ಬೆಲ್ಜಿಯಂ: ದಿನೇ ದಿನೇ ಉಗ್ರರ ಅಟ್ಟಹಾಸ ಹೆಚ್ಚಾಗುತ್ತಿದೆ. ಹಾಡಹಗಲೇ ಜನರಿರುವುದನ್ನು ಲೆಕ್ಕಿಸದೇ ಉಗ್ರರು ತಮ್ಮ ದುಷ್ಕೃತ್ಯವನ್ನು ಮುಂದುವರಿಸುತ್ತಿದ್ದಾರೆ. ಬೆಲ್ಜಿಯಂನ (Belgium) ಬ್ರಸೆಲ್ಸ್-ದಕ್ಷಿಣ ನಿಲ್ದಾಣದಲ್ಲಿ (Brussels South Station) ವ್ಯಕ್ತಿಯೋರ್ವ ಚಾಕು ಹಿಡಿದು ಸ್ಥಳೀಯರನ್ನು ಕ್ರೂರವಾಗಿ ಇರಿದು ಹತ್ಯೆಗೈದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಪ್ಪು ಜಾಕೆಟ್ ಧರಿಸಿದ್ದ ಉಗ್ರ ಅಲ್ಲಾಹು ಅಕ್ಬರ್ (Allah hu Akbar) ಎಂದು ಕೂಗುತ್ತಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ. ಇಷ್ಟೇ ಅಲ್ಲದೇ ರೈಲ್ವೆ ನಿಲ್ದಾಣದಲ್ಲಿ (Raliway Station) ಕುಳಿತಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
Belgium
CCTV footage shows yesterday’s terror attack at Brussels-South station when a knife-welding Jihadi migrant shouting "Allah hu Akbar" started slashing commuters. pic.twitter.com/6EQeNL47mp
— Megh Updates 🚨™ (@MeghUpdates) January 18, 2023
ಕೈಯಲ್ಲಿ ಚಾಕು ಹಿಡಿದು ಅಲ್ಲಾಹು ಅಕ್ಬರ್ ಎನ್ನುತ್ತಾ ವ್ಯಕ್ತಿ ಮೇಲೆ ಹಲ್ಲೆ
ಮೊದಲಿಗೆ ತನ್ನ ಬ್ಯಾಗ್ ಅನ್ನು ನೆಲದ ಮೇಲೆ ಇಟ್ಟ ಉಗ್ರ, ಕೈಯಲ್ಲಿ ಚಾಕು ಹಿಡಿದು ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ವ್ಯಕ್ತಿ ತಪ್ಪಿಸಿಕೊಳ್ಳಲು ಓಡಿ ಹೋಗಲು ಪ್ರಯತ್ನಿಸಿದರೂ ಕೂಡ, ಉಗ್ರ ಬಿಡದೇ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಲ್ಲಿದ್ದ ಜನರು ಮಾತ್ರ ವ್ಯಕ್ತಿಯ ಸಹಾಯಕ್ಕೆ ಧಾವಿಸಲಿಲ್ಲ.
ಇತ್ತೀಚೆಗೆ ಪ್ರೀತಿ ನಿರಾಕರಿಸಿದಕ್ಕೆ ಹಾಡಹಗಲೇ ಯುವತಿ ಕೊಲೆ
ಇತ್ತೀಚೆಗಷ್ಟೇ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಹಾಡಹಗಲೇ ಯುವತಿಗೆ ಚಾಕು ಇರಿದು ಕೊಲೆ ಮಾಡಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಂಡೂರಿನಲ್ಲಿ ನಡೆದಿತ್ತು. 23 ವರ್ಷದ ಜಯಶ್ರೀ ಎಂಬ ಯುವತಿಯನ್ನು ಕನಕಮಜಲಿನ ಉಮೇಶ ಹತ್ಯೆಗೈದಿದ್ದಾನೆ. ಕೆಲವು ದಿನಗಳಿಂದ ಜಯಶ್ರೀ ಹಾಗೂ ಉಮೇಶ್ ಪ್ರೀತಿಯಲ್ಲಿದ್ದರು ಎನ್ನಲಾಗಿದ್ದು, ಉಮೇಶನ ನಡತೆ ಸರಿಯಿಲ್ಲ ಎಂದು ಯುವತಿ ಆತನಿಂದ ಅಂತರ ಕಾಯ್ದುಕೊಡಿದ್ದಳು. ಇದರಿಂದ ಕುಪಿತಗೊಂಡ ಉಮೇಶ ಕೋಪದಲ್ಲಿ ಯುವತಿಯ ಕೊಲೆ ಮಾಡಿದ್ದನು.
ಚಿಕಿತ್ಸೆ ಫಲಾಕಾರಿಯಾಗದೇ ಕೊನೆಯುಸಿರೆಳೆದಿದ್ದ ಯುವತಿ
ಪುತ್ತೂರು ತಾಲೂಕಿನ ಮುಂಡೂರು ಗ್ರಾಮದವಳಾದ ಜಯಶ್ರೀ ಬಿ.ಎಸ್.ಸಿ. ಪದವಿ ಮುಗಿಸಿ ಮನೆಯಲ್ಲಿಯೆ ಇದ್ದರು. ಬೆಳಗ್ಗೆ ಹೊತ್ತು ಯುವತಿಯ ತಾಯಿ ಗಿರಿಜಾ ತೋಟಕ್ಕೆ ಹೋಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಆರೋಪಿ ಚಾಕು ಇರಿದು ಪರಾರಿಯಾಗಿದ್ದನು. ಹೊಟ್ಟೆಯಲ್ಲಿ ಗಾಯ ಹಾಗೂ ರಕ್ತಸ್ರಾವವನ್ನು ಆಗುತ್ತಿರುವುದನ್ನು ನೋಡಿದ ಗಿರಿಜಾ ತಕ್ಷಣ ಆಟೋದಲ್ಲಿ ಜಯಶ್ರೀಯನ್ನ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಮಧ್ಯಾಹ್ನ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಜಯಶ್ರೀ ಮೃತಪಟ್ಟಿದ್ದರು.
ಈ ಹಿಂದೆ ವಿದ್ಯಾರ್ಥಿಗೆ ಥಳಿಸಿ ಅಲ್ಲಾಹು ಅಕ್ಬರ್ ಘೋಷಣೆ ಕೂಗುವಂತೆ ಹಿಂಸೆ
ಈ ಹಿಂದೆ ಕಳೆದ ವರ್ಷ ಹೈದರಾಬಾದ್ ಕಾನೂನು ಕಾಲೇಜಿನ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಗಳ ಗುಂಪೊಂದು ಕಾನೂನು ವಿದ್ಯಾರ್ಥಿಯನ್ನು ಥಳಿಸಿ ಅಲ್ಲಾಹು ಅಕ್ಬರ್ ಘೋಷಣೆಗಳನ್ನು ಕೂಗುವಂತೆ ಒತ್ತಾಯಿಸಿದ ಘಟನೆಯ ವಿಡಿಯೋ ವೈರಲ್ ಆಗಿತ್ತು. ನಂತರ ಘಟನೆಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧನಕ್ಕೆ ಒಳಪಡಿಸಲಾಗಿತ್ತು.
ವಿದ್ಯಾರ್ಥಿ ಕೈ ತಿರುಗಿಸಿ ಅಮಾನುಷ ಹಲ್ಲೆ
ಹೈದರಾಬಾದಿನ ಐಸಿಎಫ್ಎಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ (ಐಎಫ್ಹೆಚ್ಇ)ನಲ್ಲಿ ಮೂರನೇ ವರ್ಷದ ವಿದ್ಯಾರ್ಥಿ ಹಿಮಾಂಕ್ ಬನ್ಸಾಲ್ ಎಂಬಾತನಿಗೆ ಕಪಾಳಮೋಕ್ಷ ಮಾಡಿ, ಒದ್ದು, ಆತನ ಕೈಗಳನ್ನು ತಿರುಚಿ ಅಮಾನುಷ ರೀತಿಯಲ್ಲಿ ಚಿತ್ರಹಿಂಸೆ ನೀಡಿದ ದೃಶ್ಯ ರೆಕಾರ್ಡ್ ಆಗಿತ್ತು. ಆರೋಪಿಗಳು ಆತನಿಗೆ “ಅಲ್ಲಾಹು ಅಕ್ಬರ್” ಘೋಷಣೆಗಳನ್ನು ಹೇಳುವಂತೆ ಹಿಂಸೆ ನೀಡಿದ್ದರು.
ಇದನ್ನೂ ಓದಿ: Ayman al-Zawahiri: ಮಂಡ್ಯದ ಮುಸ್ಕಾನ್ ಬೆಂಬಲಿಸಿದ್ದ ಅಲ್-ಜವಾಹಿರಿ ಮಟಾಷ್, ಡಾಕ್ಟರ್ ಆಗಿದ್ದಾತ ಉಗ್ರ ಆಗಿದ್ದು ಹೀಗೆ!
ವಿದ್ಯಾರ್ಥಿಯ ಪರ್ಸ್ ಕೂಡ ಕದ್ದಿದ್ದ ಆರೋಪಿಗಳು
ನಾವು ಅವನ ಸಿದ್ಧಾಂತವನ್ನು ಸರಿಪಡಿಸಲು ಬಯಸುತ್ತೇವೆ. ನಾವು ಅವನನ್ನು ಕೋಮಾಕ್ಕೆ ಕಳುಹಿಸುತ್ತೇವೆ, ಅವನು ಹೊಸ ಜಗತ್ತನ್ನು ನೆನಪಿಸಿಕೊಳ್ಳಬೇಕು ಎಂದು ಆರೋಪಿಯೊಬ್ಬ ವಿಡಿಯೋದಲ್ಲಿ ಹೇಳುವುದನ್ನು ಕೇಳಬಹುದು. ವಿದ್ಯಾರ್ಥಿಯ ಪರ್ಸ್ ಅನ್ನೂ ಆರೋಪಿಗಳು ಎಗರಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ