ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ಕೆಲವು ದಿನಗಳಿಂದ ಕೊಲೆ ಪ್ರಕರಣಗಳು ಹೆಚ್ಚಾಗಿವೆ. ಕಳೆದ 20 ದಿನಗಳಲ್ಲಿ ಆಗಿರುವ ಕೊಲೆ ಸಂಖ್ಯೆಗಳನ್ನು (Murder) ನೋಡಿದರೆ ಜನರು ಬೆಚ್ಚಿ ಬೀಳುವಂತಿದೆ. ಬೆಂಗಳೂರು ನಗರದಲ್ಲಿ ಪೊಲೀಸರು (Bengaluru Police) ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ವಿಫಲರಾಗಿದ್ದಾರಾ ಅನ್ನೋ ಶಂಕೆ ಸಾರ್ವಜನಿಕರನ್ನು (Public) ಕಾಡುವಂತಾಗಿದೆ. ಹೌದು, ಬೆಂಗಳೂರಿನ ಜೀವನ್ ಭಿಮಾ ನಗರ ಪಾಗಲ್ ಪ್ರೇಮಿ- (Love) ಹುಚ್ಚಾಟ, ಜ್ಞಾನಭಾರತಿಯಲ್ಲಿ ಕಾರ್ಪೆಂಟ್ ಹತ್ಯೆ, ಹೆಚ್.ಎಲ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗನಿಂದ ತಂದೆಯ (Father) ಹತ್ಯೆಗೆ ಸುಪಾರಿ, ಆರ್.ಎಂ.ಸಿ ಯಾರ್ಡ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹೋದ್ಯೋಗಿ ಹತ್ಯೆ, ಉಪ್ಪಾರ್ ಪೇಟೆ ಮೆಜೆಸ್ಟಿಕ್ (Majestic) ನಲ್ಲಿ ಮಲಗುವ ಜಾಗದಲ್ಲಿ ಮೂತ್ರ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಮರದ ತುಂಡಿನಿಂದ ಬಡಿದು ಕೊಂದ ಘಟನೆಗಳು ಜನರು ಬೆಚ್ಚಿಬೀಳುವಂತೆ ಮಾಡಿದೆ.
ಜೀವನ್ ಭೀಮಾನಗರ: ಜೀವನ್ ಭಿಮಾ ನಗರದಲ್ಲಿ ಪಾಗಲ್ ಪ್ರೇಮಿ ಪ್ರೀತಿ ನಿರಾಕರಿಸಿದ್ದಕ್ಕೆ ಫೆಬ್ರವರಿ 28ರಂದು ಯುವತಿಗೆ ಚೂರಿ ಇರಿದು ಕೊಲೆ ಮಾಡಿದ್ದ. 17 ಬಾರಿ ರಸ್ತೆಯಲ್ಲೇ ಇರಿದು ಕೊಂದ ಪ್ರಿಯಕರ ಅಲ್ಲೇ ಕುಳಿತಿದ್ದ. ಜನರನ್ನು ಬೆಚ್ಚಿ ಬೀಳಿಸಿತ್ತು.
ಜ್ಞಾನಭಾರತಿ: ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಕಾರ್ಪೆಂಟರ್ ಕೊಲೆ ಮಾಡಲಾಯಿತು. ಒಂದು ಲಕ್ಷ ಸಾಲ ಪಡೆದಿದ್ದ ವ್ಯಕ್ತಿ ರಾತ್ರಿ 9.30ರ ಸಮಯದಲ್ಲೇ ಕೊಚ್ಚಿ ಕೊಲೆ ಮಾಡಿದ್ದ.
ಇದನ್ನೂ ಓದಿ: Crime News: ಅರ್ಜೆಂಟ್ ಕೆಲಸ ಎಂದು ಹೋಗಿದ್ದ ಅಪ್ಪ ನಡುರಸ್ತೆಯಲ್ಲೇ ಹೆಣ, 24 ಗಂಟೆಯಲ್ಲೇ ಆರೋಪಿ ಅರೆಸ್ಟ್!
ಚಂದ್ರಾಲೇಔಟ್: ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಫೆಬ್ರವರಿ 22 ರಂದು ಪ್ರಿಂಟಿಂಗ್ ಏಜೆನ್ಸಿ ಮಾಲೀಕನ ಹತ್ಯೆ ಮಾಡಲಾಗಿತ್ತು. ಫೆಬ್ರವರಿ 28 ರಂದು ಬೇರೆ ಮನೆಯಲ್ಲಿ ಲಿಯಾಕತ್ ಎಂಬಾತನನ್ನು ಕೊಲೆ ಮಾಡಲಾಗಿತ್ತು. ಸುತ್ತಿಗೆಯಲ್ಲಿ ತಲೆಗೆ ಹೊಡೆದು ಕತ್ತರಿಯಿಂದ ಚುಚ್ಚಿ ಉದ್ಯಮಿಯನ್ನು ಕೊಲೆ ಮಾಡಲಾಗಿತ್ತು.
ಹೆಚ್ಎಎಲ್ ಠಾಣೆ: ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಗನೇ ತಂದೆಯ ಹತ್ಯೆಗೆ ಸುಪಾರಿ ನೀಡಿದ್ದ. ಆಸ್ತಿಯನ್ನು ಸೊಸೆಯ ಹೆಸರಿಗೆ ಮಾಡುತ್ತಿದ್ದಾರೆ ಅನ್ನೋ ಕಾರಣಕ್ಕೆ ಕೊಲೆ ನಡೆದಿತ್ತು. ಪ್ರಕರಣದಲ್ಲಿ ಪೊಲೀಸರು ಸುಪಾರಿ ಕೊಟ್ಟಿದ್ದ ಮಗ ಸೇರಿದಂತೆ ಲಕ್ಷ ಲಕ್ಷ ಮೌಲ್ಯದ ಅಪಾರ್ಟ್ಮೆಂಟ್ ಹಾಗೂ ಐಶಾರಾಮಿ ಕಾರಿನ ಆಸೆಗೆ ಬಿದ್ದು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಆರ್.ಎಂ.ಸಿ ಯಾರ್ಡ್: ಆರ್.ಎಂ.ಸಿ ಯಾರ್ಡ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹೋದ್ಯೋಗಿ ಹತ್ಯೆ ಮಾಡಲಾಗಿತ್ತು. ಇನ್ನುಳಿದಂತೆ, ಮೆಜೆಸ್ಟಿಕ್ನಲ್ಲಿ ಮಲಗೋ ಜಾಗದ ವಿಚಾರಕ್ಕೆ ಕೊಲೆ ನಡೆದಿತ್ತು. ಆರ್.ಟಿ.ನಗರ ಮೊಮ್ಮಗನಿಂದಲೇ ಅಜ್ಜನ ಕೊಲೆ, ವರ್ತೂರ್ ಬಾರ್ನಲ್ಲಿ ಕೊಲೆ, ಬಾಗಲೂರಲ್ಲಿ ಫೈನಾನ್ಸಿಯರ್ ಕೊಲೆ, ಕುಮಾರಸ್ವಾಮಿ ಲೇಔಟ್ನಲ್ಲಿ ಸ್ನೇಹಿತನ ಹತ್ಯೆ, ಅಶೋಕ್ ನಗರದಲ್ಲಿ ಒಂಟಿ ಮಹಿಳೆ ಕೊಲೆ ನಡೆದಿರುವುದು ಬೆಂಗಳೂರಿಗರ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Acid Attack: ಅಪ್ರಾಪ್ತೆ ಮೇಲೆ ಆ್ಯಸಿಡ್ ಎರಚಿದ ಪಾಗಲ್ ಪ್ರೇಮಿ, ಪ್ರೀತ್ಸೇ ಅಂತ ಪ್ರಾಣ ತಿನ್ನುತ್ತಿದ್ದವನಿಂದ ಪಾಪದ ಕೃತ್ಯ!
ಬೆಂಗಳೂರು ಪೊಲೀಸರನ್ನು ನಾನಾ ಕೆಲಸಗಳಿಗೆ ನಿಯೋಜನೆ ಮಾಡಲಾಗುತ್ತಿದೆ ಎನ್ನಲಾಗಿದೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಬರುವ ಗಣ್ಯರ ಭದ್ರತೆ ಸೇರಿದಂತೆ ಬೇರೆ ಬೇರೆ ಕೆಲಸಗಳಿಗೆ ನಿಯೋಜನೆ ಮಾಡುತ್ತಿರುವುದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನಲಾಗಿದೆ. ಬೀಟ್ ಸಿಸ್ಟಂ ಸಹ ಅಸ್ತವ್ಯಸ್ಥ ಆಗಿದೆ ಎಂಬ ಆರೋಪವೂ ಕೇಳಿ ಬಂದಿದ್ದು, ಕ್ರೈಂ ರೇಟ್ ಜಾಸ್ತಿ ಆಗೋದಕ್ಕೆ ಇದು ಒಂದು ಕಾರಣ ಅಂತಿವೆ ಪೊಲೀಸ್ ಮೂಲಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ