• ಹೋಂ
  • »
  • ನ್ಯೂಸ್
  • »
  • Crime
  • »
  • SP Arun Rangarajan: ಕಾನ್ಸ್‌ಟೇಬಲ್ ಹೆಂಡ್ತಿ ಜೊತೆ ಎಸ್‌ಪಿ ಲವ್ವಿಡವ್ವಿ? ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದು ಕೊಲೆ ಬೆದರಿಕೆ ಹಾಕಿದ್ರಾ ಅರುಣ್ ರಂಗರಾಜನ್?

SP Arun Rangarajan: ಕಾನ್ಸ್‌ಟೇಬಲ್ ಹೆಂಡ್ತಿ ಜೊತೆ ಎಸ್‌ಪಿ ಲವ್ವಿಡವ್ವಿ? ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದು ಕೊಲೆ ಬೆದರಿಕೆ ಹಾಕಿದ್ರಾ ಅರುಣ್ ರಂಗರಾಜನ್?

ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್

ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್

ಕಲಬುರಗಿ ಐಎಸ್​​ಡಿ ವಿಭಾಗದ ಎಸ್​​ಪಿ ಆಗಿರುವ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ವಿರುದ್ಧ ಹೆಡ್‌ ಕಾನ್ಸ್‌ಟೇಬಲ್‌ ಕಂಟೆಪ್ಪ ಗಂಭೀರ ಆರೋಪ ಮಾಡಿದ್ದಾರೆ. ಆಂತರಿಕ ಭದ್ರತಾ ವಿಭಾಗದಲ್ಲಿ ಎಎಸ್​​ಐ ಆಗಿರುವ ನನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Gulbarga, India
  • Share this:

ಕಲಬುರಗಿ: ಜಿಲ್ಲೆಯ ಆಂತರಿಕ ಭದ್ರತಾ ವಿಭಾಗದ (ISD) ಎಸ್​​ಪಿ, ಅಧಿಕಾರಿ ಅರುಣ್ ರಂಗರಾಜನ್ (IPS Arun Rangarajan) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮಹಿಳಾ ಎಎಸ್​​ಐ (ASI Woman Police) ಜೊತೆ ಅಕ್ರಮ ಸಂಬಂಧ (Illegal Relationship) ಹೊಂದಿದ್ದಾರೆ ಎಂದು ಮಹಿಳಾ ಎಎಸ್​​ಐ ಪತಿ, ಹೆಡ್ ಕಾನ್ಸ್‌ಟೇಬಲ್‌ (Head Constable) ಕಂಟೆಪ್ಪ ಆರೋಪಿಸಿದ್ದಾರೆ. ಲೇಡಿ ಎಎಸ್​​ಐ ಹಾಗೂ ಅರುಣ್ ರಂಗರಾಜನ್ ಮನೆಯಲ್ಲೇ ಸಿಕ್ಕಿಬಿದ್ದಿದ್ದರಂತೆ. ಅದನ್ನು ನೋಡಿದ ಕಂಟೆಪ್ಪನನ್ನು ಕೊಲ್ಲುತ್ತೇವೆ ಅಂತ ಹೇಳಿದ್ದಾರೆ ಎಂದು ಕಂಟೆಪ್ಪ ದೂರು ನೀಡಿದ್ದಾರೆ. ಆದರೆ ಹೆಡ್‌ಕಾನ್ಸ್‌ಟೇಬಲ್ ಆರೋಪವನ್ನ IPS ಅಧಿಕಾರಿ ಅಲ್ಲಗಳೆದಿದ್ದಾರೆ. ನನ್ನ ಮನೆಯಲ್ಲಿ (Home) ನೂರು ಜನ ಇರುತ್ತಾರೆ, ಹೋಗುತ್ತಾರೆ ಎಂದು ಅರುಣ್ ರಂಗರಾಜನ್ ಹೇಳಿದ್ದಾರೆ.


ಏನಿದು ಪ್ರಕರಣ?


ಕಲಬುರಗಿ ಐಎಸ್​​ಡಿ ವಿಭಾಗದ ಎಸ್​​ಪಿ ಆಗಿರುವ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ವಿರುದ್ಧ ಹೆಡ್‌ ಕಾನ್ಸ್‌ಟೇಬಲ್‌ ಕಂಟೆಪ್ಪ ಗಂಭೀರ ಆರೋಪ ಮಾಡಿದ್ದಾರೆ. ಆಂತರಿಕ ಭದ್ರತಾ ವಿಭಾಗದಲ್ಲಿ ಎಎಸ್​​ಐ ಆಗಿರುವ ನನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ.


ಕಲಬುರಗಿ ನಗರದ ಐವಾನ್ ಶಾಹೀ ಬಡವಾಣೆಯ ಪಿಡಬ್ಲುಡಿ ಕ್ವಾಟರ್ಸ್​​ನಲ್ಲಿ ಮಹಿಳಾ ಅಧಿಕಾರಿ ಹಾಗೂ ಐಪಿಎಸ್​​ ಅಧಿಕಾರಿ ಇಬ್ಬರು ಅನೈತಿಕ ಸಂಬಂಧದಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕಾನ್ಸ್​​ಟೇಬಲ್​​ ಕಂಟೆಪ್ಪನ ಇಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು ಎಂದು ಆರೋಪಿಸಿದ್ದಾರೆ.


ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್


ಇದನ್ನೂ ಓದಿ: Bengaluru: BMTC ಕಂಡಕ್ಟರ್ ಸಜೀವ ದಹನ ಕೇಸ್​ಗೆ ಮತ್ತೆ ಟ್ವಿಸ್ಟ್​; ಡ್ರೈವರ್​ ಕೈವಾಡ ಶಂಕೆ! ತನಿಖೆ ಚುರುಕುಗೊಳಿಸಿದ ಪೊಲೀಸರು


ತಿಳಿ ಹೇಳುವ ಕೆಲಸ ಮಾಡಿದ್ದರಂತೆ ಕಾನ್ಸ್​​ಟೇಬಲ್


ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಗ್ಗೆ ಕಾನ್ಸ್​​ಟೇಬಲ್​​ ಕಂಟೆಪ್ಪ ವಿಡಿಯೋ ಕೂಡ ಮಾಡಿಕೊಂಡಿದ್ದಾರಂತೆ. ಆದರೆ ಈ ವೇಳೆ ಪತ್ನಿ ಹಾಗೂ ಐಪಿಎಸ್​ ಅಧಿಕಾರಿ ಇಬ್ಬರು ಅವರಿಗೆ ಹೊಡೆದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ಕಳೆದ ಹಲವು ತಿಂಗಳಿನಿಂದ ಇಬ್ಬರ ನಡುವೆ ಅನೈತಿಕ ಸಂಬಂಧ ಇದೆ.


ಕಳೆದ ಮೂರು ವರ್ಷಗಳಿಂದ ಮಹಿಳಾ ಎಎಸ್​​ಐ ಮತ್ತು ಅರುಣ್ ರಂಗರಾಜನ್ ಐಎಸ್​ಡಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆಯೂ ಅಕ್ರಮ ಸಂಬಂಧದಲ್ಲಿ ಇದ್ದಾಗ ಸಿಕ್ಕಿ ಬಿದ್ದರು. ಆಗ ತಿಳಿ ಹೇಳುವ ಕೆಲಸ ಮಾಡಿದ್ದೆ. ಆದರೂ ಇಬ್ಬರು ಅಕ್ರಮ ಸಂಬಂಧ ಮುಂದುವರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಅಧಿಕಾರ ದುರುಪಯೋಗ ಪಡಿಸಿಕೊಂಡು ಮಹಿಳಾ ಎಎಸ್​​ಐ ಜೊತೆ ನಿರಂತರವಾಗಿ ಸಂಬಂಧ ಮುಂದುವರಿಸಿದ್ದಾರೆ ಎಂದಿದ್ದಾರೆ.




ಈ ಸಂಬಂಧ ಸದ್ಯ ಕಾನ್ಸ್​​ಟೇಬಲ್​​ ಕಂಟೆಪ್ಪ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಮತ್ತು ಪತ್ನಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಐಪಿಸಿ ಸೆಕ್ಷನ್ 323 , 324 , 498 , 376(2)(b), 342, 504, 506(2), 507, 420, 406, 500, 201, 109, 457 ಅಡಿಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ.


ಅವನ ಹೆಂಡತಿ ಅವನ ಮನೆಯಲ್ಲಿ ಇಲ್ಲ ಎಂದರೆ?


ಇತ್ತ ಕಾನ್ಸ್​​ಟೇಬಲ್​​ ಕಂಟೆಪ್ಪ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್, ಯಾರು ಯಾರ ಹೆಂಡತಿಯನ್ನು ಕೂಡಿ ಹಾಕೋಕೆ ಆಗೋದಿಲ್ಲ. ತನ್ನ ಹೆಂಡತಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಳ್ಳುವುದು ಒಬ್ಬ ಗಂಡನ ಜವಾಬ್ದಾರಿ. ಅದನ್ನು ಅವನು ಇಟ್ಟುಕೊಳ್ಳಲಿಲ್ಲಾ ಎಂದರೆ ಅವಳು ಎಲ್ಲಿ ಬೇಕು ಅಲ್ಲಿ ಹೋಗಿ ಸೇರುತ್ತಾಳೆ.




ಇದನ್ನೂ ಓದಿ: Crime News: ಸ್ನೇಹಿತನನ್ನು ಮನೆಗೆ ಕರೆದರೆ ಹೆಂಡತಿಯನ್ನೇ ಕರೆದೊಯ್ದ, ಪತ್ನಿ ಕೋಪ ಮಾಡಿಕೊಂಡಳೆಂದು ಮಗನನ್ನೇ ಕೊಂದ!

 ನನ್ನ ಮನೆಯಲ್ಲಿ ನೂರು ಜನ ಇರುತ್ತಾರೆ. ಅದನ್ನೆಲ್ಲಾ ನಾನು ಹೇಳಲು ಆಗುತ್ತಾ? ಮನೆಯ ಬಾಡಿಗೆ ಕಟ್ಟುವವನು ನಾನು, ಯಾರು ಬೇಕಾದರೂ ನನ್ನ ಮನೆಯಲ್ಲಿ ಇರುತ್ತಾರೆ. ಅವನ ಹೆಂಡತಿ ಅವನ ಮನೆಯಲ್ಲಿ ಇಲ್ಲ ಎಂದರೆ ಅವನು ಎಲ್ಲಿ ಹೋಗಿ ಹುಡುಕಬೇಕು ಅಲ್ಲಿ ಹುಡಕಬೇಕು ಎಂದಿದ್ದಾರೆ.

Published by:Sumanth SN
First published: