ಮೀರತ್: ಮದುವೆಯಾದ (Marriage) ಬಳಿಕ ಗಂಡನ ಮನೆಗೆ (Husband) ಬಂದಿದ್ದ ಮರುದಿನವೇ ನವವಿವಾಹಿತ ವಧು (Newly Married Bride) ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮೀರತ್ನಲ್ಲಿ ನಡೆದಿದೆ. ಅತ್ತೆ ಮನೆಯಲ್ಲಿ ಮೊದಲ ರಾತ್ರಿ ಕಳೆದ ಬಳಿಕ ಬೆಳಗ್ಗೆ ಸ್ನಾನಕ್ಕೆಂದು ಬಾತ್ರೂಮ್ಗೆ ತೆರಳಿದ್ದ ವಧು ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ. ಗ್ಯಾಸ್ ಗೀಸರ್ (Gas Geyser) ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ವಧು ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ನಾನಕ್ಕೆಂದು (Bathing) ಹೋದ ಯುವತಿ ಎಷ್ಟೇ ಸಮಯ ಆದರೂ ಹೊರಬಾರದ ಕಾರಣ ಕುಟುಂಬಸ್ಥರು ಅನುಮಾನಗೊಂಡು ಬಾತ್ರೂಮ್ ಡೋರ್ ಮುರಿದು ನೋಡಿದ್ದಾರೆ. ಈ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದರೂ, ಆಸ್ಪತ್ರೆಗೆ ಕರೆತರುವ ವೇಳೆ ಆಕೆ ಸಾವನ್ನಪ್ಪಿದ್ದಳು ಎಂದು ವೈದ್ಯರು ಘೋಷಿಸಿದ್ದರು.
ಗ್ಯಾಸ್ ಗೀಸರ್ ಲೀಕ್ ಸಮಸ್ಯೆ ಏಕೆ ಕಾಣಿಸಿಕೊಳ್ಳುತ್ತದೆ?
ಮನೆಗಳಲ್ಲಿ ಗ್ಯಾಸ್ ಗೀಸರ್ ಬಳಕೆ ಮಾಡುವವರು ಸ್ನಾನ ಕೋಣೆಯಲ್ಲಿ ಸಾಮಾನ್ಯವಾಗಿ ಯಾವುದೇ ಚಿಮಣಿ ಅಳವಡಿಸಿರುವುದಿಲ್ಲ. ಇದರಿಂದ ಗ್ಯಾಸ್ ಗೀಸರ್ ಉರಿಯುವ ವೇಳೆ ಬಿಡುಗಡೆಯಾಗುವ ಕಾರ್ಬನ್ ಮೊನಾಕ್ಸೈಡ್ ಸ್ನಾನ ಕೋಣೆಯಲ್ಲೇ ಉಳಿದುಕೊಂಡಿರುತ್ತದೆ. ಯಾವುದೇ ವ್ಯಕ್ತಿ ಸ್ನಾನ ಕೋಣೆಗೆ ಹೋಗುತ್ತಿದ್ದಂತೆ ಬಾಗಿಲು ಹಾಕಿಕೊಂಡು ಸ್ನಾನಕ್ಕೆ ಮುಂದಾಗುವುದರಿಂದ ಕೆಲವೇ ಕ್ಷಣಗಳಲ್ಲಿ ವಿಷ ಗಾಳಿ ಸೇವಿಸಿ ಪ್ರಜ್ಞೆ ತಪ್ಪುತ್ತಾರೆ. ಇದರಿಂದ ಅವರು ಹೊರಗಿನವರ ಸಹಾಯ ಪಡೆದುಕೊಳ್ಳಲು ವಿಫಲರಾಗಿ ಕೊನೆಯುಸಿರೆಳೆಯುತ್ತಾರೆ.
ಗ್ಯಾಸ್ ಗೀಸರ್ ಬಳಸುವುದರಿಂದ ಆಗುವ ಅಪಾಯಗಳೇನು?
ಗ್ಯಾಸ್ ಗೀಸರ್ ಬಳಕೆ ವೇಳೆ ಸೋರಿಕೆ ಉಂಟಾಗಿ ಸ್ನಾನಕ್ಕೆ ತೆರಳಿದ್ದ ವ್ಯಕ್ತಿ ಪ್ರಜ್ಞಾಹೀನರಾಗುವುದು, ಉಸಿರುಗಟ್ಟಿ ಸಾವನ್ನಪ್ಪಿರುವ ಹಲವು ಘಟನೆಗಳು ದೇಶದಾದ್ಯಂತ ವರದಿಯಾಗಿದೆ. ಆದ್ದರಿಂದಲೇ ಗ್ಯಾಸ್ ಗೀಸರ್ ಬಳಕೆ ಮಾಡುವವರು ಬಾತ್ರೂಮ್ನಲ್ಲಿ ಕನಿಷ್ಠ ಒಂದು ಕಿಟಕಿಯನ್ನಾದರೂ ತೆರೆದಿಟ್ಟು ಬಳಕೆ ಮಾಡಲು ಸಲಹೆ ನೀಡುತ್ತಾರೆ.
ಒಂದೊಮ್ಮೆ ಸ್ನಾನ ಮಾಡುವ ಸಂದರ್ಭದಲ್ಲಿ ವಾಂತಿ, ಮೂರ್ತೆ ಬರುವುದು, ತಲೆನೋವು, ತಲೆಸುತ್ತು, ವಾಕರಿಕೆಯಂತಹ ಲಕ್ಷಣಗಳು ಕಂಡು ಬಂದರೇ ಕೂಡಲೇ ಸ್ನಾನದ ಮನೆಯಿಂದ ಹೊರಬಂದು ಒಳ್ಳೆ ಗಾಳಿ ಇರುವ ಪ್ರದೇಶದಲ್ಲಿ ವಿಶ್ರಾಂತಿ ಪಡೆಯುವಂತೆ ತಜ್ಞರು ಸಲಹೆ ನೀಡಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಈ ಲಕ್ಷಣಗಳ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Mandya: ಲೋಕಪಾವನಿ ನದಿ ಬ್ರಿಡ್ಜ್ ಬಳಿ ನವಜಾತ ಶಿಶುವನ್ನ ಬಿಟ್ಟುಹೋದ ತಾಯಿ; ಮಂಡ್ಯದಲ್ಲಿ ಮನಕಲಕುವ ಘಟನೆ
ಕೆಲವು ಸಮಯದಲ್ಲಿ ಸೋರಿಕೆಯಾದ ಗ್ಯಾಸ್ ಉಸಿರಾಡುವುದರಿಂದ ವ್ಯಕ್ತಿಯ ಮೆದುಳಿಗೆ ಶಾಶ್ವತ ಹಾನಿಯಾಗುವ ಅಪಾಯವಿದೆ. ಸೋರಿಕೆಯಾದ ಅನಿಲವನ್ನು ಕೇವಲ ಕೆಲ ಸಮಯ ಮಾತ್ರ ಉಸಿರಾಡಿದರೆ ತಲೆಸುತ್ತುವಿಕೆ ಸಮಸ್ಯೆ, ತಲೆನೋವು, ಮರೆವು ಉಂಟಾಗಬಹುದು. ಇನ್ನು ಹೆಚ್ಚಿನ ಸಮಯವಿದ್ದರೆ ವ್ಯಕ್ತಿ ಕೋಮಗೆ ಜಾರುವ, ಉಸಿರುಗಟ್ಟಿ ಸಾಯುವ ಸಾಧ್ಯತೆ ಇರುತ್ತೆ.
ಇದನ್ನೂ ಓದಿ: Kailash Kher: ಹಂಪಿ ಉತ್ಸವದಲ್ಲಿ ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ; ಇಬ್ಬರು ಪೊಲೀಸರ ವಶಕ್ಕೆ
ಗ್ಯಾಸ್ ಗೀಸರ್ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ