ಮಹಾರಾಷ್ಟ್ರ/ ಮುಂಬೈ: ಪುರುಷಪ್ರಧಾನ ಸಮಾಜದಲ್ಲಿ ಗಂಡು ಹೆಣ್ಣಿನ್ನು ತನ್ನ ಭೋಗ ವಸ್ತುವೆಂದು ತಿಳಿದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಲೇ ಇದೆ. ಅತ್ಯಾಚಾರ (Rape) ಎಂಬುದು ಸರ್ವೇ ಸಾಮಾನ್ಯ ಎಂಬಂತಾಗುತ್ತಿದೆ. ಒಂದೆಡೆ ಈ ಬಗ್ಗೆ ಚರ್ಚೆಗಳು, ಪ್ರತಿಭಟನೆಗಳು ನಡೆಯುತ್ತಿವೆ. ಅತ್ಯಾಚಾರಗಳನ್ನು ನಿಯಂತ್ರಿಸುವುದಕ್ಕಾಗಿ ವಿಧ ವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದರೂ ಅತ್ಯಾಚಾರಗಳು ನಡೆಯುತ್ತಲೇ ಇವೆ. ದೇಶದಲ್ಲಿ ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಅನೈತಿಕ ಸಂಬಂಧ (Illigal Relationship), ಕೊಲೆ (Muwrder), ಅತ್ಯಾಚಾರದಂತಹ ಘಟನೆಗಳು ನಿರಂತರವಾಗಿ ಮುನ್ನೆಲೆಗೆ ಬರುತ್ತಿವೆ. ಇದೀಗ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿಯ (Girl) ಖಾಸಗಿ ಫೋಟೋಗಳನ್ನು (Photos) ವೈರಲ್ ಮಾಡುವುದಾಗಿ ಬೆದರಿಸಿ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸ್ (Police) ಕಸ್ಟಡಿಗೆ ನೀಡಲಾಗಿದೆ.
ಬಾಲಕಿಯನ್ನು ಲಾಡ್ಜ್ಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದ ಆರೋಪಿ
ಅಪ್ರಾಪ್ತ ಬಾಲಕಿ ಸಂಬಂಧಿಕರ ಮನೆಯಲ್ಲಿದ್ದಾಗ ಸುಜಿತ್ ಗಾಡೆ ಎಂಬ ಯುವಕ ಆಕೆಯ ಫೋಟೋಗಳನ್ನು ತೆಗೆದಿದ್ದಾನೆ. ಬಳಿಕ ಮೊಬೈಲ್ ನಲ್ಲಿರುವ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದನು. ಬಾಲಕಿ ಲಾತೂರ್ನಲ್ಲಿದ್ದಾಗ ಆಕೆಯನ್ನು ಭೇಟಿಯಾಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ತುಳಜಾಪುರದ ಲಾಡ್ಜ್ಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾನೆ.
ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ನ್ಯಾಯಾಲಯ ಆದೇಶ
2022ರ ಅಕ್ಟೋಬರ್ ಮತ್ತು 2023ರ ಜನವರಿ ನಡುವೆ ಈ ಕೃತ್ಯವೆಸಗಿದ್ದಾನೆ ಎಂದು ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅದರಂತೆ ತಂಬೂರಿ ಪೊಲೀಸರು ಸುಜಿತ್ ಗಾಡೆ ವಿರುದ್ಧ ಪೋಕ್ಸೋ ಮತ್ತು ಚಿತ್ರಹಿಂಸೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಜನವರಿ 23ರವರೆಗೆ ಆತನನ್ನು ಪೊಲೀಸ್ ಕಸ್ಟಡಿಯಲ್ಲಿ ಇಡುವಂತೆ ನ್ಯಾಯಾಲಯ ಕೂಡ ಆದೇಶಿಸಿದೆ. ಈ ಬಗ್ಗೆ ಸಹಾಯಕ ನಿರೀಕ್ಷಕ ಜೋಗ್ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಇದೇ ರೀತಿ ಅಪ್ರಾಪ್ತೆಯನ್ನು ಬ್ಲ್ಯಾಕ್ಮೇಲ್ ಮಾಡಿ 8 ತಿಂಗಳು ಗ್ಯಾಂಗ್ ರೇಪ್
ಇತ್ತೀಚೆಗಷ್ಟೇ 13 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸುಮಾರು 8 ತಿಂಗಳ ಕಾಲ ನಿರಂತವಾಗಿ ಮೂವರು ದುಷ್ಕರ್ಮಿಗಳು ಅತ್ಯಾಚಾರವೆಸಗಿರುವ ಘಟನೆ ಪಾಕಿಸ್ತಾನದ ಮುಜಾಫರ್ಗಢ ಜಿಲ್ಲೆಯಲ್ಲಿ ನಡೆದಿತ್ತು. ಇಷ್ಟೇ ಅಲ್ಲದೇ ಬಾಲಕಿಯ ಅರೆ ಬೆತ್ತಲೆ ಫೋಟೋ ಹಾಗೂ ವಿಡಿಯೋವನ್ನು ಸೆರೆ ಹಿಡಿದು ಕಿಡಿಗೇಡಿಗಳು ಬ್ಲ್ಯಾಕ್ಮೇಲ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಬಳಿಕ ಬಾಲಕಿಯ ಬೆತ್ತಲೆಯ ವಿಡಿಯೋ ಸೆರೆ ಹಿಡಿದಿದ್ದ ದುಷ್ಕರ್ಮಿಗಳು
ಜತೋಯ್ ತೆಹಸಿಲ್ನ ಕೋಟ್ಲಾ ರಹಮ್ ಶಾ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಬಾಲಕಿ ಗರ್ಭಿಣಿಯಾದ ಹಿನ್ನೆಲೆ ಜತೋಯ್ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದರು. ಪ್ರಕರಣ ಸಂಬಂಧ ತನಿಖೆ ವೇಳೆ ದುಷ್ಕರ್ಮಿಗಳ ಗ್ಯಾಂಗ್ನಲ್ಲಿದ್ದವನೊಬ್ಬ ಬಾಲಕಿಯನ್ನು ಎಂಟು ತಿಂಗಳ ಹಿಂದೆ ಕಬ್ಬಿನ ಗದ್ದೆಗೆ ಕರೆದೊಯ್ದಿದ್ದಾನೆ. ನಂತರ ಆತ ಮತ್ತು ಅವನ ಸ್ನೇಹಿತರು ಸೇರಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಮತ್ತು ಆಕೆಯ ಬೆತ್ತಲೆಯ ವಿಡಿಯೋವನ್ನು ಸೆರೆಹಿಡಿದ್ದಾರೆ ಎಂದು ತಿಳಿದು ಬಂದಿತ್ತು.
ಇದನ್ನೂ ಓದಿ: Raichur: ಪೂಜಾರಿಯಿಂದ ಬಾಲಕಿ ಮೇಲೆ ಅತ್ಯಾಚಾರ ಆರೋಪ, ವಿಶೇಷ ಪೂಜೆ ಎಂದು ಮೋಸ?
ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಂಜಾಬ್ ಮುಖ್ಯಮಂತ್ರಿಗೆ ಬಾಲಕಿ ಮನವಿ
ಅಲ್ಲದೇ ಅತ್ಯಾಚಾರವೆಸಗಿದ ಬಳಿಕ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿ ಆಕೆಯ ಮೇಲೆ ಸಾಮೂಹಿಕವಾಗಿ ನಿರಂತರವಾಗಿ ಅತ್ಯಾಚಾರವೆಸಗುವುದನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ. ನಂತರ ಈ ಬಗ್ಗೆ ಸಹಾಯ ಕೋರಿದ ಬಾಲಕಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಂಜಾಬ್ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ ಅವರಿಗೆ ಮನವಿ ಮಾಡಿದ್ದಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ