ಕೊಡಗು: ಪ್ರೀತಿಸಿ ಮದುವೆಯಾಗಿದ್ದ (Love Marriage) ಯುವತಿ (Young Women) ಮೂರು ದಿನದಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಕೊಡಗಿನ (Kodagu) 6ನೇ ಹೊಸಕೋಟೆಯಲ್ಲಿ ನಡೆದಿದೆ. ಅಕ್ಷಿತಾ (18) ಮೃತ ದುರ್ದೈವಿಯಾಗಿದ್ದು, ದಲಿತ ಯುವತಿ (Dalit Women) ಎಂದು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಮೃತ ಅಕ್ಷಿತಾ ಹೇಮಂತ್ ಎಂಬ ಯುವಕನನ್ನು ಪ್ರೀತಿಸಿ (Love) ಕಳೆದ ಮೂರು ದಿನಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ (Married Life) ಕಾಲಿಟ್ಟಿದ್ದರು. ಆದರೆ ಮದುವೆಯಾದ ಮೂರು ದಿನಗಳಲ್ಲೇ ಆಕೆ ಸಾವನ್ನಪ್ಪಿದ್ದಾಳೆ. ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಯುವತಿಯ ಪೋಷಕರು, ದಲಿತ ಸಮುದಾಯದ ಯುವತಿ ಎಂದು ಹೇಮಂತ್ ಪೋಷಕರು ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೇಮಂತ್ ಪೋಷಕರ ವಿರುದ್ಧ ದೂರು ದಾಖಲು
ಅಂದಹಾಗೆ, ಮೃತ ಅಕ್ಷಿತಾ ಹಾಗೂ ಹೇಮಂತ್ ಒಂದೇ ಗ್ರಾಮದ ನಿವಾಸಿಗಳಾಗಿದ್ದು, ಇಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದಾರೆ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಕಳೆದ ಮೂರು ದಿನಗಳ ಹಿಂದಷ್ಟೇ ದೇವಾಲಯವೊಂದರಲ್ಲಿ ಮದುವೆಯಾಗಿ ಮನೆಗೆ ಬಂದಿದ್ದರು ಎನ್ನಲಾಗಿದೆ.
ಆದರೆ ಏಕಾಏಕಿ ನಿನ್ನೆ ಸಂಜೆ ಏಕಾಏಕಿ ಯುವತಿ ಸಾವನ್ನಪ್ಪಿದ್ದು, ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೇಮಂತ್ ಪೋಷಕರಾದ ದಶರಥ ಮತ್ತು ಗಿರಿಜಾ ಮೇಲೆ ದೂರು ದಾಖಲಿಸಲಾಗಿದೆ. ಸದ್ಯ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೃತದೇಹ ರವಾನೆ ಮಾಡಲಾಗಿದೆ.
ರಟ್ಟಿಹಳ್ಳಿಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ
ನಿನ್ನೆ ಕಲ್ಲು ತೂರಾಟಕ್ಕೆ ಸಾಕ್ಷಿಯಾಗಿದ್ದ ಹಾವೇರಿಯ (Haveri) ರಟ್ಟಿಹಳ್ಳಿಯಲ್ಲಿ ಪೊಲೀಸರು (Police) ನಿದ್ದೆಗೆಟ್ಟು ಪರಿಸ್ಥಿತಿ ತಹಬದಿಗೆ ತಂದಿದ್ದಾರೆ. ಕಲ್ಲು ತೂರಾಟ (Stone Pelting) ಮಾಡಿ ಪರಾರಿಯಾಗಿದ್ದ ಯುವಕರ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ.
ಪರಾರಿಯಾಗಿದ್ದ ಯುವಕರು ಯಾರೂ ಕೂಡ ನಿನ್ನೆ ರಾತ್ರಿ ಮನೆಗೆ ಬಂದಿಲ್ಲ. ಇಂದು ರಟ್ಟಿಹಳ್ಳಿ ಪಟ್ಟಣಕ್ಕೆ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಂದು ಬೆಳಗ್ಗೆಯಿಂದ ಸ್ತಬ್ಧವಾಗಿರುವ ರಟ್ಟಿಹಳ್ಳಿ ಪಟ್ಟಣದಲ್ಲಿ 300ಕ್ಕೂ ಅಧಿಕ ಪೋಲಿಸರು ಪಟ್ಟಣದ ಪ್ರಮುಖ ಸರ್ಕಲ್ ಗಳಲ್ಲಿ ಪಥಸಂಚಲನ ನಡೆಸಿದ್ದರು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಗಾವಲು ವಹಿಸಿದ್ದರು. ಇಂದು ಪಟ್ಟಣದ ಹೊರವಲಯದಲ್ಲಿ ಎರಡು ಕೋಮಿನ ಮುಖಂಡರೊಂದಿಗೆ ಶಾಂತಿ ಸಭೆ ಏರ್ಪಡಿಸಲಾಗಿದೆ.
ಇದನ್ನೂ ಓದಿ: Heart Attack: ಮೊಬೈಲ್ನಲ್ಲಿ ಮಾತಾಡುತ್ತಿರುವಾಗಲೇ ಹಾರಿಹೋದ ಪ್ರಾಣ ಪಕ್ಷಿ; ಹೃದಯಾಘಾತದಿಂದ ಯುವಕ ಸಾವು!
ಕಟ್ಟಡದಿಂದ ಬಿದ್ದು ಮಗು ಸಾವು
ಕಟ್ಟಡದ ಮೇಲಿಂದ ಬಿದ್ದು ಮಗುವೊಂದು ಸಾವನಪ್ಪಿರುವ ಘಟನೆ ಬೆಂಗಳೂರಿನ (Bengaluru) ಚಾಮರಾಜಪೇಟೆಯ ಆಜಾದ್ ನಗರದಲ್ಲಿ ನಡೆದಿದೆ. ನಗರದ 6ನೇ ಕ್ರಾಸ್ನಲ್ಲಿ ವಾಸವಿದ್ದ ವಿನಯ್ ದಂಪತಿಯ ಒಂದೂವರೆ ವರ್ಷದ ಪುತ್ರಿ ದೀಕ್ಷಾ ಸಾವನ್ನಪ್ಪಿರುವ ದುರ್ದೈವಿ.
ಸ್ನೇಹಿತರ ಮನೆಗೆ (Friends Home ) ಬಂದಿದ್ದ ವೇಳೆ ತಾಯಿ (Mother) ಊಟ ಮಾಡಿಸುತ್ತಿದ್ದರು, ಈ ವೇಳೆ ಆಟವಾಡುತ್ತಿದ್ದಾಗ ಗ್ರಿಲ್ಸ್ ಹತ್ತಿದ್ದ ಮಗು ನೋಡ ನೋಡುತ್ತಿದ್ದಂತೆ ಜಾರಿ ಕೆಳಕ್ಕೆ ಬಿದ್ದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ (Hospital) ಸಾಗಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದು, ಆದರೆ ಮಾರ್ಗ ಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ. ಚಾಮರಾಜಪೇಟೆ (Chamarajapete) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ