ಪಾಟ್ನಾ: ಬಿಹಾರದ (Bihar) ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಬೇರೆ ಜಾತಿಯ ಯುವಕರನ್ನು ಪ್ರೀತಿಯಸಿದ (Intercast Love) ಕಾರಣಕ್ಕೆ ಮರ್ಯಾದಾ ಹತ್ಯೆ (Honor Killing) ನಡೆದಿದೆ. ಪೋಷಕರೇ (Parents) ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು (Two Girls) ಕೊಂದಿದಿದ್ದಾರೆ. ಬಿಹಾರದ ಹಾಜಿಪುರದಲ್ಲಿ ಪೋಷಕರು 16 ಮತ್ತು 18 ವರ್ಷದ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಿದ್ದಾರೆ. ಮಕ್ಕಳು ಮಲಗಿದ್ದಾಗಲೇ ಅವರನ್ನು ಹತ್ಯೆ ಮಾಡಿದ್ದೇವೆ ಎಂದು ಸ್ವತಃ ಪೋಷಕರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಶನಿ ಕುಮಾರಿ, ಮತ್ತು ತನ್ನು ಕುಮಾರಿ ಎಂಬುವವರೇ ಕೊಲೆಯಾಗಿರುವ ದುರ್ದೈವಿಗಳು. ಘಟನೆಯಲ್ಲಿ ತಾಯಿ ರಿಂಕು ದೇವಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಂದೆ ತಲೆ ಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಬಾಲಕಿಯರು ಮಲಗಿದ್ದ ವೇಳೆ ಉಸಿರುಗಟ್ಟಿಸಿ ಕೊಂದೆವು ಎಂದು ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.
ರೋಶಿನಿ ಕುಮಾರಿ ಬಿಎ ವಿದ್ಯಾರ್ಥಿನಿಯಾಗಿದ್ದು, ಆಕೆಯ ತಂಗಿ ತನ್ನು ಕುಮಾರಿ ಈ ವರ್ಷ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ. ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹಾಜಿಪುರ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ತಾಯಿ
ಪೊಲೀಸರ ಪ್ರಾಥಮಿಕ ತನಿಖೆಯ ನಂತರ ತಂದೆ-ತಾಯಿ ಇಬ್ಬರೂ ಸೇರಿ ತಮ್ಮ ಮಕ್ಕಳನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು ತನ್ನ ಪತಿ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ ಪರಾರಿಯಾಗಿರುವುದಾಗಿ ತಿಳಿಸಿದ್ದರು. ಆದರೆ ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಇಬ್ಬರೂ ಸೇರಿ ಮಕ್ಕಳನ್ನು ಕೊಂದಿರುವುದಾಗಿ ತಿಳಿಸಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ತಿಳಿಸಿದ್ದಾರೆ.
ದಲಿತ ಯುವಕನನ್ನು ವಿವಾಹವಾಗಿದ್ದಕ್ಕೆ ಮಗನನ್ನೇ ಕೊಂದ ತಂದೆ
ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ 55 ವರ್ಷದ ವ್ಯಕ್ತಿಯೊಬ್ಬ ತನ್ನ ಮಗನನ್ನು ಕೊಲೆ ಮಾಡಿಲ್ಲದೆ, ಮೊಮ್ಮಗನ ತನ್ನ ತಾಯಿಯನ್ನೂ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಬಳಿ ನಡೆದಿದೆ. ಪಿ ದಂಡಪಾಣಿ ಎಂಬ ವ್ಯಕ್ತಿ ತನ್ನ ಮಗ 25 ವರ್ಷದ ಸುಭಾಷ್ ಎಂಬುವವನನ್ನು ಕೊಲೆ ಮಾಡಿದ್ದಾನೆ. ಆತನ ಕಳೆದ ತಿಂಗಳು ದಲಿತ ಯುವತಿಯನ್ನು ವಿವಾಹವಾಗಿದ್ದ. ಮದುವೆಯ ನಂತರ ದಂಪತಿಗಳು ತಿರುಪತ್ತೂರಿನಲ್ಲಿ ನೆಲೆಸಿದ್ದರು. ಮಗ ದಲಿತ ಯುವತಿಯನ್ನು ಮದುವೆಯಾಗುವುದನ್ನು ದಂಡಪಾಣಿ ವಿರೋಧಿಸಿದ್ದರು. ಹೀಗಾಗಿ ಕಳೆದ ವಾರ ತಮ್ಮ ಗ್ರಾಮಕ್ಕೆ ಮರಳಿದ ವೇಳೆ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: Crime News: ಪ್ರಿಯತಮೆಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯ; ಒಪ್ಪದ ಯುವತಿ ಕಿರುಕುಳಕ್ಕೆ ಬಲಿ!
ಕುಡುಗೋಲಿನಿಂದ ಹಲ್ಲೆ
ಕಳೆದ ವಾರ ಸುಭಾಷ್ ತನ್ನ ಅಜ್ಜಿಯನ್ನು ಭೇಟಿಯಾಗಲು ತನ್ನ ಹೆಂಡತಿಯೊಂದಿಗೆ ಗ್ರಾಮಕ್ಕೆ ಬಂದಿದ್ದನು. ಈ ವೇಳೆ ಆತನ ಅಜ್ಜಿ, ಸ್ಪಷ್ಟವಾಗಿ, ಸುಬಾಷ್ಗೆ ಬೆಂಬಲಿಸಿದ್ದರು. ಆದರೆ, ಶನಿವಾರ ನಸುಕಿನಲ್ಲಿ ದಂಡಪಾಣಿ ಮಗನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಮೊಮ್ಮಗನ ಕಿರುಚಾಟ ಕೇಳಿ ರಕ್ಷಿಸಲು ಯತ್ನಿಸಿದ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ತನ್ನ ಸೊಸೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಆದರೆ ನವವಧು ಗಾಯಗಳಿಂದ ಪಾರಾಗಿದ್ದಾಳೆ.
ತಕ್ಷಣ ನೆರೆಹೊರೆಯವರು ಸುಭಾಷ್, ಆತನ ಪತ್ನಿ ಮತ್ತು ಅಜ್ಜಿಯನ್ನು ಉತ್ತಂಗರೈನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಸುಬಾಷ್ ಮತ್ತು ಆತನ ಅಜ್ಜಿ ಕನ್ನಮ್ಮಾಳ್ ಮೃತಪಟ್ಟಿದ್ದರು. ಪೊಲೀಸರು ದಂಡಪಾಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ