ನಟನೆ ಬಿಟ್ಟು ಹೆಣ್ಣುಮಕ್ಕಳನ್ನು ಬಳಸಿಕೊಂಡು ದಂಧೆ ಶುರು ಮಾಡಿದ ಸ್ಯಾಂಡಲ್ವುಡ್ (Sandalwood) ನಟ ಈಗ ಅರೆಸ್ಟ್ (Arrest) ಆಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್ ಆಗಿತ್ತು. ಮಂಜುನಾಥ್ ಎನ್ನುವ ವ್ಯಕ್ತಿ ಅರೆಸ್ಟ್ ಆಗಿದ್ದು ಆತ ಸ್ಯಾಂಡಲ್ವುಡ್ ನಟ ಎಂದೇ ಪ್ರಚಾರ ಮಾಡಲಾಗಿತ್ತು. ಆದರೆ ಈಗ ಅರೆಸ್ಟ್ ಆಗಿರುವ ವ್ಯಕ್ತಿ ಸಿನಿಮಾ ನಟ ಅಲ್ಲ ಎನ್ನುವ ವಿಚಾರ ಬಯಲಾಗಿದೆ. ಲೊಕ್ಯಾಂಟೋ ಆ್ಯಪ್ ನ ಹಿಂದೆ ಬಿದ್ದಂತಹ ಮಂಜುನಾಥ್ ಎನ್ನುವ ವ್ಯಕ್ತಿ ಈಗ ಕಂಬಿ ಎಣಿಸುತ್ತಿದ್ದಾರೆ. ಹುಡುಗಿಯರ ಫೋಟೋಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್ ಬಳಸಿ ದಂಧೆ ಮಾಡುತ್ತಿದ್ದ ವ್ಯಕ್ತಿ ಪೊಲೀಸರ (Police) ಅತಿಥಿಯಾಗಿದ್ದಾನೆ. ಹೀರೋ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಈತನಿಗೂ ಸಿನಿಮಾಗೂ ಸಂಬಂಧ ಇಲ್ಲ ಎಂದು ಈಗ ತಿಳಿದು ಬಂದಿದೆ.
ಹೆಣ್ಣುಮಕ್ಕಳನ್ನು ಬಳಸಿಕೊಂಡು ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ನ ಪ್ರಮುಖ ಆರೋಪಿ ಸಂಜು ಹೆಣ್ಣುಮಕ್ಕಳ ಫೋಟೊ ಬಳಸಿ ಹಣ ಪೀಕುವ ದಂಧೆಗಿಳಿದಿದ್ದ. ಈತ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಎಂದೇ ಎಲ್ಲರೂ ನಂಬಿದ್ದರು. ಮಂಜುನಾಥ್ ಕಾಮುಕರ ಅಡ್ಡೆಯಾಗಿರುವ ಲೊಕ್ಯಾಂಟೋ ಆ್ಯಪ್ನಲ್ಲಿ ಸಕ್ರಿಯರಾಗಿದ್ದರು.
ಈ ಆ್ಯಪ್ ನ್ನು ಬಳಸಿಕೊಂಡು ಸುಲಿಗೆ ಮಾಡ್ತಿದ್ದ ಮಂಜುನಾಥ್ 2019 ರರಲ್ಲಿ ಬಿಡುಗಡೆಯಾಗಿದ್ದ ನ್ಯೂರಾನ್ ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದ ಎಂದು ಹೇಳಲಾಗಿತ್ತು. ಆದರೆ ಅಸಲಿಗೆ ಈ ವ್ಯಕ್ತಿಗೂ ಸಿನಿಮಾಗೂ ಸಂಬಂಧವೇ ಇಲ್ಲ ಎನ್ನಲಾಗಿದೆ.
ಸೈಕೋಲಾಜಿ ಸಂಬಂಧಪಟ್ಟಂತಹ ಚಿತ್ರ ಕನ್ನಡದಲ್ಲಿ ರಿಲೀಸ್ ಆಗಿತ್ತು. ಮಂಜುನಾಥ್ ನ್ಯೂರಾನ್ ಎಂಬ ಚಿತ್ರದಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಸು ಗೆದ್ದಿದ್ದರು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈಗ ಕಥೆಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು ನ್ಯೂರಾನ್ ಎಂಬ ಸೈಕೋಲಾಜಿ ಚಿತ್ರದಲ್ಲಿ ನಾಯಕನಾಗಿದ್ದ ವ್ಯಕ್ತಿ ಅರೆಸ್ಟ್ ಆಗಿರುವ ಮಂಜುನಾಥ್ ಅಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Rashmika Mandanna: ವಿಜಯ್ ಜೊತೆಗಿನ ಮಾಲ್ಡೀವ್ಸ್ ದಿನಗಳು! ಮತ್ತೆ ಹೋಗಬೇಕು ಎಂದ ರಶ್ಮಿಕಾ
ಮಂಜುನಾಥ್ ಅಥವಾ ಸಂಜು ಲೊಕ್ಯಾಂಟೋದಲ್ಲಿ ಹುಡುಗಿಯರ ಫೋಟೋ ಬಳಸಿ ಗ್ರಾಹಕರನ್ನ ಸೆಳೆದು ಸುಲಿಗೆ ಮಾಡುವುದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದ.
ಅನ್ ಲೈನ್ ಮೂಲಕ ಹಣ ಪೀಕುತ್ತಿದ್ದ ಸಂಜು ಅಂಡ್ ಗ್ಯಾಂಗ್ ಕುರಿತು ಸುದ್ಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ತನಿಖೆಗಿಳಿದ ಪೊಲೀಸರು ಮಂಜುನಾಥ್ ಸೇರಿ ಆರು ಜನರನ್ನ ಬಂಧಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ