ಬೆಂಗಳೂರು: ಮರಕ್ಕೆ (Tree) ಬೈಕ್ (Bike) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಬಾಲಕರು (Boys) ಸಾವನ್ನಪ್ಪಿರುವ ಘಟನೆ ಗದಗ (Gadaga) ಜಿಲ್ಲೆಯ ರೋಣ ಪಟ್ಟಣದ ಬಸ್ ಡಿಪೋ ಬಳಿ ನಡೆದಿದೆ. ಅನುಪ ಇಟಗಿ (15), ಶ್ರೀಶಾಂತ ಗಡಗಿ (15) ಮೃತ ದುರ್ದೈವಿಗಳಾಗಿದ್ದಾರೆ. ಅಬ್ಬಿಗೇರಿ ಗ್ರಾಮದ ಬಳಿಯ ಕಲಾಕಾಶಿ ಈಜುಕೊಳ್ಳಕ್ಕೆ ಹೋಗಿ ವಾಪಸ್ ಬರುವಾಗ ಘಟನೆ ನಡೆದಿದ್ದು, ಮೃತ ಬಾಲಕರು ರೋಣ (Rona) ಪಟ್ಟಣದ ನಿವಾಸಿಗಳಾಗಿದ್ದಾರೆ. ಸ್ಥಳಕ್ಕೆ ರೋಣ ಪೊಲೀಸರು (Police) ಭೇಟಿ ಪರಿಶೀಲನೆ ನಡೆಸಿದ್ದು, ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈಜಲು ಹೋಗಿದ್ದ ವಿದ್ಯಾರ್ಥಿಗಳು ನೀರು ಪಾಲು
ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ತುಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ನೆಮ್ಮಾರು ಸಮೀಪದ ತುಂಗಾ ನದಿ ಬಳಿ ನಡೆದಿದೆ. ಹರಿಹರಪುರದ ರಕ್ಷಿತ್ ಹಾಗೂ ಶೃಂಗೇರಿಯ ಸುಂಕದ ಮಕ್ಕಿಯ ಪ್ರಜ್ವಲ್ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಇದನ್ನೂ ಓದಿ: Sakleshpur: ಆಪರೇಷನ್ ಓಲ್ಡ್ ಮಕ್ನಾ ಸಕ್ಸಸ್! ಜನರ ನಿದ್ದೆಗೆಡಿಸಿದ ಕಾಡಾನೆ ಕೊನೆಗೂ ಸೆರೆ
ಶೃಂಗೇರಿಯ ಖಾಸಗಿ ಕಾಲೇಜಿನ 14 ವಿದ್ಯಾರ್ಥಿಗಳೊಂದಿಗೆ ಈಜಲು ತೆರಳಿದ್ದರು. ಈ ವೇಳೆ ರಕ್ಷಿತ್ ನೀರಿನಲ್ಲಿ ಸಿಲುಕಿಕೊಂಡ ಕಾರಣ ಪ್ರಜ್ವಲ್ ರಕ್ಷಣೆಗೆ ತೆರಳಿದ್ದು, ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಕೃಷಿಹೊಂಡದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಕೃಷಿಹೊಂಡದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಸಮೀಪದ ಕರ್ಪೂರು ಗೇಟ್ ಬಳಿ ಬೆಳಕಿಗೆ ಬಂದಿದೆ. ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಕಂಡು ಬಂದಿದ್ದು, ಮೃತದೇಹದ ಮೇಲೆ ಎಡಗಾಲಿಗೆ ಕಪ್ಪುದಾರ ಬಲಗೈಗೆ ಕೆಂಪುದಾರ ಕಂಡು ಬಂದಿದೆ.
ಭೀಕರ ಅಪಘಾತದಲ್ಲಿ ಇಬ್ಬರು ಸಾವು, ಐವರ ಸ್ಥಿತಿ ಗಂಭೀರ
ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಘಟಗಿ ತಾಲೂಕಿನ ಧಾರವಾಡ ಕ್ರಾಸ್ ಬಳಿ ನಡೆದಿದೆ. ಟಾಟಾ ಗೂಡ್ಸ್ ವಾಹನ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ ಘಟನೆಯಲ್ಲಿ ಮಕ್ಕಳು ಸೇರಿ ಐವರು ಗಂಭೀರ ಗಾಯಗೊಂಡಿದ್ದಾರೆ. ಹುಬ್ಬಳ್ಳಿ ನಿವಾಸಿಗಳಾದ ಫ್ರಾನ್ಸಿಸ್ ಗೊನ್ಸಾಲ್ವಿಜ್ (73) ಮತ್ತು ಓಲಿವಿಯಾ ಕ್ಯಾಥರೀನ್ (36) ಮೃತ ದುರ್ದೈವಿಗಳಾಗಿದ್ದಾರೆ. ಫ್ರಾನ್ಸಿಸ್ ಪತ್ನಿ ಲೀನಾ, ಪುತ್ರ ಏಲೆನ್, ಮೊಮ್ಮಕ್ಕಳಾದ ವರ್ಷದ ಜೋರ್ಡನ್, ಶುವಾ ಹಾಗೂ ಗೂಡ್ಸ್ ವಾಹನ ಚಾಲಕ ಗಣೇಶ ಖನ್ನಾಗೌಡಾಗೆ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೆರೆಯ ನೀರಿಗೆ ಬಿದ್ದು ಮಹಿಳೆ ಸಾವು
ತೀರ್ಥಹಳ್ಳಿ ಮೇಲಿನಕುರುವಳ್ಳಿಯ ಬಳಿ ಕೆರೆಯ ನೀರಿಗೆ ಬಿದ್ದು ಮಹಿಳೆಯೊಬ್ಬಳು ಮೃತಪಟ್ಟಿದ್ದು ಇದೀಗ ಆಕೆಯ ನಾಲ್ಕು ಅವಳಿ ಜವಳಿ ಮಕ್ಕಳು ಅನಾಥವಾಗಿವೆ. ಶೃತಿ(36) ಎಂಬ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಮೇಲಿನ ಕುರುವಳ್ಳಿ ಬಂಡೆಯಲ್ಲಿ ನಿಂತಿರುವ ನೀರಿಗೆ ಹಾರಿ ಶೃತಿ ಎಂಬಾಕೆ ಮೃತ ಪಟ್ಟಿದ್ದಾರೆ. ಈಕೆ ಕುರುವಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದು, ನಾಲ್ಕು ಮಂದಿ ಅವಳಿ ಜವಳಿ ಮಕ್ಕಳು ಇವೆ.
ಪತಿಯ ಅತಿಯಾದ ಸಾಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಆತನ ಪತಿಯನ್ನು ಅನುಮಾನದ ಮೇರೆಗೆ ಪೊಲೀಸ್ ಠಾಣೆಯಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ನದಿಯಲ್ಲಿ ಈಜಲು ಹೋಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ಹೊರಬೈಲು ಬುಕ್ಲಾಪುರ ಸಮೀಪ ನಡೆದಿದೆ. ಮಧ್ಯಾಹ್ನ ಘಟನೆ ನಡೆದಿದ್ದು ಶುಕ್ರವಾರ ಶವ ಪತ್ತೆಯಾಗಿದೆ. ಹೊರಬೈಲಿನ ಮರಗೆಲಸ ಮಾಡುತ್ತಿರುವ ವೆಂಕಟೇಶ ಆಚಾರ್ಯ ಅವರ ಪುತ್ರ ಮಾಧವ್ ಈಜಲು ಹೋದಾಗ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. 3 ರಿಂದ 4 ಸ್ನೇಹಿತರು ಈಜಲು ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ