ಹೈದರಾಬಾದ್: ಪ್ರಥಮ ವರ್ಷದ ಪಿಯುಸಿಯಲ್ಲಿ (PUC) ಓದುತ್ತಿದ್ದ ವಿದ್ಯಾರ್ಥಿಯೋರ್ವ (Student) ಕಾಲೇಜಿನ ಕೊಠಡಿಯಲ್ಲೇ ಸಾವನ್ನಪ್ಪಿರುವ ಘಟನೆ ಹೈದರಾಬಾದ್ನ (Hyderabad) ಶ್ರೀ ಚೈತನ್ಯ ಕಾಲೇಜಿನಲ್ಲಿ (College) ನಡೆದಿದೆ. ಸಾತ್ವಿಕ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಕಾಲೇಜಿನಲ್ಲಿ ಕಿರುಕುಳ ತಾಳಲಾಗದೆ ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿ ಆತ್ಮಹತ್ಯೆ ಶರಣಾಗಿರುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪೋಷಕರು ಕಾಲೇಜಿನ ಬಳಿ ಆಗಮಿಸಿದ್ದರು. ಇದರಿಂದ ಕಾಲೇಜಿನಲ್ಲಿ ಸ್ವಲ್ಪ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ರವಾನೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇನ್ನು, ಸಾತ್ವಿಕ್ ಬರೆದಿರುವ ಡೆತ್ನೋಟ್ವೊಂದನ್ನು ಸ್ಥಳದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿದ್ಯಾರ್ಥಿ ಬರೆದಿದ್ದಾನೆ ಎನ್ನಲಾದ ಡೆತ್ನೋಟ್ ಮಾಹಿತಿ ಮಾಧ್ಯಮಗಳಿಗೆ ಲಭ್ಯವಾಗಿದ್ದು, ಮೃತ ವಿದ್ಯಾರ್ಥಿ ಸಾತ್ವಿಕ್ ಬರೆದಿರುವ ಪತ್ರ ಆತನ ಅನುಭವಿಸಿದ ನೋವನ್ನು ವಿವರಿಸುತ್ತದೆ. ಪತ್ರ ಓದಿದ ಪ್ರತಿಯೊಬ್ಬ ಕಣ್ಣಲ್ಲಿ ನೀರು ತರಿಸುವಂತಿದೆ.
ಇದನ್ನೂ ಓದಿ: Mother: ತಾಯಿ ಶವದ ಜೊತೆ 2 ದಿನವಿದ್ದ ಪುಟ್ಟ ಬಾಲಕ! ಬೆಂಗಳೂರಿನಲ್ಲೊಂದು ಮನಕಲಕುಲ ಘಟನೆ
ಪತ್ರದಲ್ಲಿ ಏನಿದೆ?
ಅಮ್ಮ ಐ ಲವ್ ಯೂ. ನಿನ್ನನ್ನು ನೋಯಿಸುವ ಉದ್ದೇಶ ನನಗಿಲ್ಲ. ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಚಿತ್ರಹಿಂಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಕೃಷ್ಣ, ಆಚಾರ್ಯ, ಶೋಭನ್, ನರೇಶ್ ಕಿರುಕುಳ ಸಹಿಸಲಾಗುತ್ತಿಲ್ಲ. ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ನರಕ ತೋರಿಸುತ್ತಿದ್ದಾರೆ. ಈ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಕಿರುಕುಳ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ಅಮ್ಮ-ಅಪ್ಪ ಐ ಲವ್ ಯೂ, ಮಿಸ್ ಯು ಫ್ರೆಂಡ್ಸ್ ಎಂದು ಸಾತ್ವಿಕ್ ಪತ್ರದಲ್ಲಿ ಬರೆದಿದ್ದಾನೆ ಎನ್ನಲಾಗಿದೆ.
ತನಿಖೆಗೆ ಆದೇಶಿಸಿದ ಸರ್ಕಾರ!
ಇನ್ನು, ಪ್ರಕರಣವನ್ನು ತೆಲಂಗಾಣ ಸರ್ಕಾರ ತನಿಖೆಗೆ ಆದೇಶ ನೀಡಿದೆ. ಈ ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾಲೇಜಿನ ಉಪ ಪ್ರಾಂಶುಪಾಲ ಕೃಷ್ಣಾ ರೆಡ್ಡಿ, ಹಾಸ್ಟೆಲ್ ವಾರ್ಡನ್‌ಗಳಾದ ನರೇಶ್, ಜಗನ್ ಮತ್ತು ಮ್ಯಾನೇಜ್‌ಮೆಂಟ್ ವಿರುದ್ಧ ತನಿಖೆ ಆರಂಭವಾಗಿದೆ. ಘಟನೆ ಬಳಿಕ ಆಸ್ಪತ್ರೆಯ ವಾರ್ಡನ್ ಒಬ್ಬರು ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ 7:30 ಸುಮಾರಿಗೆ ತಂದೆಯೊಂದಿಗೆ ಮಾತನಾಡಿದ್ದ ವಿದ್ಯಾರ್ಥಿ, ರಾತ್ರಿ 10 ಗಂಟೆ ಬಳಿಕ ಕಾಲೇಜಿನ ತರಗತಿಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಇತರೇ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅಲ್ಲದೆ ಕಾಲೇಜಿನ ಉಪನ್ಯಾಸಕರು ಆತನಿಗೆ ಹೆಚ್ಚು ಒತ್ತಡ ಹಾಕುತ್ತಿದ್ದರು. ಫೈಲ್ ಆಗಿದ್ದೀಯಾ ಅಂತ ಹೀಯಾಳಿಸುತ್ತಿದ್ದರು. ಈ ಅವಮಾನ ತಾಳಲಾಗದೆ ಸಾತ್ವಿಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಬೇಕರಿಗೆ ನುಗ್ಗಿ ದುಷ್ಕರ್ಮಿಯ ದಾಂದಲೇ!
ಬೆಂಗಳೂರಿನಲ್ಲಿ (Bengaluru) ವ್ಯಕ್ತಿಯೊಬ್ಬ ಬೇಕರಿಗೆ ನುಗ್ಗಿ ಧಾಂದಲೆ ಮಾಡಿರುವ ಘಟನೆ ಇಂದು ಬೆಳಿಗ್ಗೆ 7 ಗಂಟೆ ಸುಮಾರಿನಲ್ಲಿ ನಡೆದಿದೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ (Annapurneshwari Police Station) ಮಾಳಗಾಳದಲ್ಲಿರುವ ರಘುನಾಥ್ ಎಂಬಾತನ ಬೇಕರಿಯಲ್ಲಿ ಘಟನೆ ನಡೆದಿದೆ.
ಪ್ರಕಾಶ್ ಎಂಬಾತ ಕೈಯಲ್ಲಿ ಮರದ ದಿಂಬಿಯನ್ನು ಹಿಡ್ಕೊಂಡು ಬಂದಿದ್ದು ದಾಂಧಲೇ ಮಾಡಿದ್ದಾನೆ. ಬೇಕರಿಯಲ್ಲಿ ಏನೇ ತಗೊಂಡರು ದುಡ್ಡು ಕೇಳಬಾರದು ಅಂತ ಬೆದರಿಕೆ ಹಾಕಿದ್ದಾನೆ. ಈ ವೇಳೆ ಶೋಕೇಸ್ ಗ್ಲಾಸ್ ಹೊಡೆದು ರಘುನಾಥ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ಬಗ್ಗೆ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು, ಅನ್ನಪೂರ್ಣಶ್ವರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿ ಪ್ರಕಾಶ್ ನಾಪತ್ತೆಯಾಗಿದ್ದು, ಹುಡುಕಾಟ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ