• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಯುವತಿಯರ ಅರೆನಗ್ನ ಫೋಟೋ ಕಳುಹಿಸಿ ಹನಿಟ್ರ್ಯಾಪ್ ಮಾಡ್ತಿದ್ದ ಗ್ಯಾಂಗ್​​ ಅಂದರ್​; ಇಬ್ಬರು ಮಹಿಳೆಯರೂ ಸೇರಿ 6 ಮಂದಿ ಅರೆಸ್ಟ್​

Crime News: ಯುವತಿಯರ ಅರೆನಗ್ನ ಫೋಟೋ ಕಳುಹಿಸಿ ಹನಿಟ್ರ್ಯಾಪ್ ಮಾಡ್ತಿದ್ದ ಗ್ಯಾಂಗ್​​ ಅಂದರ್​; ಇಬ್ಬರು ಮಹಿಳೆಯರೂ ಸೇರಿ 6 ಮಂದಿ ಅರೆಸ್ಟ್​

ಯುವತಿಯರ ಅರೆನಗ್ನ ಫೋಟೋ ಕಳುಹಿಸಿ ಹನಿಟ್ರ್ಯಾಪ್ ಮಾಡ್ತಿದ್ದ ಗ್ಯಾಂಗ್​​ ಅಂದರ್ (ಸಾಂದರ್ಭಿಕ ಚಿತ್ರ)

ಯುವತಿಯರ ಅರೆನಗ್ನ ಫೋಟೋ ಕಳುಹಿಸಿ ಹನಿಟ್ರ್ಯಾಪ್ ಮಾಡ್ತಿದ್ದ ಗ್ಯಾಂಗ್​​ ಅಂದರ್ (ಸಾಂದರ್ಭಿಕ ಚಿತ್ರ)

ಹಾನಿಟ್ರ್ಯಾಪ್​​ಗೆ ಒಳಗಾದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಗೆ 3 ಲಕ್ಷ ಹಣ ನೀಡುತ್ತೇವೆ ಅಂತ ಹೇಳಿ ಟ್ರ್ಯಾಪ್​ ಮಾಡಿ ಕರೆಯಿಸಿಕೊಂಡಿದ್ದಾರೆ. ಹಣ ತೆಗೆದುಕೊಂಡು ಹೋಗಲು ಬಂದ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿ, ಬಳಿಕ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗ್​​ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಯುವತಿಯರನ್ನು (Women) ಮುಂದಿಟ್ಟುಕೊಂಡು ಅಮಾಯಕರನ್ನು ಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್​​​ ಗ್ಯಾಂಗ್​ವೊಂದನ್ನು (Gang) ಪೊಲೀಸರು (Police) ಬಲೆಗೆ ಕೆಡವಿದ್ದಾರೆ. ಯುವತಿಯರ ಅರೆ ನಗ್ನ ಫೋಟೋ (Photo) ಕಳಿಸಿ ಅಮಾಯಕರನ್ನು ಕರೆಸಿಕೊಂಡು ಸುಲಿಗೆ ಮಾಡುತ್ತಿದ್ದ ಗ್ಯಾಂಗ್​​ಅನ್ನು ಬೇಗೂರು ಪೊಲೀಸರು (Begur Police) ಕಾರ್ಯಚರಣೆ ನಡೆಸಿ ಬಂಧನ ಮಾಡಿದ್ದಾರೆ. ಅನಿಲ್ ಕುಮಾರ್, ಶಿವಶಂಕರ್, ಗಿರೀಶ್, ರಾಮಮೂರ್ತಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಬಡೋ ಅಂಡ್ ಟ್ಯಾಗಡ್ ವೆಬ್ ಸೈಟ್ ಮೂಲಕ ಗಿರಾಕಿಗಳನ್ನ ಬಲೆಗೆ ಬೀಳಿಸಿಕೊಳ್ಳಲುತ್ತಿದ್ದರು.


ರೂಮ್​​ಗೆ ಬರುತ್ತಿದ್ದ ಗ್ರಾಹಕರನ್ನು ಅರೆ ನಗ್ನಗೊಳಿಸಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆ ಬಳಿಕ ವಿಡಿಯೋ ಮುಂಡಿಟ್ಟುಕೊಂಡು ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು. ಇದೇ ರೀತಿ ಬೇಗೂರು ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ವ್ಯಕ್ತಿಯೊಬ್ಬರನ್ನು ಟ್ರ್ಯಾಪ್​ ಮಾಡಿದ್ದರು. ವಿಡಿಯೋ ಮಾಡಿಕೊಂಡು 10 ಲಕ್ಷ ರೂಪಾಯಿಗೆ ಆರೋಪಿಗಳು ಡಿಮ್ಯಾಂಡ್ ಮಾಡಿದ್ದರಂತೆ.


ಬಂಧಿತ ಆರೋಪಿಗಳ ಗ್ಯಾಂಗ್


ಇದರಿಂದ ದಿಕ್ಕುತೋಚದಂತಹ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದು, ದೂರು ಪಡೆದು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಗೆ 3 ಲಕ್ಷ ಹಣ ನೀಡುತ್ತೇವೆ ಅಂತ ಹೇಳಿ ಟ್ರ್ಯಾಪ್​ ಮಾಡಿ ಕರೆಯಿಸಿಕೊಂಡಿದ್ದಾರೆ. ಹಣ ತೆಗೆದುಕೊಂಡು ಹೋಗಲು ಬಂದ ಸಂದರ್ಭದಲ್ಲಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿ, ಬಳಿಕ ಕಾರ್ಯಾಚರಣೆ ನಡೆಸಿ ಇಡೀ ಗ್ಯಾಂಗ್​​ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.




ಇದನ್ನೂ ಓದಿ: HD Kumaraswamy: ರೈತ ಯುವಕನನ್ನು ಮದುವೆಯಾದರೆ ಹೆಣ್ಣು ಮಗಳಿಗೆ 2 ಲಕ್ಷ ಗಿಫ್ಟ್​! ಹಾಸನದಲ್ಲಿ ಹೆಚ್​​ಡಿಕೆ ಘೋಷಣೆ


ನೆಲಮಂಗಲದಲ್ಲಿ ಡಂಪಿಂಗ್​ ಯಾರ್ಡ್​ನಿಂದ ಸಂಕಷ್ಟ


ಸರ್ಕಾರ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆಗೆ ಕೋಟ್ಯಾಂತರ ಹಣ ನಿಯೋಜನೆ ಮಾಡುತ್ತೆ. ಆದರೆ ಈ ಕೆಲಸ ಸರಿಯಾಗಿ ಆಗುತ್ತಿಲ್ಲ. ಅಧಿಕಾರಿಗಳು ಕಸದ ಹೆಸರಲ್ಲಿ ಹಣ ನುಂಗುವ ಹೆಗ್ಗಣಗಳಾಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.


ಗ್ರಾಮದ ಸುತ್ತ ಆವರಿಸಿರುವ ದಟ್ಟ ಹೊಗೆ. ಹೊತ್ತಿ ಉರಿಯುತ್ತಿರುವ ಬೃಹತ್ ಕಸದ ರಾಶಿ. ಕಸ ವಿಲೇವಾರಿ ಘಟಕದ ಬಳಿ ಗ್ರಾಮಸ್ಥರು ಪ್ರತಿಭಟನೆ ಮಾಡಿ ಕಸ ಸುರಿಯಲು ಬಂದಿದ್ದ ವಾಹನಗಳು ವಾಪಸ್ ಕಳುಹಿಸಿರುವ ಘಟನೆ ನೆಲಮಂಗಲದ ಕಣೇಗೌಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.


ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ


ನೆಲಮಂಗಲ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ಮನೆಗಳಿಂದ ಕಸ ಸಂಗ್ರಹ ಮಾಡುವ ಕೆಲಸ ಮಾಡುತ್ತೆ. ಆದರೆ ಹಸಿ ಕಸ, ಒಣ ಕಸ ಎಂದು ವಿಂಗಡಣೆ ಮಾಡುತ್ತಿಲ್ಲ. ಡಂಪಿಂಗ್ ಯಾರ್ಡ್‌ಗೆ ಸುರಿಯುವ ಕೆಲಸ ಮಾಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.


ಕಸವನ್ನ ಸೂಕ್ತವಾಗಿ ವಿಲೇವಾರಿ ಮಾಡದೆ ಸಿಬ್ಬಂದಿಗಳ ಮೂಲಕ ಬೆಂಕಿ ಹಚ್ಚಿಸುವ ಕೆಲಸ ಮಾಡುತ್ತಾರೆ ಎಂದು ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ. ಇದರಿಂದ ಕಣೇಗೌಡನಹಳ್ಳಿ, ಇಸ್ಲಾಂಪುರ, ಮೈಲನಹಳ್ಳಿ, ಬಸವನಹಳ್ಳಿ, ಕೆ.ಜಿ.ಶ್ರೀನಿವಾಸಪುರ, ಗಂಗಾಧರಪಾಳ್ಯ, ವಾಲ್ಮೀಕಿ ನಗರ ಜನರು ಸಂಕಷ್ಟ ಅನುಭವಿಸ್ತಿದ್ದಾರೆ.


ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ


ಇದನ್ನೂ ಓದಿ: Money Shower: ಡ್ಯಾನ್ಸರ್‌ ಮೇಲೆ ಗರಿ ಗರಿ ನೋಟು ಎಸೆದ ಕಾಂಗ್ರೆಸ್‌ ಮುಖಂಡ; ಇದು ಕಾಂಗ್ರೆಸ್‌ ಸಂಸ್ಕೃತಿ ಎಂದ ಬಿಜೆಪಿ


ಕಳೆದ ನಾಲ್ಕೈದು ವರ್ಷದಿಂದ ಘನತ್ಯಾಜ್ಯ ವಿಲೇವಾರಿ ಘಟಕ ಕಾರ್ಯನಿರ್ವಹಿಸುತ್ತಿದ್ದು, ಘಟಕಕ್ಕೆ ಬೆಂಕಿ ಬಿದ್ದ ಬಳಿಕ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಹಸಿ ಕಸ, ಒಣ ಕಸದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡ್ತೇವೆ. ಇಲ್ಲಿನ ಸಮಸ್ಯೆ ಬಗ್ಗೆ ಮೇಲಾಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಭರವಸೆ ನೀಡಿದ್ದಾರೆ.


ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಜೀವನ ಅಸ್ಥವ್ಯಸ್ಥವಾಗಿದೆ. ಅಧಿಕಾರಿಗಳು ಕಸವನ್ನು ಬೇರ್ಪಡಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಕಸಕ್ಕೆ ಬೆಂಕಿ ಹಾಕ್ತಿರೋದು ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿ. ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.

Published by:Sumanth SN
First published: