ಆನೇಕಲ್ : ಅದು ಯಾವುದೋ ಸಿನಿಮಾದ ಶೂಟಿಂಗ್ (Shooting) ಅಲ್ಲ. ಆದರೂ ಆ ಘಟನೆ ಯಾವುದೇ ಸಿನಿಮಾ ಸ್ಟಂಟ್ಗೂ (Cinema stunt) ಕಡಿಮೆ ಇರಲಿಲ್ಲ. ಹೌದು ಅಡ್ಡಗಟ್ಟಿದ ಪೊಲೀಸಪ್ಪನಿಂದ (Police) ತಪ್ಪಿಸಿಕೊಳ್ಳಲು ಎದುರಿಗಿದ್ದ ಪೊಲೀಸಪ್ಪನ ಬೈಕ್ (Bike) ಸೇರಿದಂತೆ ಮೂರ್ನಾಲ್ಕು ಬೈಕ್ ಗಳಿಗೆ ಗುದ್ದಿದ ಇನ್ನೋವಾ ಕಾರೊಂದು (Car) ಶರವೇಗದಲ್ಲಿ ಪರಾರಿಯಾಗಿದ್ದು, ಮಗು (Child) ಸೇರಿದಂತೆ ಓರ್ವ ಬೈಕ್ ಸವಾರನಿಗೆ ಗಂಭೀರವಾಗಿ ಗಾಯವಾಗಿದೆ.
ಅಪಘಾತದಲ್ಲಿ ಮಗು ಸೇರಿದಂತೆ ಬೈಕ್ ಸವಾರನಿಗೆ ಗಾಯ
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಪೊಲೀಸಪ್ಪ ವಾರ್ನಿಂಗ್ ಧಿಕ್ಕರಿಸಿ ಬೈಕ್ ಗಳಿಗೆ ಡೆಡ್ಲಿ ಡಿಕ್ಕಿ ಹೊಡೆದು ಸಿನಿಮಾ ಶೈಲಿಯಲ್ಲಿ ಬೈಕೊಂದನ್ನು ಮಾರು ದೂರ ಇನ್ನೋವಾ ಕಾರು ಎಳೆದೊಯ್ದಿದ್ದು, ಅಪಘಾತದಲ್ಲಿ ಮಗು ಸೇರಿದಂತೆ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ: Mandya: ಮತದಾನಕ್ಕೂ ಮುನ್ನ ಹಣ ಕೊಟ್ರು, ಸೋತ ಮೇಲೆ ವಾಪಸ್ ಕೇಳಿದ್ರು! ಆಪ್ತರ ಎದುರು ಅಂಗಲಾಚಿದ ಮಾಜಿ ಸಚಿವ ನಾರಾಯಣ ಗೌಡ
ನಿನ್ನೆ ಸಂಜೆ 4:25ರ ಸುಮಾರು ಕರ್ನಾಟಕ ಗಡಿ ಬಳ್ಳೂರು ಗ್ರಾಮದಲ್ಲಿ ತಮಿಳುನಾಡು ಕಡೆಯಿಂದ ವೇಗವಾಗಿ ಬಂದ ಇನ್ನೋವಾ ಕಾರೊಂದನ್ನು ಸಿಪ್ಕಾಟ್ ಪೊಲೀಸ್ ಸಿಬ್ಬಂದಿ ಬೈಕ್ ನಿಲ್ಲಿಸಿ ಅಡ್ಡಗಟ್ಟಿದ್ದು, ಕಾರಿನಿಂದ ಕೆಳಗಿಳಿಯುವಂತೆ ತಿಳಿಸಿದ್ದಾನೆ.
ಬೈಕನ್ನು ಎಳೆದೊಯ್ದು ಕಾರು
ಆದರೆ ಕಾರಿನ ಸವಾರ ಎದುರಿಗಿದ್ದ ಪೊಲೀಸ್ ಸಿಬ್ಬಂದಿ ಬೈಕ್ ಸೇರಿದಂತೆ ಮೂರ್ನಾಲ್ಕು ಬೈಕ್ ಗಳ ಮೇಲೆ ಏಕಾಏಕಿ ನುಗ್ಗಿಸಿದ್ದು, ಸವಾರರು ಚೆಲ್ಲಾಪಿಲ್ಲಿಯಾಗಿದ್ದಾರೆ. ಕಾರಿನ ಬಂಪರ್ಗೆ ಸಿಲುಕಿದ ಬೈಕನ್ನು ಮಾರು ದೂರು ಎಳೆದೊಯ್ದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಇನ್ನೋವಾ ಕಾರು ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮಗು ಸೇರಿದಂತೆ ಓರ್ವ ಬೈಕ್ ಸವಾರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ದೃಶ್ಯ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು
ಇನ್ನೂ ಚೇಸ್ ಮಾಡಿಕೊಂಡು ಬಂದ ಪೊಲೀಸಪ್ಪನಿಂದ ತಪ್ಪಿಸಿಕೊಳ್ಳಲು ಸಿನಿಮಾ ಸ್ಟೈಲ್ ನಲ್ಲಿ ಇನ್ನೋವಾ ಕಾರು ಚಾಲಕ ಬೈಕ್ ಗಳಿಗೆ ಗುದ್ದಿಕೊಂಡು ಎಸ್ಕೇಪ್ ಆಗಿದ್ದು, ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಇನ್ನೋವಾ ಕಾರು ಬೈಕ್ ಗಳಿಗೆ ಡಿಕ್ಕಿ ದೃಶ್ಯ ಸೆರೆಯಾಗಿದೆ. ಇನ್ನೋವಾ ಕಾರು ಬೈಕ್ ಗಳಿಗೆ ಗುದ್ದಿದ ದೃಶ್ಯ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದದ್ದಾರೆ. ತಮಿಳುನಾಡಿನ ಜೂಜುವಾಡಿ ಬಳಿ ಕಾರನ್ನ ಅಡ್ಡಗಟ್ಟಿದ್ದ ತಮಿಳುನಾಡು ಪೊಲೀಸರಿಗೆ ಡಿಕ್ಕಿ ಹೊಡೆದು ಇತ್ತ ಆಗಮಿಸಿದ್ದು, ಎದುರುಗಡೆ ಖಾಸಗಿ ಬಸ್ ಬಂದಿದ್ದರಿಂದ ಬಳ್ಳೂರು ಬಳಿ ಇನ್ನೋವಾ ಕಾರು ನಿಂತಿದೆ.
ಪೊಲೀಸರು ಅಡ್ಡಗಟ್ಟುತ್ತಿದ್ದಂತೆ ಬೈಕ್ ಗಳಿಗೆ ಗುದ್ದಿಸಿಕೊಂಡು ಶರವೇಗದಲ್ಲಿ ಇನ್ನೋವಾ ಕಾರು ಪರಾರಿಯಾಗಿದೆ. ಅಕ್ರಮ ಮದ್ಯ ಅಥವಾ ಬೇರೆ ಯಾವುದೋ ವಸ್ತುಗಳ ಅಕ್ರಮವಾಗಿ ಸಾಗಿಸುವ ವೇಳೆ ಪೊಲೀಸರಿಗೆ ಸಿಕ್ಕಿ ಬೀಳುತ್ತೆನೆಂದು ಹೀಗೆ ಇನ್ನೋವಾ ಕಾರು ಬೈಕ್ ಗಳ ನುಗ್ಗಿಸಿರುವ ಸಾಧ್ಯತೆ ಇದೆ ಎಂದು ಪ್ರತ್ಯಕ್ಷದರ್ಶಿಗಳಾದ ಮಂಜುನಾಥ್ ಮತ್ತು ಹುಸೇನ್ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಮದ್ಯ ಮರಾಟಕ್ಕೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿದ್ದು, ರಾಜ್ಯದ ಗಡಿ ಬಳ್ಳೂರು ಸುತ್ತಮುತ್ತ ಅಣಬೆಗಳಂತೆ ಬಾರ್ ಗಳು ಇದ್ದು, ಅಕ್ರಮ ಮದ್ಯ ಸಾಗಾಟವೋ ಅಥವಾ ಅಪರಾಧ ಕೃತ್ಯವೆಸಗಿಯೋ ಪೊಲೀಸರಿಗೆ ಸಿಕ್ಕಿ ಬೀಳುವ ಆತಂಕದಲ್ಲಿ ಇನ್ನೋವಾ ಕಾರು ಚಾಲಕ ಅಪಘಾತ ಸಂಭವಿಸಿ ಪರಾರಿಯಾಗಿರುವ ಸಾಧ್ಯತೆ ಇದ್ದು, ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಮುಂದುವರಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ