ಕೆ.ಆರ್. ಪೇಟೆ, ಮಂಡ್ಯ: ಕಾಂಗ್ರೆಸ್ ನಾಯಕ, ಮಂಡ್ಯದ ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ (KR Pete former MLA) ಕೆಬಿ ಚಂದ್ರಶೇಖರ್ (KB Chandrashekhar) ಅವರ ಸಹೋದರ ಕೆ.ಬಿ. ರವಿ (KB Ravi) ಎಂಬಾತ ವಿವಾಹಿತ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ ಎನ್ನಲಾಗಿದೆ. ವಿವಾಹಿತ ಮಹಿಳೆಯೊಂದಿಗೆ ಇದ್ದಾಗಲೇ ಕೆಬಿ ರವಿ ಸಿಕ್ಕಿಬಿದ್ದಿದ್ದಾನೆ. ರೆಡ್ ಹ್ಯಾಂಡಾಗಿ ಸಿಕ್ಕಿ ಬೀಳುವ ಸಂದರ್ಭದಲ್ಲಿ ರವಿ ಬರೀ ಟವೆಲ್ ಮತ್ತು ಬನಿಯನ್ನಲ್ಲೇ ಇದ್ದ ಎನ್ನಲಾಗಿದೆ. ಆ ವಿವಾಹಿತ ಮಹಿಳೆ ಜೊತೆ ಕೆಬಿ ರವಿ ಏಕಾಂತದಲ್ಲಿರುವುದನ್ನು ತಿಳಿದುಕೊಂಡ ಆಕೆಯ ಮನೆಯವರು ಅವರಿದ್ದ ಸ್ಥಳದಲ್ಲಿಯೇ ಹೋಗಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಮಹಿಳೆ ಜೊತೆ ಸಿಕ್ಕಿಬಿದ್ದ ಮಾಜಿ ಶಾಸಕರ ಸಹೋದರ
ಕೆಆರ್ ಪೇಟೆ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಕೆಬಿ ಚಂದ್ರಶೇಖರ್ ಅವರ ತಮ್ಮ ಕೆಬಿ ರವಿ ಎಂಬಾತನೇ ವಿವಾಹಿತ ಮಹಿಳೆಯೊಂದಿಗೆ ಸಿಕ್ಕಿಬಿದ್ದ ವ್ಯಕ್ತಿ. ಈತನಿಗೂ ಮದುವೆಯಾಗಿದ್ದು, ಮತ್ತೋರ್ವ ವಿವಾಹಿತೆ ಜೊತೆ ಏಕಾಂತದಲ್ಲಿ ಇದ್ದಾಗಲೇ ಆಕೆಯ ಮನೆಯವರ ಕೈಯಲ್ಲಿ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ ಅಂತ ಸುವರ್ಣ ನ್ಯೂಸ್ ಡಿಜಿಟಲ್ ವರದಿ ಮಾಡಿದೆ.
ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದ ವಿವಾಹಿತ ಮಹಿಳೆ
ಕೆಬಿ ರವಿ ಮಾಲೀಕತ್ವದ ಕರ್ಮರ್ಷಿಯಲ್ ಕಾಂಪ್ಲೆಕ್ಸ್ ಇತ್ತು. ಈ ಬಿಲ್ಡಿಂಗ್‌ನಲ್ಲಿ ವಿವಾಹಿತ ಮಹಿಳೆಯೋರ್ವಳು ಬ್ಯೂಟಿ ಪಾರ್ಲರ್ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ಇದೇ ಮಹಿಳೆ ಜೊತೆ ಕೆಬಿ ರವಿ ನಿನ್ನೆ ಸಿಕ್ಕಿ ಬಿದ್ದಿದ್ದಾನೆ ಅಂತ ಹೇಳಲಾಗುತ್ತಿದೆ.
ಗಂಡನಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದ ಮಹಿಳೆ
ಇನ್ನು ಕೆಬಿ ರವಿ ಜೊತೆ ಆ ವಿವಾಹಿತ ಮಹಿಳೆ ತುಂಬಾ ಸಲುಗೆಯಿಂದ ಇದ್ದಳಂತೆ. ಇದೇ ಕಾರಣಕ್ಕೆ ತನ್ನ ಗಂಡನಿಗೇ ಡಿವೋರ್ಸ್ ಕೊಡಲು ಆಕೆ ಮುಂದಾಗಿದ್ದಳಂತೆ. ನನಗೆ ನಿನ್ನಿಂದ ಡಿವೋರ್ಸ್ ಬೇಕು, ನನಗೆ ವಿವಾಹ ವಿಚ್ಛೇದನ ಕೊಡು ಅಂತ ಗಂಡನನ್ನು ಒತ್ತಾಯಿಸುತ್ತಲೇ ಇದ್ದಳಂತೆ. ಅಲ್ಲದೇ ಕಳೆದ ತಿಂಗಳು ಡಿವೋರ್ಸ್‌ಗೆ ಕೂಡ ಆ ಮಹಿಳೆ ಅರ್ಜಿ ಸಲ್ಲಿಸಿದ್ದಳಂತೆ ಎನ್ನಲಾಗುತ್ತಿದೆ.
ಇದನ್ನೂ ಓದಿ: CCB Raid: ಲೋಕಾಯುಕ್ತ ದಾಳಿ ಬೆನ್ನಲ್ಲೇ ಸಿಸಿಬಿಯಿಂದ ರೇಡ್, ಹುಬ್ಬಳ್ಳಿ ಉದ್ಯಮಿ ಮನೆಯಲ್ಲಿ ಸಿಕ್ತು 3 ಕೋಟಿ ಹಣ!
ಏಕಾಂತದಲ್ಲಿದ್ದಾಗಲೇ ಸಿಕ್ಕಿಬಿದ್ದ ಕೆಬಿ ರವಿ
ಇನ್ನು ನಿನ್ನೆ ಕೆ.ಬಿ. ರವಿ ಮನೆಯಲ್ಲಿ ಯಾರು ಇಲ್ಲದ ಹಿನ್ನಲೆಯಲ್ಲಿ ವಿವಾಹಿತ ಮಹಿಳೆ ರಾತ್ರಿಯೇ ಆತನ ಮನೆಗೆ ಬಂದಿದ್ದಳಂತೆ. ಅತ್ತ ರಾತ್ರಿ ಆಕೆ ಮನೆಗೆ ಬರಲಿಲ್ಲ ಅಂತ ಮನೆಯವರೆಲ್ಲ ಆತಂಕದಿಂದ ಹುಡುಕಾಟ ನಡೆಸಿದ್ದಾರಂತೆ. ಕೊನೆಗೆ ಕೆಬಿ ರವಿ ಜೊತೆಯೇ ಇರಬಹುದು ಅಂತ ಅಂದಾಜಿಸಿ ಆತನ ಮನೆಗೆ ಬಂದಿದ್ದಾರೆ.
ಟವೆಲ್, ಬನಿಯನ್‌ನಲ್ಲೇ ಕಾಣಿಸಿಕೊಂಡ ಕೆಬಿ ರವಿ
ಆಕೆಯ ಕುಟುಂಬಸ್ಥರೆಲ್ಲ ರವಿ ಮನೆಗೆ ಬಂದಾಗ ಆತನ ಜೊತೆಯಲ್ಲೇ ಆ ಮಹಿಳೆ ಇದ್ದಳು ಎನ್ನಲಾಗಿದೆ. ಮನೆಯ ಹೊರಗೆ ಆಕೆಯ ಸ್ಕೂಟಿ ಪತ್ತೆಯಾಗಿತ್ತಂತೆ. ಒಳಗೆ ಇಬ್ಬರು ಏಕಾಂತದಲ್ಲಿದ್ದಾಗಲೇ ಆಕೆ ಮನೆಯವರು ಬಂದಿದ್ದಾರೆ. ಬಳಿಕ ಇಡೀ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬರೀ ಬನಿಯನ್ ಹಾಗೂ ಟವೆಲ್ ಧರಿಸಿದ್ದ ಕೆಬಿ ರವಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ನನಗೆ ನೀನು ಬೇಡ, ರವಿ ಬೇಕು ಎಂದಳಾ ಮಹಿಳೆ?
ಇನ್ನು ಕುಟುಂಬಸ್ಥರೆಲ್ಲ ಆಕೆಯನ್ನು ಪ್ರಶ್ನಿಸಿದಾಗ ನನಗೆ ಗಂಡ ಬೇಕಾಗಿಲ್ಲ. ನನಗೆ ಕೆಬಿ ರವಿಯೇ ಬೇಕು ಎಂದಿದ್ದಾಳಂತೆ. ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಅಂತ ಗಂಡನಿಗೆ ಹೇಳಿದ್ದಾಳಂತೆ. ಇಷ್ಟೆಲ್ಲಾ ಆದ ಮೇಲೆ ಆಕೆಯ ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ