• ಹೋಂ
  • »
  • ನ್ಯೂಸ್
  • »
  • Crime
  • »
  • Bengaluru: ರಾತ್ರಿ ವೇಳೆ ವಾಹನಗಳಲ್ಲಿ ಓಡಾಡುವ ಸವಾರರೇ ಎಚ್ಚರ ಎಚ್ಚರ; ಏಕಾಏಕಿ ಡಿಕ್ಕಿ ಹೊಡೆದು ದರೋಡೆ ಮಾಡ್ತಾರೆ ಹುಷಾರ್!

Bengaluru: ರಾತ್ರಿ ವೇಳೆ ವಾಹನಗಳಲ್ಲಿ ಓಡಾಡುವ ಸವಾರರೇ ಎಚ್ಚರ ಎಚ್ಚರ; ಏಕಾಏಕಿ ಡಿಕ್ಕಿ ಹೊಡೆದು ದರೋಡೆ ಮಾಡ್ತಾರೆ ಹುಷಾರ್!

ಬಂಧಿತ ಆರೋಪಿಗಳಾದ ಧನುಷ್ ಹಾಗೂ ರಕ್ಷಿತ್

ಬಂಧಿತ ಆರೋಪಿಗಳಾದ ಧನುಷ್ ಹಾಗೂ ರಕ್ಷಿತ್

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದ ಘಟನೆ ನಡೆದಿದ್ದು, ಬೆಳಗ್ಗಿನ ಜಾವ ಮೂರು ಗಂಟೆ ವೇಳೆ ಕಾರಿನಲ್ಲಿ ಹೋಗುತ್ತಿದ್ದ ದಂಪತಿಗೆ ಆಘಾತ ಎದುರಾಗಿತ್ತು.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಇತ್ತೀಚೆಗೆ ರಸ್ತೆಯಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳನ್ನು ನೋಡಿದರೆ ರೋಡಿಗೆ ಗಾಡಿ ಇಳಿಸೋಕೆ ಭಯ ಆಗುತ್ತದೆ. ಬ್ಯಾಕ್ ಟು ಬ್ಯಾಕ್ ಹಿಟ್ ಆ್ಯಂಡ್ ರನ್ ಕೇಸ್ ಗಳ ನಂತರ ಮತ್ತೊಂದು ಬೆಚ್ಚಿ ಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಲಿಗೆ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಗ್ಯಾಂಗ್​ವೊಂದು ಬೆಂಗಳೂರಿನಲ್ಲಿ ಹೊಸ ಆಟ ಶುರು ಮಾಡಿದೆ. ಅಷ್ಟಕ್ಕೂ ಏನಿದು ಘಟನೆ ಎಂದು ನೋಡುವುದಾದರೆ, ನಗರದ ಸರ್ಜಾಪುರ ರಸ್ತೆಯಲ್ಲಿ ಕಾರಿನಲ್ಲಿ ಬರುತ್ತಿದ್ದ ದಂಪತಿಯನ್ನು ಅಡ್ಡಗಟ್ಟಿ ದರೋಡೆ ಮಾಡಲು ಪ್ರಯತ್ನಿಸಿದ್ದಲಾಗಿದ್ದು, ಈ ಕುರಿತಂತೆ ದುಷ್ಕರ್ಮಿಗಳ ಕೃತ್ಯದ ವಿಡಿಯೋ ಸಮೇತ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.


ಬಂದು ಗುದ್ದಿ ಹೆದರಿಸಿ ದರೋಡೆ ಮಾಡ್ತಾರೆ ಎಚ್ಚರ!


ರಾಜಧಾನಿ ಬೆಂಗಳೂರಲ್ಲಿ ಇತ್ತೀಚೆಗೆ ಸುಲಿಗೆಕೋರರು ಒಂದೊಂದು ತಂತ್ರ ಹೂಡಿ ಜನರ ಲೂಟಿ ಮಾಡೋಕೆ ಮುಂದಾಗಿದ್ದಾರೆ. ಕಾರಿನ ಡ್ಯಾಶ್​​ಕ್ಯಾಮ್​​ನಲ್ಲಿ ಸೆರೆಯಾಗಿರುವ ದೃಶ್ಯ ದರೋಡೆ ಗ್ಯಾಂಗ್​​ನ ಕರಾಳತೆಯನ್ನು ಬಿಚ್ಚಿಟ್ಟಿದೆ. ಕಾರು ಬರುವಾಗ ರಾಂಗ್ ಸೈಡಲ್ಲಿ ಬೈಕ್​​ನಲ್ಲಿ ಬಂದು ಡಿಕ್ಕಿ ಹೊಡೆಸಿ ಬಳಿಕ ಕಾರಿನಲ್ಲಿದ್ದವನ್ನು ಹೆದರಿಸಿ ದರೋಡೆ ಮಾಡಲು ಮುಂದಾಗಿದ್ದಾರೆ.




ಇದನ್ನೂ ಓದಿ: Crime News: ಹೆಂಡ್ತಿ ಕೊಂದು ಎಸ್ಕೇಪ್​​ ಆಗಿದ್ದ ನಕಲಿ ಟೆಕ್ಕಿ ಭಾರತದ ಪ್ರಜೆಯೇ ಅಲ್ಲ; ವಿಚಾರಣೆ ವೇಳೆ ಪೊಲೀಸರಿಗೆ ಶಾಕ್!


ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದ ಘಟನೆ ನಡೆದಿದ್ದು, ಬೆಳಗ್ಗಿನ ಜಾವ ಮೂರು ಗಂಟೆ ವೇಳೆ ಕಾರಿನಲ್ಲಿ ಹೋಗುತ್ತಿದ್ದ ದಂಪತಿಗೆ ಆಘಾತ ಎದುರಾಗಿತ್ತು. ಒನ್​​ವೇ ರಸ್ತೆಯಲ್ಲಿ ಅಡ್ಡಲಾಗಿ ಬಂದ ಬೈಕ್ ಒಂದು ಇದ್ದಕ್ಕಿದ್ದಂತೆ ಕಾರಿಗೆ ಗುದ್ದಿತ್ತು. ಬಳಿಕ ಬೈಕ್​​ನಿಂದ ಇಳಿದ ಆ ಇಬ್ಬರು ಕಾರ್​​ನಲ್ಲಿದ್ದವರನ್ನ ಹೆದರಿಸಿ ಡೋರ್ ಓಪನ್ ಮಾಡಲು ನೋಡಿದ್ದರು. ಈ ವೇಳೆ ಕಾರಿನಲ್ಲಿದ್ದ ದಂಪತಿ ಹೆದರಿದ ಕಾರನ್ನು ರಿವರ್ಸ್​ ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಆಗಂತುಕರು ಕೂಡ ಅವರನ್ನು ಹಿಂಬಾಲಿಸಿದ್ದಾರೆ.


ಈ ಘಟನೆ ಬಳಿಕ ಭಯಭೀತರಾದ ದಂಪತಿ ಕಾರ್​ ಡ್ಯಾಶ್​​ಕ್ಯಾಮ್​​ನಲ್ಲಿ ಸೆರೆಯಾಗಿರುವ ದೃಶ್ಯಗಳ ಸಮೇತ ಬೆಂಗಳೂರು ಪೊಲೀಸರಿಗೆ ಟ್ವೀಟ್ ಮೂಲಕ ದೂರು ನೀಡಿದ್ದರು. ದೂರು ದಾಖಲಾಗಿದ್ದೇ ತಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಧನುಷ್ ಹಾಗೂ ರಕ್ಷಿತ್ ಎಂಬವರನ್ನು ಬಂಧಿಸಿದ್ದಾರೆ.


ಬಂಧಿತ ಆರೋಪಿಗಳಾದ ಧನುಷ್ ಹಾಗೂ ರಕ್ಷಿತ್


ಈ ಇಬ್ಬರು ಮೀನು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಅದಾದ್ಮೇಲೆ ದರೋಡೆಗೆ ಮುಂದಾಗಿದ್ದ ಬಗ್ಗೆ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಸದ್ಯ ಬೆಳ್ಳಂದೂರು ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.


ಇದನ್ನೂ ಓದಿ: Kalaburagi: ವಿಧಿಯೇ ನೀನೆಷ್ಟು ಕ್ರೂರಿ; ಊಟ ಮಾಡುತ್ತಿರುವಾಗಲೇ ಬಂದೆರಗಿದ ಜವರಾಯ, ಕುಳಿತಲ್ಲೇ ಕೊನೆಯುಸಿರೆಳೆದ ವ್ಯಕ್ತಿ


ಸ್ಯಾಂಟ್ರೋ ರವಿ ಪತ್ನಿ ಸುಳ್ಳು ಪ್ರಕರಣ ತನಿಖೆ ಚುರುಕು


ಸ್ಯಾಂಟ್ರೋ ರವಿ (Santro Ravi) ಪತ್ನಿ ವಿರುದ್ಧ ದಾಖಲಾದ ಸುಳ್ಳು ದರೋಡೆ ಪ್ರಕರಣದ ತನಿಖೆಯನ್ನ ಸಿಸಿಬಿ ಪೊಲೀಸರು (CCB Police) ಮತ್ತಷ್ಟು ಚುರುಕುಗೊಳಿಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಇನ್ಸ್‌ಪೆಕ್ಟರ್ ಪ್ರವೀಣ್ (Inspector Praveen) ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು, ಇದೀಗ ಇನ್ಸ್‌ಪೆಕ್ಟರ್ ಕುರಿತಂತೆ ಮತ್ತಷ್ಟು ಮಾಹಿತಿ ಪಡೆಯಲು ಕಾಟನ್ ಪೇಟೆ ಪೊಲೀಸರಿಗೆ (Cottonpet Police) ಪತ್ರ ಬರೆದಿದ್ದಾರೆ.



ಅದರಲ್ಲಿ ಪ್ರಮುಖವಾಗಿ ಇನ್ಸ್‌ಪೆಕ್ಟರ್ ಪ್ರವೀಣ್ ಕರ್ತವ್ಯದಲ್ಲಿದ್ದ ಸಮಯದ ಸ್ಟೇಷನ್ ಸಿಸಿಟಿವಿ ಪೂಟೇಜ್, ಪೊಲೀಸ್ ಜೀಪ್ ಜಿಪಿಎಸ್ ರೆಕಾರ್ಡ್ ಹಾಗೂ ಸ್ಟೇಷನ್ ಲಾಗ್ ಬುಕ್ ಮಾಹಿತಿ ನೀಡುವಂತೆ ಸಿಸಿಬಿ ಪೊಲೀಸರು ಕೇಳಿದ್ದಾರೆ. ದರೋಡೆ ವಿಚಾರವಾಗಿ ಕೃತ್ಯಕ್ಕೆ ಬಳಸಿದ್ದ ಚಾಕು ಖರೀದಿ ಮಾಡಿದ್ದ ಅಂಗಡಿಯನ್ನ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೆಜೆಸ್ಟಿಕ್ ಬಳಿಯ ಅಂಗಡಿ ಮಾಲೀಕನನ್ನ ಕರೆಯಿಸಿ, ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Published by:Sumanth SN
First published: