ಪುಣೆ: ಸಮಾಜದಲ್ಲಿನ ಸಂಬಂಧಗಳಲ್ಲಿ ಪತಿ ಮತ್ತು ಪತ್ನಿಯ (Husband and Wife) ಸಂಬಂಧವು (Relationship) ಅತ್ಯಂತ ಪವಿತ್ರ ಸಂಬಂಧವಾಗಿದೆ. ಪತ್ನಿಯಾದವಳು ತನ್ನ ಗಂಡನ ಕಷ್ಟದಲ್ಲಿ ಪಾಲು ಪಡೆದುಕೊಳ್ಳುತ್ತಾಳೆ. ಅವಳು ಪತಿಗಾಗಿ ಯಾವುದೇ ತ್ಯಾಗಕ್ಕೂ ಹಿಂಜರಿಯುವುದಿಲ್ಲ. ಆದರೆ, ಕಾಲ ಬದಲಾದಂತೆ ಆ ದಾಂಪತ್ಯ ಬಂಧಕ್ಕೆ ಮಸಿ ಬಳಿಯುವ ಘಟನೆಗಳು ದಿನದಿಂದ ದಿನಕ್ಕೆ ಬೆಳಕಿಗೆ ಬರುತ್ತಿವೆ. ಕೆಲವು ಗಂಡಂದಿರು ತಮ್ಮ ಹೆಂಡತಿಯನ್ನು ಭೋಗದ ವಸ್ತುಗಳಂತೆ ನೋಡುತ್ತಿದ್ದಾರೆ. ಪತ್ನಿಯರನ್ನು ತಮ್ಮ ಕೈಯಲ್ಲಿರುವ ಬೊಂಬೆಗಳನ್ನಾಗಿ ಮಾಡಿಕೊಂಡು ಅವರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ. ಪುಣೆಯಲ್ಲಿ (Pune) ಪತಿಯೊಬ್ಬ ತನ್ನ ಪತ್ನಿಯನ್ನು ವ್ಯಾಪಾರದ ವಸ್ತುವನ್ನಾಗಿ ಮಾಡಿಕೊಂಡಿದ್ದಾನೆ. ತನ್ನ ಕೆಲಸದಲ್ಲಿ ಬಡ್ತಿ (Promotion) ಪಡೆಯಲು ಹೆಂಡತಿಯನ್ನು ತನ್ನ ಬಾಸ್ ಜೊತೆ ಮಲಗುವಂತೆ ಒತ್ತಾಯಿಸಿದ್ದಾನೆ. ಇಷ್ಟೇ ಅಲ್ಲದೆ ಆತನ ಸಹೋದರ ಕೂಡ ಆಕೆಗೆ ಹಲವು ಬಾರಿ ಲೈಂಗಿಕ ಕಿರುಕುಳ ( Harassment)ನೀಡಿದ್ದಾನೆ. ಇವರ ಚಿತ್ರಹಿಂಸೆ ಸಹಿಸಲಾಗದೆ ಮಹಿಳೆ ಕೊನೆಗೆ ನ್ಯಾಯಾಲಯದ (Court) ಮೆಟ್ಟಿಲೇರಿದ್ದಾಳೆ.
ಮಧ್ಯಪ್ರದೇಶದ ಇಂದೋರ್‌ನ ಮಹಿಳೆಯೊಬ್ಬರು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಅಮಿತ್ ಛಾಬ್ರಾ ಎಂಬುವವರನ್ನ ವಿವಾಹವಾಗಿದ್ದಾರೆ. ಅವರಿಗೆ 12 ವರ್ಷದ ಮಗಳಿದ್ದಾಳೆ. ಮದುವೆಯಾದ ನಂತರ ಸ್ವಲ್ಪ ದಿನ ಈ ದಂಪತಿ ಚೆನ್ನಾಗಿ ಸಂಸಾರ ನಡೆಸಿದ್ದಾರೆ. ಆದರೆ ಅಮಿತ್ ನಿಧಾನವಾಗಿ ಕೆಟ್ಟ ಚಟಗಳಿಗೆ ದಾಸನಾಗಿದ್ದಾನೆ.
ಬಾಸ್ ಆಸೆ ಪೂರೈಸುವಂತೆ ಪತಿಯಿಂದ ಒತ್ತಾಯ
ಅಮಿತ್ ತನ್ನ ಬಾಸ್ ಬಳಿ ಸಂಬಳ ಸಾಕಾಗುತ್ತಿಲ್ಲ, ವೇತನ ಹೆಚ್ಚು ಮಾಡುವಂತೆ ಕೇಳಿದ್ದಾನೆ. ಅದಕ್ಕೆ ಮೇಲಿನ ಅಧಿಕಾರಿ ನಿನ್ನ ಹೆಂಡತಿಯನ್ನು ನನ್ನ ಜೊತೆ ಮಲಗಲು ಕಳುಹಿಸು ಬಡ್ತಿ ಜೊತೆಗೆ ಹಲವು ಸೌಲಭ್ಯ ಸಿಗುತ್ತದೆ ಎಂದು ಹೇಳಿದ್ದಾನೆ. ವಿಲಕ್ಷಣವಾದ ಬೇಡಿಕೆಯಿಂದ ಕೋಪಗೊಳ್ಳಬೇಕಿದ್ದ ಅಮಿತ್, ಅದರ ಬದಲಾಗಿ ತನ್ನ ಹೆಂಡತಿಯನ್ನೆ ಬಾಸ್ ಜೊತೆ ಮಲಗುವಂತೆ ಒತ್ತಾಯಿಸಿದ್ದಾನೆ. ಒಂದು ರಾತ್ರಿ ಬಾಸ್ ಜೊತೆ ಕಳೆದರೆ ಬಡ್ತಿ ಜೊತೆಗೆ ಮತ್ತಿತರ ಸೌಲಭ್ಯ ಸಿಗುತ್ತದೆ ಎಂದು ಅಮಿತ್ ಪತ್ನಿಗೆ ಬಲವಂತ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Crime News: ಉದ್ಯೋಗ ಕೊಡಿಸುವುದಾಗಿ ನಂಬಿಸಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿದ ಪುರುಷ ನರ್ಸ್ ಬಂಧನ!
ಗಂಡ-ಮೈದುನನಿಂದ ನರಕಯಾತನೆ
ಗಂಡನ ಬೇಡಿಕೆಯಿಂದ ಆಘಾತಕ್ಕೆ ಒಳಗಾದ ಪತ್ನಿ ಈ ಕೆಲಸಕ್ಕೆ ಒಪ್ಪಲಿಲ್ಲ. ಇದರಿಂದ ಕೆರಳಿದ ಅಮಿತ್ ತನ್ನ ಪತ್ನಿಯನ್ನು ಹಿಂಸಿಸಲು ಶುರು ಮಾಡಿದ್ದಾನೆ. ಗಂಡನ ಕಿರುಕುಳದಿಂದ ಬೇಸತ್ತ ಮಹಿಳೆ ತನ್ನ ಕೈ ಕತ್ತರಿಸಿಕೊಂಡು ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಆದಾಗ್ಯೂ, ತನ್ನ ಮೇಲಿನ ಕಿರುಕುಳ ನಿಲ್ಲಿಲಿಲ್ಲ. ಈ ಬಗ್ಗೆ ಆಕೆ ತನ್ನ ಅತ್ತೆಗೆ ಹೇಳಿದರೂ ಕೂಡ ಯಾವುದೇ ಪ್ರಯೋಜನವಾಗಲಿಲ್ಲ, ಆಕೆ ಕೂಡ ಗಂಡ ಹೇಳಿದ ಹಾಗೆ ಕೇಳು ಎಂದು ಹೇಳುತ್ತಿದ್ದಳು. ಮತ್ತೊಂದೆಡೆ, ಅಮಿತ್ ಸಹೋದರ ಸಹ ಅನುಚಿತವಾಗಿ ವರ್ತಿಸುತ್ತಿದ್ದ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಮಗಳ ಮುಂದೆ ಮೈದುನ ಕಿರುಕುಳ
ಒಂದು ಕಡೆ ಗಂಡ ಪ್ರಮೋಷನ್ಗಾಗಿ ಬಾಸ್ ಜೊತೆ ಮಲಗಲು ಒತ್ತಾಯಿಸಿದರೆ, ಮತ್ತೊಂದು ಕಡೆ ಮೈದುನ 12 ವರ್ಷದ ಮಗಳ ಮುಂದೆಯೇ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಇದರಿಂದ ರೋಸಿ ಹೋದ ಮಹಿಳೆ ಪತಿ ಮತ್ತು ಅತ್ತೆ ಕುಟುಂಬದವರ ಕಿರುಕುಳ ಸಹಿಸಲಾಗದೆ ಕಳೆದ ವರ್ಷ ಆಗಸ್ಟ್‌ನಲ್ಲಿ ಇಂದೋರ್‌ನಲ್ಲಿರುವ ತನ್ನ ತವರೂರಿಗೆ ಹೋಗಿದ್ದಾಳೆ. ಅಲ್ಲಿ ತಾಯಿಗೆ ವಿಷಯ ತಿಳಿಸಿ, ಅವರ ಸಹಕಾರದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರಿನಲ್ಲಿ ತನ್ನ ಪತಿಯ ಬೇಡಿಕೆ, ಮೈದುನನ ಕಿರುಕುಳದ ಬಗ್ಗೆ ವಿವರಿಸಿದ್ದಾಳೆ.
ಪತಿ ಕರೆಸಿ ಬುದ್ದಿವಾದ ಹೇಳಿದ್ದ ಪೊಲೀಸ್
ಮಹಿಳೆ ನೀಡಿದ ದೂರಿನ ಹಿನ್ನಲೆ ಇಂದೋರ್ ಪೊಲೀಸರು ಮಹಿಳೆಯ ಪತಿ ಅಮಿತ್‌ಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಪೊಲೀಸರ ಕೌನ್ಸೆಲಿಂಗ್ ಬಳಿಕ ಅಮಿತ್ ಇನ್ನು ಮುಂದೆ ಪತ್ನಿಗೆ ಕಿರುಕುಳ ನೀಡುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಮತ್ತೆ ಗಂಡನ ಮನೆಗೆ ಹೋಗಿದ್ದಾಳೆ. ಆದರೂ ಅಮಿತ್ ನ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸಂತ್ರಸ್ತೆ ಮನೆಗೆ ಬಂದ ನಾಲ್ಕೈದು ದಿನ ಚೆನ್ನಾಗಿದ್ದ ಅಮಿತ್ ಮತ್ತೆ ಪತ್ನಿಗೆ ಕಿರುಕುಳ ನೀಡಲಾರಂಭಿಸಿದ್ದಾನೆ.
ನ್ಯಾಯಾಲಯದ ಮೊರೆ ಹೋದ ಮಹಿಳೆ
ಮಹಿಳೆ ಈ ವಿಷಯವನ್ನ ತನ್ನ ಪೋಷಕರಿಗೆ ತಿಳಿಸಿದ್ದು, ನ್ಯಾಯಕ್ಕಾಗಿ ಇಂದೋರ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದೀಗ ಮಹಿಳಾ ಕಲ್ಯಾಣ ಅಧಿಕಾರಿಗೆ ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತ್ತು. ತನಿಖೆಯಲ್ಲಿ ಮಹಿಳೆಗೆ ಕಿರುಕುಳ ನೀಡಿರುವುದು ಸತ್ಯ ಎಂಬುದು ಸಾಬೀತಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಮಹಿಳೆಯ ಪತಿ, ಮೈದುನ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ