ಕುಕನೂರು, ಕೊಪ್ಪಳ: ಆಕೆಗೆ ಇನ್ನೂ 17 ವರ್ಷ, ದ್ವಿತೀಯ ಪಿಯುಸಿ (Second PUC) ಓದುತ್ತಿದ್ದಾಳೆ. ಆತ ಪದವಿ (Degree) ಮುಗಿಸಿ ಐಟಿಐ (ITI) ಓದುತ್ತಿದ್ದಾನೆ. ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಆದರೆ ಇಬ್ಬರದು ಬೇರೆ ಬೇರೆ ಜಾತಿ (caste). ಇದೇ ಕಾರಣಕ್ಕೆ ಹುಡುಗಿಯ ಮನೆಯವರು ಇವರ ಪ್ರೀತಿಗೆ, ಪ್ರೇಮ ವಿವಾಹಕ್ಕೆ (Love Marriage) ವಿರೋಧ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ಹುಡುಗಿ ಮೇಲೆ ಹುಡುಗ ಸಿಟ್ಟಾಗಿದ್ದಾನೆ. ಈ ವೇಳೆ ಕೋಪದ ಕೈಗೆ ಬುದ್ಧಿಕೊಟ್ಟು, ಅನಾಹುತವನ್ನೇ ಮಾಡಿದ್ದಾನೆ. ಸಿಟ್ಟಿನ ಭರದಲ್ಲಿ ಹುಡುಗಿ ಕತ್ತು ಸೀಳಿ ಆಕೆಯನ್ನು ಕೊಲೆ (Murder) ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇಬ್ಬರು ಸೇರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿವೆ. ಈ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (Koppal SP) ಭೇಟಿ ನೀಡಿದ್ದು. ದೂರು ದಾಖಲಿಸಿದ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಕ್ತದ ಮಡುವಿನಲ್ಲಿದ್ದ ಬಿದ್ದದ್ದ ಯುವಕ-ಯುವತಿ
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿಯಲ್ಲಿ 24 ವರ್ಷದ ಪ್ರಕಾಶ ಭಜಂತ್ರಿ ಅದೇ ಗ್ರಾಮದ 17 ವರ್ಷದ ಸುಮಾ ಎಂಬ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಆದರೆ ಇಂದು ಇಬ್ಬರೂ ರಕ್ತಮಡುವಿನಲ್ಲಿ ಬಿದ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಅಂತರ್ಜಾತಿ ಪ್ರೀತಿಗೆ ಮನೆಯವರ ವಿರೋಧ
ಪ್ರಕಾಶ ಭಜಂತ್ರಿ ಪದವಿ ಓದಿದ ನಂತರ ಐಟಿಐ ಓದುತ್ತಿದ್ದಾನೆ. ಇದೇ ಗ್ರಾಮದ ಸುಮಾ ಲಿಂಗಾಯತ ಸಮಾಜಕ್ಕೆ ಸೇರಿದವಳಾಗಿದ್ದಾಳೆ. ಇಬ್ಬರಿಗೂ ಹಲವು ವರ್ಷಗಳಿಂದ ಸ್ನೇಹವಿತ್ತು. ಬಳಿಕ ಸ್ನೇಹ ಪ್ರೇಮವಾಗಿದೆ. ಈ ಮಧ್ಯೆ ಇಬ್ಬರದು ಬೇರೆ ಬೇರೆ ಜಾತಿ ಎಂಬ ಕಾರಣಕ್ಕೆ ಆಕೆಯ ಪ್ರೀತಿಗೆ ಸುಮಾ ಮನೆಯವರು ವಿರೋಧಿಸಿದ್ದಾರೆ. ಈ ವಿರೋಧದಿಂದಾಗಿ ಪ್ರಕಾಶ ಆಕೆಯನ್ನು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: Crime Report: ರಾಜ್ಯದಲ್ಲಿ 5 ವರ್ಷಗಳಲ್ಲಿ 6 ಸಾವಿರ ಮಂದಿ ಹತ್ಯೆ! ಈ ಪೈಕಿ ಪ್ರೀತಿಗಾಗಿ ಪ್ರಾಣ ಬಿಟ್ಟವರೆಷ್ಟು?
ಆಕೆಯ ಪ್ರೇಮ ವಿಚಾರವೇ ಗೊತ್ತಿಲ್ಲ ಅಂತಿದ್ದಾರೆ ಮನೆಯವರು
ಆಕೆ ಹಾಗೂ ಅವನ ನಡುವೆ ಪ್ರೇಮವಾಗಿರುವ ಬಗ್ಗೆ ನಮಗೇನು ಗೊತ್ತಿಲ್ಲ ಎಂದು ಹುಡುಗಿಯ ಕುಟುಂಬದವರು ಹೇಳುತ್ತಿದ್ದಾರೆ. ಇಂದು ಮನೆಗೆ ಬಂದು ಮದುವೆಗೆ ಒತ್ತಾಯಿಸಿದ್ದು ನಿರಾಕರಿಸಿದ್ದರಿಂದ ಆಕೆಯ ಕತ್ತು ಕೋಯ್ದು ತಾನು ಅಲ್ಲಿಯೇ ಚಾಕು ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಹೇಳುತ್ತಿದ್ದಾರೆ.
ಪ್ರೇಯಸಿಯನ್ನೇ ಚಾಕು ಚುಚ್ಚಿ ಸಾಯಿಸಿದನಾ ಪ್ರೇಮಿ?
ಇಂದು ಮುಂಜಾನೆಯ ವೇಳೆ ಸುಮಾ ತಮ್ಮ ಮನೆಯಲ್ಲಿದ್ದಾಗ ಮನೆಗೆ ಬಂದ ಪ್ರಕಾಶ ಭಜಂತ್ರಿ ಗಲಾಟೆ ಮಾಡಿದ್ದಾನೆ. ಆಕೆಯ ತಮ್ಮನಿಗೆ ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾನೆ. ಇದೇ ಸಮಯದಲ್ಲಿ ಆಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇಬ್ಬರೂ ನೊಂದು ಆತ್ಮಹತ್ಯೆ ಮಾಡಿಕೊಂಡರಾ?
ಇನ್ನೊಂದು ಮೂಲದ ಪ್ರಕಾರ ಮದುವೆಗೆ ಮನೆಯವರು ನಿರಾಕರಿಸಿದ್ದು ಇಬ್ಬರೂ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆಯ ನಂತರ ಕುಕನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಸಹ ಭೇಟಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: Santro Ravi Arrest: ವಿಗ್ ತೆಗೆದು ವೇಷ ಮರೆಸಿಕೊಂಡಿದ್ದ ರವಿ! ಹೇಗಿತ್ತು ಗೊತ್ತಾ 'ಆಪರೇಷನ್ ಸ್ಯಾಂಟ್ರೋ'?
ತನಿಖೆ ವೇಳೆ ಹೊರಬರಲಿದೆ ಸಾವಿನ ಸತ್ಯಾಸತ್ಯತೆ
ಮೃತ ದೇಹಗಳ ಮರಣೋತ್ತರ ಪರೀಕ್ಷೆ ಮಾಡಿದ ನಂತರ ಘಟನೆಯ ನಂತರ ದೂರು ಸ್ವೀಕರಿಸಿ ಪೊಲೀಸರು ತನಿಖೆ ಮಾಡಲಿದ್ದಾರೆ. ತನಿಖೆಯ ನಂತರ ಎಲ್ಲವೂ ಸ್ಪಷ್ಠವಾಗಲಿದೆ ಎಂದು ಹೇಳಿದ್ದಾರೆ.ಹದಿಹರೆಯದಲ್ಲಿ ಪ್ರೀತಿ ಪ್ರೇಮ ಎಂದುಕೊಂಡು ಯುವಜನ ಯಾವುದೊ ಕಾರಣಕ್ಕೆ ಸಾವನ್ನಪ್ಪುತ್ತಿದ್ದಾರೆ. ಸಾವಿನ ಹಾದಿ ಹಿಡಿಯುವ ಮುನ್ನ ಸಾಕಷ್ಟು ಬಾರಿ ವಿಚಾರ ಮಾಡಬಹುದಾಗಿತ್ತು ಎಂದು ಜನ ಹೇಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ