ಮಂಡ್ಯ: ಕುಖ್ಯಾತ ಮನೆಗಳ್ಳರ ತಂಡವನ್ನು ಬಂಧಿಸುವಲ್ಲಿ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು (Mandya Police) ಯಶಸ್ವಿಯಾಗಿದ್ದಾರೆ. ಮೊದಲಿಗೆ ಪೊಲೀಸರು ಆರೋಪಿಗಳನ್ನು (Accused) ಒಂದು ಪ್ರಕರಣದಲ್ಲಿ ಬಂಧಿಸಿದ್ದರು. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ತಮ್ಮ ಹಳೆಯ ಪ್ರಕರಣಗಳನ್ನು (Cases) ಬಾಯಿ ಬಿಟ್ಟಿದ್ದಾರೆ. ವಿಚಾರಣೆ ವೇಳೆ ಬರೋಬ್ಬರಿ 9 ಪ್ರಕರಣಗಳು ಬೆಳಕಿಗೆ ಬಂದಿವೆ. ಮೊದಲಿಗೆ ಒಂಟಿ ಮನೆಗಳನ್ನು ಸರ್ವೇ ಮಾಡುತ್ತಿದ್ದ ಈ ಗ್ಯಾಂಗ್ ಸಂಚು ಹಾಕಿ ಕಳ್ಳತನ ಮಾಡಿತ್ತು. ಮಹಾರಾಷ್ಟ್ರದ ಥಾಣಾ ಮೂಲದ ಗ್ಯಾಂಗ್ ಇದಾಗಿದ್ದು, ಕಳ್ಳತನ (Theft) ಮಾಡಲು ತಂಡದ ಲೀಡರ್ ರಾಜ್ಯಕ್ಕೆ ವಿಮಾನದಲ್ಲಿ ಬರುತ್ತಿದ್ದನು.
ವಿಜಯ್ ಸುರೇಶ್ ಬೋಸ್ಲೆ ಜೈಲಿನಲ್ಲಿ ಪರಿಚಯವಾಗಿದ್ದವರ ಜೊತೆ ಸ್ನೇಹ ಬೆಳೆಸಿಕೊಂಡು ಗ್ಯಾಂಗ್ ಕಟ್ಟಿಕೊಂಡಿದ್ದನು. ಜೈಲಿನಲ್ಲಿ ಮಂಡ್ಯದ ಶ್ರೀನಿವಾಸ್ ಎಂಬವನ ಪರಿಚಯ ವಿಜಯ್ ಸುರೇಶ್ ಬೋಸ್ಲೆಗೆ ಆಗಿತ್ತು. ಶ್ರೀನಿವಾಸ್ ಸಹಾಯದಿಂದ ಮಂಡ್ಯ ಭಾಗದಲ್ಲಿ ವಿಜಯ್ ಮನೆಗಳ್ಳತನಕ್ಕೆ ಮುಂದಾಗುತ್ತಿದ್ದನು.
ಒಂಟಿ ಮನೆಗಳ ಸರ್ವೇ
ವಿಜಯ್ ಸುರೇಶ್ ಬೋಸ್ಲೆ ಈ ಗ್ಯಾಂಗ್ನ ನಾಯಕ. ಈತನ ಅನತಿಯಂತೆಯೇ ಒಂಟಿ ಮನೆಗಳಿಗೆ ಕನ್ನ ಹಾಕುತ್ತಿದ್ದರು. ವಿಜಯ್ ಸುರೇಶ್ ಬೋಸ್ಲೆ ಕಳ್ಳತನ ಮೊದಲೂ ಒಂಟಿ ಮನೆಗಳ ಸರ್ವೇ ಮಾಡಿಸುತ್ತಿದ್ದನು. ನಂತರ ಕಳ್ಳತನದ ರೂಪುರೇಷ ಸಿದ್ಧ ಮಾಡಿಕೊಳ್ಳುತ್ತಿದ್ದನು.
ಸದ್ಯ ಮಂಡ್ಯ ಗ್ರಾಮಾಂತರ ಪೊಲೀಸರು ವಿಜಯ್ ಸುರೇಶ್ ಬೋಸ್ಲೆ, ಶ್ರೀನಿವಾಸ್, ರಕ್ಷಕ್ ಪೂಜಾರಿ ಮತ್ತು ಪ್ರವೀಣ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರಿಂದ 11 ಲಕ್ಷ ಮೌಲ್ಯದ 183 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ವರ್ಗಾವಣೆಯಾದ್ರೂ ಫೈಲ್ ತರಿಸಿಕೊಂಡ ತಹಶೀಲ್ದಾರ್
ಕೆಆರ್ಎಸ್ ಪಕ್ಷದವರನ್ನು ಕಂಡು ಸರ್ಕಾರಿ ಅಧಿಕಾರಿ ಓಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಕೆಆರ್ ಪೇಟೆ ತಹಶೀಲ್ದಾರ್ ರೂಪ ವರ್ಗಾವಣೆಯಾಗಿದ್ದರು. ವರ್ಗಾವಣೆಯಾದರೂ ರಾಜಸ್ವ ನಿರೀಕ್ಷಕ ಪುರುಷೋತ್ತಮ್ ಎಂಬವರು ಫೈಲ್ಗಳನ್ನು ರೂಪಾ ಅವರ ಬಳಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ಕೆಆರ್ಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಇದನ್ನೂ ಓದಿ: Bengaluru: ಪಾಗಲ್ ಪ್ರೇಮಿಯ ಕಿರುಕುಳಕ್ಕೆ ನೇಣಿಗೆ ಕೊರಳೊಡ್ಡಿದ ಯುವ ವೈದ್ಯೆ
ರೂಪಾ ನಿವಾಸಕ್ಕೆ ಫೈಲ್ ತರುವ ವೇಳೆಯೇ ಕಾರ್ಯಕರ್ತರು ಪುರುಷೋತ್ತಮ್ ಅವರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಕೆಆರ್ಎಸ್ ಕಾರ್ಯಕರ್ತರನ್ನು ನೋಡುತ್ತಿದ್ದಂತೆ ಪುರುಷೋತ್ತಮ್ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಪುರುಷೋತ್ತಮ್ ಅವರನ್ನ ಬೆನ್ನಟ್ಟಿ ಹಿಡಿದ ಕಾರ್ಯಕರ್ತರು ತರಾಟೆ ತೆಗೆದುಕೊಂಡಿದ್ದಾರೆ.
ಕೊರಳಲ್ಲಿ ಹಾವು, ಕೈಯಲ್ಲಿ ನೋಟು; ಚುನಾವಣೆ ಭವಿಷ್ಯ ನುಡಿದ ವ್ಯಕ್ತಿ
ರಾಯಚೂರಿನಲ್ಲಿ ವ್ಯಕ್ತಿ ಮನೆಗೆ ಬಂದ ಹಾವನ್ನು ಕೊರಳಲ್ಲಿ ಸುತ್ತಿಕೊಂಡು ದೇವದುರ್ಗ ವಿಧಾನಸಭಾ ಕ್ಷೇತ್ರದ ಬಗ್ಗೆ ಭವಿಷ್ಯ ನುಡಿದಿದ್ದಾನೆ. ವ್ಯಕ್ತಿ ಕೊರಳಲ್ಲಿ ಹಾವು ಸುತ್ತಿಕೊಂಡು ಭವಿಷ್ಯ ನುಡಿದ ವಿಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸಮುದ್ರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಹಾವು ಸುತ್ತಿಕೊಂಡ ವ್ಯಕ್ತಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಗೆಲವು ಸಾಧಿಸುತ್ತಾರೆ ಎಂದು ಹೇಳಿದ್ದಾನೆ.
ಹಾಲಿ ಶಾಸಕ ಕೆ.ಶಿವನಗೌಡ ವಿರುದ್ಧ ನೀವು ಗೆಲ್ಲಬೇಕು. ನಂತರ ಮಂತ್ರಿ ಆಗಬೇಕು ಅಂತಾನೂ ಹೇಳಿದ್ದಾನೆ. ಹಾವು ಮತ್ತು ಕೈಯಲ್ಲಿ 50 ರೂಪಾಯಿ ನೋಟು ಹಿಡಿದು ವ್ಯಕ್ತಿಯ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ. ಆದರೆ ವ್ಯಕ್ತಿ ಗುರುತು ಪತ್ತೆಯಾಗಿಲ್ಲ. ಈ ಬಾರಿ ಜೆಡಿಎಸ್ನಿಂದ ಕಣಕ್ಕಿಳಿಯಲು ಕರೆಮ್ಮ ಮುಂದಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ