• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಮದುವೆ ಮಾಡುತ್ತಿಲ್ಲ, ಪಿತ್ರಾರ್ಜಿತ ಆಸ್ತಿ ಹಂಚುತ್ತಿಲ್ಲ ಎಂದು ಅಣ್ಣನನ್ನೇ ಕೊಲೆಗೈದಿದ್ದ ತಮ್ಮ ಅರೆಸ್ಟ್​!

Crime News: ಮದುವೆ ಮಾಡುತ್ತಿಲ್ಲ, ಪಿತ್ರಾರ್ಜಿತ ಆಸ್ತಿ ಹಂಚುತ್ತಿಲ್ಲ ಎಂದು ಅಣ್ಣನನ್ನೇ ಕೊಲೆಗೈದಿದ್ದ ತಮ್ಮ ಅರೆಸ್ಟ್​!

ಆರೋಪಿ ಮಲ್ಲಪ್ಪ

ಆರೋಪಿ ಮಲ್ಲಪ್ಪ

ತರಕಾರಿ ಕತ್ತರಿಸುವ ಈಳಿಗೆಯಿಂದ ಅಣ್ಣನನ್ನು ಕೊಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ.

  • News18 Kannada
  • 5-MIN READ
  • Last Updated :
  • Koppal, India
  • Share this:

ಕೊಪ್ಪಳ: ಹುಟ್ಟುವಾಗ ಹಿರಿಯಣ್ಣನಾಗಿ (Elder Brother) ಹುಟ್ಟಬಾರದು. ಮನೆಯ ಹಿರಿಯ ಅಣ್ಣನಿಗೆ ಎಲ್ಲಾ ಜವಾಬ್ದಾರಿಗಳಿರುತ್ತವೆ (Responsibilities ) ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ ಅಣ್ಣ ನನ್ನ ಮದುವೆ ಮಾಡುತ್ತಿಲ್ಲ. ಪಿತ್ರಾರ್ಜಿತ ಆಸ್ತಿಯನ್ನು (Property) ಹಂಚುತ್ತಿಲ್ಲ ಎಂಬ ಕಾರಣಕ್ಕೆ ಹಿರಿಯ ಅಣ್ಣನನ್ನು ಕಿರಿಯ ತಮ್ಮ ಈಳಿಗೆಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಕೊಪ್ಪಳ (Koppala) ಜಿಲ್ಲೆಯ ಕುಷ್ಟಗಿ ತಾಲೂಕಿನ (Kushtagi) ಪಟ್ಟಲಚಿಂತಿಯಲ್ಲಿ ನಡೆದಿದೆ. ಈ ಘಟನೆಯ ನಂತರ ಇಡೀ ಗ್ರಾಮದಲ್ಲಿ ನಿರವ ಮೌನ ಆವರಿಸಿದೆ. ಸದ್ಯ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ಏನಿದು ಪ್ರಕರಣ?


ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಪಕ್ಕದಲ್ಲಿರುವ ಪಟ್ಟಲಚಿಂತಿಯಲ್ಲಿ ಬಸಪ್ಪ ಕಡಿವಾಲರಿಗೆ ಒಟ್ಟು ನಾಲ್ಕು ಜನ ಮಕ್ಕಳು. ನಾಲ್ಕು ಜನರಲ್ಲಿ ಕೊಲೆಯಾದ  ಯಮನೂರಪ್ಪ ಕಡಿವಾಲರ ಅವರಿಗೆ 39 ವಯಸ್ಸು, ಕಿರಿಯ ಮಲ್ಲಪ್ಪನಿಗೆ 30 ವರ್ಷ. ಒಟ್ಟು ನಾಲ್ಕು ಜನ ಮಕ್ಕಳು ಒಕ್ಕಲತನ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮೊದಲಿನ ಇಬ್ಬರಿಗೆ ಆಗಲೇ ಮದುವೆಯಾಗಿದೆ. ಆದರೆ ಮೂರು ಹಾಗು ನಾಲ್ಕನೆಯವರಿಗೆ ಮದುವೆಯಾಗಿಲ್ಲ. ಮೂರನೆಯವರಿಗೆ ಕನ್ಯಾ ನೋಡುತ್ತಿದ್ದಾರೆ. ಇದೇ ಸಮಯದಲ್ಲಿ ಕಿರಿಯನಿಗೂ ಮದುವೆ ಮಾಡಲು ಉದ್ದೇಶವಿತ್ತು.


ಇದನ್ನೂ ಓದಿ: Crime News: ಕೋಲ್ಡ್ ಕೇಸ್ ಸಿನಿಮಾ ಮಾದರಿಯಲ್ಲಿ ಮಹಿಳೆಯ ಅಸ್ತಿಪಂಜರ ಪತ್ತೆ; ನೇಣು ಬೀಗಿದ ಸ್ಥಿತಿಯಲ್ಲಿ ಸಿಕ್ತು ಬುರುಡೆ!


ಅಣ್ಣನನ್ನೇ ಕೊಲೆಗೈದ ತಮ್ಮ


ಅಣ್ಣ ತನ್ನ ಕಬಳಿಸುತ್ತಾನೆ ಎಂಬ ಅನುಮಾನ


ಮದುವೆ ವಯಸ್ಸಿನಲ್ಲಿ ಸಕಾಲಕ್ಕೆ ಮದುವೆ ಮಾಡಲು ಹಿರಿಯ ಅಣ್ಣ ಯಮನೂರಪ್ಪ ಮಾಡುತ್ತಿಲ್ಲ ಎಂಬ ಅಸಮಾಧಾನ ಮಲ್ಲಪ್ಪನಿಗೆ ಇತ್ತು. ಇದೇ ಕಾರಣಕ್ಕೆ ಮಲ್ಲಪ್ಪ ಹಾಗೂ ಯಮನೂರಪ್ಪನ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಯಮನೂರಪ್ಪ ನನಗೆ ಮದುವೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ನನ್ನ ಪಾಲಿನ ಆಸ್ತಿಯನ್ನು ಕಬಳಿಸುತ್ತಾನೆ ಎಂಬ ಅನುಮಾನ ತಮ್ಮನಿಗೆ ಶುರುವಾಗಿತ್ತು. ಹಿರಿಯರಿಂದ ಒಟ್ಟು 16 ಎಕರೆ ಭೂಮಿ ಇದೆ. ನಾಲ್ಕು ಜನರು ಮಕ್ಕಳಿಗೆ ಸಮಾವಾಗಿ ಹಂಚಿಕೆಯಾಗಬೇಕು. ಈಗ ಕೂಡು ಕುಟುಂಬವಾಗಿದ್ದರಿಂದ ಇನ್ನೂ ಆಸ್ತಿ ಹಂಚಿಕೆ ಮಾಡಿಲ್ಲ.


ಆಸ್ತಿ ಕೊಟ್ಟು ಬಿಡಿ ಎಂದು ಜಗಳ ಮಾಡಿದ್ದ ತಮ್ಮ


ಆದರೆ ಮಲ್ಲಪ್ಪ ನನಗೆ ಮದುವೆ ಮಾಡಿ. ಇಲ್ಲವೇ ನನಗೆ ನನ್ನ ಪಾಲಿನ ಆಸ್ತಿ ಕೊಟ್ಟು ಬಿಡಿ ನಾನು ನಿಮ್ಮಿಂದ ದೂರವಾಗಿ ನನ್ನ ಜೀವನ ನಡೆಸುತ್ತೇನೆ ಎಂದು ಅಣ್ಣನಿಗೆ ದುಂಬಾಲು ಬಿದ್ದಿದ್ದ. ಈ ಕುರಿತು ಜಗಳವಾಗುತ್ತಿರುವಾಗ ಗ್ರಾಮಸ್ಥರು ಬುದ್ದಿವಾದ ಹೇಳಿದ್ದರು. ಆದರೂ ಮಲ್ಲಪ್ಪನಿಗೆ ಅಸಮಾಧಾನ ಕಡಿಮೆಯಾಗಿರಲಿಲ್ಲ.ಈ ನಡುವೆ ಗುರುವಾರ ಸಂಜೆ ಅಣ್ಣ ಹೊಲದಿಂದ ಬಂದು ಬಚ್ಚಲ ಮನೆಗೆ ಮುಖ ತೊಳೆದುಕೊಳ್ಳಲು ಹೋದಾಗ ಮತ್ತೆ ಮಲ್ಲಪ್ಪ, ಅಣ್ಣನೊಂದಿಗೆ ಜಗಳ ತೆಗೆದಿದ್ದಾನೆ. ಈ ಜಗಳ ವಿಕೋಪಕ್ಕೆ ಹೋಗಿದೆ.


ಇದನ್ನೂ ಓದಿ: Crime News: ಬೆಂಗಳೂರು ಹೆಣಗಳಿಗೆ ಚಾರ್ಮಾಡಿಯೇ ಸ್ಮಶಾಣ; ಕೊಂದವರು ತಪ್ಪಿಸಿಕೊಳ್ಳಲು ಆಸರೆ ಆಯ್ತು ಪ್ರಪಾತ!


ಈ ಸಂದರ್ಭದಲ್ಲಿ ಅಡುಗೆ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಈಳಿಗೆಯನ್ನು ತೆಗೆದುಕೊಂಡು ಅಣ್ಣನಿಗೆ ಮನಸೋಚ್ಷೆ ಕೊಚ್ಚಿದ್ದಾನೆ. ಈ ಸಂದರ್ಭದಲ್ಲಿ ಯಮನೂರಪ್ಪ ರಕ್ತ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಕುಟುಂಬದ ಇತರ ಸದಸ್ಯರು ತಕ್ಷಣ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.




ಆರೋಪಿ ಸಹೋದರ ಅರೆಸ್ಟ್​!


ಘಟನೆಯ ನಂತರ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಘಟನಾ ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಭೇಟಿ ಪರಿಶೀಲನೆ ನಡೆಸಿದ್ದರು. ಈ ಘಟನೆಯ ನಂತರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಚಿಕ್ಕ ಗ್ರಾಮದಲ್ಲಿ ಸ್ವಂತ ಅಣ್ಣನನ್ನೇ ತಮ್ಮ ಕೊಲೆ ಮಾಡಿದ್ದರಿಂದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ.

Published by:Sumanth SN
First published: