ್ಲೆಯ ಪೊಲೀಸರು ನಿರಂತರವಾಗಿ ನಮಗೆ ಸಹಕಾರ ನೀಡಿದ್ದರು. ಅವರು ಈ ವ್ಯಕ್ತಿಯನ್ನು ಗುರುತಿಸಿ ರೋಚಕವಾಗಿ ಕಾರ್ಯಾಚರಣೆ ನಡೆಸಿ ಬಂಧನ ಮಾಡಲು ಕಾರಣರಾಗಿದ್ದರು. ನಾವು ದೆಹಲಿಯಲ್ಲಿದ್ದರೆ ಆತ ನಮಗಿಂತ 2-3 ಗಂಟೆ ಮುಂಚೆ ಇರುತ್ತಿದ್ದ. ಸದ್ಯ ಆರೋಪಿಯ ವಿಚಾರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಏನೆಲ್ಲಾ ದುಷ್ಕೃತ್ಯಕ್ಕೆ ಸಂಚು ಹೂಡಿದ್ದ?
ನಾಸಿರ್ ಹುಸೇನ್ ಬಾಂಗ್ಲಾದಿಂದ ನುಸುಳಿಬಂದಿದ್ದು, ಇಂಥಾ ಇನ್ನೂ ಎಷ್ಟು ಜನ ಹೀಗೇ ಬೆಂಗಳೂರಲ್ಲಿದ್ದಾರೋ ಎನ್ನುವ ಅನುಮಾನ ಮೂಡಿದೆ. ಈ ನಾಸಿರ್ ಹುಸೇನ್ ಬೆಂಗಳೂರಲ್ಲಿ ಏನೆಲ್ಲಾ ದುಷ್ಕೃತ್ಯಕ್ಕೆ ಸಂಚು ಹೂಡಿದ್ದ ಅನ್ನೋ ಬಗ್ಗೆ ವಿಚಾರಣೆಯಿಂದ ಬಯಲಾಗ್ಬೇಕಿದೆ.
ಏನಿದು ಪ್ರಕರಣ?
ಬೆಂಗಳೂರಿನ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ತಾವರೆಕೆರೆಯ ಸುಭಾಷ್ ನಗರದ ಅಪಾರ್ಟ್ಮೆಂಟ್ ಸಮುಚ್ಚಯವೊಂದರಲ್ಲಿ ಜನವರಿ 16ರಂದು ನಾಸಿರ್ ಹುಸೇನ್ ಎಂಬಾತ ಗರ್ಭಿಣಿಯಾಗಿದ್ದ ತನ್ನ ಹೆಂಡತಿ ನಾಝ್ಳನ್ನ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.ಕೊಲೆ ಮಾಡಿ ಬಾಮೈದನಿಗೆ ಫೋನ್ ಮಾಡಿ ನಿನ್ನ ತಂಗಿಯನ್ನ ಕೊಲೆ ಮಾಡಿದ್ದೇನೆ, ಶವ ಮನೆಯಲ್ಲಿ ಬಿದ್ದಿದೆ ಎಂದು ಹೇಳಿ ಪರಾರಿಯಾಗಿದ್ದ.
ಕೂಡಲೇ ಮನೆಗೆ ಹೋಗಿ ನೋಡಿದಾಗ ಮನೆಯಲ್ಲಿ ನಾಝ್ಳ ಶವ ಬಿದ್ದಿತ್ತು. ತಕ್ಷಣವೇ ಸುದ್ದುಗುಂಟೆಪಾಳ್ಯ ಪೊಲೀಸರಿಗೆ ಮೃತ ಮಹಿಳೆಯ ಪೊಲೀಸರು ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಕೊಲೆ ಮಾಡಿದ ನಾಸಿರ್ಗಾಗಿ 3 ತಂಡಗಳನ್ನು ರಚನೆ ಮಾಡಿದ್ದರು. ಕೊಲೆ ಮಾಡಿ ಪರಾರಿಯಾಗಿದ್ದ ನಾಸೀರ್ ಸೀದಾ ಏರ್ಪೋರ್ಟ್ಗೆ ತೆರಳಿ ಅಲ್ಲಿಂದ ವಿಮಾನ ಹತ್ತಿ ಪಶ್ಚಿಮ ಬಂಗಾಳಕ್ಕೆ ಎಸ್ಕೇಪ್ ಆಗಿದ್ದನಂತೆ. ಇತ್ತ ನಾಸೀರ್ನ್ನ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಸಿಸಿಟಿವಿ, ಕಾಲ್ ಲೋಕೇಶನ್ ಮೂಲಕ ಆರೋಪಿ ಇರುವ ಸ್ಥಳವನ್ನು ಟ್ರೇಸ್ ಮಾಡಿ ಬಂಧನ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ