• ಹೋಂ
 • »
 • ನ್ಯೂಸ್
 • »
 • Crime
 • »
 • Crime News: ಬೆಂಗಳೂರು ಹೆಣಗಳಿಗೆ ಚಾರ್ಮಾಡಿಯೇ ಸ್ಮಶಾಣ; ಕೊಂದವರು ತಪ್ಪಿಸಿಕೊಳ್ಳಲು ಆಸರೆ ಆಯ್ತು ಪ್ರಪಾತ!

Crime News: ಬೆಂಗಳೂರು ಹೆಣಗಳಿಗೆ ಚಾರ್ಮಾಡಿಯೇ ಸ್ಮಶಾಣ; ಕೊಂದವರು ತಪ್ಪಿಸಿಕೊಳ್ಳಲು ಆಸರೆ ಆಯ್ತು ಪ್ರಪಾತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನಲ್ಲಿ ನಡೆಯುವ ಹಲವು ಕೊಲೆಗಳಿಗೆ ಚಾರ್ಮಾಡಿ ಘಾಟ್​ ಸ್ಮಶಾಣ ಎನ್ನುವಂತಾಗಿದೆ. ಏಕೆಂದರೆ ಕೊಂದವರು ಸಾಕ್ಷಿ ನಾಶ ಮಾಡಲು ಮೃತದೇಹಗಳನ್ನು ಚಾರ್ಮಾಡಿ ಘಾಟ್​ಗೆ ತೆಗೆದುಕೊಂಡು ಹೋಗಿ ಹಾಕುತ್ತಿದ್ದಾರೆ. ಪ್ರಕರಣ ಬೆಳಕಿಗೆ ಬಂದು ವಿಚಾರಣೆ ಆರಂಭಿಸುವ ಪೊಲೀಸರು, ಆರೋಪಿಗಳನ್ನು ಕರೆದುಕೊಂದು ಸ್ಥಳದಲ್ಲಿ ಮೃತದೇಹಗಳ ಹುಡುಕಾಟಕ್ಕೆ ಹರಸಾಹಸ ಪಡುವಂತಾಗಿದೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಪ್ರೀತಿ ಪ್ರೇಮ (Love) ಅನ್ನೋದೇ ಹೀಗೆ, ಹದಿಹರೆಯದ ವಯಸ್ಸಿನಲ್ಲಿ (Teenage) ಹುಡುಗ-ಹುಡುಗಿಯರು ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ. ಆದರೆ ಕೊನೆಗೆ ಆಗುವ ಪರಿಸ್ಥಿತಿ ಕೆಲವರನ್ನು ಯಮಲೋಕಕ್ಕೆ ಕಳುಹಿಸಿದರೆ, ಇನ್ನು ಕೆಲವರನ್ನು ಜೈಲಿಗೆ (Jail) ಕಳುಹಿಸುತ್ತೆ. ಹೌದು, ಬೆಂಗಳೂರಿನಲ್ಲಿ (Bengaluru) ಮಾನವೀಯತೆ ಅನ್ನೋದು ಸತ್ತು ಹೋಗಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಒಂದು ಹುಡುಗ ಹುಡುಗಿಗೆ ಮೆಸೇಜ್ (Message) ಮಾಡಿದ್ದಾನೆ ಅನ್ನೋ ಕಾರಣಕ್ಕೆ ಮಾತುಕತೆಗೆ ಕರೆದು ಹಿಗ್ಗಾಮುಗ್ಗಾ ಬಾರಿಸಿ ಕೊಲೆ ಮಾಡಲಾಗಿದೆ. ಪ್ರಕರಣದಲ್ಲಿ ಯಶವಂತಪುರ ಪೊಲೀಸರು (Yeshwanthpur Police) ನಾಲ್ವರು ದುಷ್ಕರ್ಮಿಗಳಾದ ಅನಿಲ್, ಲೋಹಿತ್, ಭರತ್ ಹಾಗೂ ಕಿಶೋರ್​ ಎಂಬುವರನ್ನು ಅರೆಸ್ಟ್​ ಮಾಡಿದ್ದು, ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಸದ್ಯ ಮೃತ ಯುವಕನ ಶವವನ್ನೂ ಚಾರ್ಮಾಡಿ ಘಾಟ್​​ನಲ್ಲಿ (Charmadi Ghat) ಪತ್ತೆ ಮಾಡಿದ್ದಾರೆ.


ಯುವತಿ ಮೆಸೇಜ್​ ಕಳುಹಿಸಿ ಕೊಲೆಯಾದ!


ಬೆಂಗಳೂರಿನಲ್ಲಿ ನಡೆಯುವ ಕೊಲೆಗಳಿಗೆ ಚಾರ್ಮಾಡಿ ಘಾಟ್​ ಸ್ಮಶಾಣ ಎನ್ನುವಂತಾಗಿದೆ. ಏಕೆಂದರೆ ಕೊಂದವರು ಹೆಣವನ್ನು ಚಾರ್ಮಾಡಿ ಘಾಟ್​ಗೆ ತೆಗೆದುಕೊಂಡು ಹೋಗಿ ಹಾಕುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳನ್ನು ಪೊಲೀಸರು ಈಗಾಗಲೇ ವಿಚಾರಣೆ ನಡೆಸಿ, ಮೃತದೇಹಗಳಿಗಾಗಿ ಚಾರ್ಮಾಡಿ ಘಾಟ್​​ನ ಕಣಿವೆಗಳಲ್ಲಿ ಹುಡುಕಾಟ ನಡೆಸಿ ಹೊರತೆಗೆದಿದ್ದರು. ಈ ಕೇಸ್​ನಲ್ಲೂ ಕೊಲೆಯಾಗಿರುವ ಗೋವಿಂದರಾಜು ಶವ ಚಾರ್ಮಾಡಿ ಘಾಟ್​ನಲ್ಲಿ ಪತ್ತೆಯಾಗಿದೆ. 80 ಅಡಿ ಆಳದಲ್ಲಿ ಬಿದ್ದಿದ್ದ ಶವವನ್ನು ಮೇಲೆತ್ತಲಾಗಿದೆ.
ಇದನ್ನೂ ಓದಿ: Crime News: ಅಕ್ಕನ ಮಗಳ ಪ್ರೀತಿಗೆ ಅಡ್ಡಗಾಲಾದ ಸೋದರ ಮಾವ: ಪ್ರಿಯಕರನನ್ನು ಪುಸಲಾಯಿಸಿ ಕರೆದು ಕೊಂದೇ ಬಿಟ್ಟ!


ಮಾತನಾಡಲು ಕರೆದುಕೊಂಡು ಹೋಗಿ ಕೊಲೆ!


ಯುವತಿ ರಾಮಯ್ಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು. ಆಕೆಯ ಜೊತೆ ಸಲುಗೆಯಿಂದ ಪ್ರೀತಿ ಪ್ರೇಮ ಅಂತಾ ಮರ ಸುತ್ತುತ್ತಿದ್ದ ಗೋವಿಂದರಾಜು, ಮೆಸೇಜ್​ ಮಾಡಿದ್ದ. ಫೋನ್​ ರಿಸೀವ್​ ಮಾಡದಿದ್ದಕ್ಕೆ ಫೋನ್​ ಕೂಡ ಮಾಡಿದ್ದ. ಆದರೆ ಆ ಕಡೆ ಫೋನ್​ ರಿಸೀವ್​ ಮಾಡಿದ್ದು ಸೋದರ ಮಾವ ಅನಿಲ್​. ಕಳೆದ ಭಾನುವಾರ ಮಾತನಾಡಬೇಕು ಬಾ ಎಂದು ಬೈಕ್​ನಲ್ಲಿ ಕೂರಿಸಿಕೊಂಡು ಹೋದವನು ಅಂಧ್ರಹಳ್ಳಿಯಲ್ಲಿ ಸ್ನೇಹಿತರ ಜೊತೆಗೆ ಸೇರಿಕೊಂಡು ಕೊಲೆ ಮಾಡಿದ್ದಾರೆ. ನಮ್ಮ ಮಗ ಏನಾದ ಅಂತಾ ಫೋನ್​ ಮಾಡಿದಾಗ ಕೊಲೆಪಾತಕನ ತಾಯಿ ಬಿಟ್ಟು ಕಳಿಸಿದ್ದೇವೆ ಎಂದಿದ್ದರು. ಕೆಲವೇ ಹೊತ್ತಲ್ಲಿ ನಿಮ್ಮ ಮಗ ಸತ್ತೋದ ಅಂತ ಸತ್ಯ ಹೇಳಿದ್ದರು.


ಯಶವಂತಪುರ ಪೊಲೀಸ್ ಠಾಣೆ


ಚಾರ್ಮುಡಿಘಾಟ್ ಅರಣ್ಯಪ್ರದೇಶದ ಪ್ರಪಾತದಲ್ಲಿ ಯುವಕನ ಶವ ಪತ್ತೆ


ಪ್ರಕರಣ ದಾಖಲು ಮಾಡಿಕೊಂಡ ಯಶವಂತಪುರ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಅಸಲಿ ಕಹಾನಿ ಹೊರಬಿದ್ದಿದೆ. ಚಾರ್ಮುಡಿಘಾಟ್ ಅರಣ್ಯಪ್ರದೇಶದ ಪ್ರಪಾತದಲ್ಲಿ ಬಿಸಾಕಿದ್ದ ಶವ ಕೂಡ ಪತ್ತೆಯಾಗಿದೆ. ಮರದ ತುಂಡಿನಲ್ಲಿ ಬೆನ್ನಿನ ಮೇಲೆ ಹೊಡೆದಾಗ ಸಾವನ್ನಪ್ಪಿದ್ದ ಎನ್ನಲಾಗಿದೆ. sಲೋಹಿತ್​ ಕಾರ್​ನಲ್ಲಿ ತೆಗೆದುಕೊಂಡು ಹೋಗಿ ಮಲಯಮಾರುತ ಗೆಸ್ಟ್​ಹೌಸ್​ ಬಳಿಯ ಪ್ರಪಾತಕ್ಕೆ ಬಿಸಾಕಿದ್ದ ಸತ್ಯವನ್ನು ಬಾಯ್ಬಿಟ್ಟಿದ್ದರು.


ಸಾಂದರ್ಭಿಕ ಚಿತ್ರ


ಆರೋಪಿಗಳ ಜೊತೆಗೆ ಆಂಧ್ರಹಳ್ಳಿಯ ಬಿಜೆಪಿ ಮುಖಂಡ ಹಾಗೂ ಸಂಬಂಧಿ ಬೈಲಪ್ಪ ಕೂಡ ಕೊಲೆಯಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ. ನಿನ್ನೆ ಠಾಣೆ ಬಳಿಗೆ ಬಂದಾಗ ಬೈಲಪ್ಪನನ್ನು ಸುತ್ತುವರಿದ ಸಂಬಂಧಿಕರು ಠಾಣೆ ಮುಂದೆಯೇ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ಯುವತಿ ಹಾಗೂ ಯುವಕ ಗೋವಿಂದ ರಾಜು ಪ್ರೇಮ ವಿಚಾರ ಕುಟುಂಬಸ್ಥರಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ. ಕೊಲೆ ಆರೋಪಿ ಅನಿಲ್​ ಕೂಡ ಯುವತಿಯನ್ನು ಮದುವೆ ಆಗುವ ಉದ್ದೇಶ ಹೊಂದಿದ್ದ ಎನ್ನಲಾಗಿದೆ. ಆದರೆ ಕೋಪದಲ್ಲಿ ಯುವಕನ್ನು ಕರೆದುಕೊಂಡು ಹೋಗಿ ಹೊಡೆದು ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಸ್ನೇಹಿತರನ್ನೂ ತನ್ನ ಜೊತೆಗೆ ಜೈಲಿಗೆ ಕರೆದುಕೊಂಡು ಹೋಗಿದ್ದಾನೆ.


ಬಂಧಿತ ಆರೋಪಿಗಳು


ಇದನ್ನೂ ಓದಿ: Dowry: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ; ಕಲಬುರಗಿಯಲ್ಲಿ ತಂದೆಯಿಂದಲೇ ಮಗಳ ಅತ್ಯಾಚಾರ


ಪ್ರೀತಿ ವಿಚಾರ ಗೊತ್ತಾಗ್ತಿದ್ದ ಹಾಗೆ ಕೋಪದಲ್ಲಿ ಆ ಹುಡುಗನನ್ನು ಹೊಡೆದು ಸಾಯಿಸುವ ಬದಲು ಬುದ್ಧಿವಾದ ಹೇಳಬಹುದಿತ್ತು. ಅಥವಾ ಮನೆಯಲ್ಲಿದ್ದ ಯುವತಿಗೆ ಬುದ್ಧಿವಾದ ಹೇಳಬಹುದಿತ್ತು. ಆದರೆ ಕೋಪದ ಕೈಲಿ ಬುದ್ಧಿ ಕೊಟ್ಟು ಕೊಲೆಗಾರರಾಗಿದ್ದಾರೆ ಅನ್ನೋದು ದುರಂತ.

Published by:Sumanth SN
First published: