ಲಕ್ನೋ, ಉತ್ತರ ಪ್ರದೇಶ: ಮದ್ಯದ (Alcoholic) ಅಮಲಿನಲ್ಲಿದ್ದ ಪತಿಯೋರ್ವ (Husband) ತನ್ನ ಗರ್ಭಿಣಿ (Pregnant) ಪತ್ನಿಯನ್ನು (Wife) ಬೈಕ್ಗೆ (Bike) ಕಟ್ಟಿ 200 ಮೀಟರ್ ಎಳೆದೊಯ್ದು ಕ್ರೌರ್ಯ ಮೆರೆದಿರುವ ಘಟನೆ ಉತ್ತರಪ್ರದೇಶದಲ್ಲಿ (Uttarpradesh) ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಯನ್ನು ರಾಮ್ಗೋಪಾಲ್ ಎಂದು ಗುರುತಿಸಲಾಗಿದೆ. ಪ್ರತಿನಿತ್ಯ ಕುಡಿದು ತೂರಾಡುತ್ತಾ ರಾಮ್ಗೋಪಾಲ್ ಬರುತ್ತಿದ್ದನು. ಇದರಿಂದ ಆತನಿಗೂ ಹಾಗೂ ಆತನ ಪತ್ನಿಗೂ ಆಗಾಗಾ ಜಗಳ ನಡೆಯುತ್ತಲೇ ಇತ್ತು. ಹೀಗಿದ್ದರೂ ಕಳೆದ ಶನಿವಾರ ಮತ್ತೆ ರಾಮ್ ಗೋಪಾಲ್ ಕುಡಿದುಕೊಂಡು ಮನೆಗೆ ಬಂದಿದ್ದಾನೆ. ಇದಕ್ಕೆ ಪತ್ನಿ ವಿರೋಧಿಸಿದ್ದಾಳೆ. ಇದರಿಂದ ಕೋಪಗೊಂಡ ಆರೋಪಿ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಇಷ್ಟಕ್ಕೆ ಸಮ್ಮನೀರದ ಆರೋಪಿ ಆಕೆಯನ್ನು ತನ್ನ ಬೈಕ್ಗೆ ಕಟ್ಟಿ ವಾಹನ ಚಲಾಯಿಸಿಕೊಂಡು ಎಳೆದೊಯ್ದಿದ್ದಾನೆ.
ಬೈಕ್ನಲ್ಲಿ 200 ಮೀಟರ್ ಎಳೆದೊಯ್ಸ ಪತಿ
ಈ ವೇಳೆ ರಸ್ತೆಯಲ್ಲಿ ದಾರಿಹೋಕರು ತಡೆಯಲು ಪ್ರಯತ್ನಿಸಿದರೂ 200 ಮೀಟರ್ ದೂರದವರೆಗೂ ಮಹಿಳೆಯನ್ನು ಎಳೆದೊಯ್ದಿದ್ದಾನೆ. ನಂತರ ಮಹಿಳೆಯ ಸಹೋದರ ಆರೋಪಿಯ ಬೆನ್ನಟ್ಟಿ ಬೈಕ್ ನಿಲ್ಲಿಸಿ ಸಹೋದರಿಯನ್ನು ರಕ್ಷಿಸಿದ್ದಾನೆ. ಬಳಿಕ ತೀವ್ರವಾಗಿ ಗಾಯಗೊಂಡ ತನ್ನ ಸಹೋದರಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಆರೋಪಿ ಮಹಿಳೆ
ಆರೋಪಿ ರಾಮ್ಗೋಪಾಲ್ ಮತ್ತು ಹಲ್ಲೆಗೊಳಗಾದ ಗರ್ಭಿಣಿ ಸುಮನ್ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಕೆಲ ದಿನಗಳಲ್ಲಿ ಆರೋಪಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದ. ಈ ವಿಚಾರದಿಂದ ಪತ್ನೀ ಬೇಸತ್ತಿದ್ದರು. ಮತ್ತೆ ಕಳೆದ ವಾರ ಕುಡಿದುಕೊಂಡು ಮನೆಗೆ ಬಂದ ಆತನನ್ನು ಪ್ರಶ್ನಿಸಿದ್ದಕ್ಕೆ 8 ತಿಂಗಳ ಗರ್ಭಿಣಿ ಎಂಬುವುದನ್ನು ಕೂಡ ನೋಡದೇ ಬೈಕ್ಗೆ ಕಟ್ಟಿ ಎಳೆದೊಯ್ದು ಕ್ರೂರತನ ಮೆರೆದಿದ್ದಾನೆ. ಇದೀಗ ಆರೋಪಿ ವಿರುದ್ಧ ಮಹಿಳೆಯ ಸಹೋದರ ನೀಡಿರುವ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ ಮತ್ತು ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕುಡಿದು ಬಂದ ಪತಿಗೆ ದೊಣ್ಣೆಯಿಂದ ಹೊಡೆದ ಪತ್ನಿ
ಇದಕ್ಕೆ ತದ್ವಿರುದ್ಧ ಎಂಬಂತೆ ಉತ್ತರಪ್ರದೇಶದಲ್ಲಿ ಕುಡಿದು ಮನೆಗೆ ಬರುತ್ತಿದ್ದ ಪತಿಗೆ ನಡು ರಸ್ತೆಯಲ್ಲಿಯೇ ಪತ್ನಿ ದೊಣ್ಣೆಯಿಂದ ಹಿಗ್ಗಾಮುಗ್ಗ ಥಳಿಸಿದ್ದರು. ಅಲ್ಲದೇ ವ್ಯಕ್ತಿಯ ತಾಯಿ ಮತ್ತು ಸಹೋದರಿ ಕೂಡ ಆತನಿಗೆ ಥಳಿಸುತ್ತಿದ್ದ ವೇಳೆ ಮಹಿಳೆಗೆ ಸಪೋರ್ಟ್ ಮಾಡಿದ್ದಾರೆ. ಸುಮಾರು 30 ಸೆಕೆಂಡಿನಲ್ಲಿ ವ್ಯಕ್ತಿಗೆ ಮೂವರು ಸೇರಿಕೊಂಡು 15 ಬಾರಿ ಕೋಲಿನಿಂದ ಹಿಗ್ಗಾಮುಗ್ಗ ಥಳಿಸಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಂಬಳದ ಹಣವನ್ನು ಕುಡಿತಕ್ಕೆ ವ್ಯರ್ಥ ಮಾಡ್ತಿದ್ದ ಪತಿ
ಕಚುನಾ ಪೊಲೀಸ್ ಠಾಣಾ ವ್ಯಾಪ್ತಿಯ ಭಾನ್ಪುರದ ನಿವಾಸಿಯಾಗಿರುವ ಅಮಿತ್ ಅವಸ್ತಿ, ಬಲಮೌದ ರೈಲ್ವೇ ಗಂಜ್ನಲ್ಲಿರುವ ಖಾಸಗಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆತನ ಕುಡಿತದ ಚಟದಿಂದ ಇಡೀ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದೆ. ಹೀಗಿದ್ದರೂ ಅಂಗಡಿಯಿಂದ ಬರುವ ಹಣದಲ್ಲಿ ದಿನವೂ ಮದ್ಯ ಸೇವಿಸಿ ಹಾಳು ಮಾಡುತ್ತಿದ್ದನು.
ಇದನ್ನೂ ಓದಿ: Crime News: ನನ್ನ ಸಾವಿಗೆ ಪತ್ನಿಯೇ ಕಾರಣ, ನಂಗೆ ನ್ಯಾಯ ಕೊಡಿಸಿ; ಗೋಡೆ ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡ ಪತಿ!
ಪತಿ ಮೇಲೆ ಹಲ್ಲೆ ನಡೆಸಿದ ಪತ್ನಿಗೆ ಅತ್ತೆ, ನಾದಿನಿ ಕೂಡ ಸಪೋರ್ಟ್
ಶುಕ್ರವಾರವೂ ಅಮಿತ್ ಕುಡಿದು ಮನೆಗೆ ಬಂದು ಗಲಾಟೆ ಮಾಡಲು ಆರಂಭಿಸಿದ್ದ. ಪತಿಯ ವರ್ತನೆಯಿಂದ ನೊಂದ ಪತ್ನಿ ಶಿಖಾ, ಅತ್ತೆ ಹಾಗೂ ನಂದೇ ಜತೆಗೂಡಿ ಅಮಿತ್ಗೆ ದೊಣ್ಣೆಗಳಿಂದ ತೀವ್ರವಾಗಿ ಥಳಿಸಿದ್ದಾರೆ. ಅಷ್ಟರಲ್ಲಿ ದಾರಿಹೋಕರು ಹಾಗೂ ಅಂಗಡಿಯವರು ನೋಡಿ ಪ್ರತಿದಿನ ವ್ಯಕ್ತಿಗೆ ಪತ್ನಿ ಹೊಡೆಯುತ್ತಿದ್ದಳು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ