• ಹೋಂ
  • »
  • ನ್ಯೂಸ್
  • »
  • Crime
  • »
  • Crime News: ಒಂದೆಡೆ ನೇಣು ಬಿಗಿ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆ, ಮತ್ತೊಂದೆಡೆ ಸಾವಿಗೆ ಶರಣಾದ ವಿವಾಹಿತೆ!

Crime News: ಒಂದೆಡೆ ನೇಣು ಬಿಗಿ ಸ್ಥಿತಿಯಲ್ಲಿ ಗೃಹಿಣಿ ಮೃತದೇಹ ಪತ್ತೆ, ಮತ್ತೊಂದೆಡೆ ಸಾವಿಗೆ ಶರಣಾದ ವಿವಾಹಿತೆ!

ಮೃತ ಮಹಿಳೆ ರಶ್ಮಿ/ ಸಂಗೀತಾ

ಮೃತ ಮಹಿಳೆ ರಶ್ಮಿ/ ಸಂಗೀತಾ

ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಮಿಳಘಟ್ಟ ಗ್ರಾಮದಲ್ಲಿ ನಡೆದಿದೆ.

  • Share this:

ಬೆಂಗಳೂರು: ಅನುಮಾಸ್ಪದ ಸ್ಥಿತಿಯಲ್ಲಿ ಗೃಹಿಣಿ (Housewife) ಶವ ಪತ್ತೆಯಾಗಿರುವ ಘಟನೆ ಬೆಂಗಳೂರಿನ (Bengaluru) ನಗರದ ಸುಬ್ರಮಣ್ಯಪುರದ ಪೂರ್ಣಪ್ರಜ್ಞ ಲೇಔಟ್ ನಲ್ಲಿ ನಡೆದಿದೆ. ರಶ್ಮಿ(32) ಸಾವನ್ನಪ್ಪಿದ ಗೃಹಿಣಿಯಾಗಿದ್ದು, ಮನೆಯ ರೂಮ್​​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಳೆದ 10 ವರ್ಷಗಳ ಹಿಂದೆ ರಶ್ಮಿ ಅವರನ್ನು ಅರವಿಂದ್ ಎಂಬಾತನ ಜೊತೆ ಮದುವೆ (Marriage) ಮಾಡಿಕೊಡಲಾಗಿತ್ತು. ಶ್ರೀರಂಗಪಟ್ಟಣ ಮೂಲದ ಅರವಿಂದ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಮೂಲದ ರಶ್ಮಿ ಖಾಸಗಿ ಶಾಲೆಯಲ್ಲಿ (Private School ) ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಎರಡು ವರ್ಷದ ಗಂಡು ಮಗು (Child) ಇದೆ. ರಶ್ಮಿ ಸಾವಿನ ಬಗ್ಗೆ ಪೋಷಕರು ಸಂಶಯ ವ್ಯಕ್ತಪಡಿಸಿದ್ದು, ಘಟನೆ ಬಗ್ಗೆ ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ (Subramanyapura Police Station) ದೂರು ದಾಖಲಾಗಿದೆ. ಸುಬ್ರಮಣ್ಯಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.


ವಿವಾಹಿತ ಮಹಿಳೆ ಸಾವಿಗೆ ಶರಣು


ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಮಿಳಘಟ್ಟ ಗ್ರಾಮದಲ್ಲಿ ನಡೆದಿದೆ. ಮಳಘಟ್ಟದ ಸಂಗೀತ (21) ಮೃತ ಮಹಿಳೆಯಾಗಿದ್ದಾರೆ. ಮನೆಯಲ್ಲಿ ಒಬ್ಬರೆ ಇದ್ದಾಗ ಮಹಿಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಎರಡು ವರ್ಷಗಳ ಹಿಂದಷ್ಟೇ ಮಿಳಘಟ್ಟದ ನಿವಾಸಿ ಗುರೂಮೂರ್ತಿ ಎಂಬುವರೊಂದಿಗೆ ಸಂಗೀತ ಅವರ ಮದುವೆಯಾಗಿತ್ತು.


ಇದನ್ನೂ ಓದಿ: Ballari Mayor Election: ಬಳ್ಳಾರಿ ಪಾಲಿಕೆ ಕಾಂಗ್ರೆಸ್​ ತೆಕ್ಕೆಗೆ; ಮೇಯರ್ ಆಗಿ ದಾಖಲೆ ನಿರ್ಮಿಸಿದ 23ರ ಯುವತಿ


ಚುನಾವಣಾ ಸಮಯದಲ್ಲೇ ರಾತ್ರೋರಾತ್ರಿ ಪೊಲೀಸರ ಅಮಾನತು


ಚುನಾವಣೆಯ ಸಮಯದಲ್ಲೇ ಬೆಂಗಳೂರಿನಲ್ಲಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಪಿಎಸ್​ಐ ರುಮಾನ್ ಪಾಷಾ, ಹೆಡ್ ಕಾನ್ ಸ್ಟೇಬಲ್ ಲೇಪಾಕ್ಷಪ್ಪ, ಮುಖ್ಯ ಪೇದೆ ಲಕ್ಷಣ್ ಅವರನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್‌ ಅಮಾನತು ಮಾಡಿದ್ದಾರೆ.




ರೈಸ್ ಪುಲ್ಲಿಂಗ್ ಕೇಸಿನಲ್ಲಿ 10 ಲಕ್ಷ ರೂಪಾಯಿ ಹಣ ಪಡೆದುಕೊಂಡು ಆರೋಪಿಯನ್ನು ಬಿಟ್ಟು ಕಳಿಸಿರುವ ಆರೋಪ ಕೇಳಿ ಬಂದಿದೆ. ಘಟನೆ ಕುರಿತಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಕೊಂಡಯ್ಯ ಎಂಬವರು ದೂರು ನೀಡಿದ್ದರು. ಈ ದೂರಿನ ಅನ್ವಯ ತನಿಖೆ ಕೈಗೊಂಡ ಆಯುಕ್ತರು ಲೋಪದೋಷ ಕಂಡುಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

top videos
    First published: