• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಸಿಸಿಬಿ-ಎಸಿಬಿ ಆಯ್ತು, ಈಗ ಲೋಕಾಯುಕ್ತರ ಹೆಸರಲ್ಲಿ ಬೆದರಿಕೆ! ಮಹಿಳಾ ಅಧಿಕಾರಿಯಿಂದ ಲಕ್ಷ ಲಕ್ಷ ಹಣ ಕಿತ್ತ ಖದೀಮರು!

Crime News: ಸಿಸಿಬಿ-ಎಸಿಬಿ ಆಯ್ತು, ಈಗ ಲೋಕಾಯುಕ್ತರ ಹೆಸರಲ್ಲಿ ಬೆದರಿಕೆ! ಮಹಿಳಾ ಅಧಿಕಾರಿಯಿಂದ ಲಕ್ಷ ಲಕ್ಷ ಹಣ ಕಿತ್ತ ಖದೀಮರು!

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

ಪ್ರಕರಣದ ವಿಚಾರಣೆ ನಡೆಸಿದ ಸಿದ್ದಾಪುರ ಪೊಲೀಸರು ಆಂಧ್ರ ಪ್ರದೇಶದ ಕಡಪ ಮೂಲದ ನಾಗೇಶ್ವರ್ ರೆಡ್ಡಿ ಉಪ್ಪಲೂರು ಎಂಬಾತನನ್ನು ಬಂಧನ ಮಾಡಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ವಂಚನೆಗೆ (Fraud) ಒಳಗಾಗುವವರು ಎಲ್ಲಿವರೆಗೂ ಇರುತ್ತಾರೋ ಅಲ್ಲಿಯವರೆಗೂ ವಂಚನೆ ಮಾಡುವವರು ಇರುತ್ತಾರೆ ಎಂಬ ಮಾತು ಇಂದು ಪ್ರಸ್ತುತವಾಗಿದೆ. ಸೈಬರ್​​ ಕ್ರೈಂ (Cybercrime), ಕೆವೈಸಿ ಅಪ್​​ಡೇಟ್​ ಸೇರಿದಂತೆ ಹಲವಾರು ವಿಧಾನಗಳ ಮೂಲಕ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆಯೇ ಸರ್ಕಾರಿ ಅಧಿಕಾರಿಗಳು (Govt Officers), ಪೊಲೀಸ್ (Police)​ ಅಧಿಕಾರಿಗಳ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ಇಂತಹದ್ದೆ ಘಟನೆಯೊಂದು ಬೆಂಗಳೂರಿನಲ್ಲಿ (Bengaluru) ನಡೆದಿದ್ದು, ಲೋಕಾಯುಕ್ತ (Lokayukta) ಅಧಿಕಾರಿಗಳೆಂದು ಸರ್ಕಾರಿ ಅಧಿಕಾರಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾರೆ. ನಿಮ್ಮ ಮೇಲೆ ದೂರು ಬಂದಿದೆ. ಆದ್ದರಿಂದ ದಾಳಿ ಮಾಡುತ್ತೇವೆ, ದಾಳಿ ಮಾಡಬಾರದು ಎಂದರೆ ಹಣ ನೀಡಬೇಕು ಎಂದು ಖದೀಮರು ಬೆದರಿಕೆ ಹಾಕಿದ್ದರಂತೆ.


ಏನಿದು ಪ್ರಕರಣ?


ಲೋಕಾಯುಕ್ತ ಅಧಿಕಾರಿಗಳೆಂದು ಕೆಐಎಡಿಬಿ ನಗರ ಯೋಜನೆ ಜಂಟಿ ನಿರ್ದೇಶಕರಾದ ಆಶಾಭರತ್​​ ಅವರಿಗೆ ಕರೆ ಮಾಡಿದ್ದ ಖದೀಮರು, ತಾವು ಬೆಂಗಳೂರಿನ ಲೋಕಾಯುಕ್ತ ಅಧಿಕಾರಿ ಅಶೋಕ್​ ರಾವ್ ಎಂದು ಹೇಳಿದ್ದರಂತೆ. ಅಲ್ಲದೆ, ನಿಮ್ಮ ಮೇಲೆ ದೂರು ಬಂದಿದ್ದು, ಮನೆ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.


ಇದನ್ನೂ ಓದಿ: Ballari Mayor Election: ಬಳ್ಳಾರಿ ಪಾಲಿಕೆ ಕಾಂಗ್ರೆಸ್​ ತೆಕ್ಕೆಗೆ; ಮೇಯರ್ ಆಗಿ ದಾಖಲೆ ನಿರ್ಮಿಸಿದ 23ರ ಯುವತಿ


ಒಂದು ವೇಳೆ ದಾಳಿ ಮಾಡಬಾರದೆಂದರೆ ಹಣ ಕೊಡಬೇಕು. ಇಲ್ಲ ಎಂದರೆ ನಿಮ್ಮ ದೂರು ಎಡಿಜಿಪಿ ಅವರಿಗೆ ನೀಡುತ್ತೇನೆ ಎಂದು ಖಾತೆ ಮೂಲಕ ಒಂದು ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಅಧಿಕಾರಿ, ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


ಸಿದ್ದಾಪುರ ಪೊಲೀಸ್ ಠಾಣೆ


ರೈಲ್ವೆ ಕೆಲಸ ಬಿಟ್ಟು ಅಪರಾಧ ಚಟುವಟಿಕೆಯಲ್ಲಿ ಸಕ್ರಿಯ


ಪ್ರಕರಣದ ವಿಚಾರಣೆ ನಡೆಸಿದ ಸಿದ್ದಾಪುರ ಪೊಲೀಸರು ಆಂಧ್ರ ಪ್ರದೇಶದ ಕಡಪ ಮೂಲದ ನಾಗೇಶ್ವರ್ ರೆಡ್ಡಿ ಉಪ್ಪಲೂರು ಎಂಬಾತನನ್ನು ಬಂಧನ ಮಾಡಿದ್ದಾರೆ. ಬಂಧಿತ ಆರೋಪಿ ರೈಲ್ವೆ ಇಲಾಖೆಯಲ್ಲಿ ಸೆಕ್ಷನ್ ಇಂಜಿನಿಯರ್ ಕೆಲ ಸಮಯ ಕೆಲಸ ಮಾಡಿದ್ದಾನೆ. ಆ ಬಳಿಕ ಕೆಲಸ ಬಿಟ್ಟು ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದಾನೆ. ಸದ್ಯ ಆರೋಪಿ ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದನಂತೆ. ಆರೋಪಿಯ ವಿರುದ್ಧ ಸುಮಾರು ಇಪ್ಪತ್ತಕ್ಕೂ ಹೆಚ್ಚು ಪ್ರಕರಣಗಳಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.


ಇನ್ನು ಆರೋಪಿ ನಾಗೇಶ್​ಗೆ ಸಹಾಯ ಮಾಡುತ್ತಿದ್ದ ವಿನೀತ್ ಮತ್ತು ಪವನೀತ್ ರೆಡ್ಡಿ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಲಭವಾಗಿ ಹಣ ಮಾಡಬಹುದು ಎಂದು ಪುಸಲಾಯಿಸಿ ಇಬ್ಬರನ್ನ ಕೃತ್ಯಕ್ಕೆ ಆರೋಪಿ ಬಳಸಿಕೊಂಡಿದ್ದನಂತೆ.




ಇದನ್ನೂ ಓದಿ: Karnataka Elections: ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ; ಕರುನಾಡ ಕದನದಲ್ಲಿ ಗೆಲ್ಲೋದು ಈ ಪಕ್ಷವಂತೆ!


ಕಾರು ಚಾಲಕ V/s ಟೋಲ್ ಸಿಬ್ಬಂದಿ


ಕಾರು ಚಾಲಕ ಹಾಗೂ ಟೋಲ್ ಪ್ಲಾಜಾ (Toll Plaza) ಸಿಬ್ಬಂದಿ ನಡುವೆ ಗಲಾಟೆಯಾಗಿದೆ. ಕಾರು ಮಾಲೀಕನಿಗೆ ಟೋಲ್ ಪ್ಲಾಜಾ ಸಿಬ್ಬಂದಿ ಥಳಿಸಿದ್ದಾನೆ. ಈ ಘಟನೆ ಬೆಂಗಳೂರು‌ (Bengaluru) ದಕ್ಷಿಣ ತಾಲೂಕಿನ ಕಣಮಿಣಿಕೆ ‌ಟೋಲ್‌ನಲ್ಲಿ ನಡೆದಿದೆ. ಟೋಲ್ ಪ್ಲಾಜಾದಲ್ಲಿ ಕಾರಿನ ಫಾಸ್ಟ್ ಟ್ಯಾಗ್ (Fastag) ರೀಡ್ ಆಗಿರಲಿಲ್ಲ, ಈ ವೇಳೆ ಕಾರು ಚಾಲಕ (Car Driver) ಹಾಗೂ ಟೋಲ್ ಪ್ಲಾಜಾ ಸಿಬ್ಬಂದಿ ನಡುವೆ ಗಲಾಟೆಯಾಗಿದೆ. ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

top videos
    First published: