ತೆಲಂಗಾಣ: ಪ್ರತಿಯೊಂದು ಸಣ್ಣ ಸಮಸ್ಯೆಗೂ ಸಾವೇ ಪರಿಹಾರ ಎಂದು ಭಾವಿಸಿದರೆ ಈ ಜಗತ್ತಿನಲ್ಲಿ ಯಾರೂ ಉಳಿಯುತ್ತಿರಲಿಲ್ಲ. ಆದರೆ ಪ್ರತಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಯಾವುದಾದರೂ ಒಂದು ಪರಿಹಾರವಿದ್ದೆ ಇರುತ್ತದೆ. ಆ ನಿಟ್ಟಿನಲ್ಲಿ ಯೋಚಿಸಬೇಕು ಆದರೆ ಆತ್ಮಹತ್ಯೆ (Sucide) ಪರಿಹಾರವಲ್ಲ. ಇತ್ತೀಚಿಗೆ ತೆಲಂಗಾಣದ (Telangana) ಕಾಮರೆಡ್ಡಿ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಪತ್ನಿ, (Wife) ಚಿಕ್ಕಮ್ಮ, ಚಿಕ್ಕಪ್ಪ, ಸೋದರ ಮಾವ ಮತ್ತು ಶ್ರವಣ್ ಎಂಬಾತನಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮನೆಯ ಗೋಡೆಗಳ (Wall) ಮೇಲೆ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಿಂದ ಕಾಮರೆಡ್ಡಿ ಜಿಲ್ಲೆಯ (Kamareddy) ಜನರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಗಂಡನ ಜೊತೆ ಜಗಳ ಮಾಡಿಕೊಂಡು ಮನೆಬಿಟ್ಟು ಹೋಗಿದ್ದ ಪತ್ನಿ
ಆತ್ಮಹತ್ಯೆಗೊಳಗಾದ ವ್ಯಕ್ತಿಯನ್ನು ನಕ್ಕಮೂತಿ ಹನ್ಮಂಡ್ಲು (36) ಎಂದು ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಕಾಮರೆಡ್ಡಿ ಜಿಲ್ಲೆಯ ಬಿಚ್ಕುಂದ ಮಂಡಲ ಕೇಂದ್ರದ ನಕ್ಕಮೂತಿ ಹನ್ಮಂಡ್ಲು (36) ಮತ್ತು ಜ್ಯೋತಿ ಹಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತ್ನಿ ಜ್ಯೋತಿ ಹಾಗೂ ನಕ್ಕಮೂತಿ ಹನ್ಮಂಡ್ಲು ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಈ ಹಿನ್ನೆಲೆ ಮೂರು ದಿನಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಗೆ ಹೋಗಿದ್ದಳು. ಇದರಿಂದ ಮನನೊಂದ ಹನ್ಮಂಡ್ಲು ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗೋಡೆ ಮೇಲೆ ಆತ್ಮಹತ್ಯೆ ಕಾರಣ ಬರೆದಿದ್ದ ವ್ಯಕ್ತಿ
ನಂತರ ಶವವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಹನ್ಮಂದ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಪ್ರಕರಣ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಹನ್ಮಂಡ್ ಮನೆಯ ಬಳಿ ಇದ್ದ ಗೋಡೆ ಮೇಲೆ ಆತ್ಮಹತ್ಯೆಗೆ ಕಾರಣವೇನೆಂದು ಬರೆದಿರುವುದು ಪತ್ತೆಯಾಗಿದೆ.
ದಯವಿಟ್ಟು ನನ್ನ ಸಾವಿಗೆ ನ್ಯಾಯ ಕೊಡಿಸಿ
ಗೋಡೆ ಬರಹದಲ್ಲಿ ನನ್ನ ಸಾವಿಗೆ ಕಾರಣ ನನ್ನ ಹೆಂಡತಿ ಜ್ಯೋತಿ, ನನ್ನ ಚಿಕ್ಕಮ್ಮ, ನನ್ನ ಚಿಕ್ಕಪ್ಪ, ನನ್ನ ಸೋದರ ಮಾವ, ಜುಕ್ಕಲ್ ಕಾರ್ಮೆಲ್ ಶಾಲೆಯ ಶಿಕ್ಷಕ ಶ್ರವಣ ಗಾಡು ದಯವಿಟ್ಟು ನನ್ನ ಸಾವಿಗೆ ನ್ಯಾಯ ಕೊಡಿಸಿ ಎಂದು ಹನ್ಮಂಡ್ಲು ಬರೆದಿದ್ದಾರೆ. ಇದೀಗ ಮೃತನ ತಾಯಿ ನೀಡಿದ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಹತ್ಯೆಗೈದಿದ್ದ ಪತ್ನಿ
ಇತ್ತೀಚೆಗಷ್ಟೇ ಬೆಂಗಳೂರಿನ ನಂದಿನಿ ಲೇಔಟ್ನಲ್ಲಿ ಪ್ರಿಯಕರನ ಮೇಲಿನ ಮೋಹದ ಬಲೆಗೆ ತಾಳಿ ಕಟ್ಟಿದ ಪತಿಯನ್ನೇ ಕೊಲೆಗೈದಿದ್ದಳು. ಕಳೆದ ಆರು ತಿಂಗಳ ಹಿಂದೆ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಸಂಜಯ್ ಗಾಂಧಿ ನಗರದ ಸ್ಲಂ ನಲ್ಲಿ 35 ವರ್ಷದ ಆಂಜನೇಯ ಏಕಾಏಕಿ ಮನೆಯಲ್ಲಿ ಸಾವನ್ನಪ್ಪಿದ್ದರು. ಈ ವೇಳೆ ಆತನ 31 ವರ್ಷದ ಪತ್ನಿ ಅನಿತಾ ತನ್ನ ಪತಿಗೆ ಹೃದಯಾಘಾತವಾಗಿದ್ದು, ಮನೆಯಲ್ಲೇ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದಳು.
ಇದನ್ನೂ ಓದಿ: Suicide: ಹೆಂಡತಿ ದುಡ್ಡಿನಾಸೆಗೆ ಹೆಣವಾದ ಗಂಡ! ಬೆಂಗಳೂರಲ್ಲಿ ಪತ್ನಿ ಕಾಟಕ್ಕೆ ಬೇಸತ್ತು ಪತಿ ಆತ್ಮಹತ್ಯೆ
ಇದನ್ನೇ ನಿಜ ಎಂದು ನಂಬಿದ್ದ ಕುಟುಂಸ್ಥರು ಮೃತ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಡೆಸಿದ್ದರು. ಆದರೆ ಪ್ರಿಯಕರನೊಂದಿಗಿನ ಅಕ್ರಮ ಸಂಬಂಧ ಮುಂದುವರಿಸಲು ಪತಿ ಅಡ್ಡ ಆಗಿದ್ದರಿಂದ ಆತನನ್ನು ಪ್ಲ್ಯಾನ್ ಮಾಡಿ ಬಾಯ್ ಫ್ರೆಂಡ್ ಜೊತೆ ಸೇರಿ ಹತ್ಯೆಗೈದಿದ್ದಳು. ಪತಿಯ ಸಾವಿನ ಬಳಿಕ ಮಕ್ಕಳನ್ನು ಅವರ ಅಜ್ಜಿಯ ಬಳಿ ಬಿಟ್ಟು ಅನಿತಾ, ಪ್ರಿಯಕರನನ್ನು ಭೇಟಿಯಾಗಲು ಹೋಗುತ್ತಿದ್ದಳು. ಈ ವೇಳೆ ಮಕ್ಕಳು ತಮ್ಮ ತಂದೆಯ ಸಾವಿನ ರಹಸ್ಯವನ್ನು ಅಜ್ಜಿಯ ಎದುರು ಬಿಚ್ಚಿಟ್ಟಾಗ ಅಸಲಿ ಸತ್ಯ ಹೊರಬಿದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ