• ಹೋಂ
  • »
  • ನ್ಯೂಸ್
  • »
  • Crime
  • »
  • Pune: ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನದೇ ಸಾವಿನ ಸುದ್ದಿ ಹಬ್ಬಿಸಿದ್ದ ಕಳ್ಳ ಅರೆಸ್ಟ್​!

Pune: ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನದೇ ಸಾವಿನ ಸುದ್ದಿ ಹಬ್ಬಿಸಿದ್ದ ಕಳ್ಳ ಅರೆಸ್ಟ್​!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳನೊಬ್ಬ ಭರ್ಜರಿ ಪ್ಲಾನಿಂಗ್ ನಡೆಸಿದ್ದ. ತಾನು ಸತ್ತಿದ್ದೇನೆಂದು ಬಿಂಬಿಸಿ ಪೊಲೀಸರ ಹಾದಿ ತಪ್ಪಿಸಿದ್ದ. ಆದರೀಗ ತಾನು ಹೂಡಿದ ಉಪಾಯ ವಿಫಲವಾಗಿ ಜೈಲು ಕಂಬಿ ಎಣಿಸಲಾರಂಭಿಸಿದ್ದಾನೆ

  • News18 Kannada
  • 4-MIN READ
  • Last Updated :
  • Pune (Poona) [Poona], India
  • Share this:

    ಪುಣೆ(ಫೆ.03): ಕಳ್ಳನೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ತನ್ನದೇ ಸಾವಿನ ಸುದ್ದಿ ಹಬ್ಬಿಸಿದ್ದಾನೆ. ಆದರೆ ಆತನ ಈ ಪ್ಲಾನ್​ ಮಾತ್ರ ಯಶಸ್ವಿಯಾಗಲಿಲ್ಲ. ಸದ್ಯ ಈ ಖದೀಮನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಹೌದು 2021 ರಲ್ಲಿ ಪೌಡ್ ಪೋಲಿಸ್‌ ಠಾಣೆಯಲ್ಲಿ ದಾಖಲಾದ ಒಂದೆರಡು ವಾಹನ ಕಳ್ಳತನ ಪ್ರಕರಣಗಳಲ್ಲಿ ಮತ್ತು 2022 ರಲ್ಲಿ ಇಂತಹುದೇ ಪ್ರಕರಣದಲ್ಲಿ ಕೊತ್ರುಡ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನಿಸಿದ್ದ ಮಧ್ಯಪ್ರದೇಶದ ಸತ್ನಾದಿಂದ 32 ವರ್ಷದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.


    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊತ್ರೂಡ್‌ನ ಕಿಷ್ಕಿಂಧಾನಗರದಿಂದ ಈ ಕಳ್ಳ ಕಾರನ್ನು ಕದಿಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೇಳೆ ಬೇರೆ ವಿಧಿ ಇಲ್ಲದ ಆತ ತಲೆಮರೆಸಿಕೊಂಡಿದ್ದ. ಕೊತ್ರುಡ್ ಪೊಲೀಸ್ ತಂಡ ಈತನ ಗುರುತು ಪತ್ತೆ ಹಚ್ಚಿ ಸತ್ನಾದಲ್ಲಿರುವ ಅವನ ಮನೆಗೆ ತಲುಪಿತ್ತು. ಆದರೆ ಅಷ್ಟರಲ್ಲಿ ಆತನ ಕುಟುಂಬವು ಅವನು ತೀರಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೇ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ಅವನ ಸಾವಿನ ಸುದ್ದಿಯನ್ನೂ ತೋರಿಸಿದ್ದಾರೆ. ಇದು ಪೊಲೀಸರನ್ನೇ ದಿಗ್ಭ್ರಮೆಗೊಳಿಸಿತ್ತು.


    ಇದನ್ನೂ ಓದಿ: Bank Robbery: ಬ್ಯಾಂಕ್​ ದರೋಡೆ ಮಾಡಿ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ ಚಾಲಾಕಿ, 25 ವರ್ಷಗಳ ನಂತರ ಕಳ್ಳಿ!


    ಆದರೆ, ಪೊಲೀಸರು ಆತ ಸಾವನ್ನಪ್ಪಿದ್ದಾನೆ ಎಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಹೀಗಾಗೇ ಆ ವ್ಯಕ್ತಿ ಮತ್ತೆ ಕೊತ್ರುಡ್‌ನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಮಾಹಿತಿದಾರರು ಎಚ್ಚರಿಸಿದಾಗ, ಪೊಲೀಸರು ಕೂಡಲೇ ಆತನನ್ನು ಸೆರೆ ಹಿಡಿಯಲು ಬಲೆ ಬೀಸಿದ್ದಾರೆ. ಇದರಂತೆ ಜನವರಿ 29 ರಂದು ಪೊಲೀಸರ ಕೈಗೆ ಈ ಮಹಾನ್ ಕಳ್ಳ ಸಿಕ್ಕಾಕೊಂಡಿದ್ದಾನೆ. ಇನ್ನು ಪೊಲೀಸರು ಆತ ಕದ್ದ ಎರಡು ವಾಹನಗಳನ್ನೂ ವಶಪಡಿಸಿಕೊಂಡಿದ್ದಾರೆ.


    ಕೊತ್ರೂಡ್ ಪೊಲೀಸ್ ಹಿರಿಯ ಇನ್ಸ್‌ಪೆಕ್ಟರ್ ಹೇಮಂತ್ ಪಾಟೀಲ್ ಮಾತನಾಡಿ ಬಂಧಿತ ವ್ಯಕ್ತಿ ಹೆಸರು ವಿವೇಕ್ ಮಿಶ್ರಾ ಎಂದು ತಿಳಿಸಿದ್ದಾರೆ. ಈ ಹಿಂದೆ 2021 ರಲ್ಲಿ ಅದನು ಅದೇ ಪ್ರದೇಶದಲ್ಲಿ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಇನ್ನು ಮಿಶ್ರಾ 2023ರಲ್ಲಿ ಕಾರು ಕಳ್ಳತನದ ಪ್ರಕರಣ ಮುಚ್ಚಿ ಹೋಗಿದೆ ಎಂದು ಭಾವಿಸಿ ಜನವರಿಯಲ್ಲಿ ಪುಣೆಗೆ ಮರಳಿದ್ದ. ಆದರೆ ನಮ್ಮ ಇನ್ಫಾರ್ಮರ್ ಆತನನ್ನು ಗುರುತಿಸಿದ್ದಾರೆ ಎಂದೂ ತಿಳಿಸಿದ್ದಾರೆ.


    ಇದನ್ನೂ ಓದಿ: Mandya: ಒಂದು ಕೇಸ್​ನಲ್ಲಿ ಅರೆಸ್ಟ್​, ಬಾಯಿ ಬಿಟ್ಟಿದ್ದು 9 ಮನೆಗಳ್ಳತನ; ಕಳ್ಳತನಕ್ಕೆ ವಿಮಾನದಲ್ಲಿ ಬರ್ತಿದ್ದ!




    ಇನ್ನು ವಿಚಾರಣೆ ವೇಳೆ ತಾನು ಬೇಗ ಹಣ ಸಂಪಾದಿಸಲು ಕಾರು, ಸ್ಕೂಟರ್​ಗಳನ್ನು ಕದ್ದು ಹಳೆಯ ನಂಬರ್ ಪ್ಲೇಟ್​ಗೆ ಬದಲಿಸುತ್ತಿದ್ದೆ. ಆದರೆ ಅವುಗಳನ್ನು ಮಾರಾಟ ಮಾಡಲು ಸೂಕ್ತ ದಾಖಲೆಗಳಿಲ್ಲದೇ ಕಷ್ಟಪಡುತ್ತಿದ್ದೆ ಎಂದು ಆತ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    Published by:Precilla Olivia Dias
    First published: