ಬೆಂಗಳೂರು: ಆ ಏರಿಯಾದಲ್ಲಿ (Area) ನಿನ್ನೆ ಸಂಜೆ ಏನೋ ಒಂಥರಾ ಕೆಟ್ಟವಾಸನೆ. ಯಾವುದೋ ಗಾರ್ಬೇಜ್ ವಾಸನೆ ಅಂದುಕೊಂಡವರಿಗೆ ಕಾದಿತ್ತು ಶಾಕ್. ಹೌದು, ಗೊತ್ತಾಗಿದ್ದು, ಅದು ಕೊಳೆತ ಶವದ ವಾಸನೆ ಅಂತ. ಹಾಗಾದರೆ ಆ ಮೃತದೇಹ (Dead Body) ಯಾರದ್ದು? ಅದು ಕೊಲೆನಾ (Murder) ಅನ್ನೋ ಬಗ್ಗೆ ಡೀಟೆಲ್ಸ್ ಇಲ್ಲಿದೆ. ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ (Bandepalya Police) ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. ಹೌದು, ಏಪ್ರಿಲ್ 28ರ ಸಂಜೆ ಈ ಏರಿಯಾದಲ್ಲೇ ಒಂಥರ ಕೆಟ್ಟ ವಾಸನೇ ಬರುತಿತ್ತು. ಒಂದಷ್ಟು ಜನ ಯಾವುದೋ ಗಾರ್ಬೇಜ್ ವಾಸನೆ ಅಥವಾ ಸ್ಯಾನಿಟರಿ ಪೈಪ್ ಹೊಡೆದು ಹೋಗಿರಬೇಕು ಅಂದುಕೊಂಡಿದ್ದರು. ಆದರೆ ಈ ಬಿಲ್ಡಿಂಗ್ನ ಮೂರನೇ ಮಹಡಿಯಲ್ಲಿ (Third Floor) ವಾಸವಿದ್ದವರು ಮೂರ್ನಾಲ್ಕು ದಿನದಿಂದ ಕಾಣಿಸುತ್ತಿರಲಿಲ್ಲ. ಅಲ್ಲದೆ ಅಲ್ಲೇ ಹೆಚ್ಚು ವಾಸನೇ ಬರುತ್ತಿದ್ದರಿಂದ ಸ್ಥಳೀಯರು (Locals) ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪರಿಶೀಲನೆ ನಡೆಸಿದಾಗ ಜಬೀನಾ ಹಾಗೂ ರೆಜಿಯಾ ಸುಲ್ತಾನ ಅನ್ನೋ ತಾಯಿ-ಮಗಳು (Mother-daughter) ಮೃತದೇಹ ಪತ್ತೆಯಾಗಿತ್ತು.
ಇದು ಆತ್ಮಹತ್ಯೆಯೋ, ಕೊಲೆಯೋ ಅನ್ನೋ ಶಂಕೆ!
ಜಬೀನಾ, ಮಗಳು ರೆಜಿಯಾ ಸುಲ್ತಾನ ಕೆಲ ವರ್ಷದಿಂದ ಇದೇ ಫ್ಲಾಟ್ನಲ್ಲಿ ವಾಸವಿದ್ದರು. ರೆಜಿಯಾ ಸುಲ್ತಾನಗೆ ಮದುವೆ ಮಾಡಿಕೊಟ್ಟಿದ್ದರು. ದಾಂಪತ್ಯ ಕಲಹ ಹಿನ್ನೆಲೆ ತಾಯಿ ಜೊತೆಗೆ ವಾಸವಿದ್ದಳು. ಜೀವನ ನಡೆಸಲು ಕಾಲ್ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು.
ಆದರೆ ಗಂಡ ಆಗಾಗ ಬಂದು ಗಲಾಟೆ ಮಾಡುತ್ತಿದ್ದನಂತೆ. ಹೀಗಿರುವಾಗ ನಿನ್ನೆ ಇಬ್ಬರ ಮೃತದೇಹ, ಹಾಗೂ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಈ ಬಗ್ಗೆ ತನಿಖೆ ನಡೆಸಿದಾಗ ಬಲವಂತವಾಗಿ ಕೈಗಳನ್ನ ಕಟ್ಟಿ ನೇಣಿಗೆ ಹಾಕಿರುವುದು ಪ್ರಾಥಮಿಕವಾಗಿ ಗೊತ್ತಾಗಿದ್ದು, ಇದು ಜೋಡಿ ಕೊಲೆ ಅನ್ನೋ ಶಂಕೆ ಮೂಡಿದೆ.
ಈ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಅವರು, ಸಂಜೆ ನಮಗೆ ಘಟನೆ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಬಿಲ್ಡಿಂಗ್ನ ಮೂರನೇ ಮಹಡಿಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿರುವುದು ತಿಳಿದುಬಂತು. ಮಗಳ ಕೈಯನ್ನು ಹಿಂದಕ್ಕೆ ಕಟ್ಟಿ ಬಲವಂತವಾಗಿ ನೇಣಿಗೆ ಹಾಕಿದ್ದಾರೆ. ಅದೇ ಸ್ಥಳದಲ್ಲಿ ಅವರ ತಾಯಿಯ ಮೃತದೇಹ ಬೆಡ್ ಮೇಲೆ ಪತ್ತೆಯಾಗಿದೆ. ಐಪಿಸಿ ಸೆಕ್ಷನ್ 302ರ ಅನ್ವಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಮೃತರಲ್ಲಿ ಮಗಳು ಕಾಲ್ ಸೆಂಟರ್ವೊಂದರಲ್ಲಿ ಬಹಳ ದಿನಗಳಿಂದ ಕೆಲಸ ಮಾಡುತ್ತಿದ್ದರು. ಅವರ ಗಂಡ ಕೂಡ ಬೇರೆ ಫೀಲ್ಡ್ನಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಗಂಡ-ಹೆಂಡತಿ ನಡುವೆ ಜಗಳವಿದ್ದ ಕಾರಣ ತಾಯಿ-ಮಗಳು ಇಬ್ಬರು ಈ ಮನೆಯಲ್ಲಿ ವಾಸ ಮಾಡುತ್ತಿದ್ದರು. ಮುಂದಿನ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಡಿಸಿಪಿ ವಿವರಿಸಿದ್ದಾರೆ.
ಸದ್ಯ ಬಂಡೆಪಾಳ್ಯ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದು ರೆಜಿಯಾ ಸುಲ್ತಾನಳ ಗಂಡನನ್ನ ವಶಕ್ಕೆ ಪಡೆದು, ನಾಲ್ಕು ತಂಡಗಳನ್ನ ರಚಿಸಿ ತನಿಖೆ ತೀವ್ರಗೊಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ