ಮೀರತ್: ಉತ್ತರ ಪ್ರದೇಶದ (Uttar Pradesh ) ಮೀರತ್ನಲ್ಲಿ (Meerut) ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ವಿರುದ್ಧ ಮಹಿಳೆಯೊಬ್ಬರು ದಿಟ್ಟತನ ಪ್ರದರ್ಶಿಸಿ ಮಾನ ಮತ್ತು ಪ್ರಾಣ ಎರಡನ್ನು ಉಳಿಸಿಕೊಂಡಿದ್ದಾರೆ. ಆರೋಪಿ ಮಹಿಳೆಯನ್ನು ಬಲವಂತವಾಗಿ ಚುಂಬಿಸಲು ಯತ್ನಿಸಿದ್ದಾನೆ. ಆದರೆ ಆಕೆ ಯುವಕನ ತುಟಿಗಳನ್ನು ತನ್ನ ಹಲ್ಲುಗಳಿಂದ ಕಚ್ಚಿ ಕತ್ತರಿಸಿ ಹಾಕಿದ್ದಾಳೆ. ಬಳಿಕ ಯುವಕನ ಬಾಯಿಯಿಂದ ರಕ್ತ ಹರಿಯತೊಡಗಿದೆ. ಯುವಕ ನೋವಿನಿಂದ ನರಳಾಡಲು ಶುರು ಮಾಡಿದ್ದಾನೆ. ಈ ಸಂದರ್ಭದಲ್ಲಿ ಮಹಿಳೆ ಆತನ ವಿರುದ್ಧ ಪ್ರತಿಭಟಿಸಿ ಕಿರಾಚಾಡಿದ್ದಾರೆ. ಬಳಿಕ ಸುತ್ತಮುತ್ತಲ ಜನರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಹಾಗೂ ಸ್ಥಳದಲ್ಲಿ ಬಿದ್ದಿದ್ದ ಯುವಕ ಕತ್ತರಿಸಿದ ತುಟಿಯನ್ನು ಕವರ್ನಲ್ಲಿ ಹಾಕಿಕೊಂಡು ಹೋಗಿದ್ದಾರೆ. ಪೊಲೀಸರು ಮೊದಲು ಆತನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ನಂತರ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Shocking News: 58 ವರ್ಷದ ಮಹಿಳೆಯ ಭೀಕರ ಕೊಲೆ, ಶವದ ಮೇಲೆ ಅತ್ಯಾಚಾರ ಮಾಡಿದ 16ರ ಬಾಲಕ!
ಕೆಲಸ ಮಾಡುತ್ತಿದ್ದ ವೇಳೆ ಅತ್ಯಾಚಾರಕ್ಕೆ ಯತ್ನ
ಮಹಿಳೆ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಆ ಸಂದರ್ಭದಲ್ಲಿ ಯುವಕ ಏಕಾಏಕಿ ಹಿಂದಿನಿಂದ ಬಂದು ಆಕೆಯನ್ನು ಹಿಡಿದುಕೊಂಡಿದ್ದಾನೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಆರೋಪಿ ಆ ಮಹಿಳೆಯನ್ನು ನೆಲಕ್ಕೆ ಕೆಡವಿ ಒಂದು ಕೈಯಲ್ಲಿ ಆಕೆಯ ಬಾಯಿ ಮುಚ್ಚಿ ಬಟ್ಟೆಗಳನ್ನು ಹರಿಯಲು ಪ್ರಾರಂಭಿಸಿದ್ದಾನೆ. ಸಂತ್ರಸ್ತೆ ಯುವಕನಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಯುವಕ ಬಲವಂತವಾಗಿ ಚುಂಬಿಸಲು ಯತ್ನಿಸಿದ್ದು, ಆಗ ಮಹಿಳೆ ಆತನ ತುಟ್ಟಿಯನ್ನು ಬಲವಾಗಿ ಕಚ್ಚಿ ಆತನಿಂದ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಒಂಟಿಯಾಗಿದ್ದರಿಂದ ಅತ್ಯಾಚಾರಕ್ಕೆ ಯತ್ನ
ಶನಿವಾರ ಮಧ್ಯಾಹ್ನ ನಾನು ಜಮೀನಿನಲ್ಲಿ ಕೆಲಸಕ್ಕೆ ಮಾಡುತ್ತಿದ್ದೆ. ಈ ಸಮಯದಲ್ಲಿ ಸುತ್ತಮುತ್ತ ಜನ ಇರಲಿಲ್ಲ. ಸುತ್ತಲೂ ಮೌನ ಆವರಿಸಿತ್ತು. ಅಷ್ಟರಲ್ಲಿ ಹಿಂದಿನಿಂದ ಬಂದ ಆರೋಪಿ ಆತ ನನ್ನನ್ನು ಬಲವಾಗಿ ಹಿಡಿದುಕೊಂಡ, ಇದರಿಂದ ತೀವ್ರ ಆತಂಕವಾಯಿತು. ನನ್ನನ್ನು ಯಾರು ಹಿಡಿದುಕೊಂಡಿದ್ದಾರೆ ಎನ್ನುವುದೇ ನನಗೆ ಗೊತ್ತಾಗಲಿಲ್ಲ. ಕೂಗಲು ಯತ್ನಿಸಿದೆ. ಆದರೆ ಆರೋಪಿ ನನ್ನ ಬಾಯಿ ಹಿಡಿದು ಹೊಲದೊಳಗೆ ಎಳೆದುಕೊಂಡು ಹೋದ ಎಂದು ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾರೆ.
ತುಟಿ ಕಚ್ಚಿ ಮಾನ ಉಳಿಸಿಕೊಂಡ ಮಹಿಳೆ
ಆತ ನನ್ನ ಬಟ್ಟೆಯನ್ನು ಹರಿಯತೊಡಗಿದ, ಗಾಬರಿಯಾಗಿದ್ದ ನಾನು ರಕ್ಷಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ಯುವಕ ಬಲವಂತವಾಗಿ ಚುಂಬಿಸಲು ಪ್ರಾರಂಭಿಸಿದ, ಇದರಿಂದ ಕೋಪ ಮತ್ತು ಗಾಬರಿಯ ನಡುವೆ ನನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಆತನ ತುಟಿಗಳನ್ನು ಕಚ್ಚಿ ಕತ್ತರಿಸಿದೆ. ತುಟಿಗಳು ಕತ್ತರಿಸಿದ ತಕ್ಷಣ ಅವರು ನೋವಿನಿಂದ ನರಳಲು ಶುರುಮಾಡಿದ. ನಾನು ಆತನಿಂದ ಬಿಡಿಸಿಕೊಂಡು ಕೂಗಿಕೊಂಡೆ, ಜನರು ಬಂದು ಆತನನ್ನು ಹಿಡಿದುಕೊಂಡರು ಎಂದು ವಿವರಿಸಿದ್ದಾಳೆ.
ಆರೋಪಿ ಮೋಹಿತ್ ವಿರುದ್ಧ ದೂರು
ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಯುವಕನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ವಿಚಾರಣೆ ವೇಳೆ ತನ್ನ ಹೆಸರನ್ನು ಮೋಹಿತ್ ಸೈನಿ ಎಂದು ಹೇಳಿದ್ದು, ಆತ ಲಾವಾಡದ ಮೊಹಲ್ಲಾ ಸೈಯಾನ್ ನಿವಾಸಿ ಎಂದು ತಿಳಿಸಿದ್ದಾನೆ. ಅವನು ಯಾವ ಉದ್ದೇಶಕ್ಕಾಗಿ ಗ್ರಾಮಕ್ಕೆ ಬಂದಿದ್ದನು ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಸಂತ್ರಸ್ತೆ ಯಾರೆಂಬುದು ಆತನಿಗೆ ಮೊದಲೇ ತಿಳಿದಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ