ಬೆಂಗಳೂರು: ಆಕೆ ಗಂಡನಿದ್ದರೂ (Husband) ಮತ್ತೊಬ್ಬನ ಸಹವಾಸ ಮಾಡಿದ್ದಳು. ಹೀಗೆ ಗಂಡನನ್ನ ಬಿಟ್ಟು ಪ್ರಿಯಕರನ (Lover) ಜೊತೆಯೇ ಒಂದು ಮಗು (Child) ಮಾಡಿಕೊಂಡು ಸಂಸಾರ ಕೂಡ ಮಾಡುತ್ತಿದ್ದಳು. ಆದರೆ ಕಳೆದ ರಾತ್ರಿ ಎಂಟ್ರಿ ಕೊಟ್ಟಿದ್ದ ಮೊದಲ ಪತಿಯ ಕೋಪಕ್ಕೆ ಆಕೆ ಬಲಿಯಾಗಿದ್ದಾಳೆ. ಘಟನೆಯಲ್ಲಿ ಗಾಯಗೊಂಡಿರುವ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಗಂಡ ತನ್ನ ಹೆಂಡತಿಯನ್ನು (Wife) ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯ (Hennur Police Station) ಸಾರಾಯಿಪಾಳ್ಯದಲ್ಲಿ (Saraipalya) ನಡೆದಿದೆ.
14 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಂಪತಿ
ಕೊಲೆಯಾದ ಮಹಿಳೆಯನ್ನು 32ವರ್ಷದ ತಬ್ಸಂಬಿ ಎಂದು ಗುರುತಿಸಲಾಗಿದೆ. ಈಕೆಯ ಪತಿ ಶೇಕ್ ಸುಹೈಲ್ ಎಂಬಾತನೇ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಶೇಕ್ ಸುಹೈಲ್ ಮತ್ತು ಮೃತ ತಬ್ಸಂಬಿ ಇಬ್ಬರೂ ಕೋಲ್ಕತ್ತಾ ಮೂಲದವರು. 14 ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿ 2013ರಲ್ಲಿ ಬೆಂಗಳೂರಿಗೆ ಕೆಲಸಕ್ಕೆಂದು ಬಂದಿದ್ದರು. ಆಗ ತಬ್ಸಂಬಿ, ಬೆಂಗಳೂರಿನ ನದೀಮ್ ಎಂಬಾತನ ಜೊತೆ ಪ್ರೇಮ ಸಂಬಂಧ ಬೆಳೆಸಿದ್ದಳು.
ಈ ವಿಚಾರ ತಿಳಿದ ಪತಿ ಶೇಕ್ ಸುಹೈಲ್, ಪತ್ನಿಯನ್ನು ಮತ್ತೆ ಕೋಲ್ಕತ್ತಾಗೆ ಕರೆದುಕೊಂಡು ಹೋಗಿದ್ದನಂತೆ. ಆದರೆ 6 ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಬಂದ ತಬ್ಸಂಬಿ, ಪ್ರಿಯತಮನ ಜೊತೆ ನೆಲೆಸಿದ್ದಳು.
6 ವರ್ಷಗಳ ಬಳಿಕ ಸೇಡು ತೀರಿಸಿಕೊಳ್ಳಲು ಬಂದ ಪತಿ
ಅಲ್ಲದೆ, ಪ್ರಿಯತಮನೊಂದಿಗೆ ಒಂದು ಮಗುವನ್ನು ಮಾಡಿಕೊಂಡಿದ್ದಳು. 6 ವರ್ಷದ ಬಳಿಕ ಪತಿ ಸೇಡು ತೀರಿಸಿಕೊಳ್ಳಲು ಬೆಂಗಳೂರಿಗೆ ಬಂದು ಪತ್ನಿಯಿದ್ದ ಮನೆಗೆ ಹೋಗಿ ಗಲಾಟೆ ಮಾಡಿ ರಕ್ತದೋಕುಳಿ ಹರಿಸಿದ್ದಾನೆ. ಇನ್ನು ಘಟನೆ ಬಳಿಕ ನದೀಮ್ ಮತ್ತು ತಬ್ಸಂಬಿಯ 2 ವರ್ಷದ ಮಗನಿಗೂ ಸುಹೇಲ್ ಚೂರಿ ಇರಿದಿದ್ದಾನೆ. ವಿಷಯ ಗೊತ್ತಾದ ತಕ್ಷಣ ಹೆಣ್ಣೂರು ಪೊಲೀಸರು ಸ್ಥಳಕ್ಕೆ ಹೋಗಿ ಆರೋಪಿ ಸುಹೈಲ್ನನ್ನ ಅರೆಸ್ಟ್ ಮಾಡಿದ್ದಾರೆ.
ಆರೋಪಿಗೆ ತನ್ನ ಪತ್ನಿ, ಪ್ರಿಯಕರನಿಂದ ಮಗು ಪಡೆದಿರುವುದು ಕೆಲ ದಿನಗಳ ಹಿಂದೆಯಷ್ಟೇ ತಿಳಿದು ಬಂದಿತ್ತು ಎನ್ನಲಾಗಿದೆ. ಈ ಮಾಹಿತಿ ಸಿಗುತ್ತಿದ್ದಂತೆ ಬೆಂಗಳೂರಿಗೆ ಬಂದಿದ್ದ ಆರೋಪಿ ಪತ್ನಿಯ ಮನೆಗೆ ತೆರಳಿ ಮಗುವಿನ ಬಗ್ಗೆ ಪ್ರಶ್ನೆ ಮಾಡಿದ್ದನಂತೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಆರೋಪಿ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆರೋಪಿ ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಗ್ಯಾಸ್ ರೀ ಫಿಲ್ಲಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ
ಬೆಂಗಳೂರಿನ ಬಿಟಿಎಂ ಸೆಕೆಂಡ್ ಸ್ಟೇಜ್ ನ ಗ್ಯಾಸ್ (LPG Gas) ಗೋಡೌನ್ ಸಿಸಿಬಿ ಪೊಲೀಸರು (CCB Police) ದಾಳಿ ಮಾಡಿ ಅಕ್ರಮವಾಗಿ ಗ್ಯಾಸ್ ರೀ ಫಿಲ್ಲಿಂಗ್ (Gas Refilling) ಮಾಡುತ್ತಿದ್ದ ಆರೋಪಿಗಳು ಬಂಧನ ಮಾಡಿದ್ದಾರೆ. ಆರೋಪಿಗಳು ಒಂದು ಸಾವಿರಕ್ಕೂ ಅಧಿಕ ಗ್ಯಾಸ್ ಸಿಲಿಂಡರ್ಗಳಿಗೆ ಅಕ್ರಮವಾಗಿ ರೀ ಫಿಲ್ಲಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Tumakuru: ನೇಣಿಗೆ ಕೊರಳೊಡ್ಡಿ ವಿವಾಹಿತ ಮಹಿಳೆ ಸಾವಿಗೆ ಶರಣು; ಗಂಡನ ಕುಟುಂಬದಿಂದ ಕಿರುಕುಳ ಆರೋಪ
ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಗೋಡೌನ್ ನಲ್ಲಿ ಫಿಲ್ಲಿಂಗ್ ಮಾಡುತ್ತಿದ್ದರು. ಆ ಬಳಿಕ ಅವುಗಳನ್ನು ಈಚರ್ ಗಾಡಿಗಳಲ್ಲಿ ಸಾಗಿಸುತ್ತಿದ್ದರು, ಅಲ್ಲದೆ ಫಿಲ್ಲಿಂಗ್ನಲ್ಲೂ ಅಕ್ರಮ ಮಾಡುತ್ತಿದ್ದರು ಎನ್ನಲಾಗಿದೆ. ಅಕ್ರಮ ಫಿಲ್ಲಿಂಗ್ ಮಾಡಿ ಭಾರತ್ ಇಂಡಿಯನ್ ಗ್ಯಾಸ್ಗಳ ಸೀಲ್ಗಳನ್ನು ಅಳವಡಿಸುತ್ತಿದ್ದರು. ಪ್ರತಿ ಸಿಲಿಂಡರ್ನಿಂದ 3 ಕೆಜಿ ಯಷ್ಟು ಗ್ಯಾದ್ ಕಳ್ಳತನ ಮಾಡಿ ವಂಚನೆ ಮಾಡುತ್ತಿದ್ದರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ