• Home
  • »
  • News
  • »
  • crime
  • »
  • Kochi: ಪತ್ನಿಯ ಕೊಂದು ಮನೆಯ ಪಕ್ಕವೇ ಹೂತು ಹಾಕಿದ್ದ, ವರ್ಷದ ಬಳಿಕ ಬಯಲಾಯ್ತು ಮರ್ಡರ್‌ ಮಿಸ್ಟರಿ!

Kochi: ಪತ್ನಿಯ ಕೊಂದು ಮನೆಯ ಪಕ್ಕವೇ ಹೂತು ಹಾಕಿದ್ದ, ವರ್ಷದ ಬಳಿಕ ಬಯಲಾಯ್ತು ಮರ್ಡರ್‌ ಮಿಸ್ಟರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪೊಲೀಸ್ ದಾಖಲೆಗಳ ಪ್ರಕಾರ, ಫೆಬ್ರವರಿ 19, 2022 ರಂದು, ಸಜೀವನ್ ವಿಶ್ವಂಭರನ್ ನೀಡಿದ ದೂರಿನ ಆಧಾರದ ಮೇಲೆ ಕೊಚ್ಚಿಯ ನ್ಜಾರಕ್ಕಲ್‌ ಠಾಣೆ ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

  • Trending Desk
  • 4-MIN READ
  • Last Updated :
  • Kochi [Cochin], India
  • Share this:

    ತಿರುವನಂತಪುರಂ(ಜ.14): ಕಳೆದೊಂದು ವರ್ಷದಿಂದ ಮಹಿಳೆಯೊಬ್ಬಳು ನಾಪತ್ತೆಯಾಗಿದ್ದ ಪ್ರಕರಣವನ್ನು ಪೊಲೀಸರು (Police) ಕೊನೆಗೂ ಬೇಧಿಸಿದ್ದಾರೆ. ಯಾರಿಗೂ ಗೊತ್ತಾಗದಂತೆ ಪತ್ನಿಯನ್ನು (Wife) ಕೊಂದು ಮನೆಯ ಪಕ್ಕದಲ್ಲಿಯೇ ಹೂತಿಟ್ಟಿದ್ದನೆಂಬ ಅಂಶವನ್ನು ಕೊನೆಗೂ ಪೊಲೀಸರು ಕಂಡುಹಿಡಿದಿದ್ದಾರೆ. ಈ ವಿಷಯವನ್ನು ಆರೋಪಿ ಪತಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.


    ಏನಿದು ಕೊಲೆ ಪ್ರಕರಣ?


    ಪೊಲೀಸ್ ದಾಖಲೆಗಳ ಪ್ರಕಾರ, ಫೆಬ್ರವರಿ 19, 2022 ರಂದು, ಸಜೀವನ್ ವಿಶ್ವಂಭರನ್ ನೀಡಿದ ದೂರಿನ ಆಧಾರದ ಮೇಲೆ ಕೊಚ್ಚಿಯ ನ್ಜಾರಕ್ಕಲ್‌ ಠಾಣೆ ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.


    ದೂರಿನಲ್ಲಿ 2021ರ ಆಗಸ್ಟ್ 17ರಂದು ಪತ್ನಿ ರೆಮ್ಯಾ ತನ್ನೊಂದಿಗೆ ಜಗಳವಾಡಿ ತನ್ನನ್ನು ತೊರೆದಿದ್ದಾಳೆ ಎಂದು ಸಜೀವನ್ ತಿಳಿಸಿದ್ದ. ಆಕೆಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಇದ್ದು ಆತನೊಂದಿಗೆ ಆಕೆ ಮನೆ ಬಿಟ್ಟು ಹೋಗಿದ್ದಾಳೆ ಎಂಬುದಾಗಿ ಸಜೀವನ್‌ ಪೊಲೀಸರಿಗೆ ತಿಳಿಸಿದ್ದ.


    ಇದನ್ನೂ ಓದಿ: Bajrang Dal: ನೇತ್ರಾವತಿ ನದಿಯಲ್ಲಿ ಭಜರಂಗದಳ ಕಾರ್ಯಕರ್ತನ ಶವ ಪತ್ತೆ! ಕೊಲೆಯೋ, ಆತ್ಮಹತ್ಯೆಯೋ?


    ಪೇಂಟಿಂಗ್ ಕೆಲಸಗಾರನಾದ ಸಜೀವನ್ ಹಾಗೂ ರೆಮ್ಯಾಗೆ ಇಬ್ಬರು ಮಕ್ಕಳಿದ್ದು, ಮಗಳು 12 ನೇ ತರಗತಿಯಲ್ಲಿ ಓದುತ್ತಿದ್ದರೆ, ಮಗ 9 ನೇ ಕ್ಲಾಸ್‌ ನಲ್ಲಿ ಓದುತ್ತಿದ್ದಾನೆ. ತಮ್ಮ ಇಬ್ಬರು ಮಕ್ಕಳಿಗೂ ಸಜೀವನ್‌ ಹಾಗೆಯೇ ನಂಬಿಸಿದ್ದಾನೆ. ತಾಯಿ ತನ್ನನ್ನು ಬಿಟ್ಟು ಬೇರೆ ಊರಿಗೆ ಓಡಿ ಹೋಗಿದ್ದಾಳೆಂದು ಹೇಳಿದ್ದ.


    ಪೊಲೀಸರಿಗೆ ಸಜೀವನ್‌ ಮೇಲೆಯೇ ಹೆಚ್ಚಾಯ್ತು ಅನುಮಾನ


    ಪತ್ನಿ ರೆಮ್ಯಾ ಓಡಿಹೋಗಿದ್ದಾಳೆಂದು ಸಜೀವನ್‌ ಹೇಳಿದರೂ ಪೊಲೀಸರು ಆತನ ಮಾತನ್ನು ನಂಬಲು ಸಿದ್ಧರಿರಲಿಲ್ಲ. ಪದೇ ಪದೇ ಪ್ರಶ್ನಿಸುತ್ತಲೇ ಇದ್ದರು. ಅಲ್ಲದೇ ಸಜೀವನ್‌ ತನ್ನ ಹೆಂಡತಿಯನ್ನು ಪತ್ತೆ ಮಾಡುವಲ್ಲಿ ಪೊಲೀಸರಿಗೆ ಸರಿಯಾಗಿ ಸಹಕರಿಸುತ್ತಿರಲಿಲ್ಲ. ಅಲ್ಲದೇ ಈ ಬಗ್ಗೆ ಹೆಚ್ಚಿನ ಉತ್ಸಾಹವನ್ನೂ ಹೊಂದಿರಲಿಲ್ಲ. ಇದರಿಂದ ಪೊಲೀಸರಿಗೂ ಈತನ ಬಗ್ಗೆ ಅನುಮಾನ ಹೆಚ್ಚಾಗಿತ್ತು.


    ಮನೆಯ ಪಕ್ಕದಲ್ಲೇ ಪತ್ನಿಯ ಶವವನ್ನು ಹೂತಿಟ್ಟಿದ್ದ!


    ಆರೋಪಿ ಸಜೀವನ್ ವಿಶ್ವಂಭರನ್ (45) ಪ್ರಕರಣವನ್ನು ಮುಚ್ಚಿಹಾಕಲು ಸಾಕಷ್ಟು ಪ್ಲಾನ್‌ ಮಾಡಿದ್ದ. ಕಳೆದ ಒಂದು ವರ್ಷದಿಂದ ಕೊಲೆಯನ್ನು ರಹಸ್ಯವಾಗಿಡಲು ಯಶಸ್ವಿ ಕೂಡ ಆಗಿದ್ದ. ಮಕ್ಕಳನ್ನು, ಕುಟುಂಬದ ಸದಸ್ಯರನ್ನು ಹಾಗೂ ನೆರೆಹೊರೆಯವರನ್ನು ಸುಳ್ಳು ಹೇಳಿ ನಂಬಿಸಿದ್ದ. ತನ್ನ ಹೆಂಡತಿ ಬೆಂಗಳೂರಿನಲ್ಲಿ ಬಾಜ್‌ ಮಾಡೋದಕ್ಕೋಸ್ಕರ ತನ್ನನ್ನು ತೊರೆದು ಓಡಿಹೋಗಿದ್ದಾಳೆ ಎಂಬುದಾಗಿ ನಂಬಿಸಿದ್ದ.


    ಕೌಟುಂಬಿಕ ಜಗಳ ಕೊಲೆಯಲ್ಲಿ ಕೊನೆಗೊಂಡಿತ್ತು!


    ಆದರೆ ಮಹಿಳೆ ನಾಪತ್ತೆ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಒಂದು ವರ್ಷಗಳ ನಂತರ ಕೊನೆಗೂ ಪತ್ನಿಯ ಕೊಲೆಯ ಬಗ್ಗೆ ಸಜೀವನ್‌ ಬಾಯ್ಬಿಟ್ಟಿದ್ದಾನೆ. ಎಡವನಕ್ಕಾಡ್‌ನ ವಾಚಕ್ಕಲ್ ವೆಸ್ಟ್‌ನಲ್ಲಿರುವ ತಮ್ಮ ಮನೆಯ ಆವರಣದಲ್ಲಿಯೇ ಆಕೆಯನ್ನು ಕೊಲೆ ಮಾಡಿ ಹೂತಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.



    ವಿಚಾರಣೆಯಲ್ಲಿ ಕೆಲವು ಕೌಟುಂಬಿಕ ಸಮಸ್ಯೆಗಳಿಗಾಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿ, ಮನೆಯ ಪಕ್ಕದಲ್ಲಿಯೇ ಹೂತಿದ್ದಾಗಿ ಸಜೀವನ್‌ ಹೇಳಿದ್ದಾನೆ. ಆಕೆಯನ್ನು ಹೇಗೆ ಕೊಲೆ ಮಾಡಿದನೆಂಬ ಬಗ್ಗೆ ಸಜೀವನ್‌ ಬಾಯ್ಬಿಟ್ಟಿಲ್ಲ. ಆದ್ರೆ ಮಕ್ಕಳು ಮನೆಯಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


    ಇದನ್ನೂ ಓದಿ: Insurance Money: ಇನ್ಶೂರೆನ್ಸ್ ಹಣಕ್ಕಾಗಿ ಅನಾಥ ವ್ಯಕ್ತಿಯ ಕೊಲೆ; ಆ್ಯಕ್ಸಿಡೆಂಟ್ ಎಂದು ನಂಬಿಸಿದವರು ಅಂದರ್


    ಸಜೀವನ್‌ ತಪ್ಪೊಪ್ಪಿಗೆ ಹೇಳಿಕೆಯ ನಂತರ, ಪೊಲೀಸ್ ತಂಡವು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ತೆರಳಿ ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆಯುವ ಕಾರ್ಯ ಕೈಗೊಂಡಿದ್ದಾರೆ. “ನಾವು ಅಸ್ಥಿಪಂಜರದ ಅವಶೇಷಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದೇವೆ" ಎಂಬುದಾಗಿ ಪೊಲೀಸರು ಹೇಳಿದ್ದಾರೆ.


    ಒಟ್ಟಾರೆ, ಕೌಟುಂಬಿಕ ಸಮಸ್ಯೆಗಳೇನೇ ಇದ್ದರೂ ಅದನ್ನು ಮಾತಿನಲ್ಲಿ ಬಗೆಹರಿಸಿಕೊಳ್ಳುವ ಬದಲು ಪತ್ನಿಯ ಪ್ರಾಣವನ್ನೇ ತೆಗೆದಿದ್ದಾನೆ. ಮಾಡಿದ ತಪ್ಪಿಗಾಗಿ ತಾನೂ ಜೈಲು ಸೇರಿದ್ದಾನೆ.


    ಜಗಳದಲ್ಲಿ ಒಬ್ಬರು ಜೀವವನ್ನೇ ಕಳೆದುಕೊಂಡರೆ ಮತ್ತೊಬ್ಬ ಮಾಡಿದ ತಪ್ಪಿಗಾಗಿ ಜೀವನವನ್ನೇ ಹಾಳು ಮಾಡಿಕೊಂಡಿದ್ದಾನೆ. ಈ ಮಧ್ಯೆ ಮಕ್ಕಳು ಮಾತ್ರ ಅನಾಥರಾಗಿರುವುದು ದುರಂತ.

    Published by:Precilla Olivia Dias
    First published: