• ಹೋಂ
  • »
  • ನ್ಯೂಸ್
  • »
  • Crime
  • »
  • IIT Student: ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಹೋಗಿ ಜೈಲು ಸೇರಿದ ಐಐಟಿ ವಿದ್ಯಾರ್ಥಿ!

IIT Student: ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಹೋಗಿ ಜೈಲು ಸೇರಿದ ಐಐಟಿ ವಿದ್ಯಾರ್ಥಿ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆಲವರು ತನ್ನ ಪ್ರೇಯಸಿಯನ್ನು ಇಂಪ್ರೆಸ್​ ಮಾಡುವ ಸಲುವಾಗಿ ಏನೇನೋ ಸಾಹಸ ಮಾಡ್ತಾರೆ. ಆದರೆ ಇಲ್ಲೊಬ್ಬ ತನ್ನ ಪ್ರೇಯಸಿಯನ್ನು ಸಂತೋಷವಾಗಿಟ್ಟುಕೊಳ್ಳುವ ಉದ್ದೇಶದಿಂದ ಕಳ್ಳತನವನ್ನೇ ಮಾಡಲು ಆರಂಭಿಸಿದ್ದಾನೆ.

  • Share this:

ಪ್ರೀತಿಯಲ್ಲಿ ಬಿದ್ದವರಿಗೆ (Fall In Love) ಪ್ರಪಂಚದ ಜ್ಞಾನ ಅಷ್ಟಾಗಿ ಇರಲ್ವಂತೆ, ಇದರರ್ಥ ಪ್ರೀತಿಯಲ್ಲಿ ಇದ್ದಾಗ ಬರೀ ತನ್ನ ಪ್ರೇಯಸಿ ಅಥವಾ ಪ್ರಿಯಕರ ತನ್ನ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅನ್ನೋದು ಅಷ್ಟೇ ಅವರಿಗೆ ಮುಖ್ಯವಾಗಿರುತ್ತದೆ. ತಮ್ಮ ಬಗ್ಗೆ ಜನರು ಏನು ಹೇಳುತ್ತಾರೆ ಅನ್ನೋದರ ಬಗ್ಗೆ ಕಿಂಚಿತ್ತೂ ಸಹ ಈ ಪ್ರೇಮಿಗಳು ತಲೆ ಕೆಡೆಸಿಕೊಳ್ಳುವುದಿಲ್ಲ. ಪ್ರೀತಿಯಲ್ಲಿರುವ ಪ್ರೇಮಿಗಳು (Lovers) ತಮ್ಮ ಪ್ರೀತಿಗೆ ಮನೆಯಲ್ಲಿ ಹಿರಿಯರು ಒಪ್ಪಿಗೆ ನೀಡುತ್ತಿಲ್ಲ ಅಂತ ಹೇಳದೇ ಕೇಳದೆ ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿರುವ ಅನೇಕ ಘಟನೆಗಳನ್ನು ನಾವು ನೋಡಿರುತ್ತೇವೆ.


ಇನ್ನೂ ಕೆಲವು ಘಟನೆಗಳಲ್ಲಿ ಪ್ರೇಯಸಿಯನ್ನು ಇಂಪ್ರೆಸ್ ಎಂದರೆ ಪ್ರೇಯಸಿಯ ಮುಂದೆ ಹೀರೋ ಆಗಲು ಆಕೆಯನ್ನು ಮನೆಯಿಂದ ದೂರ ಕರೆದುಕೊಂಡು ಹೋಗಿ ಮದುವೆಯಾಗಿರುತ್ತಾರೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ, ಆದರೆ ಇದರಲ್ಲಿ ಈ ಪ್ರಿಯಕರ ಕೊನೆಗೆ ಬಿದ್ದದ್ದು ಮಾತ್ರ ಪೊಲೀಸ್ ಬಲೆಗೆ.


ದುಬೈ ಕೆಲಸ ಬಿಟ್ಟು ಕ್ರೈಂ ಜಗತ್ತಿಗೆ ಎಂಟ್ರಿ ಕೊಟ್ಟ ಐಐಟಿ ವಿದ್ಯಾರ್ಥಿ


ಐಐಟಿ-ಮದ್ರಾಸ್ ನಲ್ಲಿ ಓದಿದ ಕೆಮಿಕಲ್ ಎಂಜಿನಿಯರಿಂಗ್ ಪದವೀಧರನೊಬ್ಬ ದುಬೈನಲ್ಲಿ ಸಿಕ್ಕ ಕೈ ತುಂಬಾ ಸಂಬಳದ ಎಂಎನ್‌ಸಿ ಕಂಪನಿಯ ಕೆಲಸವನ್ನು ತೊರೆದು ಬಿಹಾರದ ಮುಜಾಫರ್‌ಪುರ್ ನ ನೈಟ್ ಕ್ಲಬ್ ಡ್ಯಾನ್ಸರ್ ಗೆಳತಿಯೊಂದಿಗೆ ಬಂದು, ಕ್ರೈಂ ಎಂಬ ಭಯಾನಕವಾದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಈಗ ಆ ಐಐಟಿ ಪದವೀಧರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.


ಇದನ್ನೂ ಓದಿ: ಟ್ರಾಫಿಕ್​ ರೂಲ್ಸ್​​ ಬ್ರೇಕ್​ ಮಾಡುವ ಮುನ್ನ ಹುಷಾರ್​, ತಿಂಗಳಲ್ಲಿ ಬರೋಬ್ಬರಿ 18 ಲಕ್ಷಕ್ಕೂ ಹೆಚ್ಚು ಕೇಸ್


ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯವರಾದ ಹೇಮಂತ್ ಕುಮಾರ್ ರಘು ಅವರನ್ನು ಮಹಿಳೆಯಿಂದ 2.2 ಲಕ್ಷ ರೂಪಾಯಿಗಳನ್ನು ಕದ್ದ ಆರೋಪದ ಮೇಲೆ ಈ ವಾರ ಮೂವರು ಸಹಚರರೊಂದಿಗೆ ಬಂಧಿಸಲಾಗಿದೆ. ಆರೋಪಿಗಳಿಂದ ಕೆಲವು ನಗದು ಹಣ, ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು ಮತ್ತು ಕದ್ದ ಎರಡು ಬೈಕುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ದುಬೈ ಬಿಟ್ಟು ರಘು ಬಿಹಾರದ ಕ್ರೈಂ ಜಗತ್ತಿಗೆ ಎಂಟ್ರಿ ಕೊಟ್ಟಿದ್ದು ಹೇಗೆ?


ಮುಜಾಫರ್‌ಪುರ್ ದ ಡ್ಯಾನ್ಸರ್ ನನ್ನು ಭೇಟಿಯಾದ ನಂತರ ರಘು ದುಬೈನಲ್ಲಿ ದೊಡ್ಡ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಬಿಹಾರದ ಮುಜಾಫರ್‌ಪುರ್​​ಗೆ ಹೇಗೆ ಬಂದರು ಮತ್ತು ಹೇಗೆ ಪೊಲೀಸರ ಬಲೆಗೆ ಬಿದ್ದರು ಎಂಬುದು ಅವರೇ ಖುದ್ದಾಗಿ ಪೊಲೀಸರ ವಿಚಾರಣೆಯ ಸಮಯದಲ್ಲಿ ಬಾಯ್ಬಿಟ್ಟಿದ್ದಾರೆ ನೋಡಿ.


ಸಾಂಕೇತಿಕ ಚಿತ್ರ


40 ವರ್ಷ ವಯಸ್ಸಿನ ವ್ಯಕ್ತಿ ತನ್ನ ಗೆಳತಿಗೆ ನೈಟ್ ಕ್ಲಬ್ ಕೆಲಸವನ್ನು ತೊರೆಯುವಂತೆ ಹೇಳುತ್ತಾನೆ. ಅದಕ್ಕೆ ಅವನ ಗೆಳತಿ ಕಂಪನಿಯ ಕೆಲಸ ಬಿಟ್ಟು ಬಿಹಾರಕ್ಕೆ ನನ್ನ ಜೊತೆ ಬರುತ್ತೀಯಾ ಅಂತ ಕೇಳುತ್ತಾಳೆ.


ಇದಕ್ಕೆ ಒಪ್ಪಿದ ರಘು ಬಿಹಾರದ ಮುಜಾಫರ್‌ಪುರ್ ಗೆ ಬಂದಿಳಿಯುತ್ತಾರೆ. 15 ವರ್ಷಗಳ ವೃತ್ತಿಜೀವನದಲ್ಲಿ ಉಳಿಸಿದ ಎಲ್ಲಾ ಹಣವನ್ನು ಖರ್ಚು ಮಾಡಿದ ನಂತರ, ರಘು ತನ್ನ ಗೆಳತಿಯನ್ನು ಸಂತೋಷವಾಗಿಡಲು ಅಪರಾಧವನ್ನು ತನ್ನ ಹೊಸ ವೃತ್ತಿಯಾಗಿ ಆರಿಸಿಕೊಂಡಿದ್ದಾಗಿ ಖುದ್ದು ಅವನೇ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.


ಕ್ರೈಂ ಮಾಡುವಲ್ಲಿ ಸ್ಥಳೀಯ ಕಳ್ಳರ ಜೊತೆ ಕೈ ಜೋಡಿಸಿದ್ನಂತೆ ರಘು


ಮುಜಾಫರ್‌ಪುರ್ (ಪೂರ್ವ ವಿಭಾಗದ) ಡಿಎಸ್‌ಪಿ ಮನೋಜ್ ಪಾಂಡೆ ಬುಧವಾರ ರಘು ಅವರು ಜಿಲ್ಲೆಯಲ್ಲಿ ಅಪರಾಧಿಗಳೊಂದಿಗೆ ಕೈ ಮಿಲಾಯಿಸಿ ಕಳ್ಳತನ ಮಾಡಲು ದೊಡ್ಡ ದೊಡ್ಡ ಜಾಲವನ್ನು ನಿರ್ಮಿಸಿದ್ದಾನೆ ಮತ್ತು ನಿಖರವಾದ ಯೋಜನೆಯೊಂದಿಗೆ ತನ್ನ ಗುರಿಗಳನ್ನು ಆಯ್ಕೆ ಮಾಡುವ ಕೆಲಸ ಇವನದು ಎಂದು ಹೇಳಿದರು.


"ಅವನು ಸ್ಪಷ್ಟವಾಗಿ ವೃತ್ತಿಪರ ಅಪರಾಧಿಯಾಗಿ ಮಾರ್ಪಟ್ಟಿದ್ದಾನೆ ಮತ್ತು ಜಿಲ್ಲೆಯಾದ್ಯಂತ ಹಲವಾರು ಅಪರಾಧಗಳಲ್ಲಿ ಭಾಗಿಯಾಗಿರುವುದನ್ನು ತಾನೇ ಖುದ್ದಾಗಿ ಒಪ್ಪಿಕೊಂಡಿದ್ದಾನೆ" ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದರು.


top videos



    ಏಪ್ರಿಲ್ 11 ರಂದು ದಾಖಲಾದ ದರೋಡೆ ಪ್ರಕರಣವನ್ನು ಭೇದಿಸಲು ರಚಿಸಿದ ಪೊಲೀಸ್ ತಂಡಕ್ಕೆ ರಘು ಈ ಪ್ರಕರಣದಲ್ಲಿ ಶಾಮಿಲಾಗಿರುವುದು ತಿಳಿದು ಬಂದಿದೆ ಎಂದು ಪಾಂಡೆ ಹೇಳಿದರು. ತನಿಖಾ ತಂಡವು ಗ್ಯಾಂಗ್ ಅನ್ನು ಮಾಧೋಪುರದ ಇಟ್ಟಿಗೆ ಗೂಡುಗಳಲ್ಲಿ ಪತ್ತೆ ಹಚ್ಚಿತು. ರಘು ಆ ಪಟ್ಟಣದ ಮಿಥಾನ್ಪುರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ಸಾಮಾನ್ಯ ಬಾಡಿಗೆದಾರನಂತೆ ವಾಸಿಸುತ್ತಿದ್ದ ಅಂತ ಪೊಲೀಸರು ತಿಳಿಸಿದ್ದಾರೆ.

    First published: