ಮಹಾರಾಷ್ಟ್ರ: ಗರ್ಭಿಣಿಯಾಗಲು (Pregnant) ಮಹಿಳೆಯೊಬ್ಬಳಿಗೆ (Women) ಪುಡಿ ಮಾಡಿದ ಮಾನವನ ಮೂಳೆಯನ್ನು (Human Bones) ತಿನ್ನುವಂತೆ ಪತಿ (Husband) ಮತ್ತು ಅತ್ತೆ (Mother in Law) ಒತ್ತಾಯಿಸಿರುವ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ಮಹಿಳೆಯ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಮತ್ತು ಅತ್ತೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೂಢನಂಬಿಕೆಗಳಿಂದ (Black Magic Ritual) ಪ್ರಭಾವಿತರಾಗಿದ್ದ ಪತಿ ಮತ್ತು ಆಕರಯ ಅತ್ತೆ ಅಮವಾಸ್ಯೆ ಬಂತೆಂದರೆ ಮಧ್ಯರಾತ್ರಿ ಬಲವಂತವಾಗಿ ಸ್ಮಶಾನಕ್ಕೆ ಕರೆದೊಯ್ದು ಸತ್ತ ಮಾನವರ ಮೂಳೆಗಳ ಪುಡಿಯನ್ನು ಮತ್ತು ಕೋಳಿಯ ತಲೆ ಮತ್ತು ಕಾಲನ್ನು ತಿನ್ನುವಂತೆ ಒತ್ತಾಯಿಸುತ್ತಿದ್ದರು. ಒಂದು ವೇಳೆ ತಿನ್ನದೇ ಇದ್ದರೆ ಬಂದೂಕು ತೋರಿಸಿ ಸಾಯಿಸುವುದಾಗಿ ಬೆದರಿಕೆಯೊಡ್ಡುತ್ತಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.
ಪತಿ, ಅತ್ತೆ, ಮಾವ ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ
ಸಂತ್ರಸ್ತೆ ನೀಡಿದ ಎರಡು ಪ್ರತ್ಯೇಕ ದೂರಿನನ್ವಯ ಪುಣೆ ಪೊಲೀಸರು ಆಕೆಯ ಪತಿ, ಅತ್ತೆ –ಮಾವ ಸೇರಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 7 ಮಂದಿ ಆರೋಪಿಗಳ ವಿರುದ್ಧ ಮೂಢನಂಬಿಕೆ ವಿರೋಧಿ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 498 ಎ, 323, 504, 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪುಣೆ ನಗರದ ಉಪ ಪೊಲೀಸ್ ಆಯುಕ್ತ ಸುಹೇಲ್ ಶರ್ಮಾ ಮಾಹಿತಿ ನೀಡಿದ್ದಾರೆ.
ಈ ಮುನ್ನ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಪತಿ ಮತ್ತು ಅತ್ತೆ
ಪತಿಯ ಕುಟುಂಬದವರು ಮದುವೆಯಾದ ಆರಂಭದ ದಿನಗಳಲ್ಲಿ ತವರು ಮನೆಯಿಂದ ನಗದು, ಚಿನ್ನದ ಆಭರಣಗಳನ್ನು ತರುವಂತೆ ಒತ್ತಾಯಿಸಿ ವರದಕ್ಷಿಣೆ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ. ಇದೀಗ ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗರ್ಭಿಣಿ ಪತ್ನಿಯನ್ನು ಬೈಕ್ಗೆ ಕಟ್ಟಿ ಎಳೆದೊಯ್ದಿದ್ದ ಪತಿ
ಇತ್ತೀಚೆಗಷ್ಟೇ ಮದ್ಯದ ಚಟ, ಡ್ರಗ್ಸ್ ಅಮಲಿನಲ್ಲೇ ಕಾಲಕಳೆಯುತ್ತಿದ್ದ ಪತಿಗೆ ಬುದ್ಧಿಮಾತು ಹೇಳಿದ್ದಕ್ಕೆ 8 ತಿಂಗಳ ಗರ್ಭಿಣಿ ಪತ್ನಿಯನ್ನು ಬೈಕ್ಗೆ ಕಟ್ಟಿ ದರ ದರನೇ ಎಳೆದೊಯ್ದಿದ ಘಟನೆ ಬಿಹಾರದಲ್ಲಿ ನಡೆದಿತ್ತು.
8 ತಿಂಗಳ ಗರ್ಭಿಣಿಯಾಗಿದ್ದ ಪತ್ನಿ
3 ವರ್ಷಗಳ ಹಿಂದೆ ರಾಮ್ ಗೋಪಾಲ್ ಹಾಗೂ ಸುಮನಾ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಸುಮನಾ 8 ತಿಂಗಳ ಗರ್ಭಿಣಿ. ಆದರೆ ಪತಿ ಪ್ರತಿ ದಿನ ಕುಡಿದು ಮನೆಗೆ ಬರುತ್ತಿದ್ದ. ಇದರಿಂದ ಸಂಸಾರದ ಲಯ ತಪ್ಪಿತ್ತು. ಆರ್ಥಿಕ ಸಂಕಷ್ಟ ಎದುರಾಗಿದೆ. ಇತ್ತ ಗರ್ಭಿಣಿಯಾಗಿರುವ ಸುಮನಾಳಿಗೆ ಮಾನಸಿಕವಾಗಿಯೂ ತೀವ್ರ ನೋವು ತಂದಿತ್ತು. ಕಳೆದ ಕೆಲ ತಿಂಗಳಿನಿಂದ ಪತಿ ರಾಮ್ಗೋಪಾಲ್ಗೆ ಕುಡಿತ ಹಾಗೂ ಡ್ರಗ್ಸ್ ಚಟ ಬಿಡುವಂತೆ ಮನವಿ ಮಾಡಿದ್ದಳು.
ಇದನ್ನೂ ಓದಿ: Crime News: ಕುಡಿದು ಬಂದಿದ್ದನ್ನು ಪ್ರಶ್ನಿಸಿದ್ದೇ ತಪ್ಪಾ? ಗರ್ಭಿಣಿ ಪತ್ನಿಯನ್ನು ಬೈಕ್ಗೆ ಕಟ್ಟಿ ಎಳೆದೊಯ್ದ ಕ್ರೂರಿ ಪತಿ!
ಪತ್ನಿ ಮೇಲೆ ಹಲ್ಲೆ ನಡೆಸಿ ಬೈಕ್ಗೆ ಕಟ್ಟಿ ಧರಧರನೇ ಎಳೆದೊಯ್ದಿದ್ದ ಪತಿ
ಆದರೆ ತನ್ನ ಚಾಳಿ ಮುಂದುವರಿಸಿ ಕಂಠಪೂರ್ತಿ ಕುಡಿದು ಮನೆಗೆ ಮರಳಿದ ಪತಿಯನ್ನುಒಮ್ಮೆ ಸುಮನಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಕುಡಿತದಿಂದ ಮಾನಸಿಕ ಹಾಗೂ ದೈಹಿಕ ಹಿಂಸೆಯಾಗುತ್ತಿದೆ. ಇದರಿಂದ ಹುಟ್ಟುವ ಮಗುವಿನ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಇಂದಿನಿಂದಲೇ ಕುಡಿತ ನಿಲ್ಲಿಸುವಂತೆ ಜಗಳ ಮಾಡಿದ್ದಾಳೆ. ಈ ವೇಳೆ ಕೋಪಗೊಂಡ ಪತಿ ರಾಮ್ ಗೋಪಾಲ್ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೇ ಬೈಕ್ಗೆ ಕಟ್ಟಿ ಧರಧರನೇ ಎಳೆದೊಯ್ದಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ